ಡ್ಯುಯಲ್ ಸೆಲ್ಫಿ ಕ್ಯಾಮೆರಾವಿರುವ ‘ವಿವೋ ​ವಿ17 ಪ್ರೋ‘ ಸ್ಮಾರ್ಟ್​ಫೋನ್​ ಬಿಡುಗಡೆ; ಇದರ ಬೆಲೆಯೆಷ್ಟು ಗೊತ್ತಾ?

ವಿವೋ ವಿ17 ಪ್ರೊ ಸ್ಮಾರ್ಟ್​ಫೋನ್​ ಸ್ಮಾರ್ಟ್​ಫೋನ್​ 6.44 ಇಂಚಿನ ಸೂಪರ್​ ಅಮೋಲ್ಡ್​ ಡಿಸ್​ಪ್ಲೇ ಹೊಂದಿದ್ದು, ಸ್ನಾಪ್​​​ ಡ್ರ್ಯಾಗನ್​ 675AIE ಒಕ್ಟಾಕೋರ್​ ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತದೆ.

news18-kannada
Updated:September 20, 2019, 9:48 PM IST
ಡ್ಯುಯಲ್ ಸೆಲ್ಫಿ ಕ್ಯಾಮೆರಾವಿರುವ ‘ವಿವೋ ​ವಿ17 ಪ್ರೋ‘ ಸ್ಮಾರ್ಟ್​ಫೋನ್​ ಬಿಡುಗಡೆ; ಇದರ ಬೆಲೆಯೆಷ್ಟು ಗೊತ್ತಾ?
ವಿವೋ ವಿ17 ಪ್ರೊ
  • Share this:
ವಿವೋ ಕಂಪೆನಿ ತಯಾರಿಸಿದ ಹೊಸ ‘ವಿವೋ ವಿ17 ಪ್ರೊ‘ ಸ್ಮಾರ್ಟ್​ಫೋನ್​​ ಭಾರತದಲ್ಲಿ ಬಿಡುಗಡೆಯಾಗಿದೆ. ವಿಶೇಷವೆಂದರೆ ನೂತನ ಸ್ಮಾರ್ಟ್​ಫೋನಿನ​ ಮುಂಭಾಗದಲ್ಲಿ ಎರಡು ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಡ್ಯುಯಲ್​ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಿರುವ ಜಗತ್ತಿನ ಮೊದಲ ಫೋನ್​ ಇದಾಗಿದೆ. 32 + 8 ಮೆಗಾಫಿಕ್ಸೆಲ್​​ ಪಾಪ್​ ಅಪ್​ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ವಿವೋ ವಿ17 ಪ್ರೊ ಸ್ಮಾರ್ಟ್​ಫೋನ್​ ಸ್ಮಾರ್ಟ್​ಫೋನ್​ 6.44 ಇಂಚಿನ ಸೂಪರ್​ ಅಮೋಲ್ಡ್​ ಡಿಸ್​ಪ್ಲೇ ಹೊಂದಿದ್ದು, ಸ್ನಾಪ್​​​ ಡ್ರ್ಯಾಗನ್​ 675AIE ಒಕ್ಟಾಕೋರ್​ ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತದೆ. 8GB RAM​ ಮತ್ತು 128GB ಸ್ಟೊರೇಜ್​ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ.

ಕ್ಯಾಮೆರಾ ವಿಶೇಷತೆ;

ಸ್ಮಾರ್ಟ್​ಪೋನ್​ ಮುಂಭಾಗಲ್ಲಿ 32 ಮೆಗಾಫಿಕ್ಸೆಲ್​ + 8 ಮೆಗಾಫಿಕ್ಸೆಲ್​ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್​ + 8 ಮೆಗಾಫಿಕ್ಸೆಲ್​ +2 ಮೆಗಾಫಿಕ್ಸೆಲ್​ + 13 ಮೆಗಾಫಿಕ್ಸೆಲ್​ ಹೊಂದಿರುವ ನಾಲ್ಕು ಕ್ಯಾಮೆರಾಗಳಿವೆ. 4100mAh ಬ್ಯಾಟರಿ ಅಳವಡಿಸಲಾಗಿದೆ. ಇದರ ಜೊತೆಗೆ ಇನ್​ ಡಿಸ್​ಪ್ಲೇ ಫಿಂಗರ್​ ಪ್ರಿಂಟ್​ ಸ್ಕ್ಯಾನರ್​ ಆಯ್ಕೆಯಿದೆ.

ಬೆಲೆ ವಿವರ;

8GB RAM​ ಮತ್ತು 128GB ಸ್ಟೊರೇಜ್​ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್​ಫೋನ್​ ಬೆಲೆ​​ 29,990 ರೂ. ಆಗಿದೆ. ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ ಮಿಡ್​ನೈಟ್​ ಓಶಿಯನ್​ ಮತ್ತು ಗ್ಲೇಸಿಯರ್​ ಐಸ್​​ ಬಣ್ಣದಲ್ಲಿ ಸಿಗಲಿದೆ.
First published:September 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ