ಜುಲೈ 16ಕ್ಕೆ ಭಾರತೀಯ ಮಾರುಕಟ್ಟೆಗೆ ವಿವೋ X50 ಸಿರೀಸ್​​; ಬೆಲೆಗೆ ತಕ್ಕಂತೆ ವಿಶೇಷತೆ

Vivo X50 series: ಇದೀಗ ಭಾರತೀಯ ಮಾರುಕಟ್ಟೆಗೆ ವಿವೋ X50 ಮತ್ತು X50 ಪ್ರೊ ಸ್ಮಾರ್ಟ್​ಫೋನ್​ ಅನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದ್ದು, ಜುಲೈ 16 ರಂದು ಮಧ್ಯಾಹ್ನ 12 ಗಂಟೆಗೆ ದೇಶಿಯ ಮಾರುಕಟ್ಟೆಗೆ ಪರಿಚಯಿಸಲಿದೆ

Vivo X50

Vivo X50

 • Share this:
  ವಿವೋ ಸ್ಮಾರ್ಟ್​ಫೋನ್​ ಉತ್ಪಾದಕ ಸಂಸ್ಥೆ ನೂತನ X50 ಸಿರೀಸ್​​ ಸ್ಮಾರ್ಟ್​ಫೋನ್​ ಅನ್ನು ಉತ್ಪಾದಿಸಿದ್ದು, ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದೀಗ ಭಾರತೀಯ ಮಾರುಕಟ್ಟೆಗೆ ವಿವೋ X50 ಮತ್ತು X50 ಪ್ರೊ ಸ್ಮಾರ್ಟ್​ಫೋನ್​ ಅನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದ್ದು, ಜುಲೈ 16 ರಂದು ಮಧ್ಯಾಹ್ನ 12 ಗಂಟೆಗೆ ದೇಶಿಯ ಮಾರುಕಟ್ಟೆಗೆ ಪರಿಚಯಿಸಲಿದೆ.

  Vivo X50 ​ವಿಶೇಷತೆ:

  ವಿವೋ X50 ಸ್ಮಾರ್ಟ್​ಫೋನ್​​ 6.5 ಇಂಚಿನ ಫುಲ್​​ ಹೆಚ್​​ಡಿ+ ಅಮೋಲ್ಡ್​​ ಡಿಸ್​ಪ್ಲೇ ಜೊತೆಗೆ 2,376 X1080 ಪಿಕ್ಸೆಲ್​ ಹೊಂದಿದೆ. ಕ್ವಾಲ್​ಕ್ಯಾಮ್​ ಸ್ನಾಪ್​ಡ್ರಾಗನ್​ 765G ಪ್ರೊಸೆಸರ್​​​ನಿಂದ ಕಾರ್ಯನಿರ್ವಹಿಸುತ್ತಿದೆ. ಆ್ಯಂಡ್ರಾನೊ 620GP ಮತ್ತು ಆ್ಯಂಡ್ರಾಯ್ಡ್​ 10 ಬೆಂಬಲವನ್ನು ಪಡೆದಿದೆ.  ವಿವೋ X50 ಸ್ಮಾರ್ಟ್​ಫೋನ್​​ 8GB RAM​​ ಮತ್ತು 256GB ಸ್ಟೊರೇಜ್​ ಆಯ್ಕೆಯಲ್ಲಿ ಸಿಗಲಿದೆ. 4,200 mAh​ ಬ್ಯಾಟರಿ ಅಳವಡಿಸಲಾಗಿದೆ.

  ಕ್ಯಾಮೆರಾ:

  ಸ್ಪೋರ್ಟ್ಸ್​​​​​​​ ಕ್ವಾಡ್​​​​ ಕ್ಯಾಮೆರಾ ಸೆಟ್​ಅಪ್​ ಅಳವಡಿಸಿರುವ ವಿವೋ X50 ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್​​​ ಪ್ರೈಮರಿ ಸೆನ್ಸಾರ್​​ ಜೊತೆಗೆ 13 ಮೆಗಾಫಿಕ್ಸ್​ ಕ್ಯಾಮೆರಾ, 8 ಮೆಗಾಫಿಕ್ಸೆಲ್ ವೈಡ್​ ಆ್ಯಂಗಲ್​​ ಲೆನ್ಸ್​​, 5 ಮೆಗಾ ಫಿಕ್ಸೆಲ್​​ ಮ್ಯಾಕ್ರೊ ಲೆನ್ಸ್​ ಮತ್ತ್ತು 20X​​ ಡಿಜಿಟಲ್​​ ಜೂಮ್​​ ನೀಡಿದೆ. ಸೆಲ್ಫಿಗಾಗಿ 32 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ.

  ವಿವೋ X50 ಸ್ಮಾರ್ಟ್​ಫೋನ್​ ಬೆಲೆ 37 ಸಾವಿರ ರೂಪಾಯಿ ಎಂದು ಅಂದಾಜಿಲಾಗಿದೆ.

  ವಿವೋ X50 ಸಿರೀಸ್


  ವಿವೊ X50 ಪ್ರೊ ವಿಶೇಷತೆ:

  ವಿವೋ X50 ಪ್ರೊ  ಸ್ಮಾರ್ಟ್​ಫೋನ್​​ 6.56 ಇಂಚಿನ ಫುಲ್​​ ಹೆಚ್​​ಡಿ+ ಅಮೋಲ್ಡ್​​ ಡಿಸ್​ಪ್ಲೇ ಜೊತೆಗೆ HDR 10+ ​ಬೆಂಬಲವನ್ನು ಪಡೆದಿದೆ. ಕ್ವಾಲ್​ಕ್ಯಾಮ್​ ಸ್ನಾಪ್​ಡ್ರಾಗನ್​ 765G ಪ್ರೊಸೆಸರ್​​​ನಿಂದ ಕಾರ್ಯನಿರ್ವಹಿಸುತ್ತಿದೆ. ಆ್ಯಂಡ್ರಾಯ್ಡ್​ 10 ಬೆಂಬಲವನ್ನು ಪಡೆದಿದೆ.  ವಿವೋ X50 ಸ್ಮಾರ್ಟ್​ಫೋನ್​​ 8GB RAM​ ಮತ್ತು 256GB ಸ್ಟೊರೇಜ್​ ಆಯ್ಕೆಯಲ್ಲಿ ಸಿಗಲಿದೆ. 4,315 mAh​ ಬ್ಯಾಟರಿ ಅಳವಡಿಸಲಾಗಿದೆ.

  ಕ್ಯಾಮೆರಾ ವಿಶೇಷತೆ:

  ವಿವೋ X50 ಪ್ರೊ ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್​​​ ಪ್ರೈಮರಿ ಸೆನ್ಸಾರ್​​ ಜೊತೆಗೆ 13 ಮೆಗಾಫಿಕ್ಸ್​ ಪೊಟ್ರೇಟ್​ಕ್ಯಾಮೆರಾ, 8 ಮೆಗಾಫಿಕ್ಸೆಲ್​ ಟೆಲಿಫೋಟೋ​ ಲೆನ್ಸ್​​, 8 ಮೆಗಾಫಿಕ್ಸೆಲ್​​ ಮ್ಯಾಕ್ರೊ ಲೆನ್ಸ್​, ಸೆಲ್ಫಿಗಾಗಿ 32 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ.

  ವಿವೋ X50 ಪ್ರೊ ಸ್ಮಾರ್ಟ್​ಪೋನ್​ 45, 500 ರೂಪಾಯಿ ಎಂದು ಅಂದಾಜಿಲಾಗಿದೆ.
  Published by:Harshith AS
  First published: