• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Vivo X90 Smartphone: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ ವಿವೋ ಎಕ್ಸ್​90 ಸ್ಮಾರ್ಟ್​​ಫೋನ್​! ಹೇಗಿದೆ ಫೀಚರ್ಸ್​?

Vivo X90 Smartphone: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ ವಿವೋ ಎಕ್ಸ್​90 ಸ್ಮಾರ್ಟ್​​ಫೋನ್​! ಹೇಗಿದೆ ಫೀಚರ್ಸ್​?

ವಿವೋ ಎಕ್ಸ್​90 ಸ್ಮಾರ್ಟ್​​ಫೋನ್​

ವಿವೋ ಎಕ್ಸ್​90 ಸ್ಮಾರ್ಟ್​​ಫೋನ್​

ವಿವೋ ಕಂಪೆನಿ ವಿವೋ ಎಕ್ಸ್​90 ಸೀರಿಸ್​ನ ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಸ್ಮಾರ್ಟ್​​ಫೋನ್​ ಉತ್ತಮ ಗುಣಮಟ್ಟದ ಫೀಚರ್ಸ್​ ಅನ್ನು ಹೊಂದಿದ್ದು, ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.

  • Share this:

    ಸ್ಮಾರ್ಟ್​ಫೋನ್​ಗಳು (Smartphones) ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಪ್ರಮುಖ ಸಾಧನವಾಗಿಬಿಟ್ಟಿದೆ. ಕೆಲವರಿಗೆ ಸ್ಮಾರ್ಟ್​​ಫೋನ್​ ಇಲ್ಲದೆ ದಿನವೇ ಹೋಗುವುದಿಲ್ಲ. ಆದರೆ ಯಾರೇ ಆಗಲಿ ಒಂದು ಸ್ಮಾರ್ಟ್​​ಫೋನ್ ಅನ್ನು ಹೊಸದಾಗಿ ಖರೀದಿಸ್ತಾರೆಂದರೆ ಮುಖ್ಯವಾಗಿ ಅದರ ಫೀಚರ್ಸ್​ ಮತ್ತು ವಿನ್ಯಾಸವನ್ನು ನೋಡುತ್ತಾರೆ. ಈ ಎಲ್ಲಾ ಗುಣಮಟ್ಟದ ಫೀಚರ್ಸ್​ ಅನ್ನು ಹೊಂದಿಕೊಂಡು ವಿವೋ ಕಂಪೆನಿ (Vivo Company) ಹೊಸ ಸ್ಮಾರ್ಟ್​​ಫೋನ್​ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ವಿವೋ ಕಂಪೆನಿಯ ಮೊಬೈಲ್​ಗಳು ಕ್ಯಾಮೆರಾ ಫೀಚರ್ಸ್​ಗಳಿಗೆ ಫುಲ್ ಫೇಮಸ್​. ಅದೇ ರೀತಿ ಈ ಬಾರಿ ವಿವೋ ಕಂಪೆನಿ ವಿವೋ ಎಕ್ಸ್​90 ಸೀರಿಸ್​ನ (Vivo X90 Series) ಸ್ಮಾರ್ಟ್​ಫೋನ್​ಗಳನ್ನು ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ. 


    ವಿವೋ ಕಂಪೆನಿ ವಿವೋ ಎಕ್ಸ್​90 ಸೀರಿಸ್​ನ ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಸ್ಮಾರ್ಟ್​​ಫೋನ್​ ಉತ್ತಮ ಗುಣಮಟ್ಟದ ಫೀಚರ್ಸ್​ ಅನ್ನು ಹೊಂದಿದ್ದು, ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.


    ವಿವೋ ಎಕ್ಸ್​90 ಸ್ಮಾರ್ಟ್​ಫೋನ್​ನ ಫೀಚರ್ಸ್​ ಹೇಗಿದೆ?


    ವಿವೋ ಎಕ್ಸ್​90 ಸ್ಮಾರ್ಟ್‌ಫೋನ್‌ ಮುಖ್ಯವಾಗಿ 6.76 ಇಂಚಿನ ಕರ್ವ್ಡ್​​ ಫುಲ್ ಹೆಚ್​ಡಿ+ ಕ್ಯೂ9 ಅಲ್ಟ್ರಾ-ವಿಷನ್ ಅಮೋಲ್ಡ್​ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್​ಪ್ಲೇಯು 120Hz ರಿಫ್ರೆಶ್ ರೇಟ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕೆ ಪಂಚ್ ಹೋಲ್ ಕಟೌಟ್‌ ಶೈಲಿಯಲ್ಲಿ ಈ ಡಿಸ್‌ಪ್ಲೇ ಕಂಡುಬಂದಿದೆ. ಇದರೊಂದಿಗೆ ಹೆಚ್​ಡಿಆರ್​10+ ಹಾಗೂ 2,800×1,260 ಪಿಕ್ಸೆಲ್‌ ರೆಸಲ್ಯೂಶನ್ ಅನ್ನು ನೀಡುತ್ತದೆ.




    ಕ್ಯಾಮೆರಾ ಫೀಚರ್ಸ್


    ವಿವೋ ಕಂಪೆನಿಯ ಎಕ್ಸ್​90 ಸ್ಮಾರ್ಟ್​ಫೋನ್​ ವಿಶೇಷವಾಗಿ 50 ಮೆಗಾಪಿಕ್ಸೆಲ್​ ಪ್ರಮುಖ ಕ್ಯಾಮೆರಾದ ಆಯ್ಕೆಯೊಂದಿಗೆ ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್​ ಅನ್ನು ಹೊಂದಿದೆ. ಇನ್ನುಳಿದಂತೆ 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆ್ಯಂಗಲ್​ ಲೆನ್ಸ್ ಹಾಗೂ 12 ಮೆಗಾಪಿಕ್ಸೆಲ್ 2ಎಕ್ಸ್​ ಪೋರ್ಟ್ರೇಟ್ ಲೆನ್ಸ್‌ ಕ್ಯಾಮೆರವನ್ನು ಒಳಗೊಂಡಿದೆ ಇನ್ನು ಈ ಸ್ಮಾರ್ಟ್​​ಫೋನ್​ನಲ್ಲಿ ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್​ಗಾಗಿ ಈ ಫೋನ್​ನಲ್ಲಿ 32 ಮೆಗಾಪಿಕ್ಸೆಲ್ ಸೆನ್ಸಾರ್​​ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.


    ಪ್ರೊಸೆಸರ್​ ಸಾಮರ್ಥ್ಯ


    ವಿವೋ ಎಕ್ಸ್​90 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್‌ ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್​​ಫೋನ್​ ಬರೋಬ್ಬರಿ 12 ಜಿಬಿ ರ್‍ಯಾಮ್ ಹಾಗೂ 256ಜಿಬಿ ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಮೊಬೈಲ್ ಬಳಕೆದಾರರಿಗೆ ಉತ್ತಮ ಕಾರ್ಯಕ್ಷಮತೆಯ ಅನುಭವವನ್ನು ನೀಡುತ್ತದೆ.


    ಬ್ಯಾಟರಿ ಫೀಚರ್ಸ್


    ವಿವೋ ಎಕ್ಸ್​90 ಸ್ಮಾರ್ಟ್‌ಫೋನ್‌ 4,810mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಒಳಗೊಂಡಿದೆ. ಈ ಬ್ಯಾಟರಿಯು 120W ಡ್ಯುಯಲ್ ಸೆಲ್ ಫ್ಲ್ಯಾಶ್‌ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.


    ವಿವೋ ಎಕ್ಸ್​90 ಸ್ಮಾರ್ಟ್​​ಫೋನ್​


    ಇತರೆ ಫೀಚರ್ಸ್


    ಇನ್ನು ಈ ಸ್ಮಾರ್ಟ್​​ಫೋನ್​ನ ಕನೆಕ್ಟಿವಿಟಿ ಫೀಚರ್ಸ್​​ ಬಗ್ಗೆ ಹೇಳುವುದಾದರೆ, ಇದು 5ಜಿ, 4ಜಿ ಎಲ್​ಟಿಇ, ಡ್ಯುಯಲ್-ಬ್ಯಾಂಡ್ ವೈ ಫೈ 6, ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್ ಮತ್ತು ಚಾರ್ಜಿಂಗ್ ಮತ್ತು ಡೇಟಾ ಸಂಪರ್ಕಕ್ಕಾಗಿ ಯುಎಸ್‌ಬಿ ಟೈಪ್ ಸಿ 2.0 ಪೋರ್ಟ್ ಅನ್ನು ಬೆಂಬಲಿಸಲಿವೆ. ಇದರೊಂದಿಗೆ ಸೆಕ್ಯುರಿಟಿಗಾಗಿ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆಯನ್ನು ನೀಡಲಾಗಿದೆ. ಇದಿಷ್ಟೇ ಅಲ್ಲದೆ, IP64 ರೇಟಿಂಗ್ ಅನ್ನು ಹೊಂದಿದ್ದು, ಧೂಳು ಮತ್ತು ನೀರಿನಿಂದ ರಕ್ಷಿಸುತ್ತದೆ.


    ಇದನ್ನೂ ಓದಿ: ಒಪ್ಪೋ ಕಂಪೆನಿಯ ಹೊಸ ಇಯರ್​​ಬಡ್ಸ್​ ಲಾಂಚ್​! ಬಜೆಟ್​ ಬೆಲೆಯಲ್ಲಿ ಲಭ್ಯ


    ಬೆಲೆ ಮತ್ತು ಲಭ್ಯತೆ


    ವಿವೋ ಎಕ್ಸ್90 ಅನ್ನು ಸದ್ಯ ಅಧಿಕೃತವಾಗಿ ಮಲೇಷಿಯಾದಲ್ಲಿ ಲಾಂಚ್‌ ಮಾಡಲಾಗಿದೆ. ಈ ಫೋನ್‌ 12ಜಿಬಿ ರ್‍ಯಾಮ್ ಹಾಗೂ 256ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದ ಒಂದೇ ವೇರಿಯಂಟ್‌ನಲ್ಲಿ ಲಭ್ಯವಿದೆ. ಹಾಗೆಯೇ ಈ ಫೋನ್‌ ಮಲೇಷ್ಯಾದಲ್ಲಿ 70,000 ರೂಪಾಯಿಗಳಲ್ಲಿ ಖರೀದಿ ಮಾಡಬಹುದಾಗಿದೆ. ಇನ್ನು ಭಾರತದಲ್ಲಿ ಈ ಸ್ಮಾರ್ಟ್​ಫೋನ್​ ಬೆಲೆ ಎಷ್ಟಿರಬಹುದು ಎಂದು ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಇನ್ನು ಈ ಸ್ಮಾರ್ಟ್​​ಫೋನ್​ ಬ್ರೀಜ್ ಬ್ಲೂ ಮತ್ತು ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದೆ.

    Published by:Prajwal B
    First published: