ಗ್ರಾಹಕರಿಗೆ ಸಿಹಿ ಸುದ್ದಿ: ಈ ಬೆಸ್ಟ್ ಸೆಲ್ಪೀ ಸ್ಮಾರ್ಟ್​ಫೋನ್​ ಬೆಲೆಯಲ್ಲಿ 2000 ರೂಪಾಯಿ ಇಳಿಕೆ!


Updated:December 30, 2017, 9:27 PM IST
ಗ್ರಾಹಕರಿಗೆ ಸಿಹಿ ಸುದ್ದಿ: ಈ ಬೆಸ್ಟ್ ಸೆಲ್ಪೀ ಸ್ಮಾರ್ಟ್​ಫೋನ್​ ಬೆಲೆಯಲ್ಲಿ 2000 ರೂಪಾಯಿ ಇಳಿಕೆ!

Updated: December 30, 2017, 9:27 PM IST
ಸೆಲ್ಫೀ ಕೇಂದ್ರಿತವಾಗಿರುವ ವಿವೋ ವಿ7(Vivo V7) ಸ್ಮಾರ್ಟ್​ಫೋನಿನ ಬೆಲೆ ಭಾರತದಲ್ಲಿ ಇಳಿಮುಖವಾಗಿದೆ. ಕಂಪೆನಿಯ ಈ ಸ್ಮಾರ್ಟ್​ಫೋನಿನ ಬೆಲೆಯಲ್ಲಿ 2000 ರೂಪಾಯಿ ಕಡಿತಗೊಳಿಸಿದೆ. 18,990ರೂಪಾಯಿ ಬೆಲೆಬಾಳುವ ಈ ಸ್ಮಾರ್ಟ್​ಫೋನನ್ನು ಇದೀಗ ಗ್ರಾಹಕರು 16,990 ರೂಪಾಯಿಗೆ ಖರೀದಿಸಬಹುದಾಗಿದೆ. ಅಲ್ಲದೇ ಈ ಸ್ಮಾರ್ಟ್​ಪೋನ್​ ಆನ್​ಲೈನ್​ನಲ್ಲೂ ಖರೀದಿಸಬಹುದಾಗಿದೆ.

Vivo V7 ಸ್ಮಾರ್ಟ್​ಪೋನಿನ ಫೀಚರ್ಸ್​ಗಳೇನು?

Vivo V7 ಫೋನಿನ ಅತಿ ದೊಡ್ಡ ವಿಶೇಷತೆಯೆಂದರೆ ಇದರಲ್ಲಿರುವ 24 ಮೆಗಾಪಿಕ್ಸೆಲ್​ನ ಸೆಲ್ಫೀ ಕ್ಯಾಮರಾ. ಈ ಸ್ಮಾರ್ಟ್​ಫೊ್ 7.1 ನೂಗಟ್​ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 5.7 ಇಂಚಿನ ಡಿಸ್ಪ್ಲೇ ಹೊಂದಿದ್ದುದೆ. 4ಜಿಬಿ ರಾಮ್ ಹಾಗೂ 32 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದ್ದು, ಮೈಕ್ರೋ SD ಕಾರ್ಡ್​ ಮೂಲಕ 250ಜಿಬಿಯವರೆಗೆ ವಿಸ್ತರಿಸಬಹುದಾಗಿದೆ. 3000mah ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಫೇಸ್ ಆ್ಯಕ್ಸೆಸ್, ಸ್ಮಾರ್ಟ್​ ಸ್ಪ್ಲಿಟ್ 3.0 ಹಾಗೂ ಆ್ಯಪ್ ಕ್ಲೋನ್​ನಂತಹ ಇನ್ನಿತರ ಫೀಚರ್ಸ್​ಗಳನ್ನು ಹೊಂದಿದೆ.
First published:December 30, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...