Vodafone Idea 219 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌ನೊಂದಿಗೆ ಹೆಚ್ಚುವರಿ ಡೇಟಾ ಆಫರ್: ಇಲ್ಲಿದೆ ಮಾಹಿತಿ

Vi 249 ರೂ. ಪ್ರೀಪೇಯ್ಡ್ ಪ್ಲ್ಯಾನ್‌ನೊಂದಿಗೆ 20 ರೂ.ಗಳ ವಿನಾಯಿತಿ ಕೂಪನ್ ನೀಡುತ್ತಿದೆ. ವೋಡಾಫೋನ್ ಐಡಿಯಾ ವೆಬ್‌ಸೈಟ್ ಪ್ರಕಾರ ಡಿಸ್ಕೌಂಟ್ ಕೂಪನ್ (Discount Coupon) ಬಳಕೆದಾರರಿಗೆ ಮುಂದಿನ ರೀಚಾರ್ಜ್‌ನಲ್ಲಿ (Reacharge) ದೊರೆಯಲಿದೆ ಎಂದಾಗಿದೆ.

vodafone idea

vodafone idea

  • Share this:
    Vodafone Idea Prepaid Plan: ವೋಡಾಫೋನ್ ಐಡಿಯಾ ಅಥವಾ VI ತನ್ನ ಪ್ರೀಪೇಯ್ಡ್ ಪ್ಲ್ಯಾನ್‌ಗಳೊಂದಿಗೆ ಕೆಲವೊಂದು ಹೊಸ ಆಫರ್‌ಗಳನ್ನು ಬಿಡುಗಡೆಗೊಳಿಸುತ್ತಿದೆ. 219 ರೂ. ಗಳ ಪ್ರೀಪೇಯ್ಡ್ ಪ್ಲ್ಯಾನ್‌ನಲ್ಲಿ 2GB ಹೆಚ್ಚುವರಿ ಡೇಟಾ ಆಫರ್ ಮಾಡಲು ಪ್ರಾರಂಭಿಸಿದ್ದು ಈ ಆಫರ್ Vi ಆ್ಯಪ್ ಅಥವಾ myvi.in ವೆಬ್‌ಸೈಟ್‌ ಮೂಲಕ ಮಾತ್ರ ಅನ್ವಯವಾಗುತ್ತದೆ. Vi ಸಾಮಾನ್ಯವಾಗಿ ಈ ಪ್ಲ್ಯಾನ್‌ನೊಂದಿಗೆ 1GB ಡೇಟಾ ನೀಡುತ್ತದೆ. ಈಗ Vi 249 ರೂ. ಪ್ರೀಪೇಯ್ಡ್ ಪ್ಲ್ಯಾನ್‌ನೊಂದಿಗೆ 20 ರೂ.ಗಳ ವಿನಾಯಿತಿ ಕೂಪನ್ ನೀಡುತ್ತಿದೆ. ವೋಡಾಫೋನ್ ಐಡಿಯಾ ವೆಬ್‌ಸೈಟ್ ಪ್ರಕಾರ ಡಿಸ್ಕೌಂಟ್ ಕೂಪನ್ (Discount Coupon) ಬಳಕೆದಾರರಿಗೆ ಮುಂದಿನ ರೀಚಾರ್ಜ್‌ನಲ್ಲಿ (Reacharge) ದೊರೆಯಲಿದೆ ಎಂದಾಗಿದೆ.

    ಪ್ರೀಪೇಯ್ಡ್ ಪ್ಲ್ಯಾನ್‌ ಪ್ರತೀ ದಿನಕ್ಕೆ 1.5GB ಡೇಟಾ ನೀಡಲಿದ್ದು, 28 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿ ದಿನ 100 ಎಸ್‌ಎಂಎಸ್‌ಗಳನ್ನು ನೀಡಲಿದೆ. ಮಧ್ಯರಾತ್ರಿ 12 ರಿಂದ ಬೆಳಗ್ಗೆ 6 ಗಂಟೆಯವರೆಗೆ ಪ್ರತಿ ರಾತ್ರಿ ಇಂಟರ್ನೆಟ್ ಸ್ಟ್ರೀಮಿಂಗ್ ಹಾಗೂ ಸರ್ಫಿಂಗ್ ಸೌಲಭ್ಯ, ವಾರಾಂತ್ಯದ ಡೇಟಾ ವಿಸ್ತರಣೆ ಪ್ರಯೋಜನ ಹಾಗೂ ಚಲನಚಿತ್ರಗಳನ್ನು ವೀಕ್ಷಿಸಲು Vi ಚಲನಚಿತ್ರಗಳು ಮತ್ತು ಟಿವಿ ಕ್ಲಾಸಿಕ್ಸ್‌ಗೆ ಆ್ಯಕ್ಸೆಸ್, ಒರಿಜಿನಲ್ಸ್, ಲೈವ್ ಟಿವಿ, ಆ್ಯಪ್‌ನಲ್ಲಿರುವ ಇನ್ನಷ್ಟು ಸೌಕರ್ಯಗಳೊಂದಿಗೆ ಹೆಚ್ಚುವರಿ ಪ್ರಯೋಜನಗಳೊಂದಿಗೆ ಪ್ಲಾನ್ ಬರುತ್ತದೆ.

    ಇದೇ ಸಮಯದಲ್ಲಿ ಜಿಯೋ ಭಾರತದಲ್ಲಿರುವ ಪ್ರೀಪೇಯ್ಡ್ ಗ್ರಾಹಕರಿಗೆ ಆಯ್ದ ರೀಚಾರ್ಜ್ ಪ್ಲಾನ್‌ಗಳಲ್ಲಿ ಕ್ಯಾಶ್‌ಬ್ಯಾಕ್ ಒದಗಿಸುತ್ತಿದೆ. 249 ರೂ, 555 ರೂ, 599 ರೂ ಹೀಗೆ ಮೂರು ರೀಚಾರ್ಜ್ ಯೋಜನೆಗಳಲ್ಲಿ ಹೊಸ ಕ್ಯಾಶ್ ಬ್ಯಾಕ್ ಆಫರ್ ಲಭ್ಯವಿದೆ.

    200 ರೂ. ಗಳಡಿಯಲ್ಲಿ ಏರ್‌ಟೆಲ್ ವರ್ಸಸ್ ಜಿಯೋ ವರ್ಸಸ್ ವೋಡಾಫೋನ್ ಐಡಿಯಾ ಪ್ಲ್ಯಾನ್ಸ್:

    ವಿಐ (ವೋಡಾಫೋನ್ ಐಡಿಯಾ) 148 ರೂ. ಪ್ರೀಪೇಯ್ಡ್ ಪ್ಲ್ಯಾನ್‌ನಲ್ಲಿ 18 ದಿನಗಳಿಗೆ ಅನಿಯಮಿತ ಕರೆ ಸೌಲಭ್ಯದೊಂದಿಗೆ 1ಜಿಬಿ ದೈನಂದಿನ ಡೇಟಾವನ್ನು ಒದಗಿಸುತ್ತದೆ. ಇದು 199 ರೂ.ಗಳ ಪ್ರೀಪೇಯ್ಡ್ ಪ್ಲ್ಯಾನ್‌ ನೀಡುತ್ತಿದ್ದು ಇದರಲ್ಲಿ ದಿನಕ್ಕೆ 1 ಜಿಬಿ ಡೇಟಾ ಅನಿಯಮಿತ ಕರೆಗಳು ಹಾಗೂ 100 SMS ಲಭ್ಯವಿದೆ. ಈ ಪ್ಲಾನ್‌ನಲ್ಲಿ ವಿಐ ಚಲನಚಿತ್ರಗಳು ಹಾಗೂ ಟಿವಿ ಬೇಸಿಕ್ ಖಾತೆಗಳಿಗೆ ಪ್ರವೇಶ ಪಡೆಯಬಹುದಾಗಿದೆ.

    Read Also: WhatsApp‌ಗೆ ಶೀಘ್ರದಲ್ಲೇ ಬರಲಿದೆ ಈ ಹೊಸ ಫೀಚರ್‌ಗಳು..!

    ಏರ್‌ಟೆಲ್ 149 ರೂ.ಗಳ ಪ್ರೀಪೇಯ್ಡ್ ಪ್ಲ್ಯಾನ್‌ನೊಂದಿಗೆ 28 ದಿನಗಳಿಗೆ 2 ಜಿಬಿ ಡೇಟಾ ಒದಗಿಸುತ್ತಿದೆ. ಅಮೆಜಾನ್ ಪ್ರೈಮ್ ಆ್ಯಕ್ಸೆಸ್‌ನೊಂದಿಗೆ ಅನಿಯಮಿತ ಕರೆಗಳು ಹಾಗೂ 300 ಎಸ್‌ಎಂಎಸ್ ಆಫರ್‌ಗಳನ್ನು ಏರ್‌ಟೆಲ್ ನೀಡುತ್ತಿದೆ. ಫ್ರೀ ಹಲೋ ಟ್ಯೂನ್ಸ್, ವಿಂಕ್ ಮ್ಯೂಸಿಕ್ ಹಾಗೂ ಏರ್‌ಟೆಲ್ XStream ಅನ್ನು ಬಳಕೆದಾರರು ಪಡೆಯಬಹುದಾಗಿದೆ. 199 ರೂ.ಗಳ ಪ್ಲ್ಯಾನ್‌ನಲ್ಲಿ ಗ್ರಾಹಕರು ದಿನಂಪ್ರತಿ 1ಜಿಬಿ ಡೇಟಾವನ್ನು 24 ದಿನಗಳಿಗೆ ತಮ್ಮದಾಗಿಸಿಕೊಳ್ಳಬಹುದಾಗಿದೆ. ಈ ಪ್ಲ್ಯಾನ್‌ ಕೂಡ ಅನಿಯಮಿತ ಕರೆಗಳನ್ನು ಹೊಂದಿದ್ದು ದಿನಕ್ಕೆ 100 ಎಸ್‌ಎಂಎಸ್ ಒಳಗೊಂಡಿದೆ. ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಎಡಿಶನ್, ವಿಂಕ್ ಮ್ಯೂಸಿಕ್, ಫ್ರೀ ಹಲೋ ಟ್ಯೂನ್ಸ್ ಹಾಗೂ ಏರ್‌ಟೆಲ್ XStreamಗೆ ಆ್ಯಕ್ಸೆಸ್ ಅನ್ನು ಈ ಪ್ಲ್ಯಾನ್‌ ನೀಡುತ್ತದೆ.

    Read Also: WhatsApp Loan: ಇನ್ಮುಂದೆ ವಾಟ್ಸ್​ಆ್ಯಪ್​ನಲ್ಲೂ ಸಿಗುತ್ತೆ ಲೋನ್​, 5 ನಿಮಿಷದಲ್ಲಿ 10 ಲಕ್ಷ ಪಡೆಯುವುದು ಹೇಗೆ? ಹೀಗೆ ಮಾಡಿ

    ಜಿಯೋ 149 ರೂ.ಗಳ ಪ್ರೀಪೇಯ್ಡ್ ಪ್ಲ್ಯಾನ್‌ನೊಂದಿಗೆ ದೈನಂದಿನ 1ಜಿಬಿ ಡೇಟಾವನ್ನು 24 ದಿನಗಳಿಗೆ ಗ್ರಾಹಕರಿಗೆ ಒದಗಿಸುತ್ತಿದೆ. ಗ್ರಾಹಕರು ಅನಿಯಮಿತ ಕರೆಗಳು ಹಾಗೂ 100 ಎಸ್‌ಎಂಎಸ್ ಅನ್ನು ದಿನಕ್ಕೆ ಪಡೆಯಬಹುದಾಗಿದೆ. 199 ರೂಗಳ ಪ್ರೀಪೇಯ್ಡ್ ಪ್ಲಾನ್‌ನಲ್ಲಿ 28 ದಿನಗಳಿಗೆ 1.5ಜಿಬಿ ಡೇಟಾದೊಂದಿಗೆ ಒಟ್ಟು ಡೇಟಾವನ್ನು 42ಜಿಬಿಗಳಿಗೆ ವಿಸ್ತರಿಸುತ್ತದೆ. ಜಿಯೋದಿಂದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ದೇಶೀಯ ಕರೆಗಳು ಹಾಗೂ ಜಿಯೋಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಸೇರಿದಂತೆ ಜಿಯೋ ಆ್ಯಪ್‌ಗಳಿಗೆ ಪೂರಕ ಚಂದಾದಾರಿಕೆ ಒದಗಿಸುತ್ತದೆ.
    First published: