ಗ್ಯಾಲಕ್ಸಿ ಎಸ್10 ಸ್ಮಾರ್ಟ್​ಫೋನಿಗೆ ಸೆಡ್ಡು ಹೊಡೆಯಲು ಸಿದ್ಧವಾಗಿದೆ ವಿವೋ ‘ವಿ17‘ ಸ್ಮಾರ್ಟ್​ಫೋನ್​​!

Vivo V17: ‘ವಿ17‘ ಸ್ಮಾರ್ಟ್​ಫೋನ್​​ 6.44 ಇಂಚಿನ ಒಎಲ್​ಇಡಿ ಡಿಸ್​ಪ್ಲೇ ನೀಡಲಾಗಿದ್ದು, ಸ್ಟೋರ್ಟ್ಸ್​ ಹೋಲ್​ ಡಿಸ್​​ಪ್ಲೇಯನ್ನು ಅಳವಡಿಸಲಾಗಿದೆ.

news18-kannada
Updated:December 3, 2019, 3:26 PM IST
ಗ್ಯಾಲಕ್ಸಿ ಎಸ್10 ಸ್ಮಾರ್ಟ್​ಫೋನಿಗೆ ಸೆಡ್ಡು ಹೊಡೆಯಲು ಸಿದ್ಧವಾಗಿದೆ ವಿವೋ ‘ವಿ17‘ ಸ್ಮಾರ್ಟ್​ಫೋನ್​​!
Vivo V17: ‘ವಿ17‘ ಸ್ಮಾರ್ಟ್​ಫೋನ್​​ 6.44 ಇಂಚಿನ ಒಎಲ್​ಇಡಿ ಡಿಸ್​ಪ್ಲೇ ನೀಡಲಾಗಿದ್ದು, ಸ್ಟೋರ್ಟ್ಸ್​ ಹೋಲ್​ ಡಿಸ್​​ಪ್ಲೇಯನ್ನು ಅಳವಡಿಸಲಾಗಿದೆ.
  • Share this:
ವಿವೋ ಸಂಸ್ಥೆ ಸಿದ್ಧಪಡಿಸಿರುವ ​ ‘ವಿ17‘ ಸ್ಮಾರ್ಟ್​ಫೋನ್ ಅನ್ನು ಡಿಸೆಂಬರ್​ 9 ರಂದು ಮಾರುಕಟ್ಟೆಗೆ ಪರಿಚಯಿಸಲು ಚಿಂತನೆ ನಡೆಸಿದೆ. ನೂತನ ಸ್ಮಾಟ್​ಫೋನ್​ ಹೊಸ ವಿನ್ಯಾಸದ ಜೊತೆಗೆ ಸ್ಪೋರ್ಟ್ಸ್​ ಹೋಲ್​ ಪಂಚ್​ ಡಿಸ್​ಪ್ಲೇಯನ್ನು ಅಳವಡಿಸಿಕೊಂಡಿದೆ. ಸ್ಯಾಮ್​ಸಂಗ್​ ಕಂಪನಿ ಗ್ಯಾಲಕ್ಸಿ ಎಸ್​10 ಸ್ಮಾರ್ಟ್​ಫೋನಿಗೆ ಈ ಫೋನ್​ ಸೆಡ್ಡುಹೊಡೆಯಲಿದೆ.

‘ವಿ17‘ ಸ್ಮಾರ್ಟ್​ಫೋನ್​​ 6.44 ಇಂಚಿನ ಒಎಲ್​ಇಡಿ ಡಿಸ್​ಪ್ಲೇ ನೀಡಲಾಗಿದ್ದು, ಸ್ಟೋರ್ಟ್ಸ್​ ಹೋಲ್​ ಡಿಸ್​​ಪ್ಲೇಯನ್ನು ಅಳವಡಿಸಲಾಗಿದೆ. ಕ್ವಾಲ್​​ಕ್ಯಾಂ ಸ್ನಾಪ್​ಡ್ರ್ಯಾಗನ್​ 675 ಎಸ್​ಒಸಿಯಿಂದ ಕಾರ್ಯನಿರ್ವಹಿಸುತ್ತದೆ. 8GB RAM​ ಮತ್ತು 128GB ಸ್ಟೊರೇಜ್​ ಆಯ್ಕೆಯಲ್ಲಿ ನೂತನ ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆ ಮಾಡಲಿದೆ.

ನೂತನ ಸ್ಮಾರ್ಟ್​ಫೋನಿನ ಕ್ಯಾಮರಾ ಫೀಚರ್​ ಕೂಡ ವಿಭಿನ್ನವಾಗಿದೆ. ಎಲ್​- ವಿನ್ಯಾಸದಲ್ಲಿ ಕ್ವಾಡ್​ ರಿಯರ್​ ಕ್ಯಾಮರಾವನ್ನು ವಿ17 ಫೋನಿನಲ್ಲಿ ಅಳವಡಿಸಲಾಗಿದೆ. ಕ್ಯಾಮರಾದ ಬಗೆಗಿನ ಮಾಹಿತಿ ಇಲ್ಲಿದೆ.

ಹಿಂಭಾಗದ ಕ್ಯಾಮರಾ: 48 ಮೆಗಾಫಿಕ್ಸೆಲ್​+ 8 ಮೆಗಾಫಿಕ್ಸೆಲ್​ + 2ಮೆಗಾಫಿಕ್ಸೆಲ್​ + 2 ಮೆಗಾಫಿಕ್ಸೆಲ್​

ಮುಂಭಾಗದ ಕ್ಯಾಮೆರಾ: 32 ಮೆಗಾಫಿಕ್ಸೆಲ್​ ಕ್ಯಾಮರಾಇನ್ನು ಸ್ಮಾರ್ಟ್​ಫೋನ್​ ಬಳಕೆಗೆ ತಕ್ಕಂತೆ 4500mAhಚ್​ ಬ್ಯಾಟರಿಯನ್ನು ಅಳವಡಿಸಲಾಗಿದೆ.  18W​​ ಫಾಸ್ಟ್​ ಚಾರ್ಜಿಂಗ್​ ಸಪೋರ್ಟ್​ ಹೊಂದಿದೆ. ಡಿಸೆಂಬರ್​ 9 ರಂದು ಗ್ರಾಹಕರಿಗೆ ಪರಚಯಿಸಲಾಗುವ ‘ವಿ17‘ ಸ್ಮಾರ್ಟ್​ಫೋನ್​ ಬೆಲೆ 29,990 ರೂ ಎಂದು ಅಂದಾಜಿಸಲಾಗಿದೆ.ಇದನ್ನೂ ಓದಿ: ಪರಿಷ್ಕೃತ ಕರೆ, ಡೇಟಾ ದರದಿಂದ ಕಂಗಾಲಾದ ಗ್ರಾಹಕರಿಗೆ ಗುಡ್ ನ್ಯೂಸ್!

ಇದನ್ನೂ ಓದಿ:  ಪುಸ್ತಕದ ಮೇಲೆ ನಿಂತು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಖ್ಯಾತ ನಟಿ!
First published: December 3, 2019, 3:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading