• Home
 • »
 • News
 • »
 • tech
 • »
 • Tech Tips: ಜಿಯೋ ಆಯ್ತು, ಏರ್​ಟೆಲ್​ ಆಯ್ತು, ಇದೀಗ ವೊಡಾಫೋನ್‌ನಿಂದ ಆಫರ್! ಗ್ರಾಹಕರಿಗೆ ಇಲ್ಲಿದೆ ಭರ್ಜರಿ ಸುದ್ದಿ

Tech Tips: ಜಿಯೋ ಆಯ್ತು, ಏರ್​ಟೆಲ್​ ಆಯ್ತು, ಇದೀಗ ವೊಡಾಫೋನ್‌ನಿಂದ ಆಫರ್! ಗ್ರಾಹಕರಿಗೆ ಇಲ್ಲಿದೆ ಭರ್ಜರಿ ಸುದ್ದಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಜಿಯೋ ಇತ್ತೀಚೆಗೆ ಫುಟ್​ಬಾಲ್​ ವೀಕ್ಷಕರಿಗಾಗಿ ಹೊಸ ಇಂಟರ್​​ ನ್ಯಾಷನಲ್​ ಡೇಟಾ ರೋಮಿಂಗ್​ ಪ್ಲಾನ್ಸ್​​ ಅನ್ನು ಬಿಡುಗಡೆ ಮಾಡಿತ್ತು. ಇದೀಗ ವೊಡಾಫೋನ್‌​ ಕೂಡ ಇಂಟರ್​ ನ್ಯಾಷನಲ್​ ಡೇಟಾ ರೋಮಿಂಗ್​ ಪ್ಲಾನ್ಸ್​ ಅನ್ನು ಬಿಡುಗಡೆ ಮಾಡಿದೆ. ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.

 • Share this:

  ಇತ್ತೀಚೆಗೆ ಜಿಯೋ (Jio) ಮತ್ತು ಏರ್​ಟೆಲ್ (Airtel)​ ತನ್ನ ಗ್ರಾಹಕರಿಗಾಗಿ ಹೊಸ ಆಫರ್ (Offer)​ ಅನ್ನು ಪರಿಚಯಿಸಿತ್ತು. ಇದರಿಂದ ಎಲ್ಲಾ ಸ್ಮಾರ್ಟ್​ಫೋನ್​ (Smartphone) ಬಳಕೆದಾರರು ಈ ಆಫರ್​ ಕಡೆ ಒಮ್ಮೆ ನೋಡುತ್ತಿದ್ದರು. ಆದರೆ ವೊಡಾಫೋನ್‌ ಐಡಿಯಾ (Vodafone Idea)​ ಬಳಕೆದಾರರು ತಮ್ಮ ಬಳಕೆಯ ಕಂಪನಿಯ ಆಫರ್​​ಗಾಗಿ ಕಾಯುತ್ತಿದ್ದರು. ಇದೀಗ ಫುಟ್​ಬಾಲ್ (Football) ಪ್ರಿಯರಿಗೆ ಜಿಯೋ ಫೀಫಾ ಫುಟ್​​ಬಾಲ್​ ಉದ್ಘಾಟನೆಯ ದಿನ ವಿಶೇಷ ಪ್ರಿಪೇಯ್ಡ್​ ಕೊಡುಗೆಯನ್ನು ನೀಡಿತ್ತು. ಇದಾದ ಬಳಿಕ ಏರ್​ಟೆಲ್​ ಕೂಡ ನೀಡಿತ್ತು. ಇದೀಗ ವೊಡಾಫೋನ್‌​ ಕಂಪನಿ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಇದು ವಿಶೇಷವಾಗಿ ಫುಟ್​ಬಾಲ್ ಪ್ರಿಯರಿಗಾಗಿ ಬಿಡುಗಡೆ ಮಾಡಿದ್ದಾರೆ. 


  ಜಿಯೋ ಇತ್ತೀಚೆಗೆ ಫುಟ್​ಬಾಲ್​ ವೀಕ್ಷಕರಿಗಾಗಿ ಹೊಸ ಇಂಟರ್​​ ನ್ಯಾಷನಲ್​ ಡೇಟಾ ರೋಮಿಂಗ್​ ಪ್ಲಾನ್ಸ್​​ ಅನ್ನು ಬಿಡುಗಡೆ ಮಾಡಿತ್ತು. ಇದೀಗ ವೊಡಾಫೋನ್‌​ ಐಡಿಯಾ ಕೂಡ ಇಂಟರ್​ ನ್ಯಾಷನಲ್​ ಡೇಟಾ ರೋಮಿಂಗ್​ ಪ್ಲಾನ್ಸ್​ ಅನ್ನು ಬಿಡುಗಡೆ ಮಾಡಿದೆ. ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.


  ಫುಟ್​ಬಾಲ್​ ಪ್ರಿಯರಿಗೆ ವೊಡಾಫೋನ್‌ ಐಡಿಯಾ ಬಿಡುಗಡೆ ಮಾಡಿದ ಆಫರ್ಸ್​:


  2,999 ರೂಪಾಯಿಯ ಪ್ಲಾನ್:


  ವೊಡಾಫೋನ್ ಐಡಿಯಾದ ಹೊಸ 2,999ರೂಪಾಯಿಯ ರೋಮಿಂಗ್ ಪ್ಲಾನ್‌ ಕೇವಲ ಏಳು ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಇದು 2GB ಡೇಟಾವನ್ನು ನೀಡುತ್ತದೆ. ಇದರ ಜೊತೆಗೆ ಲೋಕಲ್‌ ಕಾಲ್‌, ಭಾರತಕ್ಕೆ ಮರಳಿ ಕರೆ ಮಾಡುವ ಅವಕಾಶ ಮತ್ತು ಒಳಬರುವ ಕರೆಗಳನ್ನು ಒಳಗೊಂಡಂತೆ 200 ನಿಮಿಷಗಳ ವಾಯ್ಸ್‌ ಕಾಲ್‌ನಲ್ಲಿ ಮಾತಾಡುವ ಅವಕಾಶವನ್ನು ನೀಡುತ್ತದೆ. ಇನ್ನು ಇದರಲ್ಲಿ ಕೇವಲ 25 ಎಸ್​ಎಮ್​ಎಸ್​ ಅನ್ನು ಮಾತ್ರ ಮಾಡಬಹುದಾಗಿದೆ.


  ಇದನ್ನೂ ಓದಿ: ಫಿಫಾ ಫುಟ್​ಬಾಲ್ ವರ್ಲ್ಡ್​ಕಪ್ ಪ್ರಿಯರಿಗಾಗಿ ಜಿಯೋದಿಂದ ವಿಶೇಷ ಡೇಟಾ ಆಫರ್!


  3,999 ರೂಪಾಯಿಯ ಪ್ಲಾನ್:


  ವೊಡಾಫೋನ್ ಐಡಿಯಾದ ಹೊಸ 3,999ರೂಪಾಯಿಯ ರೋಮಿಂಗ್ ಪ್ಲಾನ್‌ ಹತ್ತು ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 3GB ಡೇಟಾವನ್ನು ನೀಡುತ್ತದೆ. ಜೊತೆಗೆ ಇದು ಲೋಕಲ್‌ ಕಾಲ್‌, ಭಾರತಕ್ಕೆ ಮರಳಿ ಕರೆ ಮಾಡುವ ಅವಕಾಶ ಮತ್ತು ಒಳಬರುವ ಕರೆಗಳನ್ನು ಒಳಗೊಂಡಂತೆ 300 ನಿಮಿಷಗಳ ವಾಯ್ಸ್‌ ಕಾಲ್‌ಗಳನ್ನು ನೀಡುತ್ತದೆ. 50 ಎಸ್​ಎಮ್​ಎಸ್ ಮಾಡುವಂತಹ ಅವಕಾಶ ಈ ಯೋಜನೆಯಲ್ಲಿದೆ.


  ಸಾಂಕೇತಿಕ ಚಿತ್ರ


  4,499 ರೂಪಾಯಿಯ ಪ್ಲಾನ್:


  ವೊಡಾಫೋನ್ ಐಡಿಯಾದ 4,499ರೂಪಾಯಿಯ ರೋಮಿಂಗ್ ಪ್ಲಾನ್‌ ಆಗಿದ್ದು ಇದು ಕೇವಲ 14 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ 5GB ಡೇಟಾವನ್ನು ಕೂಡ ನೀಡುತ್ತದೆ. ಲೋಕಲ್‌ ಕಾಲ್‌, ಭಾರತಕ್ಕೆ ಮರಳಿ ಕರೆ ಮಾಡುವ ಅವಕಾಶ ಮತ್ತು ಒಳಬರುವ ಕರೆಗಳನ್ನು ಒಳಗೊಂಡಂತೆ 500 ನಿಮಿಷಗಳ ವಾಯ್ಸ್‌ ಕಾಲ್‌ಗಳನ್ನು ನೀಡುತ್ತದೆ. 100 ಎಸ್​ಎಮ್​ಎಸ್ ಕೂಡ ಉಚಿತವಾಗಿ ಮಾಡಬಹುದು.


  5,999 ರೂಪಾಯಿಯ ಪ್ಲಾನ್:


  ವೊಡಾಫೋನ್ ಐಡಿಯಾದ 5,999ರೂಪಾಯಿಯ ರೋಮಿಂಗ್ ಪ್ಲಾನ್‌ 28 ದಿನಗಳ ವ್ಯಾಲಿಡಿಟಿಯನ್ನು ಪಡೆದಿದ್ದು, 5GB ಡೇಟಾವನ್ನು ತನ್ನ ಗ್ರಾಹಕರಿಗೆ ನೀಡುತ್ತದೆ. ಲೋಕಲ್‌ ಕಾಲ್‌, ಭಾರತಕ್ಕೆ ಮರಳಿ ಕರೆ ಮಾಡುವ ಅವಕಾಶ ಮತ್ತು ಒಳಬರುವ ಕರೆಗಳನ್ನು ಒಳಗೊಂಡಂತೆ 500 ನಿಮಿಷಗಳ ವಾಯ್ಸ್‌ ಕಾಲ್‌ಗಳನ್ನು ನೀಡುತ್ತದೆ. ಇದ್ರಲ್ಲೂ 100 ಎಸ್​ಎಮ್​ಎಸ್ ಕೂಡ ಉಚಿತವಿದೆ.


  ಸಾಂಕೇತಿಕ ಚಿತ್ರ


  ಜಿಯೋದಿಂದ ಬಿಡುಗಡೆಯಾದ ಡೇಟಾ ಪ್ಲಾನ್:

  ಮೊದಲ ಯೋಜನೆಯು 1122 ರೂಪಾಯಿಗಳಿಗೆ ಬರಲಿದೆ ಮತ್ತು 5 ದಿನಗಳ ವ್ಯಾಲಿಡಿಟಿಯನ್ನು ಈ ಯೋಜನೆ ಹೊಂದಿರುತ್ತದೆ. ಇದು 1GB ಡೇಟಾವನ್ನು ನೀಡುತ್ತದೆ. ಎರಡನೇ ಡೇಟಾ ಮಾತ್ರ ಯೋಜನೆಯು 5122 ರೂಪಾಯಿಗೆ ಬರುತ್ತದೆ ಮತ್ತು ಇದು 21 ದಿನಗಳ ವ್ಯಾಲಿಡಿಟಿಯೊಂದಿಗೆ 5GB ಡೇಟಾವನ್ನು ಬಳಕೆದಾರರಿಗೆ ನೀಡುತ್ತದೆ.


  ಈ ಕಾಲ್, ಡೇಟಾ ಮತ್ತು ಎಸ್​ಎಮ್​​ಎಸ್​​ನ ಯೋಜನೆಯ ಪಟ್ಟಿಯಲ್ಲಿ ಮೊದಲನೆಯದಾಗಿ 1599 ರೂಪಾಯಿಯ ಯೋಜನೆಯಾಗಿದ್ದು, ಇದು 15 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಜೊತೆಗೆ 1GB ಡೇಟಾವನ್ನು 150 ನಿಮಿಷಗಳ ಸ್ಥಳೀಯ ಧ್ವನಿ ಕರೆ + ಹೋಮ್ ವಾಯ್ಸ್ ಕರೆ ಮತ್ತು 100 SMS ಪ್ಯಾಕ್ ಅನ್ನು ಹೊಂದಿದೆ. ವಿಶೇಷವಾಗಿ ಕತಾರ್. ಯುಎಇ ಮತ್ತು ಸೌದಿ ಅರೇಬಿಯಾದಲ್ಲಿ ಈ ಯೋಜನೆಯನ್ನು ಪಡೆಯಬಹುದಾಗಿದೆ.

  Published by:Prajwal B
  First published: