ಜನಪ್ರಿಯ ವಿವೋ Y20T ಭಾರತದಲ್ಲಿ ಬಿಡುಗಡೆಯಾಗಿದ್ದು, ಕಂಪನಿಯ ವೈ ಸರಣಿಯ ಸ್ಮಾರ್ಟ್ ಫೋನ್ ಬಳಗಕ್ಕೆ ಹೊಸ ಫೋನ್ ಸೇರ್ಪಡೆಗೊಂಡಿದೆ. ನೂತನ ವಿವೋ Y20T ಸ್ನಾಪ್ಡ್ರಾಗನ್ 662 ಚಿಪ್ಸೆಟ್ ಮತ್ತು 64 ಜಿಬಿ ಸಂಗ್ರಹ ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ನೊಂದಿಗೆ ಬರುತ್ತದೆ. ವಿವೋ Y20T ಬೆಲೆಯನ್ನು 15,490 ರೂ.ಗೆ ನಿಗದಿಪಡಿಸಲಾಗಿದೆ. ಸಾಧನವು ಕಂಪನಿಯ ವಿಸ್ತೃತ RAM 2.0 ವೈಶಿಷ್ಟ್ಯವನ್ನು ಹೊಂದಿದೆ. ಇದು ಬಳಕೆದಾರರಿಗೆ ತೀವ್ರವಾದ ಕಾರ್ಯಗಳಿಗಾಗಿ ಹೆಚ್ಚುವರಿ ವರ್ಚುವಲ್ ಮೆಮೊರಿಯನ್ನು ಪಡೆಯಲು ಅನುಮತಿಸುತ್ತದೆ.
ವಿವೋ Y20T ಬೆಲೆ, ಬಣ್ಣ ಮತ್ತು ಲಭ್ಯತೆ
ವಿವೋ Y20T ಬೆಲೆ 15,490 ರೂ ಆಗಿದ್ದು, 6GB/128GB RAM ಮತ್ತು ಶೇಖರಣಾ ರೂಪಾಂತರದಲ್ಲಿ ಮಾರಾಟ ಮಾಡಲಾಗುತ್ತದೆ. ಸಾಧನವು ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ - ಪ್ಯೂರಿಸ್ಟ್ ಬ್ಲೂ ಮತ್ತು ಅಬ್ಸಿಡಿಯನ್ ಬ್ಲಾಕ್. ಅಕ್ಟೋಬರ್ 11 ರಿಂದ ರಿಟೇಲ್ ಸ್ಟೋರ್ಗಳಲ್ಲಿ ಸ್ಮಾರ್ಟ್ಫೋನ್ಗಳನ್ನು ಮಾರಾಟ ಮಾಡುತ್ತಿದೆ.
ವಿವೋ ಪ್ರಕಾರ, ಬಜಾಜ್ ಫಿನ್ಸರ್ವ್ನೊಂದಿಗೆ 12 ತಿಂಗಳ ವರೆಗಿನ ನೋ-ಕಾಸ್ಟ್ ಇಎಂಐ ಸೇರಿದಂತೆ ಆನ್ಲೈನ್ ಆಫರ್ಗಳನ್ನು ಗ್ರಾಹಕರು ಬಳಸಬಹುದಾದ ಆಯ್ಕೆ ನೀಡಿದೆ. ಗ್ರಾಹಕರು ವಿವೋ ಇ-ಸ್ಟೋರ್ನಲ್ಲಿ ಹೆಚ್ಚುವರಿ 500 ರೂ ಕ್ಯಾಶ್ಬ್ಯಾಕ್ ಅನ್ನು ಸಹ ಪಡೆಯಬಹುದು. ವಿವೋ ಪ್ರಕಾರ ಫ್ಲಿಪ್ಕಾರ್ಟ್, ಅಮೆಜಾನ್, ಪೇಟಿಎಂ ಮತ್ತು ಟಾಟಾ ಕ್ಲಿಕ್ನಂತಹ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಗ್ರಾಹಕರು ಆರು ತಿಂಗಳ ನೋ ಕಾಸ್ಟ್ ಎಕ್ಸ್ಚೇಂಜ್ ಅನ್ನು ಪಡೆಯಬಹುದು.
ವಿವೋ Y20T ವಿಶೇಷತೆಗಳು
ಹೊಸದಾಗಿ ಬಿಡುಗಡೆಗೊಂಡ ವಿವೋ Y20T ಸ್ಮಾರ್ಟ್ ಫೋನ್ 6.51 ಇಂಚಿನ 720 ಪಿ ಎಚ್ ಡಿ+ ಡಿಸ್ ಪ್ಲೇಯನ್ನು ಹೊಂದಿದೆ. ಭದ್ರತೆಗಾಗಿ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅಳವಡಿಸಿಕೊಂಡಿದೆ. ಸಾಧನವು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 662 ಚಿಪ್ಸೆಟ್ ಅನ್ನು ಹೊಂದಿದೆ ಮತ್ತು 6GB RAM +128GB ಸಂಗ್ರಹದೊಂದಿಗೆ ಬರುತ್ತದೆ. ವಿವೋ ತನ್ನ ವಿಸ್ತೃತ RAM 2.0 ವೈಶಿಷ್ಟ್ಯವನ್ನು ಹೊಸ Y20T ಸ್ಮಾರ್ಟ್ಫೋನ್ನಲ್ಲಿ ನೀಡಿದೆ. ಇದು ಬಳಕೆದಾರರಿಗೆ ಸಾಧನದಲ್ಲಿ 1GB ಸಂಗ್ರಹಣೆಯನ್ನು ವರ್ಚುವಲ್ ಮೆಮೊರಿಯಂತೆ ಬಳಸಲು ಅನುಮತಿಸುತ್ತದೆ.
ಕ್ಯಾಮೆರಾ ವಿಶೇಷತೆಯನ್ನು ಗಮನಿಸಿದಾಗ, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ನೊಂದಿಗೆ ಬರುತ್ತದೆ, ಇದರಲ್ಲಿ 13 ಮೆಗಾಫಿಕ್ಸೆಲ್ ಪ್ರಾಥಮಿಕ ಸೆನ್ಸರ್, 2 ಮೆಗಾಫಿಕ್ಸೆಲ್ ಕ್ಯಾಮರಾ ಮತ್ತು ಸೂಪರ್ ಮ್ಯಾಕ್ರೋ ಕ್ಯಾಮೆರಾ ನೀಡಲಾಗಿದೆ. ಸಾಧನದ ಮುಂಭಾಗದಲ್ಲಿ ಡ್ಯೂಡ್ರಾಪ್ ನೋಚ್ ಇದ್ದು 8 ಮೆಗಾಫಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿದೆ. ಇದು ಔರಾ ಸ್ಕ್ರೀನ್ ಲೈಟ್ ಮತ್ತು ಪೋರ್ಟ್ರೇಟ್ ಮೋಡ್ ಸಾಫ್ಟ್ವೇರ್ ವೈಶಿಷ್ಟ್ಯಗಳನ್ನು ಹೊಂದಿದೆ.
ವಿವೋ Y20T 5000mAh ಬ್ಯಾಟರಿ ಅಳವಡಿಸಕೊಂಡಿದ್ದು, 18W ನಲ್ಲಿ ಫಾಸ್ಟ್ ಚಾರ್ಜ್ ಬೆಂಬಲದ ಮೂಲಕ ಚಾರ್ಜ್ ಮಾಡಬಹುದು. Y20T ಸ್ಮಾರ್ಟ್ಫೋನ್ ಸಹ AI ಪವರ್ ಸೇವಿಂಗ್ ತಂತ್ರಜ್ಞಾನವನ್ನು ಹೊಂದಿದೆ ಎಂದು ವಿವೋ ಹೇಳುತ್ತದೆ. ಇದು 20 ಗಂಟೆಗಳ HD ಚಲನಚಿತ್ರ ಸ್ಟ್ರೀಮಿಂಗ್ ಮತ್ತು 8 ಗಂಟೆ ಗೇಮಿಂಗ್ಗಾಗಿ ಬಳಸಬಹುದಾಗಿದೆ. ಮಾತ್ರವಲ್ಲದೆ ಬಳಕೆದಾರರಿಗೆ ತಮ್ಮ ಇತರ ಸಾಧನಗಳನ್ನು ರಿವರ್ಸ್ ಚಾರ್ಜ್ ಮಾಡುವ ಸಾಮರ್ಥ್ಯವನ್ನು ನೀಡುತ್ತದೆ. ಸಾಧನವು ಆಂಡ್ರಾಯ್ಡ್ 11 ರ ಮೇಲೆ ಕಾರ್ಯನಿರ್ವಹಿಸುತ್ತಿದೆ ಮತ್ತು ಅಲ್ಟ್ರಾ ಗೇಮ್ ಮೋಡ್, ಎಸ್ಪೋರ್ಟ್ಸ್ ಮೋಡ್, 4ಡಿ ಗೇಮ್ ವೈಬ್ರೇಶನ್, ಗೇಮ್ ಪಿಕ್ಚರ್-ಇನ್-ಪಿಕ್ಚರ್ ವೈಶಿಷ್ಟ್ಯಗಳೊಂದಿಗೆ ಸುಧಾರಿತ ಅನುಭವಕ್ಕಾಗಿ ಕಂಪನಿಯ ಮಲ್ಟಿ ಟರ್ಬೊ 5.0 ಅನ್ನು ಅಳವಡಿಸಿಕೊಂಡಿದೆ.
ಇದನ್ನು ಓದಿ: Pleasure+ scooter: ಹೊಸ ರೂಪಾಂತರದಲ್ಲಿ ಮಾರುಕಟ್ಟೆಗೆ ಧಾವಿಸಿದ ಪ್ಲೆಶರ್ ಸ್ಕೂಟರ್.. ಬೆಲೆ ಎಷ್ಟು ಗೊತ್ತಾ?
ಒಟ್ಟಿನಲ್ಲಿ ವಿವೋ ಗ್ರಾಹಕರ ಗಮನ ಸೆಳೆಯುವಂತೆಹ ಆಕರ್ಷಕ ಫೀಚರ್ಸ್ ಅಳವಡಿಸಿಕೊಂಡಿದೆ. ಸದ್ಯ 15, 490 ರೂ.ಗೆ ಖರೀದಿಗೆ ಸಿಗುತ್ತಿದೆ. ವಿವೋ ರಿಟೇಲ್ ಸ್ಟೋರ್ಗಳಲ್ಲೂ ಖರೀದಿಸುವ ಅವಕಾಶವನ್ನು ಗ್ರಾಹಕರಿಗೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ