ಭಾರತದಲ್ಲಿ ಸೆ.20ಕ್ಕೆ ‘ವಿವೋ 17 ಪ್ರೊ‘ ​ಬಿಡುಗಡೆ; ಇದರ ಫೀಚರ್ ಹೇಗಿದೆ ಗೊತ್ತಾ?

ನೂತನ ‘ವಿವೋ 17 ಪ್ರೊ’ ಸ್ಮಾರ್ಟ್​ಫೋನ್​ 6.44 ಇಂಚಿನ ಫುಲ್​ HD + ಸೂಪರ್​ ಅಮೋಲ್ಡ್​ ಡಿಸ್​ಪ್ಲೇಯನ್ನು ಹೊಂದಿದೆ.

news18-kannada
Updated:September 10, 2019, 4:04 PM IST
ಭಾರತದಲ್ಲಿ ಸೆ.20ಕ್ಕೆ ‘ವಿವೋ 17 ಪ್ರೊ‘ ​ಬಿಡುಗಡೆ; ಇದರ ಫೀಚರ್ ಹೇಗಿದೆ ಗೊತ್ತಾ?
‘ವಿವೋ 17 ಪ್ರೊ’ ಸ್ಮಾರ್ಟ್​ಫೋನ್​
  • Share this:

ವಿವೋ ಕಂಪೆನಿ ತಯಾರಿಸಿದ ಹೊಸ ‘ವಿವೋ 17 ಪ್ರೊ‘ ಸ್ಮಾರ್ಟ್​ಫೋನ್​​ ಭಾರತದಲ್ಲಿ ಸೆ. 20 ರಂದು ಬಿಡುಗಡೆಯಾಗಲಿದೆ. 


ಭಾರತದಲ್ಲಿ ‘ವಿವೋ 17 ಪ್ರೊ’ ಸ್ಮಾರ್ಟ್​ಪೋನ್​ ಬಿಡುಗಡೆಯ ಕುರಿತು ಕಂಪೆನಿ ತನ್ನ ಟ್ಟಿಟ್ಟರ್​ ಖಾತೆಯಲ್ಲಿ ಟೀಸರ್ ಅನ್ನು​ ಬಿಡುಗಡೆ ಮಾಡಿದೆ. ಇದರಲ್ಲಿ ನೂತನ ಫೋನಿನ ವಿಶೇಷತೆಯ ಬಗ್ಗೆ ತಿಳಿಸಿದೆ.




‘ವಿವೋ 17 ಪ್ರೊ’ ಸ್ಮಾರ್ಟ್​ಫೋನ್​ ವಿಶೇಷತೆ:


ನೂತನ ‘ವಿವೋ 17 ಪ್ರೊ’ ಸ್ಮಾರ್ಟ್​ಫೋನ್​ 6.44 ಇಂಚಿನ ಫುಲ್​ HD + ಸೂಪರ್​ ಅಮೋಲ್ಡ್​ ಡಿಸ್​ಪ್ಲೇಯನ್ನು ಹೊಂದಿದೆ. ಜೊತೆಗೆ ಡಿಸ್​ಪ್ಲೇಯಲ್ಲಿ ಫಿಂಗರ್​​ ಪ್ರಿಂಟ್​ ಸೆನ್ಸಾರ್​ ಅಳವಡಿಸಲಾಗಿದೆ. ‘ವಿವೋ 17 ಪ್ರೊ’ ಸ್ಮಾರ್ಟ್​ಫೋನ್​ ಕ್ವಾಲ್​ಕ್ಯಾಂ ಸ್ನಾಪ್​ಡ್ರ್ಯಾಗನ್​ 675Socಯಿಂದ ಕಾರ್ಯ ನಿರ್ವಹಿಸುತ್ತಿದೆ. 8GB RAM​ ಮತ್ತು 128 GB ಸ್ಟೊರೇಜ್​ ಆಯ್ಕೆಯನ್ನು ನೀಡಲಾಗಿದೆ


 



 

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ನೂತನ ‘ವಿವೋ 17 ಪ್ರೊ’ ಸ್ಮಾರ್ಟ್​ಫೋನ್​ 2 ಮೆಗಾಫಿಕ್ಸೆಲ್​ ಸೆನ್ಸಾರ್ ​ಜೊತೆಗೆ 32 ಮೆಗಾಫಿಕ್ಸೆಲ್​ ಪ್ರೈಮರಿ ಕ್ಯಾಮೆರಾವನ್ನು ಮುಂಭಾಗದಲ್ಲಿ ಅಳವಡಿಸಲಾಗಿದೆ. ಅಂತೆಯೇ, ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್​ ಕ್ಯಾಮೆರಾ, 8 ಮೆಗಾಫಿಕ್ಸೆಲ್​ ಕ್ಯಾಮೆರಾ, 2 ಮೆಗಾಫಿಕ್ಸೆಲ್​ ಸೆನ್ಸಾರ್​​​ ಕ್ಯಾಮೆರಾವನ್ನು ನೀಡಲಾಗಿದೆ.


‘ವಿವೋ 17 ಪ್ರೊ’ ಸ್ಮಾರ್ಟ್​ಫೋನ್​ನಲ್ಲಿ ವೈ-ಫೈ 802.11Ac ಅಳವಡಿಸಲಾಗಿದೆ. ಬ್ಲೂಟೂತ್​ V5.0, GPS​/ A-GPS​, NFC, USB ಟೈಪ್​-C ಮತ್ತು 3.5mm​ ಹೆಡ್​ಫೋನ್​ ಜಾಕ್​ ನೀಡಲಾಗಿದೆ. ದೀರ್ಘಕಾಲದ ಬಳಕೆಗಾಗಿ 4,100mAh​ ಬ್ಯಾಟರಿಯನ್ನು ನೀಡಲಾಗಿದೆ.


 
First published: September 10, 2019, 4:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading