• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • Vivo V20 Pro: ಡಿಸೆಂಬರ್​ 2ರಂದು ವಿವೊ ವಿ20 ಪ್ರೊ ಮಾರುಕಟ್ಟೆಗೆ; ಫ್ರೀ-ಆರ್ಡರ್ ಜೊತೆಗೆ ಕ್ಯಾಶ್​​ಬ್ಯಾಕ್ ಪಡೆಯುವ ಅವಕಾಶ

Vivo V20 Pro: ಡಿಸೆಂಬರ್​ 2ರಂದು ವಿವೊ ವಿ20 ಪ್ರೊ ಮಾರುಕಟ್ಟೆಗೆ; ಫ್ರೀ-ಆರ್ಡರ್ ಜೊತೆಗೆ ಕ್ಯಾಶ್​​ಬ್ಯಾಕ್ ಪಡೆಯುವ ಅವಕಾಶ

ವಿವೊ ವಿ20 ಪ್ರೊ

ವಿವೊ ವಿ20 ಪ್ರೊ

ನೂತನ ಫೋನನ್ನು ಖರೀದಿ ಮಾಡುವ ಗ್ರಾಹಕರಿಗಾಗಿ ಜಿಯೋ 10 ಸಾವಿರದಷ್ಟು ಆಫರ್​ ನೀಡುತ್ತಿದೆ. ಜೊತೆಗೆ ಐಡಿಎಫ್​ಸಿ ಬ್ಯಾಂಕ್​ 1 ಇಎಮ್​ಐ ಕ್ಯಾಶ್​​ಬ್ಯಾಕ್​ ನೀಡುತ್ತಿದೆ ಎಂದು ಟ್ವಿಟ್ಟರ್​ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

 • Share this:

  ವಿವೊ ನೂತನ ವಿ20 ಪ್ರೊ ಸ್ಮಾರ್ಟ್​ಫೋನನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಈ ಮೊದಲು ನವೆಂಬರ್​ 24ರಂದು ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಅದರೀಗ ಡಿಸೆಂಬರ್​ ಮೊದಲ ವಾರದಲ್ಲಿ ವಿವೊ ವಿ20 ಪ್ರೊ ಬಿಡುಗಡೆಯಾಗುತ್ತಿದೆ ಎಂಬ ಮಾತು ಕೇಳಿಬಂದಿದೆ.  ಆದರೆ ಅದಕ್ಕೂ ಮೊದಲೇ ನೂತನ ಸ್ಮಾರ್ಟ್​ಫೋನನನ್ನು ಫ್ರೀ ಆರ್ಡರ್​ ಮಾಡಬಹುದಾಗಿದೆ.


  ಎಕ್ಸ್​ಡಿಎ ಡೆವಲವರ್​ ತುಷಾರ್​ ಮೆಹ್ತಾ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ  ಪೋಸ್ಟ್​ವೊಂದನ್ನು ಹರಿಯಬಿಟ್ಟಿದ್ದು, ಪೋಸ್ಟ್​ನಲ್ಲಿ ವಿವೊ ವಿ20 ಪ್ರೊ ಸ್ಮಾರ್ಟ್​ಫೋನನ್ನು ಫ್ರಿ-ಆರ್ಡರ್​​ ಮಾಡಬಹುದು ಎಂದು ತಿಳಿಸಿದ್ದಾರೆ. ಜೊತೆಗೆ ಐಸಿಐಸಿಐ ಮತ್ತು ಬ್ಯಾಂಕ್​ ಅಫ್​ ಬರೋಡಾ ಕ್ರೆಡಿಟ್​/ಡೆಬಿಟ್​ ಕಾರ್ಡ್​ ಬಳಸಿದರೆ ಶೇ10 ರಷ್ಟು ಕ್ಯಾಶ್​ಬ್ಯಾಕ್ ಸಿಗಲಿದೆ. ಅಷ್ಟು ಮಾತ್ರವಲ್ಲದೆ ಜೆಸ್ಟ್​ಮನಿ ಫೈನಾನ್ಸ್​ ಶೇ.10ರಷ್ಟು ಕ್ಯಾಶ್​ಬ್ಯಾಕ್​ ನೀಡುತ್ತದೆ ಎಂದು ತಿಳಿಸಿದ್ದಾರೆ.


  ಇನ್ನು ನೂತನ ಫೋನನ್ನು ಖರೀದಿ ಮಾಡುವ ಗ್ರಾಹಕರಿಗಾಗಿ ಜಿಯೋ 10 ಸಾವಿರದಷ್ಟು ಆಫರ್​ ನೀಡುತ್ತಿದೆ. ಜೊತೆಗೆ ಐಡಿಎಫ್​ಸಿ ಬ್ಯಾಂಕ್​ 1 ಇಎಮ್​ಐ ಕ್ಯಾಶ್​​ಬ್ಯಾಕ್​ ನೀಡುತ್ತಿದೆ ಎಂದು ಟ್ವಿಟ್ಟರ್​ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.


  ಅಂದಹಾಗೆಯೇ, ವಿವೋ ವಿ20 ಪ್ರೊ ಸ್ಮಾರ್ಟ್​ಫೋನ್​ ಬಹುಪಾಲು ಡಿಸೆಂಬರ್​ ಮೊದಲ ವಾರದಲ್ಲಿ ಬಿಡುಗಡೆಯಾಗುವ ಮುನ್ಸೂಚನೆ ಕಾಣುತ್ತಿದೆ.


  ವಿವೋ ವಿ20 ಪ್ರೊ ವಿಶೇಷತೆ:


  ನೂತನ ಸ್ಮಾರ್ಟ್​ಫೋನ್​ 6.44 ಇಂಚಿನ ಎಫ್​ಹೆಚ್​ಡಿ+ ಅಮೋಲ್ಡ್​ ಸ್ಕ್ರೀನ್, ಸ್ನಾಪ್​ಡ್ರಾಗನ್​ 765ಜಿ ಪ್ರೊಸೆಸರ್​​ ಹೊಂದಿದೆ.ಆ್ಯಂಡ್ರಾಯ್ಡ್​ 10 ಬೆಂಬಲವನ್ನು ಪಡೆದಿದೆ. 64 ಮೆಗಾಫಿಕ್ಸೆಲ್​ ತ್ರಿವಳಿ ಕ್ಯಾಮೆರಾ ಜೊತೆಗೆ 44 ಮೆಗಾಫಿಕ್ಸೆಲ್​+8 ಮೆಗಾಫಿಕ್ಸೆಲ್​ ಸೆಲ್ಫಿಕ್ಯಾಮೆರಾವನ್ನು ಅಳವಡಿಸಲಾಗಿದೆ.


  8GB RAM ಮತ್ತು 128GB ಸ್ಟೊರೇಜ್​ ಆಯ್ಕೆಯಲ್ಲಿ ಸಿಗಲಿದೆ. 4 ಸಾವಿರ mAh​​ ಬ್ಯಾಟರಿಯನ್ನು ಇದು ಹೊಂದಿದೆ.

  Published by:Harshith AS
  First published: