ಡುಯಲ್ ಕ್ಯಾಮೆರಾ, 5 ಸಾವಿರ mAh ಬ್ಯಾಟರಿ; Vivo Y21 ಬಜೆಟೆ್ ಬೆಲೆಯ ಸ್ಮಾರ್ಟ್​ಫೋನ್ ಮಾರುಕಟ್ಟೆಗೆ

Vivo Y21 ಬಜೆಟ್​ ಬೆಲೆಯ ಸ್ಮಾರ್ಟ್​ಫೋನ್ ಆಗಿದ್ದು, 5 ಸಾವಿರ mAh​ ಬ್ಯಾಟರಿಯನ್ನು  ಒಳಗೊಂಡಿದೆ. ಸ್ಲಿಮ್ ಡಿಸೈನ್​ನಲ್ಲಿ ರೂಪುಗೊಂಡಿದೆ. ಕಂಪನಿ ತಿಳಿಸುವಂತೆ ಈ ಸ್ಮಾಟ್​ಫೋನ್​​ ಜೆನ್​-ಝೆಡ್​​ ಗ್ರಾಹಕರಿಗೆ ವೇಗದ ಜೀವನ ಶೈಲಿಯವರಿಗಾಗಿ ವಿನ್ಯಾಸ ಮಾಡಲಾಗಿದೆ ಎಂದಿದೆ.

Vivo Y21

Vivo Y21

 • Share this:
  ವಿವೋ ಸ್ಮಾರ್ಟ್​ಫೋನ್​ ಸಂಸ್ಥೆ ಹಲವಾರು ಸ್ಮಾರ್ಟ್​ಫೋನ್​ಗಳನ್ನು ಉತ್ಪಾದಿಸಿದೆ. ಅದರಲ್ಲಿ ಬಜೆಟ್​ಗೆ ಅನುಗುಣವಾಗಿ ಮತ್ತು ಗ್ರಾಹಕರಿಗೆ ಕಡಿಮೆ ಬೆಲೆಗೆ ಕೈಗೆಡಟುವ ರೀತಿಯಲ್ಲೂ ಪರಿಚಯಿಸಿದೆ. ಅದರಂತೆ ಇದೀಗ ವಿವೋ Y21 ಹೆಸರಿನ ಸ್ಮಾರ್ಟ್​ಫೋನನ್ನು ಬಿಡುಗಡೆ ಮಾಡಿದೆ.

  ವಿವೋ Y21 ಬಜೆಟ್​ ಬೆಲೆಯ ಸ್ಮಾರ್ಟ್​ಫೋನ್ ಆಗಿದ್ದು, 5 ಸಾವಿರ mAh​ ಬ್ಯಾಟರಿಯನ್ನು  ಒಳಗೊಂಡಿದೆ. ಸ್ಲಿಮ್ ಡಿಸೈನ್​ನಲ್ಲಿ ರೂಪುಗೊಂಡಿದೆ. ಕಂಪನಿ ತಿಳಿಸುವಂತೆ ಈ ಸ್ಮಾಟ್​ಫೋನ್​​ ಜೆನ್​-ಝೆಡ್​​ ಗ್ರಾಹಕರಿಗೆ ವೇಗದ ಜೀವನ ಶೈಲಿಯವರಿಗಾಗಿ ವಿನ್ಯಾಸ ಮಾಡಲಾಗಿದೆ ಎಂದಿದೆ.

  ವಿವೋ Y21 ಎರಡು ಬಣ್ಣದಲ್ಲಿ ಮತ್ತು ಶೇಖರಣಾ ಆಯ್ಕೆಯಲ್ಲಿ ಬರುತ್ತದೆ. ಆನ್​ಲೈನ್​ ಇ-ಕಾಮಸ್ಟ್​ ಮಳಿಗೆಯಲ್ಲೂ ಲಭ್ಯವಿದೆ. ವಿವೋ 21 ಮೇಕ್​ ಇನ್​ ಇಂಡಿಯಾದ ಬದ್ಧತೆಯನ್ನು ಅನುಸರಿಸುತ್ತದೆ ಮತ್ತು ಗ್ರೇಟರ್​​ ನೋಯ್ಡಾದಲ್ಲಿ ಸಿದ್ಧವಾಗುತ್ತಿದೆ.

  Vivi Y21 ವಿಶೇಷತೆ:

  ವಿವೋ ವೈ21 ಸ್ಮಾರ್ಟ್​ಫೋನ್​ 6.51 ಇಂಚಿನ HD+ ಡಿಸ್​ಪ್ಲೇ, ಸಿಂಗಲ್​ ಸೆಲ್ಫಿ ಕ್ಯಾಮೆರಾದ ಜೊತೆಗೆ  ವಾಟರ್​ ಡ್ರಾಪ್​​ ನಾಚ್​ ಡಿಸ್​ಪ್ಲೇ ಹೊಂದಿದೆ. ಇದು ಡುಯೆಲ್​ ಸಿಮ್​ ಕಾರ್ಡ್​​ ಬೆಂಬಲಿಸುತ್ತದೆ ಮತ್ತು ಆ್ಯಂಡ್ರಾಯ್ಡ್​ 11 ಬೆಂಬಲ ಪಡೆದಿದೆ.  ಮೀಡಿಯಾ ಟೆಕ್​ ಹೆಲಿಯೋ ಪಿ35 ಚಿಪ್​ಸೆಟ್​​ ಬೆಂಬಲ ಪಡೆದಿರುವ ಈ ಸ್ಮಾರ್ಟ್​ಫೋನ್​​ 4 GB RAM​ + 1TB ವಿಸ್ತರಿಸುವ ವರ್ಚುವಲ್​ RAM​ ಮತ್ತು 128GB ಸ್ಟೊರೇಜ್​ ಆಯ್ಕೆಯನ್ನು ಹೊಂದಿದೆ.

  ಡುಯೆಲ್​​​ ರಿಯಲ್​ ಕ್ಯಾಮೆರಾ ಸೆಟಪ್​​ ಒಳಗೊಂಡಿರುವ ಈ ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 13 ಮೆಗಾಫಿಕ್ಸೆಲ್​​ ಪ್ರೈಮರಿ ಕ್ಯಾಮೆರಾ,  2 ಮೆಗಾಫಿಕ್ಸೆಲ್​​ ಸೆಕಂಡರಿ ಶೂಟರ್​ ನೀಡಲಾಗಿದೆ. ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್​​ ಕ್ಯಾಮೆರಾ ಮತ್ತು ವಿಡಿಯೋ ಕಾಲಿಂಗ್​ ಮಾಡಬಹುದಾಗಿದೆ. Vivi Y 21 ಸ್ಮಾರ್ಟ್​ಫೋನಿನಲ್ಲಿ ಪನೋರಮಾ, ಲೈವ್​ ಫೋಟೋ, ಸ್ಲೋ ಮೋಷನ್​, ಟೈಮ್​​ ಲಾಪ್ಸ್​ ಆಯ್ಕೆ ಇದರಲ್ಲಿ ನೀಡಲಾಗಿದೆ.

  ನೂತನ ಸ್ಮಾರ್ಟ್​ಫೋನಿನಲ್ಲಿ ಫಿಂಗರ್​ ಪ್ರಿಂಟ್​ ಸೆನ್ಸಾರ್​​, 4G ಕನೆಕ್ಟ್​ವಿಟಿ, ಬ್ಲೂಟೂ 5.0, ವೈ-ಫೈ ಮತ್ತು ಧೀರ್ಘ ಕಾಲದ ಬಾಳಿಕೆಗಾಗಿ 5 ಸಾವಿರ mAh​ ಬ್ಯಾಟರಿ ಅಳವಡಿಸಲಾಗಿದೆ. ಗ್ರಾಹಕರಿಗಾಗಿ  ಮಿಡ್​ನೈಟ್​ ಬ್ಲೂ ಮತ್ತು ಡೈಮಂಡ್​​ ಗ್ಲೋ ಆಯ್ಕೆಯಲ್ಲಿ ಪರಿಚಯಿಸಿದೆ. ಇ-ಕಾಮಸರ್ಸ್​ ಮಳಿಗೆಯಾದ ಅಮೆಜಾನ್​ ಫ್ಲಿಪ್​ಕಾರ್ಟ್​​, ಪೇಟಿಯಂನಲ್ಲಿ ಮಾರಾಟ ಮಾಡುತ್ತಿದೆ. ಹೆಚ್​​ಡಿಎಫ್​ಸಿ ಬ್ಯಾಂಕ್​​ ಕಾರ್ಡ್​ ಮತ್ತು ಐಸಿಐಸಿಐ ಕಾರ್ಡ್​ ಬಳಸಿ ಖರೀದಿಸಿದರೆ ಶೇ.500 ರಷ್ಟು ಕ್ಯಾಶ್​ಬ್ಯಾಕ್ ಸಿಗಲಿದೆ,

  ಅಂದಹಾಗೆಯೇ 4GB+ 128GB ವೇರಿಯಂಟ್ ಸಿಗುವ  Vivo Y 21 ಸ್ಮಾರ್ಟ್​ಫೋನ್​ ಬೆಲೆ 15,490 ರೂ ಆಗಿದೆ.
  Published by:Harshith AS
  First published: