Vodafone-Idea| ಕರ್ನಾಟಕದ ಪ್ರಮುಖ ನಗರಗಳಲ್ಲಿ 4ಜಿ ವಿಸ್ತರಣೆ ಪೂರ್ಣಗೊಳಿಸಿದ ವೊಡಾಫೋನ್ ಐಡಿಯಾ..!

ಕರ್ನಾಟಕದ ಉಳಿದ ಭಾಗಗಳಲ್ಲೂ ಕೂಡ ಬದಲಾವಣೆಯ ಪ್ರಗತಿಯನ್ನು ಆದಷ್ಟು ಬೇಗನೇ ಮುಗಿಸಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಟೆಲಿಕಾಂ ಸಂಸ್ಥೆಗಳು ತಿಳಿಸಿವೆ.

ಐಡಿಯಾ-ವೋಡಾಫೋನ್.

ಐಡಿಯಾ-ವೋಡಾಫೋನ್.

  • Share this:
ಟೆಲಿಕಾಂ ಆಪರೇಟರ್‌ಗಳಾದ (Telecom Operator) ವೊಡಾಫೋನ್, ಐಡಿಯಾ (Vodafone - Idea) ಕರ್ನಾಟಕ ಟೆಲಿಕಾಂ ಸರ್ಕಲ್‌ನಲ್ಲಿ ತನ್ನ 3ಜಿ ಸ್ಪೆಕ್ಟ್ರಮ್ (3G Sectorm) ಅನ್ನು 4ಜಿಗೆ ಬದಲಾಯಿಸುವ ಅತಿ ದೊಡ್ಡ ಪ್ರಕ್ರಿಯೆಯ ಭಾಗವಾಗಿ ತನ್ನ ಮೂಲಸೌಕರ್ಯವನ್ನು ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರಿನಲ್ಲಿ ಉನ್ನತೀಕರಿಸುವ ಕಾರ್ಯ ಪೂರ್ಣಗೊಳಿಸಿದೆ. ಕಂಪನಿ ತಿಳಿಸಿರುವಂತೆ ಈ ನಗರಗಳಲ್ಲಿ 4ಜಿ ಮೂಲಸೌಕರ್ಯವನ್ನು 900 MHZ ಹಾಗೂ 2100 MHz ಬ್ಯಾಂಡ್‌ನೊಂದಿಗೆ ಬಲಪಡಿಸುವುದರಿಂದ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರಿನ ವೊಡಾಫೋನ್ ಹಾಗೂ ಐಡಿಯಾ ಬಳಕೆದಾರರು ಹೆಚ್ಚಿನ ಡೌನ್‌ಲೋಡ್ ಹಾಗೂ ಅಪ್‌ಲೋಡ್ ವೇಗ ಪಡೆಯುತ್ತಾರೆ.

ಈ ಬದಲಾವಣೆಯೊಂದಿಗೆ ಈ ನಗರಗಳಲ್ಲಿರುವ ಪ್ರಸ್ತುತ 4ಜಿ ಮೂಲಸೌಕರ್ಯಗಳನ್ನು ವಿಶಾಲ ವ್ಯಾಪ್ತಿ, ಉತ್ತಮ ನೆಟ್‌ವರ್ಕ್ ಗುಣಮಟ್ಟ ಹಾಗೂ ಸಾಮರ್ಥ್ಯವುಳ್ಳ ಟ್ರಾಫಿಕ್ ಕ್ಯಾರೇಜ್ ಸಾಮರ್ಥ್ಯಕ್ಕಾಗಿ ಹೆಚ್ಚಿಸಲಾಗುತ್ತದೆ. ಅದೂ ಅಲ್ಲದೆ ಈ ನಗರಗಳಲ್ಲಿ ಮೊಬೈಲ್ ಡೇಟಾ ಟ್ರಾಫಿಕ್ ಸಾಮರ್ಥ್ಯವನ್ನು 75%ಕ್ಕೆ ಹೆಚ್ಚಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ವೊಡಾಫೋನ್ ಐಡಿಯಾ ಬ್ಯುಸಿನೆಸ್ ಮುಖ್ಯಸ್ಥರಾದ ಅರವಿಂದ ನೆವತಿಯಾ ಈ ಕುರಿತು ಕೆಲವೊಂದು ಪ್ರಮುಖ ಮಾಹಿತಿಗಳನ್ನು ತಿಳಿಸಿದ್ದು ಪ್ರಸ್ತುತ 4ಜಿ ಮೂಲಸೌಕರ್ಯವನ್ನು 900 MHzನಲ್ಲಿ ಅಂತೆಯೇ 2100 MHz ಲೇಯರ್‌ಗಳಲ್ಲಿ ವಿಸ್ತರಣೆಯೊಂದಿಗೆ ಪೂರ್ತಿಗೊಳಿಸುವುದರಿಂದ ಕರ್ನಾಟಕದಲ್ಲಿರುವ ಪ್ರಮುಖ ನಗರಗಳಲ್ಲಿ ವೊಡಾಫೋನ್ ಐಡಿಯಾ ಗ್ರಾಹಕರಿಗೆ ವರ್ಧಿತ ಡೇಟಾ ವೇಗ, ಒಳಾಂಗಣ ನೆಟ್‌ವರ್ಕ್ ಅನುಭವವನ್ನು ಒದಗಿಸಿದೆ. 3ಜಿಯಿಂದ 4ಜಿಗೆ ಬದಲಾವಣೆ ಮಾಡಿದ ನಂತರ ಈ ನಗರಗಳಲ್ಲಿ ಹೆಚ್ಚಿನ ಡೇಟಾ ಟ್ರಾಫಿಕ್ ಬೆಳವಣಿಗೆಯನ್ನು ನಾವು ಕಂಡುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಉಳಿದ ಭಾಗಗಳಲ್ಲೂ ಕೂಡ ಬದಲಾವಣೆಯ ಪ್ರಗತಿಯನ್ನು ಆದಷ್ಟು ಬೇಗನೇ ಮುಗಿಸಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಟೆಲಿಕಾಂ ಸಂಸ್ಥೆಗಳು ತಿಳಿಸಿವೆ. ಕಂಪನಿಗಳು ತಿಳಿಸಿರುವಂತೆ ಈ ನಗರಗಳಲ್ಲಿ ಮೊಬೈಲ್ ಡೇಟಾ ಟ್ರಾಫಿಕ್ ಸಾಮರ್ಥ್ಯವನ್ನು ಹೆಚ್ಚುಕಡಿಮೆ 75%ಕ್ಕೆ ವರ್ಧಿಸಲಾಗಿದೆ ಎಂದು ತಿಳಿಸಿದೆ.

ಇದರೊಂದಿಗೆ 4ಜಿ ನೆಟ್‌ವರ್ಕ್ ವ್ಯಾಪ್ತಿ ಸುಧಾರಿಸುವತ್ತಲೂ ಟೆಲಿಕಾಂ ಸಂಸ್ಥೆ ಕೆಲಸ ಮಾಡುತ್ತಿದೆ. ಈ ಸುಧಾರಣೆಯಿಂದ ಟೆಲಿಕಾಂ ಕಂಪನಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಅನುಕೂಲವನ್ನೊದಗಿಸಲಿದೆ. ಹೆಚ್ಚಿನ ಬಳಕೆದಾರರನ್ನು ಆಕರ್ಷಿಸುವುದರ ಜೊತೆಗೆ ಹಳೆಯ ಬಳಕೆದಾರರನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಟೆಲಿಕಾಂ ಆಪರೇಟರ್ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಿದೆ.

ಗ್ರಾಹಕರ ಡೇಟಾ ಬಳಕೆ ವರ್ತನೆಗಳಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಡೇಟಾ ಬೇಡಿಕೆ ಹೆಚ್ಚುತ್ತಿರುವಂತೆ ಡಿಜಿಟಲ್ ಸಮಾಜದಲ್ಲಿ ಟೆಲಿಕಾಂ ನೆಟ್‌ವರ್ಕ್‌ಗಳು ಪ್ರಗತಿಯತ್ತ ಮುಖಮಾಡುವುದು ಸರ್ವೇ ಸಾಮಾನ್ಯವಾಗಿದೆ.

ಇದನ್ನೂ ಓದಿ: IPL Dream 11| ಐಪಿಎಲ್ ಡ್ರೀಮ್ 11 ಫ್ಯಾಂಟಸಿ ಆಟದಲ್ಲಿ 1 ಕೋಟಿ ರೂ. ಗೆದ್ದ ಬಿಹಾರದ ಮಧುಬನಿ ಜಿಲ್ಲೆಯ ಕ್ಷೌರಿಕ!

24x7 ಹೆಚ್ಚು ವೇಗದ ಮೊಬೈಲ್ ನೆಟ್‌ವರ್ಕ್ ಸಂಪರ್ಕವನ್ನು ವಾಣಿಜ್ಯ ಹಾಗೂ ವಸತಿ ಪ್ರದೇಶಗಳಲ್ಲಿ ಸುಧಾರಿಸುವತ್ತ ನಾವು ಗಮನ ಹರಿಸಿದ್ದೇವೆ. ಅತ್ಯಾಧುನಿಕ 3ಜಿಯಿಂದ 4ಜಿಗೆ ಮಾರ್ಪಾಡುಗೊಳ್ಳುವುದು ಟೆಕ್ ಕ್ಷೇತ್ರದಲ್ಲಿರುವ ಗ್ರಾಹಕರು ಹಾಗೂ ಕರ್ನಾಟದಲ್ಲಿರುವ ಸಂಸ್ಥೆಗಳ ಗ್ರಾಹಕರಿಗೆ ಅನುಕೂಲವನ್ನೊದಗಿಸಲಿದೆ ಎಂದು ಅರವಿಂದ್ ತಿಳಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published: