ಸೆಪ್ಟೆಂಬರ್​​ 9 ರಂದು​ ಅಧಿಕೃತವಾಗಿ ಬಿಡುಗಡೆಯಾಗಲಿದೆ Vivo X70 ಸಿರೀಸ್; ಕ್ಯಾಮೆರಾ ಹೇಗಿದೆ ಗೊತ್ತಾ?

Vivo X70 Series​​ ಚೀನಾದಲ್ಲಿ ಬಿಡುಗಡೆಗೊಂಡ ನಂತರ ಇನ್ನಿತರ ಮಾರುಕಟ್ಟೆಯನ್ನು ಪಸರಿಸಲಿದೆ. ಅಂದಹಾಗೆಯೇ Vivo X70 ಸಿರೀಸ್​ನಲ್ಲಿ  ಮಿಡ್​ ಟೈರ್​ Vivo X70 Pro ಮತ್ತು Vivo X70 Pro+  ಸ್ಮಾರ್ಟ್​ಫೋನ್​ ಪ್ರಸ್ತುತ Vivo X60 ಸರಣಿಯಂತೆಯೇ ಇರಲಿದೆ ಎಂದು ಅಂದಾಜಿಸಲಾಗಿದೆ.

Vivo X70

Vivo X70

  • Share this:
    Vivo X70 ಸಿರೀಸ್​​ ಸ್ಮಾರ್ಟ್​ಫೋನ್​ಗಳನ್ನು ಸಿದ್ಧಪಡಿಸಿದ್ದು, ಸೆಪ್ಟೆಂಬರ್​ 9ರಂದು ಚೀನಾದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ನೂತನ ಸ್ಮಾರ್ಟ್​ಫೋನ್​ ವಿವೋ ಅಭಿವೃದ್ಧಿಯ ಕುರಿತು ವೈಬೋದಲ್ಲಿ ಹಂಚಿಕೊಂಡಿದೆ. ಕ್ಯಾಮೆರಾ ಸೇರಿದಂತೆ ಪ್ರಚಾರದ ಕುರಿತಾಗಿ ಮಾಹಿತಿ ತಿಳಿಸಿದೆ.

    ಅಂದಹಾಗೆಯೇ, ವಿವೋ ಎಕ್ಸ್​70 ಪ್ರೊ+ ಕ್ವಾಡ್​ ರಿಯರ್​​​ ಕ್ಯಾಮೆರಾವನ್ನು ಹೊಂದಿದ್ದು, ವಿವೋ ಇಂಡಿಯಾ ಸಹಭಾಗಿತ್ವದಲ್ಲಿ ವಿವೋ ಎಕ್ಸ್​70 ಸಿರೀಸ್​ ಪರಿಚಯಿಸಲಿದೆ ಎನ್ನಲಾಗುತ್ತಿದೆ. ಆದರೆ ಬಿಡುಗಡೆಯ ಕುರಿತು ಕಂಪನಿ ಸ್ಪಷ್ಟಪಡಿಸಿಲ್ಲ.

    ವಿವೋ ಎಕ್ಸ್​​70 ಸಿರೀಸ್​​ ಚೀನಾದಲ್ಲಿ ಬಿಡುಗಡೆಗೊಂಡ ನಂತರ ಇನ್ನಿತರ ಮಾರುಕಟ್ಟೆಯನ್ನು ಪಸರಿಸಲಿದೆ. ಅಂದಹಾಗೆಯೇ Vivo X70 ಸಿರೀಸ್​ನಲ್ಲಿ  ಮಿಡ್​ ಟೈರ್​ Vivo X70 ಪ್ರೊ ಮತ್ತು Vivo X70 ಪ್ರೊ+  ಸ್ಮಾರ್ಟ್​ಫೋನ್​ ಪ್ರಸ್ತುತ Vivo X60 ಸರಣಿಯಂತೆಯೇ ಇರಲಿದೆ ಎಂದು ಅಂದಾಜಿಸಲಾಗಿದೆ.

    Vivo X70 ಸ್ಮಾರ್ಟ್​ಫೋನ್​ ಕುರಿತಾಗಿ ಸೋರಿಕೆಯಾದ ಮಾಹಿತಿಯಂತೆ, ನೂತನ ಫೋನ್ 6.56 ಇಂಚಿನ ಡಿಸ್​ಪ್ಲೇ ಹೊಂದಿದ್ದು,  120ಹೆಚ್​ಝೆಡ್​ ರಿಫ್ರೆಶ್​​ ದರವನ್ನು ಹೊಂದಿದೆ, ಫುಲ್​ ಎಚ್​ಡಿ+ ರೆಸಲ್ಯೂಶನ್​ ಇದರಲ್ಲಿದೆ. ಮೀಡಿಯಾಟೆಕ್​ ಡೈಮನ್ಸಿಟಿ 12000 ಪ್ರೊಸೆಸರ್​ ನೀಡಲಾಗಿದ್ದು,  ಸ್ಯಾಮ್​ಸಂಗ್​ ಎಕ್ಸಿನೋಸ್​​ 1080 ಚಿಪ್​ಸೆಟ್​ ಅಳವಡಿಸಲಾಗಿದೆ ಎನ್ನಲಾಗುತ್ತಿದೆ. ನೂತನ ಸ್ಮಾರ್ಟ್​ಫೊನ್​ 40 ಮೆಗಾಫಿಕ್ಸೆಲ್ ಪ್ರೈಮರಿ ಕ್ಯಾಮೆರಾ, 12 ಮೆಗಾಫಿಕ್ಸೆಲ್​​ 2ನೇ ಕ್ಯಾಮೆರಾ, 13 ಮೆಗಾಫಿಕ್ಸೆಲ್​​ ಮೂರನೇ ಕ್ಯಾಮೆರಾ ಹೊಂದಿದೆ. ಮುಂಭಾಗದ ಕ್ಯಾಮೆರಾದ ಬಗ್ಗೆ ಮಾಹಿತಿ ತಿಳಿದಿಲ್ಲ.

    ಫೋಟೋಗ್ರಾಫಿ ಪ್ರಿಯರಿಗೆ Vivo X70 ಸ್ಮಾರ್ಟ್​ಫೋನ್​ ಇಷ್ಟವಾಗಲಿದೆಯಂತೆ, ಜೊತೆಗೆ ಇದರಲ್ಲಿ 4,400 ಎಮ್​ಎಹೆಚ್​ ಬ್ಯಾಟರಿ 44 ವ್ಯಾಟ್​ ಫಾಸ್ಟ್​ ಚಾರ್ಜಿಂಗ್​ ಬೆಂಬಲದೊಂದಿದೆ ಬರಲಿದೆ. ಗ್ರಾಹಕರಿಗಾಗಿ ಕಪ್ಪು, ಬಿಳಿ, ಅರೋರಾ ಬಣ್ಣದಲ್ಲಿ ಪರಿಚಯಿಸಲಿದೆ ಎನ್ನಲಾಗುತ್ತಿದೆ.

    Vivo X70 Pro

    ವಿವೋ ಎಕ್ಸ್​ 70 ಪ್ರೊ ಸ್ಮಾರ್ಟ್​ಫೋನ್​ 6.56 ಇಂಚಿನ ಫುಲ್​ಹೆಚ್​ಡಿ+ ಅಮೋಲ್ಡ್ ಡಿಸ್​ಪ್ಲೇ, 120 ಹೆಚ್​ಝೆಡ್​ ರಿಫ್ರೆಶ್​ ರೇಟ್​ ಹೊಂದಿರಲಿದೆ. ಈ ಸ್ಮಾರ್ಟ್​ಫೋನ್​ ಕ್ವಾಡ್​ ರಿಯರ್​ ಕ್ಯಾಮೆರಾ ಸೆಟಪ್​ನೊಂದಿಗೆ ಬರಲಿದೆ. 50 ಮೆಗಾಫಿಕ್ಸೆಲ್​ ಪ್ರಾಥಮಿಕ ಕ್ಯಾಮೆರಾ, 12 ಮೆಗಾಫಿಕ್ಸೆಲ್​ ದ್ವಿತೀಯ ಕ್ಯಾಮೆರಾ,  13 ಮೆಗಾಫಿಕ್ಸೆಲ್​ ತೃತೀಯ ಕ್ಯಾಮೆರಾ ಮತ್ತು ಸೆನ್ಸಾರ್ ಮತ್ತು 8 ಮೆಗಾಫಿಕ್ಸೆಲ್​ ಪೆರಿಸ್ಕೋಪ್​ ಕ್ಯಾಮೆರಾದ ಜೊತೆಗೆ 5ಎಕ್ಸ್​ ಆಪ್ಟಿಕಲ್​ ಜೂಮ್​ ಬರುತ್ತದೆ. ಇನ್ನು ಖರೀದಿದಾರರಿಗಾಗಿ ಕಪ್ಪು, ಬಿಳಿ, ಅರೋರಾ ಬಣ್ಣದಲ್ಲಿ ಸಿಗಲಿದೆ ಎಂದು ಅಂದಾಜಿಸಲಾಗಿದೆ.

    Vivo X70 Pro+

    ವಿವೋ ಎಕ್ಸ್​70 ಪ್ರೊ+ ಸ್ಮಾರ್ಟ್​ಫೋನ್​ 6.78 ಇಂಚಿನ ಒಎಲ್ಇಡಿ ಡಿಸ್​ಪ್ಲೇ ಹೊಂದಿದ್ದು,  120ಹೆಚ್​ಝೆಡ್​ ಎಲ್​ಟಿಪಿಒ ರಿಫ್ರೆಶ್​​ ರೇಟ್​ ಮತ್ತು 2ಕK ರೆಸಲ್ಯೂಶನ್​ ನೀಡಿದೆ. ಈ ಸ್ಮಾರ್ಟ್​ಫೋನ್​ ಸ್ನಾಪ್​ಡ್ರಾಗನ್​ 888+ ಎಸ್​ಒಸಿಯೊಂದಿಗೆ ಬರಲಿದೆ ಎನ್ನಲಾಗುತ್ತಿದೆ.

    ಇದರಲ್ಲಿ 55 ವ್ಯಾಟ್​ ವೈರ್​ಲೆಸ್​ ಚಾರ್ಜರ್​, 4,500ಎಮ್​ಎಹೆಚ್​ ಫಾಸ್ಟ್​ ವೈರ್​ಲೆಸ್​ ಚಾಜಿಂಗ್​ ಆಯ್ಕೆಯಲ್ಲಿ ಸಿಗಲಿದೆ. ನೂತನ ಫೊನ್​ 50 ಮೆಗಾಫಿಕ್ಸೆಲ್​ ಕ್ಯಾಮೆರಾ, 12 ಮೆಗಾಫಿಕ್ಸೆಲ್​ , 8 ಮೆಗಾಫಿಕ್ಸೆಲ್​​ ಪೆರಿಸ್ಕೋಪ್​ ಕ್ಯಾಮೆರಾದ ಜೊತೆಗೆ 5ಎಕ್ಸ್​ ಅಪ್ಟಿಕಲ್​ ಜೂಮ್​ ಹೊಂದಿದೆ.

    Vivo X70 ಸಿರೀಸ್​ ಸ್ಮಾರ್ಟ್​ಫೋನ್​ಗಳ ಬೆಲೆಯ ಬಗ್ಗೆ ಬಿಡುಗಡೆಯ ನಂತರ ಗೊತ್ತಾಗಬೇಕಿದೆ.
    Published by:Harshith AS
    First published: