Vodafone Idea: ಉಚಿತ ವಿಐಪಿ ಅಥವಾ ಫ್ಯಾನ್ಸಿ ನಂಬರ್​ ಬೇಕಾ? ಹಾಗಿದ್ರೆ ಇಲ್ಲಿದೆ ಅವಕಾಶ

ಫ್ಯಾನ್ಸಿ ನಂಬರ್​ಗಾಗಿ ಖರೀದಿಸಲು ಕಷ್ಟ ಪಡುವವರು ಅನೇಕರಿದ್ದಾರೆ. ಆದರೀಗ ವೊಡಾಫೋನ್​ ಸುಲಭವಾಗಿ ನಂಬರ್​ ನೀಡುತ್ತಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

ವೊಡಾಫೋನ್ ಐಡಿಯಾ

ವೊಡಾಫೋನ್ ಐಡಿಯಾ

  • Share this:
    ಬಹುತೇಕರಿಗೆ ವಿಐಪಿ (VIP) ಅಥವಾ ಫ್ಯಾನ್ಸಿ ಫೋನ್​ ನಂಬರ್ (Fancy Phone Number)​ ಬಳಸಬೇಕು ಎಂಬ ಆಸೆ ಇರುತ್ತದೆ. ಆದರೆ ಕೆಲವರು ಇದಕ್ಕಾಗಿ ದುಬಾರಿ ಬೆಲೆ ಖರ್ಚು ಮಾಡಿ ಖರೋದಿಸುತ್ತಾರೆ. ಇನ್ನು ಕೆಲವರಿಗೆ ಸುಲಭವಾಗಿ ಸಿಗುತ್ತದೆ. ಆದರೀಗ ವೊಡಾಫೋನ್​ ಐಡಿಯಾ (Vodafone) ಪ್ರಿಪೇಯ್ಡ್ (Prepaid) ಅಥವಾ ಪೋಸ್ಟ್‌ಪೇಯ್ಡ್ (Postpaid) ಸಂಪರ್ಕ ಸಾಧಿಸಲು ತನ್ನ ಬಳಕೆದಾರರಿಗೆ ವಿಐಪಿ ನಂಬರ್​ ನೀಡುತ್ತಿದೆ.

    ಫ್ಯಾನ್ಸಿ ನಂಬರ್​ಗಾಗಿ ಖರೀದಿಸಲು ಕಷ್ಟ ಪಡುವವರು ಅನೇಕರಿದ್ದಾರೆ. ಆದರೀಗ ವೊಡಾಫೋನ್​ ಸುಲಭವಾಗಿ ನಂಬರ್​ ನೀಡುತ್ತಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

    ಸಾಮಾನ್ಯವಾಗಿ ಫೋನ್ ಸಂಖ್ಯೆಯನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಆದರೆ ಆ ಸಂಖ್ಯೆಯನ್ನು ಕೈಬಿಟ್ಟರೆ ಅಥವಾ ಸಿಮ್ ರದ್ದುಗೊಂಡರೆ, ಅದನ್ನು ಬೇರೆಯವರಿಗೆ ನೀಡಲಾಗುತ್ತದೆ.

    ವೊಡಾಫೋನ್​ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಸಂಪರ್ಕಕ್ಕಾಗಿ ನೀವು ವಿಶೇಷ ಫ್ಯಾನ್ಸಿ ಸಂಖ್ಯೆಯನ್ನು ಹೊಂದಲು ಬಯಸಿದರೆ ಹೀಗೆ ಮಾಡಿ.

    ವೊಡಾಫೋನ್​ನಿಂದ VIP ಅಥವಾ ಫ್ಯಾನ್ಸಿ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಸಂಖ್ಯೆಯನ್ನು ಹೇಗೆ ಪಡೆಯುವುದು?

    - ವೊಡಾಫೋನ್ ಐಡಿಯಾದ​ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

    - ಹೊಸ ಸಂಪರ್ಕ ವಿಭಾಗದ ಮೇಲೆ ಕ್ಲಿಕ್ ಮಾಡಿ ಮತ್ತು ಅಲಂಕಾರಿಕ ಸಂಖ್ಯೆಯನ್ನು ಆಯ್ಕೆಮಾಡಿ.

    - ಅಥವಾ ನೀವು myvi.in/new-connection/choose-your-fancy-mobile-numbers-online ಗೆ ಹೋಗಿ

    - ಈಗ ವಿಐಪಿ ಫ್ಯಾನ್ಸಿ ಸಂಖ್ಯೆಯನ್ನು ಆಯ್ಕೆ ಮಾಡಲು ಪಿನ್‌ಕೋಡ್ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ.

    ಇದನ್ನೂ ಓದಿ: Road Safety: ಅಮೆಜಾನ್​ಗೆ ನೋಟಿಸ್​ ಕೊಟ್ಟ ಸರ್ಕಾರ, ಇನ್ಮುಂದೆ ಈ ವಸ್ತು ಆನ್​ಲೈನ್​ನಲ್ಲಿ ಸಿಗಲ್ಲ!

    - ನೀವು ಪ್ರಿಪೇಯ್ಡ್ ಅಥವಾ ಪೋಸ್ಟ್​​ಪೇಯ್ಡ್ ಸಂಪರ್ಕವನ್ನು ಬಯಸಿದರೆ ಆಯ್ಕೆಮಾಡಿ.

    - ಈಗ ನಿಮಗೆ ಬೇಕಾದ ವಿಐಪಿ ಫ್ಯಾನ್ಸಿ ಸಂಖ್ಯೆಯನ್ನು ಹುಡುಕಿ ಅಥವಾ Vi ಒದಗಿಸಿದ ಸಂಖ್ಯೆಗಳ ಉಚಿತ ಪಟ್ಟಿಯಿಂದ ಆಯ್ಕೆಮಾಡಿ.

    - ನೀವು ಉಚಿತ ಪ್ರೀಮಿಯಂ ಸಂಖ್ಯೆಗಳ ನಡುವೆ ಆಯ್ಕೆ ಮಾಡಬಹುದು ಅಥವಾ ಇತರ ಪ್ರೀಮಿಯಂ ಸಂಖ್ಯೆಗಳಿಗೆ ನೀವು ರೂ 500 ಪಾವತಿಸಬೇಕಾಗುತ್ತದೆ.

    - ಇತರ ವಿವರಗಳನ್ನು ನಮೂದಿಸಿ ಮತ್ತು ನಿಮ್ಮ ಆದೇಶವನ್ನು ಇರಿಸಲು ನಿಮ್ಮ ಪ್ರಸ್ತುತ ವಿಳಾಸವನ್ನು ಸೇರಿಸಿ.

    - ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

    ಇದನ್ನೂ ಓದಿ: Loan Apps: ಲೋನ್‌ ಆ್ಯಪ್‌ಗಳ ಬಗ್ಗೆ ಆರ್‌ಬಿಐ ಪ್ರಮುಖ ನಿರ್ಧಾರ! ಏನದು ಅಂತ ಗೊತ್ತಾ?

    - ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ಅನ್ನು ನಮೂದಿಸುವ ಮೂಲಕ ನಿಮ್ಮ ಪ್ರಕ್ರಿಯೆಯನ್ನು ದೃಢೀಕರಿಸಿ.

    - ವಿಐಪಿ ಸಂಖ್ಯೆಯನ್ನು ನೇರವಾಗಿ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

    ಭಾರತದಲ್ಲಿ ವಿಐಪಿ ನಂಬರ್​ಗೆ ವಿಶೇಷ ಬೇಡಿಕೆ ಇದೆ. ಅದರಲ್ಲೂ ಕಾರು ಪ್ಲೇಟ್​​ ನಂಬರ್​, ಫೋನ್​ ನಂಬರ್​ ಇವುಗಳನ್ನು ಖರೀದಿಸುವಾಗ ವಿಐಪಿ ನಂಬರ್​ ಖರೀದಿಸಲು ಬಯಸುತ್ತಾರೆ. ವಿಐಪಿ ನಂಬರ್​ ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾಗಿದೆ. ಆದರೆ ಕೆಲವೊಂದು ಬಾರಿ ಇಂತಹ ನಂಬರ್​ ಸಿಗುವುದಿಲ್ಲ. ಆದರೆ ವೊಡಾಫೋನ್​ ಇದೀಗ ಅವಕಾಶ ತೆರೆದಿಟ್ಟಿದೆ, ಇದು ಸೀಮಿತವಾಗಿರುವುದಂತೂ ನಿಜ. ಮೊದಲ ಬಾರಿಗೆ ಐಆರು ಖರೀದಿಸುತ್ತಾರೋ ಅವರಿಗೆ ವಿಐಪಿ ನಂಬರ್​ ಸಿಗಲಿದೆ. ಜೊತೆಗೆ ಅದಕ್ಕೆ ತಕ್ಕದಾದ ಬೆಲೆಯನ್ನು ಸಹ ನೀಡಿ ಖರೀದಿಸಬೇಕಿದೆ.

    ವಿಐಪಿ ನಂಬರ್​ಗಾಗಿ ದುಬಾರಿ ಹಣ ನೀಡಿ ಖರೀದಿಸುವವರು ಇದ್ದಾರೆ. ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲಿ ವಿಐಪಿ ನಂಬರ್​ಗೆ ವಿಶೇಷ ಬೇಡಿಯಿದೆ. ಆದರೆ ಫ್ಯಾನ್ಸಿ ನಂಬರ್​ ಸಿಗುವುದೇ ಕಷ್ಟ. ಹಾಗಾಗಿ ಬಹುತೇಕರು ಇಂತಹ ಅವಕಾಶ ಸಿಕ್ಕರೆ ಮಿಸ್​​ ಮಾಡಿಕೊಳ್ಳುವುದಿಲ್ಲ.
    Published by:Harshith AS
    First published: