ಮಾರ್ಚ್​ 25ಕ್ಕೆ ದೇಶಿಯ ಮಾರುಕಟ್ಟೆಗೆ Vivo X60 Series ಸ್ಮಾರ್ಟ್​ಫೋನ್​!

ನೂತನ ವಿವೋ X60 ಸಿರೀಸ್​ ಸ್ಮಾರ್ಟ್​ಫೊನ್​ಗಳು ಆ್ಯಂಡ್ರಾಯ್ಡ್​ 11ನಿಂದ ಕಾರ್ಯನಿರ್ವಹಿಸುತ್ತದೆ. 6.56 ಇಂಚಿನ ಡಿಸ್​ಪ್ಲೇ ಹೊಂದಿದೆ. ಜೊತೆಗೆ ಪಂಚ್​​ ಹೋಲ್​​ ಡಿಸೈನ್​ ಇದರಲ್ಲಿ. ವಿವೋ X60 ಪ್ರೊ+ ಕ್ವಾಲ್​ ಕ್ಯಾಂ ಸ್ನಾಪ್​ಡ್ರ್ಯಾಗನ್​​ 888 ಎಸ್​ಒಸಿ ಜೊತೆಗೆ ಆ್ಯಂಡ್ರಿನೊ 660 ಜಿಪಿಎಸ್​ನಿಂದ ಕಾರ್ಯನಿರ್ವಹಿಸುತ್ತದೆ.

Vivo X60 Series

Vivo X60 Series

 • Share this:
  ಚೀನಾ ಮೂಲದ Vivo ಸ್ಮಾರ್ಟ್​ಫೊನ್​ ಸಂಸ್ಥೆ ವಿವೋ X60 ಸಿರೀಸ್​ ಸ್ಮಾರ್ಟ್​ಫೋನ್​ಗಳನ್ನು ಇದೇ ಮಾರ್ಚ್​ 25ಕ್ಕೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ವಿವೊ X60 ಮತ್ತು ವಿವೊ X60 ಪ್ರೊ ಮತ್ತು X60 ಪ್ರೊ+  ಹೆಸರಿನ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಬರಲಿದೆ.

  ಕಳೆದ ಡಿಸೆಂಬರ್ ತಿಂಗಳಿನಲ್ಲಿ ವಿವೋ X60 ಸಿರೀಸ್​ ಸ್ಮಾರ್ಟ್​ಫೋನ್​ಗಳನ್ನು ಚೀನಾ ಮಾರುಕಟ್ಟೆಗೆ ಪರಿಚಯಿಸಿದೆ. ಆ ಬಳಿಕ ವಿವೊ X60 ಪ್ರೊ+ ಅನ್ನು ಜನವರಿ ತಿಂಗಳಿನಲ್ಲಿ ಪರಿಚಯಿಸಿತ್ತು. ಇದೀಗ ದೇಶಿಯ ಮಾರುಕಟ್ಟೆಗೆ ಪರಿಚಯಿಸಲು ವಿವೋ ಸಂಸ್ಥೆ ಮುಂದಾಗಿದೆ. ಆನ್​ಲೈನ್​ ಮಾರಾಟ ಮಾಳಿಗೆಯಾದ ಅಮೆಜಾನ್​ ಮತ್ತು ಪ್ಲಿಪ್​ಕಾರ್ಟ್​ನಲ್ಲಿ X60 ಸಿರೀಸ್​ ಕುರಿತಾದ ಟೀಸರ್​ ಹಂಚಿಕೊಂಡಿದೆ.

  ನೂತನ ವಿವೋ X60 ಸಿರೀಸ್​ ಸ್ಮಾರ್ಟ್​ಫೊನ್​ಗಳು ಆ್ಯಂಡ್ರಾಯ್ಡ್​ 11ನಿಂದ ಕಾರ್ಯನಿರ್ವಹಿಸುತ್ತದೆ. 6.56 ಇಂಚಿನ ಡಿಸ್​ಪ್ಲೇ ಹೊಂದಿದೆ. ಜೊತೆಗೆ ಪಂಚ್​​ ಹೋಲ್​​ ಡಿಸೈನ್​ ಇದರಲ್ಲಿ. ವಿವೋ X60 ಪ್ರೊ+ ಕ್ವಾಲ್​ ಕ್ಯಾಂ ಸ್ನಾಪ್​ಡ್ರ್ಯಾಗನ್​​ 888 ಎಸ್​ಒಸಿ ಜೊತೆಗೆ ಆ್ಯಂಡ್ರಿನೊ 660 ಜಿಪಿಎಸ್​ನಿಂದ ಕಾರ್ಯನಿರ್ವಹಿಸುತ್ತದೆ. ಅಂದಹಾಗೆಯೇ ಈ ಸ್ಮಾರ್ಟ್​ಫೋನನ್ನು   12GB  LPDDR​5 RAM​​ ಮತ್ತು 256GB ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸಿದೆ.

  ವಿವೋ X60 ಪ್ರೊ+ ಸ್ಮಾಟ್​ಫೋನ್​ ಕ್ವಾಡ್​​ ರಿಯಲ್​ ಕ್ಯಾಮೆರಾ ಸೆಟಪ್​​ ಹೊಂದಿದ್ದು, 50 ಮೆಗಾಫಿಕ್ಸೆಲ್​​ ಪ್ರೈಮರಿ ಶೂಟರ್​, 48 ಮೆಗಾಫಿಕ್ಸೆಲ್​​ ಅಲ್ಟ್ರಾ ವೈಡ್​ ಆ್ಯಂಗಲ್​ ಸೆನ್ಸಾರ್​, 32 ಮೆಗಾಫಿಕ್ಸೆಲ್​ ಡೆಪ್ತ್ ಸೆನ್ಸಾರ್​​ ಜೊತೆಗೆ 8 ಮೆಗಾಫಿಕ್ಸೆಕ್​ ಪಿರಿಯೊಸ್ಕೋಪ್​ ಕ್ಯಾಮೆರಾ ನೀಡಲಾಗಿದೆ. ಸೆಲ್ಫುಗಾಗಿ 32 ಮೆಗಾಫಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.

  Vivo X60 ಪ್ರೊ ಕ್ವಾಡ್​ ಕ್ಯಾಮೆರಾ ಸೆಟಪ್​​ ಹೊಂದಿದ್ದು, 48 ಮೆಗಾಫಿಕ್ಸೆಲ್​​ ಪ್ರೈಮರಿ ಶೂಟರ್​, 13 ಮೆಗಾಫಿಕ್ಸೆಲ್ ಅಲ್ಟ್ರಾವೈಡ್​​ ಆ್ಯಂಗಲ್​ ಲೆನ್ಸ್​, 13 ಮೆಗಾಫಿಕ್ಸೆಲ್​​ ಡಿಪ್ತ್​​ ಸೆನ್ಸಾರ್​ ಜೊತೆಗೆ 8 ಮೆಗಾಫಿಕ್ಸೆಲ್​​ ಪೆರಿಸ್ಕೋಪ್​​ ಲೆನ್ಸ್​ ಅಳವಡಿಸಲಾಗಿದೆ.

  ವಿವೋ X60 ಸ್ಮಾರ್ಟ್​ಫೋನ್​48 ಮೆಗಾಫಿಕ್ಸೆಲ್​​ ಪ್ರೈಮರಿ ಶೂಟರ್​, 13 ಮೆಗಾಫಿಕ್ಸೆಲ್​​ ಸೆಂಕೆಂಡರಿ ಸೆನ್ಸಾರ್​ ಮತ್ತು 13 ವಮೆಗಾಫಿಕ್ಸೆಲ್​​ ಡೆಪ್ತ್​​ ಸೆನ್ಸಾರ್​ ನೀಡಲಾಗಿದೆ.

  ಇನ್ನು ವಿವೋ X60 ಬೆಲೆ 39,100 ರೂ ಇರಲಿದೆ ಎಂದು ಅಂದಾಜಿಸಲಾಗಿದೆ. X60 ಪ್ರೊ ಬೆಲೆ 50,600 ರೂ ಮತ್ತು ವಿವೋ X60 ಪ್ರೊ+ ಬೆಲೆ 56,500 ರೂ ಇರಲಿದೆ ಎಂದು ಅಂದಾಜಿಸಲಾಗಿದೆ.
  Published by:Harshith AS
  First published: