ನಾಳೆ ಬಿಡುಗಡೆಯಾಗುವ ವಿವೋ X 21 ವಿಶೇಷತೆಗಳು

news18
Updated:May 28, 2018, 5:14 PM IST
ನಾಳೆ ಬಿಡುಗಡೆಯಾಗುವ ವಿವೋ X 21 ವಿಶೇಷತೆಗಳು
news18
Updated: May 28, 2018, 5:14 PM IST
ನವದೆಹಲಿ: ಸ್ಮಾರ್ಟ್​ಫೋನ್​ ದಿಗ್ಗಜ ವಿವೋ ನೂತನ ಮೊಬೈಲ್​ಗಳನ್ನು ಭಾರೀತಯ ಮಾರುಕಟ್ಟೆಗೆ ಪರಚಿಯಿಸಿಲು ಸಿದ್ಧಗೊಂಡಿದ್ದು ಮೇ 29ರಂದು ವಿವೋ X 21 ಹೆಸರಿನಲ್ಲಿ ಈ ಫೋನನ್ನು ಲಾಂಚ್ ಮಾಡುತ್ತಿದೆ.

ಡಿಸ್​ಪ್ಲೇ ಮೇಲೆಯೇ ಫಿಂಗರ್​ ಸ್ಕ್ಯಾನರ್​ ಅಳವಡಿಸಿಕೊಂಡಿರುವ X 21ನಲ್ಲಿ ಎರಡು ವಿಭಿನ್ನ ಶ್ರೇಣಿಯಲ್ಲಿ ಮೊಬೈಲ್ ಲಾಂಚ್​ ಮಾಡುತ್ತಿದ್ದು, 6ಜಿಬಿ ರ‍್ಯಾಮ್, 128 ಜಿಬಿ ಇಂಟರ್‌ನಲ್ ಸ್ಟೋರೇಜ್ ವ್ಯವಸ್ಥೆಯಿದೆ. ಇದರೊಂದಿಗೆ 256 ಜಿಬಿ ವರಗೂ ಸ್ಟೋರೇಜ್​ ವಿಸ್ತರಿಸಬಹುದಾಗಿದೆ. ಅಲ್ಲದೇ ವಿವೋ ಸ್ಟೋರ್​ನಲ್ಲಿ ರೂ.2000 ಪಾವತಿಸಿ ಮೊಬೈಲ್​ ಬುಕ್ಕಿಂಗ್​ ಮಾಡಿಕೊಳ್ಳಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಲಾಂಚಿಂಗ್​ ಆಫರ್​ ಎಂಬಂತೆ ಮುಂಗಡ ಬುಕ್ಕಿಂಗ್​ನಲ್ಲಿ ಒಂದು ಸಾವಿರ ಮೌಲ್ಯದ ಗಿಫ್ಟ್​ ವೋಚರ್​ ಕೂಡಾ ಲಭ್ಯವಿರುತ್ತದೆ. ಒಂದು ವೇಳೆ ಎಸ್​ಬಿಐ ಕ್ರೆಡಿಟ್​ ಕಾರ್ಡ್​ ಬಳಸಿದರೆ ಶೇ. 5ರಷ್ಟು ಕ್ಯಾಶ್​ಬ್ಯಾಕ್​ ಕೂಡಾ ಪಡೆಯಬಹುದು.

ವಿವೋ X 21 ವಿಶೇಷತೆಗಳು

6.28 ಇಂಚ್ ಪವರ್ ಫುಲ್ ಎಚ್‍ಡಿ ಪ್ಲಸ್ ಡಿಸ್‍ಪ್ಲೇ
2280 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಷನ್
ಆಕ್ಟಾಕೋರ್ ಸ್ನಾಪ್‍ಡ್ರ್ಯಾಗನ್ 660 ಪ್ರೋಸೆಸರ್
Loading...

ಆ್ಯಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಂ
6 ಜಿಬಿ ರ‍್ಯಾಮ್
128 ಜಿಬಿ ಸ್ಟೋರೇಜ್
256 ಜಿಬಿ ಎಕ್ಸ್‌ಪಾಂಡಬಲ್ ಮೆಮೊರಿ
ಹೈಬ್ರಿಡ್ ಡ್ಯುಯಲ್ ಸಿಮ್
12.5 ಮೆಗಾ ಪಿಕ್ಸೆಲ್ ಡ್ಯುಯಲ್ ಬ್ಯಾಕ್ ಕ್ಯಾಮೆರಾ
12 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
ಡಿಸ್​ಪ್ಲೇ ಮೆಲಯೇ ಫಿಂಗರ್ ಪ್ರಿಂಟ್ ಸೆನ್ಸಾರ್
4ಜಿ ವಿವೋಎಲ್‍ಟಿಇ
3200 ಎಂಎಎಚ್ ಬ್ಯಾಟರಿ
First published:May 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...