ದೇಶದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ (Telecom Companies). ಈ ಕಂಪೆನಿಗಳು ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವ ಕಾರಣಕ್ಕಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿರುತ್ತದೆ. ಈ ಯೋಜನೆಗಳಲ್ಲಿ ಭಾರೀ ಅಗ್ಗದ ಬೆಲೆಯ ರೀಚಾರ್ಜ್ ಬೆಲೆಯನ್ನು (Recharge Plan) ಪರಿಚಯಿಸುವ ಮೂಲಕ ಜಿಯೋ ಭಾರೀ ಮುಂಚೂಣಿಯಲ್ಲಿದೆ. ಅದೇ ರೀತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಪಟ್ಟಿಲ್ಲೂ ಜಿಯೋ ಕಂಪೆನಿಯೇ ಇದೆ. ಟೆಲಿಕಾಂ ಕಂಪೆನಿಗಳು ಅಗ್ರಸ್ಥಾನವನ್ನು ಪಡೆಯುವ ಉದ್ದೇಶದಿಮದ ನಿರಂತರವಾಗಿ ಒಂದಕ್ಕೊಂದು ಪೈಪೋಟಿಯನ್ನು ನೀಡುತ್ತಾ ಬರುತ್ತಿದೆ. ಇದೀಗ ವೊಡಫೋನ್ ಐಡಿಯಾ (Vodafone Idea) ಮತ್ತೊಂದು ಅಗ್ಗದ ಯೋಜನೆಯನ್ನು ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ.
ವೊಡಫೋನ್ ಐಡಿಯಾ ಕಂಪೆನಿ ಇದುವರೆಗೆ ಯಾವುದೇ ಟೆಲಿಕಾಂ ಯೋಜನೆಗಳು ಪರಿಚಯಿಸದ ಯೋಜನೆಯನ್ನು ಲಾಂಚ್ ಮಾಡಿದೆ. ಈ ಯೋಜನೆಯು 99 ರೂಪಾಯಿ ಆಗಿದ್ದು, ಇದರಲ್ಲಿ ಡೇಟಾ ಪ್ಲ್ಯಾನ್ ಕಡಿಮೆ ಇದ್ದು, ಕರೆ ಸೌಲಭ್ಯಕ್ಕಾಗಿ ಇದು ಉತ್ತಮ ಆಯ್ಕೆಯಾಗಿದೆ.
ವೊಡಫೋನ್ ಐಡಿಯಾದ 99 ರೂಪಾಯಿ ರೀಚಾರ್ಜ್ ಪ್ಲ್ಯಾನ್
ವೊಡಫೋನ್ ಐಡಿಯಾ ಟೆಲಿಕಾಂ ನೂತನವಾಗಿ ಬಿಡುಗಡೆ ಮಾಡಿರುವ 99 ರೂಪಾಯಿ ರೀಚಾರ್ಜ್ ಪ್ಲ್ಯಾನ್ ಗ್ರಾಹಕರು ತಮ್ಮ ವೊಡಫೋನ್ ಐಡಿಯಾ ಸಿಮ್ ಅನ್ನು ಆ್ಯಕ್ಟಿವ್ ಆಗಿ ಇಟ್ಟುಕೊಳ್ಳಲು ಉತ್ತಮ ಆಯ್ಕೆಯಾಗಿದೆ. ಇನ್ನು ಈ ಯೋಜನೆಯಲ್ಲಿ ಗ್ರಾಹಕರು 200ಎಮ್ಬಿ ಡೇಟಾ ಪ್ರಯೋಜನವನ್ನು ನೀಡುತ್ತದೆ.
ಇನ್ನು ಈ ಯೋಜನೆ 99 ರೂಪಾಯಿಗಳಗಳ ಟಾಕ್‌ಟೈಮ್ ಸೌಲಭ್ಯವನ್ನು ಸಹ ನೀಡುತ್ತದೆ. ಇನ್ನು ವಾಯ್ಸ್ ಕರೆಗಳಲ್ಲಿ ಪ್ರತಿ ಸೆಕೆಂಡಿಗೆ 2.5 ಪೈಸೆಯಷ್ಟು ಶುಲ್ಕವನ್ನು ವಿಧಿಸುತ್ತದೆ. ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ ಈ ಯೋಜನೆಯಲ್ಲಿ ಯಾವುದೇ ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಿಲ್ಲ.
ವೊಡಫೋನ್ ಐಡಿಯಾದ 499 ರೂಪಾಯಿ ರೀಚಾರ್ಜ್ ಪ್ಲ್ಯಾನ್
ವೊಡಫೋನ್ ಐಡಿಯಾದ 499 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್ನಲ್ಲಿ ಗ್ರಾಹಕರು ಪ್ರತಿದಿನ 2ಜಿಬಿ ಡೇಟಾವನ್ನು ಬಳಸಬಹುದಾಗಿದೆ. ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಇದರೊಂದಿಗೆ ಯಾವುದೇ ನೆಟವರ್ಕ್ಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಅನ್ನು ಮಾಡಬಹುದಾಗಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಹೆಚ್ಚುವರಿಯಾಗಿ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನೀಡುತ್ತದೆ ಹಾಗೂ ವಿಐ ಆ್ಯಪ್ಸ್ಗಳ ಸೇವೆಯನ್ನು ಪಡೆಯಬಹುದು.
ವೊಡಫೋನ್ ಐಡಿಯಾದ 601 ರೂಪಾಯಿ ರೀಚಾರ್ಜ್ ಯೋಜನೆ
ವಿಐ ಟೆಲಿಕಾಂನ 601 ರೂಪಾಯಿ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ವಿಶೇಷವಾಗಿ ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಇದು ಅನಿಯಮಿತ ಕರೆ, ಪ್ರತಿದಿನ 3 ಜಿಬಿ ಡೇಟಾ ಹಾಗೂ ಡೈಲಿ 100 ಎಸ್‌ಎಮ್‌ಎಸ್ ಅನ್ನು ಉಚಿತವಾಗಿ ಮಾಡುವ ಪ್ರಯೋಜನ ನೀಡಲಿದೆ.
ಇನ್ನು ಈ ಪ್ರಿಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿದ್ದು, ಒಟ್ಟು ವ್ಯಾಲಿಡಿಟಿ ಅವಧಿಗೆ 84ಜಿಬಿ ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 16 ಜಿಬಿ ಡೇಟಾ ಸೌಲಭ್ಯ ಸಹ ಸಿಗಲಿದೆ.
ವೊಡಫೋನ್ ಐಡಿಯಾದ 901 ರೂಪಾಯಿ ರೀಚಾರ್ಜ್ ಯೋಜನೆ
ವಿಐ ಟೆಲಿಕಾಂನ 901 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 70 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಗ್ರಾಹಕರು ಪ್ರತಿದಿನ 3ಜಿಬಿ ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದೆ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಸಹ ಪಡೆಯಬಹುದು.
ಇದನ್ನೂ ಓದಿ: 45 ಸಾವಿರ ರೂಪಾಯಿ ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ ಅನ್ನು ಕೇವಲ 9 ಸಾವಿರ ರೂಪಾಯಿಗೆ ಖರೀದಿಸಿ!
ಅಂದಹಾಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯು ಒಂದು ವರ್ಷದ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಇದರೊಂದಿಗೆ ಈ ಪ್ಲ್ಯಾನ್ನಲ್ಲಿ ಅನಿಯಮಿತ ಉಚಿತ ಕರೆ ಹಾಗೂ ಉಚಿತ 100 ಎಸ್‌ಎಮ್‌ಎಸ್ ಸೌಲಭ್ಯಗಳು ಸಹ ಸಿಗುತ್ತದೆ. ಹಾಗೆಯೇ ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ 48 ಜಿಬಿ ಡೇಟಾ ಲಭ್ಯವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ