ವಿವೋ Y81 ಮೊಬೈಲ್ ಬಿಡುಗಡೆ, ಬೆಲೆ ವೈಶಿಷ್ಟ್ಯ ಮಾಹಿತಿ ಇಲ್ಲಿದೆ


Updated:June 23, 2018, 1:29 PM IST
ವಿವೋ Y81 ಮೊಬೈಲ್  ಬಿಡುಗಡೆ, ಬೆಲೆ ವೈಶಿಷ್ಟ್ಯ ಮಾಹಿತಿ ಇಲ್ಲಿದೆ

Updated: June 23, 2018, 1:29 PM IST
ತೈವಾನ್​: ಚೀನಾದ ಮೊಬೈಲ್​ ಸಂಸ್ಥೆ ವಿವೋ ತನ್ನ Y ಶ್ರೇಣಿಯ ಹೊಸ ಮೊಬೈಲ್ 'Vivo Y81'​ನ್ನು 219 ಡಾಲರ್​ ಅಂದರೆ ಸುಮಾರು 14,939 ರೂ.ನಲ್ಲಿ ತೈವಾನ್​ನಲ್ಲಿ ಬಿಡುಗಡೆ ಮಾಡಿದೆ.

ಭಾರತದಲ್ಲಿ Vivo Y83 ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ಹೊಸ ಮೊಬೈಲ್​ನ್ನು ಮಾರುಕಟ್ಟೆಗೆ ಪರಿಚಯಸಿರುವ ಸಂಸ್ಥೆ, ಹೆಚ್ಚೇನು ಮಾರ್ಪಾಡು ಮಾಡದೇ ಇದ್ದರೂ ಬಜೆಟ್​ಗೆ ತಕ್ಕಂತೆ ನಾಟ್ಚ್​ ಡಿಸ್​ಪ್ಲೇ ಮತ್ತು ಸಿಂಗಲ್​ ಕ್ಯಾಮೆರಾದೊಂದಿಗೆ 'Vivo Y81'​ ಮೊಬೈಲ್​ ಬಿಡುಗಡೆಯಾಗಿದೆ.

ಇದು 1520 X720 ಪಿಕ್ಸೆಲ್​ಗಳ ರೆಸೊಲ್ಯೂಶನ್ ಹೊಂದಿರುವ 6.22 ಇಂಚಿನ ಎಚ್ಡಿ + ಡಿಸ್ಪ್ಲೇಯನ್ನು ಹೊಂದಿದೆ. ವಿವೋದವರ FunTouch 4.0 ಆಪರೇಟಿಂಗ್​ ಸಿಸ್ಟಂನೊಂದಿಗೆ ಆ್ಯಂಡ್ರಾಯ್ಡ್​ 8.1 ಓರಿಯೋ ಒಎಸ್​ ಮೂಲಕ ಈ ಮೊಬೈಲ್​ ಕಾರ್ಯನಿರ್ವಹಿಸುತ್ತದೆ. ಹಿಂದೆ ಫ್ಲಾಶ್​ ಲೈಟ್​ ಸಹಿತ 13MP ಶೂಟರ್​ ಕ್ಯಾಮೆರಾ ಹಾಗೂ ಮುಂಬಾಗದಲ್ಲಿ 5MP ಶೂಟರ್ ಕ್ಯಾಮೆರಾ ಹೊಂದಿದೆ.

ಮೀಡಿಯಾ ಟೆಕ್​ MT6762 SoC ಪ್ರೊಸೆಸರ್​ ಈ ಮೊಬೈಲ್​ನಲ್ಲಿ ಲಭ್ಯವಿದ್ದು ಈ ಫೋನ್ ನಿಮಗೆ ಫೇಸ್ ಅನ್ಲಾಕ್ ವೈಶಿಷ್ಟ್ಯದೊಂದಿಗೆ ಸಹ ಬರುತ್ತದೆ. ಇನ್ನು ಮೊಬೈಲ್​ನ ಮೆಮೊರಿ ವ್ಯವಸ್ಥೆ ಕುರಿತು ಹೇಳುವುದಾದರೆ 3GB RAM and 32GB ಆಂತರಿಕ ಮೆಮೊರಿ ವ್ಯವಸ್ಥೆಯಿದೆ. ಈ ಮೆಮೊರಿಯನ್ನು 256 ಜಿಬಿ ವೆರೆಗೂ ವಿಸ್ಥರಿಸಬಹುದು.

ವಿವೋ Y81 ಮೊಬೈಲ್​ಗಳು 4G LTE ವ್ಯವಸ್ಥೆಯೊಂದಿಗೆ ಬ್ಲೂಟೂತ್​ 5.0, ವೈಫೈ, ಮೈಕ್ರೋ ಯುಎಸ್​ಬಿ ಹಾಗೂ ಹೆಡ್​ಫೋನ್ ಜ್ಯಾಕ್​ ಹೊಂದಿದೆ.
First published:June 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...