Vivo V20: 44MP ಸೆಲ್ಫಿ ಕ್ಯಾಮೆರಾವಿರುವ ವಿವೋ ನೂತನ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ!

ವಿವೋ M20 ಪ್ರೊ

ವಿವೋ M20 ಪ್ರೊ

ನೂತನ ಸ್ಮಾರ್ಟ್​ಫೋನ್ ಮುಂಭಾಗದಲ್ಲಿ​ ಅಧಿಕ ಸಾಮರ್ಥ್ಯದ ಕ್ಯಾಮೆರಾವನ್ನು ಜೋಡಿಸಿಕೊಂಡಿದ್ದು, ಸೆಲ್ಫಿ ಪ್ರಿಯರಿಗಾಗಿ ಹೇಳಿ ಮಾಡಿಸಿದಂತಿದೆ.

 • Share this:

  ವಿವೋ ವಿ20 ಸ್ಮಾರ್ಟ್​ಫೋನನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಸ್ಮಾರ್ಟ್​ಫೋನ್ ಮುಂಭಾಗದಲ್ಲಿ​ ಅಧಿಕ ಸಾಮರ್ಥ್ಯದ ಕ್ಯಾಮೆರಾವನ್ನು ಜೋಡಿಸಿಕೊಂಡಿದ್ದು, ಸೆಲ್ಫಿ ಪ್ರಿಯರಿಗಾಗಿ ಹೇಳಿ ಮಾಡಿಸಿದಂತಿದೆ.


  ವಿ20 ಸ್ಮಾರ್ಟ್​ಫೋನ್​ 6.44 ಇಂಚಿನ FHD+ ಅಮೋಲ್ಡ್​ ಡಿಸ್​ಪ್ಲೇ, ಆ್ಯಂಟಿ ಗ್ಲೇರ್​​ ಮ್ಯಾಟ್​ ಗ್ಲಾಸ್​ ಹೊಂದಿದ್ದು, ಕ್ವಾಲ್​ಕ್ಯಾಮ್ ​ಸ್ನಾಪ್​ಡ್ರಾಗನ್​ 720G ಪ್ರೊಸೆಸರ್​ ಹೊಂದಿದೆ. ಆ್ಯಂಡ್ರಾಯ್ಡ್​ 11 ಫನ್​ಟಚ್​ ಒಎಸ್​11 ಬೆಂಬಲವನ್ನು ಪಡೆದಿದೆ. 8GB RAM​ ಮತ್ತು 128GB, 256GB ಸ್ಟೊರೇಜ್​ ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ಸಿಗಲಿದೆ. ವಿಶೇಷವೆಂದರೆ 1TB ತನ ಸ್ಟೊರೇಜ್​ ಅನ್ನು ವೃದ್ಧಿಸಬಹುದಾಗಿದೆ.


  ಕ್ಯಾಮೆರಾ: 64 ಮೆಗಾಫಿಕ್ಸೆಲ್​​​ ಪ್ರೈಮರಿ ಸೆನ್ಸಾರ್​, 8 ಮೆಗಾಫಿಕ್ಸೆಲ್​ ಸೆಕೆಂಡರಿ ಸೆನ್ಸಾರ್​, 2 ಮೆಗಾಫಿಕ್ಸೆಲ್​​ ಮೊನೊ ಸೆನ್ಸಾರ್​ ಜೊತೆಗೆ ನೈಟ್​ ಮೋಡ್​, ಅಟೋ ಫೋಕಸ್​, ಸೂಪರ್​ ಮ್ಯಾಕ್ರೊ, ಪೊಟ್ರೇಟ್​ ಬೇಕೆಶ್​ ಹೊಂದಿದೆ.


  ಸೆಲ್ಫಿಗಾಗಿ 44 ಮೆಗಾಫಿಕ್ಸೆಲ್​​ ಕ್ಯಾಮೆರಾ, ಐಸ್​ ಅಟೋ ಫೋಕಸ್​, ಫೋಟೋ, ವಿಡಿಯೋ, 4K ರೆಕಾರ್ಡಿಂಗ್​​ ಮತ್ತು ಡುಯೆಲ್​ ವ್ಯೂವ್​ ವಿಡಿಯೋ ಫೀಚರ್​ ಹೊಂದಿದೆ.


  ಇನ್ನು ಸ್ಮಾರ್ಟ್​ಫೋನ್​ ಬ್ಯಾಟ ರಿ ವಿಚಾರಕ್ಕೆ ಬರುವುದಾದರೆ, ದೀರ್ಘಕಾಲದ ಬಾಳಿಕೆಗಾಗಿ 4 ಸಾವಿರ mAh​ ಬ್ಯಾಟರಿ ನೀಡಲಾಗಿದೆ. ಜೊತೆಗೆ 4G ಮೋಲ್ಡ್, ಯುಎಸ್​ಬಿ ಟೈಪ್​-C ಪೊರ್ಟ್, ಡುಯೆಲ್​ ಸಿಮ್​ ಆಯ್ಕೆಯಲ್ಲಿದೆ.


  ವಿವೋ 8GB RAM​​ ಮತ್ತು 128GB ಸ್ಟೊರೇಜ್​ ಆಯ್ಕೆಯ ಸ್ಮಾರ್ಟ್​ಫೋನ್​ 24,990 ರೂಗೆ ಸಿಗಲಿದೆ. 8GB RAM​ ಮತ್ತು 256GB ಸ್ಟೊರೇಜ್​​ ಆಯ್ಕೆಯ ಸ್ಮಾರ್ಟ್​ಫೋನ್​ 27,990 ರೂ ಆಗಿದೆ. ಸದ್ಯ ವಿವೋ ಆನ್​ಲೈನ್​ ಸ್ಟೋರ್​ ಮೂಲಕ ಫ್ರೀ ಬುಕ್ಕಿಂಗ್​ ಮಾಡಬಹುದಾಗಿದೆ. ಅ.20 ರಿಂದ ಈ ಸ್ಮಾರ್ಟ್​ಫೋನ್​ ಖರೀದಿಗೆ ಸಿಗಲಿದೆ. ಜೊತೆಗೆ ಕ್ಯಾಶ್​ಬ್ಯಾಕ್​, ಎಕ್ಸ್​ವೇಂಜ್​ ಆಫರ್​ ಮೂಲಕ ನತನ ಸ್ಮಾರ್ಟ್​ಫೋನ್​ ಖರೀದಿಸುವ ಅವಕಾಸವನ್ನು ವಿವೋ ತನ್ನ ಗ್ರಾಹಕರಿಗೆ ಮಾಡಿಕೊಡುತ್ತಿದೆ|

  Published by:Harshith AS
  First published: