V23E ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಒಂದೊಳ್ಳೆ ಅವಕಾಶ! ವಿಶೇಷ ಕೊಡುಗೆ ಘೋಷಿಸಿದೆ Vivo

Vivo V23e: ಭಾರತದಲ್ಲಿ (India) ಈಗ ನಾವು ಯಾರಿಗಿಂತಲೂ ಕಡಿಮೆ ಇಲ್ಲ ಎಂಬಂತೆ ಸ್ಪರ್ಧಿಸುವಂತಹ ಮೊಬೈಲ್ ತಯಾರಕ ಕಂಪನಿಗಳು ತನ್ನ ಉತ್ಪನ್ನಗಳ ಮತ್ತು ಸಾಧನಗಳನ್ನು ಜನರು ಹೆಚ್ಚು ಹೆಚ್ಚಾಗಿ ಖರೀದಿ ಮಾಡಬೇಕೆಂದು ಬಯಸುವುದು ಸಹಜ ವಿಷಯವೇ ಆಗಿರುತ್ತದೆ.

ವಿವೋ V23e

ವಿವೋ V23e

  • Share this:
    ಈ ಸ್ಮಾರ್ಟ್‌ಫೋನ್ (Smartphone) ಪ್ರಿಯರು ಯಾವಾಗ ವಿವಿಧವಾದ ಸ್ಮಾರ್ಟ್‌ಫೋನ್ ಗಳ ಮೇಲೆ ವಿಶೇಷವಾದ ಕೊಡುಗೆಗಳನ್ನು (Offer) ನೀಡುತ್ತಾರೆ ಮತ್ತು ಯಾವಾಗ ಇವುಗಳ ಮೇಲಿನ ಬೆಲೆಯು ಕಡಿಮೆ ಆಗುತ್ತದೆ ಎಂದು ತುಂಬಾನೇ ಕಾತುರತೆಯಿಂದ ಕಾಯುತ್ತಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಮೊಬೈಲ್ ತಯಾರಕ ಕಂಪನಿಗಳು (Mobile Manufacturer Company) ಸಹ ವರ್ಷವಿಡೀ ಏನಾದರೊಂದು ವಿಶೇಷವಾದ ಕೊಡುಗೆಗಳನ್ನು ತನ್ನ ಗ್ರಾಹಕರಿಗಾಗಿ ನೀಡುತ್ತಲೇ ಇರುತ್ತವೆ ಎಂದು ಹೇಳಬಹುದು. ಹಬ್ಬಗಳ ದಿನದಂದು ಮತ್ತು ಬೇಸಿಗೆ ರಜೆಯಲ್ಲಿ (Summer Vacation) ಬೇಸಿಗೆಯ ವಿಶೇಷ ಕೊಡುಗೆಗಳನ್ನು ತನ್ನ ಗ್ರಾಹಕರಿಗಾಗಿ ನೀಡುತ್ತಿವೆ ಎಂದು ತಿಳಿದ ತಕ್ಷಣವೇ ಈ ಸ್ಮಾರ್ಟ್‌ಫೋನ್ ಗಳ ಖರೀದಿ ಜೋರಾಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಭಾರತದಲ್ಲಿ (India) ಈಗ ನಾವು ಯಾರಿಗಿಂತಲೂ ಕಡಿಮೆ ಇಲ್ಲ ಎಂಬಂತೆ ಸ್ಪರ್ಧಿಸುವಂತಹ ಮೊಬೈಲ್ ತಯಾರಕ ಕಂಪನಿಗಳು ತನ್ನ ಉತ್ಪನ್ನಗಳ ಮತ್ತು ಸಾಧನಗಳನ್ನು ಜನರು ಹೆಚ್ಚು ಹೆಚ್ಚಾಗಿ ಖರೀದಿ ಮಾಡಬೇಕೆಂದು ಬಯಸುವುದು ಸಹಜ ವಿಷಯವೇ ಆಗಿರುತ್ತದೆ.

    ಈಗ ವಿವೋ ಮೊಬೈಲ್ ತಯಾರಕ ಕಂಪನಿಯು ತನ್ನ ವಿ-ಸೀರೀಸ್ ಸ್ಮಾರ್ಟ್‌ಫೋನ್ ಗಳಿಗಾಗಿ ಹೊಸ ಕೊಡುಗೆಯನ್ನು ಘೋಷಿಸಿದೆ. ಕಂಪನಿಯು ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾದ ವಿವೋ ವಿ 23ಇ ಮೇಲೆ 5000 ರೂಪಾಯಿಗಳ ವಿಶೇಷ ಕ್ಯಾಶ್ ಬ್ಯಾಕ್ ರಿಯಾಯಿತಿಯನ್ನು ಘೋಷಿಸಿದೆ. ವಿ23ಇ ವಿವೋದ ಇತ್ತೀಚಿನ ಸೆಲ್ಫಿ-ಕೇಂದ್ರಿತ ಸ್ಮಾರ್ಟ್‌ಫೋನ್ ಸಿರೀಸ್ ನಲ್ಲಿ ಪ್ರವೇಶ-ಮಟ್ಟದ ಪ್ಯಾಕೇಜ್ ಆಗಿದೆ.
    ಭಾರತದಲ್ಲಿ ವಿವೋ ವಿ23ಇ ಖರೀದಿಸುವ ಗ್ರಾಹಕರು ತಮ್ಮ ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಅಥವಾ ಐಡಿಎಫ್‌ಸಿ ಬ್ಯಾಂಕ್ ಕಾರ್ಡ್ ಗಳನ್ನು ಬಳಸಿಕೊಂಡು 5000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಒಂದು ಕಾರ್ಡ್ ಹೊಂದಿರುವವರು ಈ ಕೊಡುಗೆಯನ್ನು ಸಹ ಕ್ಲೇಮ್ ಮಾಡಬಹುದು. ಕ್ಯಾಶ್ ಬ್ಯಾಕ್ ಆಫರ್ ಮೇ 10 ರವರೆಗೆ ಮಾನ್ಯವಾಗಿರುತ್ತದೆ ಎಂದು ಹೇಳಲಾಗುತ್ತಿದೆ.

    ವಿವೋ ವಿ23ಇ ಯ ಬೆಲೆ

    ಭಾರತದಲ್ಲಿ ವಿವೋ ವಿ23ಇ 5ಜಿಯ ಬೆಲೆಯನ್ನು ಏಕೈಕ 8ಜಿಬಿ ಮತ್ತು 128 ಜಿಬಿ ಸ್ಟೋರೇಜ್ ಆಯ್ಕೆಗಾಗಿ 25,990 ರೂಪಾಯಿ ನೀಡಬೇಕಾಗುತ್ತದೆ. ಈ ಸ್ಮಾರ್ಟ್‌ಫೋನ್ ಮಿಡ್ ನೈಟ್ ಬ್ಲೂ ಮತ್ತು ಸನ್ ಶೈನ್ ಗೋಲ್ಡ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಕ್ಯಾಶ್ ಬ್ಯಾಕ್ ಕೊಡುಗೆಯು ಪರಿಣಾಮಕಾರಿ ಬೆಲೆಯನ್ನು 20,990 ರೂಪಾಯಿಗೆ ಇಳಿಸುತ್ತದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: Amazon Sale: ಅಮೆಜಾನ್ ಸೇಲ್‍ನಲ್ಲಿ ಮಹಿಳೆಯರ ಈ ಏಳು ಬ್ಯಾಗುಗಳ ಮೇಲೆ ಭರ್ಜರಿ ಆಫರ್! ಈಗಲೇ ಶಾಪಿಂಗ್ ಶುರು ಮಾಡಿ

    ವಿವೋ ವಿ23ಇ ಯ ವಿಶೇಷತೆಗಳು

    ವಿವೋ ವಿ23ಇ 44 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸೆನ್ಸರ್ ಹೊಂದಿದೆ. ಇದು 6.44 ಇಂಚಿನ ಫುಲ್ ಎಚ್ ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದ್ದು, ಸ್ಟ್ಯಾಂಡರ್ಡ್ 60 ಹರ್ಟ್ಜ್ ರಿಫ್ರೆಶ್ ರೇಟ್ ಬೆಂಬಲವನ್ನು ಹೊಂದಿದೆ. ಫೋನ್ ಇನ್ ಡಿಸ್ ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿದೆ. ಹುಡ್ ಅಡಿಯಲ್ಲಿ, ಮೀಡಿಯಾಟೆಕ್ ಡೈಮೆನ್ಸಿಟಿ 810 ಪ್ರೊಸೆಸರ್ ಅನ್ನು ಇದು ಹೊಂದಿದೆ ಎಂದು ಹೇಳಬಹುದು.

    ಈ ಫೋನ್ ಮೈಕ್ರೋ ಎಸ್ ಡಿ ಕಾರ್ಡ್ ಸ್ಲಾಟ್ ಮೂಲಕ ಸ್ಟೋರೇಜ್ ವಿಸ್ತರಣೆಗೆ ಬೆಂಬಲದೊಂದಿಗೆ ಬರುತ್ತದೆ. ಹಿಂಭಾಗದಲ್ಲಿ, ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಫೋನ್ 50 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದ್ದು, ಇದರೊಂದಿಗೆ 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಅನ್ನು ಸಹ ಇದು ಹೊಂದಿದೆ.

    ಇದನ್ನೂ ಓದಿ: Smartphone: ನೀವು ದಿನದಲ್ಲಿ ಎಷ್ಟು ಹೊತ್ತು ಸ್ಮಾರ್ಟ್​ಫೋನ್ ಬಳಸುತ್ತೀರಿ ಗೊತ್ತಾ?

    ಈ ಸಾಧನವು 7.41 ಎಂಎಂ ನಲ್ಲಿ ಸಾಕಷ್ಟು ಸ್ಲಿಮ್ ಆಗಿದ್ದು, ಸುಮಾರು 172 ಗ್ರಾಂ ತೂಕವನ್ನು ಹೊಂದಿದೆ. ಇದರರ್ಥ ಬ್ಯಾಟರಿಯು 4050 ಎಂಎಎಚ್ ಸಾಮರ್ಥ್ಯದೊಂದಿಗೆ ಚಿಕ್ಕದಾಗಿದೆ. ಈ ಫೋನ್ 44 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಸಾಧನವು ಸುಮಾರು 30 ನಿಮಿಷಗಳಲ್ಲಿ ಶೇಕಡಾ 67 ರವರೆಗೆ ಚಾರ್ಜ್ ಮಾಡಬಹುದು ಎಂದು ವಿವೋ ಹೇಳುತ್ತದೆ.
    Published by:Harshith AS
    First published: