ಜಾಗತಿಕ ಮಾರುಕಟ್ಟೆಯಲ್ಲಿ (Global Market) ಸ್ಮಾರ್ಟ್ಫೋನ್ಗಳಿಗೆ (Smartphones) ಇದ್ದಷ್ಟು ಬೇಡಿಕೆ ಬೇರೆ ಯಾವುದೇ ಸಾಧನಗಳಿಗಿಲ್ಲ. ಅದೇ ರೀತಿ ಟೆಕ್ ಕಂಪೆನಿಗಳು ಸಹ ಹೊಸ ಹೊಸ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತದೆ. ವಿವೋ ಕಂಪೆನಿ ಎಂದಾಗ ಮೊದಲು ನೆನಪಾಗೋದೇ ಈ ಕಂಪೆನಿಯಿಂದ ಬಿಡುಗಡೆಯಾದಂತಹ ಸ್ಮಾರ್ಟ್ಫೋನ್ಗಳು. ವಿವೋ ಕಂಪೆನಿಯ ಸ್ಮಾರ್ಟ್ಫೋನ್ಗಳು ಕ್ಯಾಮೆರಾ ಫೀಚರ್ಸ್ಗೆ ಭಾರೀ ಭಾರೀ ಜನಮೆಚ್ಚುಗೆಯನ್ನು ಪಡೆದಿದೆ. ಯಾರೇ ಆಗಲಿ ಸ್ಮಾರ್ಟ್ಫೋನ್ಗಳನ್ನು ಖರೀದಿಸುವಾಗ ಅದರ ಫೀಚರ್ಸ್ಗಳನ್ನು ಮೊದಲು ನೋಡುತ್ತಾರೆ. ನಂತರ ಅದರ ಬೆಲೆಯನ್ನು ವೀಕ್ಷಿಸುತ್ತಾರೆ. ವಿವೋ ಕಂಪೆನಿ (Vivo Company) ಬಜೆಟ್ ಬೆಲೆಯಲ್ಲಿ ಗುಣಮಟ್ಟದ ಫೀಚರ್ಸ್ಗಳನ್ನೊಳಗೊಂಡ ಸಾಕಷ್ಟು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ.
ವಿವೋ ಕಂಪೆನಿಯಿಂದ ಇದೀಗ ಹೊಸ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಇದನ್ನು ವಿವೋ ವೈ100 ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದ್ದು, ಬಿಡುಗಡೆಗೆ ಮೊದಲೇ ಇದರ ಕೆಲವೊಂದು ಫೀಚರ್ಸ್ಗಳು ಸೋರಿಕೆಯಾಗಿದೆ.
ವಿವೋ ವೈ100 ಸ್ಮಾರ್ಟ್ಫೋನ್ನ ಪ್ರೊಸೆಸರ್ ಸಾಮರ್ಥ್ಯ ಹೇಗಿದೆ?
ವಿವೋ ವೈ100 ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 900 ಎಸ್ಓಸಿ ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದೆ ಎಂದು ಗ್ಯಾರಂಟಿಯಾಗಿದೆ. ಈ ಚಿಪ್‌ಸೆಟ್ 2.4GHz ಗರಿಷ್ಠ ವೇಗ ಪಡೆದಿರುವ ಸಾಧ್ಯತೆ ಇವೆ ಎನ್ನಲಾಗಿದೆ. ಇದರೊಂದಿಗೆ ಆಂಡ್ರಾಯ್ಡ್ 13 ಓಎಸ್ ಜೊತೆಗೆ ಫನ್ಟಚ್ ಓಎಸ್ 13 ಸಪೋರ್ಟ್ ಸಹ ಇರಲಿದೆ ಎಂದು ವರದಿಯಾಗಿದೆ. ಇನ್ನು ಇದಕ್ಕೆ ಪೂರಕವಾಗಿ 8 ಜಿಬಿ ರ್‍ಯಾಮ್ ಸ್ಟೋರೇಜ್ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ವಿವೋ ವೈ100 ಸ್ಮಾರ್ಟ್‌ಫೋನ್ ಕ್ಯಾಮೆರಾ ಹಾಗೂ ಇತರೆ ಫೀಚರ್ಸ್
ವಿವೋ ವೈ100 ಫೋನ್‌ನ ಫೀಚರ್ಸ್ ಲೀಕ್ ಆದ ಪ್ರಕಾರ, ಇದು 6 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದೆ. ಹಾಗೆಯೇ ಈ ಡಿಸ್‌ಪ್ಲೇಯ ಪ್ರತಿ ಇಂಚಿನ ಸಾಂದ್ರತೆಯು 440 ಪಿಕ್ಸೆಲ್ ಆಗಿರಲಿದೆ ಎಂದು ವರದಿಯಾಗಿದೆ. ವಿವೋ ವೈ100 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ಇದರಲ್ಲಿ 64 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಮುಖ್ಯ ಕ್ಯಾಮೆರಾವನ್ನು ಒಳಗೊಂಡಿರಲಿದೆ. ಹಾಗೆಯೇ 8 ಮೆಗಾ ಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು 2 ಮೆಗಾ ಪಿಕ್ಸೆಲ್ ಮೂರನೇ ಕ್ಯಾಮೆರಾವನ್ನು ಒಳಗೊಂಡಿರಲಿದೆ.
ವಿವೋ ವೈ100 ಸ್ಮಾರ್ಟ್ಫೋನ್ನ ಬೆಲೆ
ವಿವೋ ಕಂಪೆನಿಯಿಂದ ಮುಂಬರು ವಿವೋ ವೈ100 ಸ್ಮಾರ್ಟ್‌ಫೋನ್ 6ಜಿಬಿ ರ್‍ಯಾಮ್ ಮತ್ತು 128ಜಿಬಿ ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಹೊಂದಿರಲಿದ್ದು, ಈ ವೇರಿಯಂಟ್‌ನ ಬೆಲೆಯು 27,000 ರೂಪಾಯಿಗಳಷ್ಟು ಬೆಲೆಯನ್ನು ನಿಗದಿ ಮಾಡಲಾಗಿದೆ ಎಂದು ಎನ್ನಲಾಗಿದೆ. ಇನ್ನು ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 900 ಎಸ್ಓಸಿ ಪ್ರೊಸೆಸರ್ ಹೊಂದಿರುವುದು ಬಹುತೇಕ ಖಚಿತ ಎನ್ನಲಾಗಿದೆ.
ಇನ್ನು ಈ ಸ್ಮಾರ್ಟ್ಫೋನ್ನ ಬಿಡುಗಡೆಯ ದಿನಾಂಕ ಮತ್ತು ಲಭ್ಯತೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.
ವಿವೋ ಕಂಪೆನಿಯಿಂದ ಇತ್ತೀಚೆಗೆ ವಿವೋ vಐ53ಟಿ ಎಂಬ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ನ ಫೀಚರ್ಸ್ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ಓದಿ.
ಇದನ್ನೂ ಓದಿ: ಈ ರೀಚಾರ್ಜ್ ಪ್ಲ್ಯಾನ್ 1095 ಜಿಬಿ ಡೇಟಾ ಉಚಿತ! ಬೇರೆ ಏನೆಲ್ಲಾ ಪ್ರಯೋಜನಗಳು ಲಭ್ಯವಿದೆ?
ವಿವೋ ವೈ53ಟಿ ಸ್ಮಾರ್ಟ್‌ಫೋನ್ ಫೀಚರ್ಸ್
ಇತ್ತೀಚೆಗೆ ಬಿಡುಗಡೆ ಆಗಿರುವ ವಿವೋ ವೈ53ಟಿ ಸ್ಮಾರ್ಟ್‌ಫೋನ್ ಅಧಿಕ ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.51 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇಯು ವಾಟರ್ ಡ್ರಾಪ್ ನಾಚ್ ವಿನ್ಯಾಸವನ್ನ ಹೊಂದಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಈ ಸ್ಮಾರ್ಟ್‌ಫೋನ್ 4ಜಿಬಿ ರ್‍ಯಾಮ್ ಮತ್ತು 128ಜಿಬಿ ಮತ್ತು 6ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್ ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ