ಐ ಫೋನ್​ ಎಕ್ಸ್​ ಮಾದರಿಯ ವಿವೋ ವಿ9 ಬೆಲೆ ಮತ್ತೆ ಕಡಿತ


Updated:August 8, 2018, 3:52 PM IST
ಐ ಫೋನ್​ ಎಕ್ಸ್​ ಮಾದರಿಯ ವಿವೋ ವಿ9 ಬೆಲೆ ಮತ್ತೆ ಕಡಿತ

Updated: August 8, 2018, 3:52 PM IST
- ನ್ಯೂಸ್​ 18 ಕನ್ನಡ

ಬೆಂಗಳೂರು: ಚೀನಾದ ಸಕ್ಸ್​​ಫುಲ್​ ಮೊಬೈಲ್​ ಮಾರಾಟ ಸಂಸ್ಥೆಗಳಲ್ಲಿ ಒಂದಾಗಿರುವ ವಿವೋ ತನ್ನ ನೂತನ ಮೊಬೈಲ್​ ವಿವೋ ವಿ9 ಸುಮಾರು ಎರಡು ಸಾವಿರುದಷ್ಟು ಬೆಲೆ ಕಡಿತಗೊಳಿಸಿ ಮಾರಾಟ ಮಾಡಲಿದೆ.

ಮುಂಬೈಯ ಮೊಬೈಲ್​ ಮಾರಾಟಗಾರ ಸಂಸ್ಥೆ ಈ ಕುರಿತು ಟ್ವಿಟರ್​ನಲ್ಲಿ ಟ್ವೀಟ್​ ಮಾಡಿದ್ದು, ಈ ಹಿಂದೆ 22,990ಕ್ಕೆ ಮಾರಾಟವಾಗುತ್ತಿದ್ದ ವಿವೋ ವಿ9 ಇದೀಗ 20,990ಕ್ಕೆ ಲಭ್ಯವಿದೆ ಎಂದು ಹೇಳಿಕೊಂಡಿದೆ. ಈ ಆಫರ್​ ತಾತ್ಕಾಲಿಕವೋ ಅಥವಾ ಸ್ವತಃ ಕಂಪನಿಯೇ ಬೆಲೆಯನ್ನು ಕಡಿತಗೊಳಿಸಿದೆಯೋ ಯಾವುದೂ ತಿಳಿದು ಬಂದಿಲ್ಲ.

ಐಫೋನ್​ ಎಕ್ಸ್​ ಮಾದರಿಯಲ್ಲೇ ಮಾರುಕಟ್ಟೆಗೆ ಬಂದಿರುವ ಈ ಮೊಬೈಲ್​ ವಿ9 ಅತ್ಯುತ್ತಮ ವಿನ್ಯಾಸ ಹಾಗೂ ನವೀನ ಲಕ್ಷಣಗಳನ್ನು ಹೊಂದಿದ್ದು 19:9 ಫುಲ್‌ ಹೆಚ್​ಡಿ ಪ್ಲೆಸ್​ 2.0, ಕ್ವಾಲ್‌ಕಂ ಸ್ನಾಪ್‌ಡ್ರಾಗನ್‌ 660 octa-core ಪ್ರೊಸೆಸರ್​, 6GBRAM ಮತ್ತು 64GB ಆಂತರಿಕ ಮೆಮೊರಿ ಹಾಗೂ 3260 ಎಂಎಎಚ್‌ ಬ್ಯಾಟರಿ ಇದಕ್ಕಿದೆ.

ಫೇಸ್​ ಅನ್​ಲಾಕ್​ ಆಯ್ಕೆಯಿದ್ದು, ಹಿಂದೆ 16 ಮೆಗಾಫಿಕ್ಸೆಲ್​ ಮತ್ತು 5 ಮೆಗಾಫಿಕ್ಸೆಲ್​ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 24 ಮೆಗಾಫಿಕ್ಸೆಲ್​ ಸೆಲ್ಫಿಕ್ಯಾಮೆರಾ ನೀಡಲಾಗಿದೆ. ಇದರೊಂದಿಗೆ ಹೆಡಿಆರ್​ ಮೋಡ್​, ಡ್ಯುಯಲ್​ ಎಲ್​ಇಡಿ ಫ್ಲಾಶ್​, AI ಸಪೋರ್ಟ್​ ನೀಡಲಾಗಿದೆ.
First published:July 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...