48MP ಕ್ಯಾಮೆರಾ ಫೋನ್ ವಿವೋ Z1x ಮಾರಾಟ ಆರಂಭ: 6 ಸಾವಿರವರೆಗೆ ಭರ್ಜರಿ ಕೊಡುಗೆ..!

ವಿವೋ Z1x ಸ್ಮಾರ್ಟ್​ ಫೋನಿನ ಮತ್ತೊಂದು ವಿಶೇಷ ಇದರ ಡಿಸ್​ಪ್ಲೇಗೆ SCHOTT Xensation ಗ್ಲಾಸ್ ನೀಡಿರುವುದು. ಇದು ಗೀರು ಬೀಳುವುದು ಮತ್ತು ಹೊಡೆಯುವುದನ್ನು ತಡೆಯುತ್ತದೆ.

zahir | news18-kannada
Updated:September 12, 2019, 7:39 PM IST
48MP ಕ್ಯಾಮೆರಾ ಫೋನ್ ವಿವೋ Z1x ಮಾರಾಟ ಆರಂಭ: 6 ಸಾವಿರವರೆಗೆ ಭರ್ಜರಿ ಕೊಡುಗೆ..!
Vivo Z1x
zahir | news18-kannada
Updated: September 12, 2019, 7:39 PM IST
ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ವಿವೋ Z1x ಸ್ಮಾರ್ಟ್​ಫೋನ್ ಸೆಪ್ಟೆಂಬರ್ 13 ರಿಂದ ಮಾರಾಟ ಆರಂಭಿಸಲಿದೆ. ಅಂದರೆ ಶುಕ್ರವಾರದಿಂದ ಇ-ಕಾಮರ್ಸ್ ವೆಬ್‌ಸೈಟ್‌ಗಳಾದ ಫ್ಲಿಪ್‌ಕಾರ್ಟ್ ಮತ್ತು ವಿವೋ.ಕಾಮ್‌ ಮೂಲಕ ನೂತನ ಮೊಬೈಲ್ ಖರೀದಿಸಬಹುದು.

Vivo Z1x ಫೋನ್ 64 ಜಿಬಿ ಮತ್ತು 128 ಜಿಬಿ ರ್ಯಾಮ್​ಗಳಲ್ಲಿ ಲಭ್ಯವಿರಲಿದೆ . 6 ಜಿಬಿ ರ್ಯಾಮ್‌ನೊಂದಿಗೆ ಬರುವ ಈ ಫೋನ್‌ನ 64 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದ್ದು, ಇದಕ್ಕೆ16,990 ರೂ. ನಿಗದಿ ಪಡಿಸಲಾಗಿದೆ. ಹಾಗೆಯೇ 128 ಜಿಬಿ ರ್ಯಾಮ್ ಹೊಂದಿರುವ ಮಾಡೆಲನ್ನು 18,990 ರೂ.ನಲ್ಲಿ ಖರೀದಿಸಬಹುದು. ಇನ್ನು ಈ ಮೊಬೈಲ್​ ಮೇಲೆ ಗ್ರಾಹಕರಿಗೆ ಅನೇಕ ರೀತಿಯ ಲಾಂಚಿಂಗ್ ಆಫರ್ ಕೂಡ ಲಭಿಸಲಿದೆ.

ಆಫರ್​ಗಳೇನು?

ನೀವು ಎಚ್‌ಡಿಎಫ್‌ಸಿ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ ಮೂಲಕ ಫೋನ್ ಖರೀದಿಸಿದರೆ, ನಿಮಗೆ 1250 ರೂ.ಗಳವರೆಗೆ ರಿಯಾಯಿತಿ ಸಿಗಲಿದೆ. ಅದೇ ರೀತಿ ರಿಲಯನ್ಸ್ ಜಿಯೋ ಬಳಕೆದಾರರು ಈ ಫೋನ್ ಖರೀದಿಸಿದರೆ 6,000 ರೂ.ವರಗೆ ಉಪಯುಕ್ತ ಕೊಡುಗೆಗಳನ್ನು ಪಡೆಯಬಹುದು. ಇನ್ನು ಈ ಮೊಬೈಲ್​ಗಳ ಮೇಲೆ ನೋ ಕಾಸ್ಟ್​ ಇಎಂಐ ಆಯ್ಕೆ ಕೂಡ ನೀಡಲಾಗಿದೆ.

ಬ್ಯಾಟರಿ ಮತ್ತು ಕ್ಯಾಮೆರಾ:
ವಿವೋ ಕಂಪೆನಿಯ ನೂತನ ಮೊಬೈಲ್​ನ ಪ್ರಮುಖ ಆಕರ್ಷಣೆ ಎಂದರೆ ಅದರ ಬ್ಯಾಟರಿ ಸಾಮರ್ಥ್ಯ ಹಾಗೂ ಕ್ಯಾಮೆರಾ. ಈ ಫೋನ್​ನಲ್ಲಿ ದೀರ್ಘಬಾಳಿಕೆಯ 4500mAh ಬ್ಯಾಟರಿ ನೀಡಲಾಗಿದ್ದು, ಇದು 22.5W ವೇಗದ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ. ಹಾಗೆಯೇ ವಿವೋ Z1xನಲ್ಲಿ 48 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ.

ವಿವೋ Z1x ವಿಶೇಷಣಗಳು:
Loading...

ವಿವೋ Z1x ಸ್ಮಾರ್ಟ್​ ಫೋನಿನ ಮತ್ತೊಂದು ವಿಶೇಷ ಇದರ ಡಿಸ್​ಪ್ಲೇಗೆ SCHOTT Xensation ಗ್ಲಾಸ್ ನೀಡಿರುವುದು. ಇದು ಗೀರು ಬೀಳುವುದು ಮತ್ತು ಹೊಡೆಯುವುದನ್ನು ತಡೆಯುತ್ತದೆ. ಇನ್ನು 6.38 ಇಂಚಿನ ಫುಲ್ ಎಚ್​ಡಿ ಪ್ಲಸ್ ಡಿಸ್​ಪ್ಲೇ ಇದರಲಿದ್ದು, 19.5: 9 ಅಸ್ಪೆಕ್ಟ್ ರೇಶಿಯೊ ಹೊಂದಿರಲಿದೆ. 6 ಜಿಬಿ RAM ಹೊಂದಿರುವ ಈ ಸ್ಮಾರ್ಟ್​ಫೋನ್​ ಸ್ನಾಪ್‌ಡ್ರಾಗನ್ 712 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದೊಂದಿಗೆ 48 ಮೆಗಾಪಿಕ್ಸೆಲ್ + 8 ಮೆಗಾಪಿಕ್ಸೆಲ್ + 2 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಹಿಂಬದಿಯಲ್ಲಿ ನೀಡಲಾಗಿದೆ.
First published:September 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...