ತ್ರಿವಳಿ ಕ್ಯಾಮೆರಾ, 5000 mAh ಬ್ಯಾಟರಿ; ಬಜೆಟ್ ಬೆಲೆಯ Vivo Y53s ಸ್ಮಾರ್ಟ್​ಫೋನ್​ ಇಂದು ದೇಶಿಯ ಮಾರುಕಟ್ಟೆಗೆ

Vivo Y53s ಸ್ಮಾರ್ಟ್​ಫೋನ್​ 8ಜಿಬಿ RAM​/12GB​​ ಸ್ಟೊರೇಜ್​​ ಆಯ್ಕೆಯಲ್ಲಿ ಸಿಗಲಿದೆ. ನೂತನ ಫೋನ್​ ಬೆಲೆ 19,490 ರೂ ಆಗಿದೆ. ನೀಲಿ, ಫೆನ್ಟಾಸ್ಟಿಕ್​​ ರೈನ್​ಬೊ- ಎರಡು ಬಣ್ಣದಲ್ಲಿ ಗ್ರಾಹಕರ ಖರೀದಿಗೆ ಸಿಗಲಿದೆ.

Vivo Y53s ಸ್ಮಾರ್ಟ್​ಫೋನ್​

Vivo Y53s ಸ್ಮಾರ್ಟ್​ಫೋನ್​

 • Share this:
  Vivo Y53s ಸ್ಮಾರ್ಟ್​ಫೋನ್​ ಇಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ನೂತನ ಫೋನ್​ 20 ಸಾವಿರ ಬೆಲೆಯದ್ದಾಗಿದ್ದು, 64 ಬಿಟ್​​ ಮೀಡಿಯಾಟೆಕ್​ ಪ್ರೊಸೆಸರ್​​​ ಮತ್ತು ಎಫ್​ಹೆಚ್​ಡಿ+ ಡಿಸ್​​ಪ್ಲೇ ಹೊಂದಿದೆ. ತ್ರಿವಳಿ ಕ್ಯಾಮೆರಾ ಸೆಟಪ್​​ ಜತೆಗೆ 64 ಮೆಗಾಫಿಕ್ಸೆಲ್​ ಕ್ಯಾಮೆರಾ ಒಳಗೊಂಡಿದೆ. Vivo Y53s ಸ್ಮಾರ್ಟ್​ಫೋನ್​​ ಫಾಸ್ಟ್​ ಚಾರ್ಜಿಂಗ್​ ಕೆಪಾಸಿಟಿ ಹೊಂದಿದೆ.

  Vivo Y53s ಸ್ಮಾರ್ಟ್​ಫೋನ್​ 8ಜಿಬಿ RAM​/12GB​​ ಸ್ಟೊರೇಜ್​​ ಆಯ್ಕೆಯಲ್ಲಿ ಸಿಗಲಿದೆ. ನೂತನ ಫೋನ್​ ಬೆಲೆ 19,490 ರೂ ಆಗಿದೆ. ನೀಲಿ, ಫೆನ್ಟಾಸ್ಟಿಕ್​​ ರೈನ್​ಬೊ- ಎರಡು ಬಣ್ಣದಲ್ಲಿ ಗ್ರಾಹಕರ ಖರೀದಿಗೆ ಸಿಗಲಿದೆ.

  ನೂತನ ಸ್ಮಾರ್ಟ್​ಫೋನ್​ ಅಮೆಜಾನ್​ , ಫ್ಲಿಪ್​ಕಾರ್ಟ್​ , ಟಾಟಾ ಕ್ಲಿಪ್​ ಪೇಟಿಯಂ ಮೂಲಕ ಖರೀದಿಸಬಹುದಾಗಿದೆ. ಬಜಾಜ್​ ಇಎಮ್​ಐ ಆಯ್ಕೆಯ ಮೂಲಕ ಮತ್ತು ವಿವೋ ಇಂಡಿಯಾ ಆನ್​ಲೈನ್​​ ಸ್ಟೋರ್​ ಮೂಲಕ ಖರೀದಿಸಬಹುದಾಗಿದೆ. ಗ್ರಾಹಕರು 1,500 ಎಕ್ಸ್​​ಚೇಂಜ್​​ ರೂಪದಲ್ಲಿ ಎಚ್​​​ಡಿಎಫ್​ಸಿ ಬ್ಯಾಂಕ್​​, ಐಸಿಐಸಿಐ, ಕೋಟಕ್​ ಮಹೀಂದ್ರಾ, ಬಜಾಜ್​ ಫಿನ್​ಸರ್ವ್​​​ ಕಾರ್ಡ್​​ ಮೂಲಕ ಖರೀದಿಸಬಹುದಾಗಿದೆ.

  Vivo Y53s ವಿಶೇಷತೆ:

  ನೂತನ ಫೋನ್​ 6.58 ಇಂಚಿನ ಎಫ್​ಹೆಚ್​ಡಿ+ ಡಿಸ್​ಪ್ಲೇ ಹೊಂದಿದ್ದು, ತ್ರಿವಳಿ ಕ್ಯಾಮೆರಾ ಹೊಂದಿದೆ. 64 ಮೆಗಾಫಿಕ್ಸೆಲ್​ ಕ್ಯಾಮೆರಾ, 2 ಮೆಗಾಫಿಕ್ಸೆಲ್​​ ಮ್ಯಾಕ್ರೋ ಕ್ಯಾಮೆರಾ ಮತ್ತು 2 ಮೆಗಾಫಿಕ್ಸೆಲ್​​ ಡೆಪ್ತ್​​ ಸೆನ್ಸಾರ್​​ ಹೊಂದಿದೆ. ಮುಂಭಾಗದಲ್ಲಿ 16 ಮೆಗಾಫಿಕ್ಸೆಲ್​ ಸೆಲ್ಫಿ ಕ್ಯಾಮೆರಾ ಹೊಂದಿದೆ. 5 ಸಾವಿರ ಎಮ್​ಎಹೆಚ್​​ ಬ್ಯಾಟರಿ ಮತ್ತು 33 ವ್ಯಾಟ್​ ಫಾಸ್ಟ್​​​ ಚಾರ್ಜರ್​ ಹೊಂದಿದೆ.
  Published by:Harshith AS
  First published: