HOME » NEWS » Tech » VIVO SMARTWATCH LAUNCHES ITS FIRST SMARTWATCH SERIES FEATURING BLOOD OXYGEN MONITOR HG

Vivo smartwatch: ಆಕರ್ಷಕ ವಿನ್ಯಾಸದ ಸ್ಮಾರ್ಟ್​ವಾಚ್​ ಪರಿಚಯಿಸಿದ ವಿವೋ; ಬೆಲೆ?

ವಿವೋ ಸಿದ್ಧಪಡಿಸಿ ಮಾರುಕಟ್ಟೆಗೆ ಪರಿಚಯಿಸಿರುವ ಸ್ಮಾರ್ಟ್​ವಾಚ್​ ಅನ್ನು 42ಎಮ್ಎಮ್​ ಮತ್ತು 46ಎಮ್​ಎಮ್​ ಮಾದರಿಯಲ್ಲಿದೆ.

news18-kannada
Updated:September 24, 2020, 2:18 PM IST
Vivo smartwatch: ಆಕರ್ಷಕ ವಿನ್ಯಾಸದ ಸ್ಮಾರ್ಟ್​ವಾಚ್​ ಪರಿಚಯಿಸಿದ ವಿವೋ; ಬೆಲೆ?
ವಿವೋ ಸ್ಮಾರ್ಟ್​ವಾರ್ಚ್​
  • Share this:
ಸ್ಮಾರ್ಟ್​ಫೋನ್​ಗಳನ್ನು ಉತ್ಪಾದಿಸುತ್ತಿದ್ದ ವಿವೋ ಸಂಸ್ಥೆ ಇದೀಗ ಅದರ ಜೊತೆಯಲ್ಲಿ ಸ್ಮಾರ್ಟ್​ವಾಚ್​ವೊಂದನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬಿಬಿಕೆ ಗ್ರೂಪ್​ ಮೂಲಕ ನೂತನ ಸ್ಮಾರ್ಟ್​ವಾಚ್​ ಅನ್ನು ಪರಿಚಯಿಸಿದೆ. ಈ ಮೊದಲು ಒಪ್ಪೊ, ರಿಯಲ್​ಮಿ ಸ್ಮಾರ್ಟ್​ವಾಚ್​​ ಅನ್ನು ಬಿಡುಗಡೆ ಮಾಡಿದ್ದ ಬಿಬಿಕೆ ಗ್ರೂಪ್ ಇದೀಗ ವಿವೋ ಸ್ಮಾರ್ಟ್​ವಾರ್ಚ್​ ಅನ್ನು ಗ್ರಾಹಕರಿಗೆ ಪರಿಚಯಿಸಿದೆ. ವಿವೋ ಸಿದ್ಧಪಡಿಸಿ ಮಾರುಕಟ್ಟೆಗೆ ಪರಿಚಯಿಸಿರುವ ಸ್ಮಾರ್ಟ್​ವಾಚ್​ ಅನ್ನು 42ಎಮ್ಎಮ್​ ಮತ್ತು 46ಎಮ್​ಎಮ್​ ಮಾದರಿಯಲ್ಲಿದೆ. ಅಮೋಲ್ಡ್​​ ಡಿಸ್​ಪ್ಲೇ​ ಹೊಂದಿದೆ. ಜೊತೆಗೆ ಫಿಟ್​ನೆಸ್​ ಸೇರಿದಂತೆ ಹಲವಾರು ಫೀಚರ್​ ಒಳಗೊಂಡಿದೆ. ರಕ್ತದಲ್ಲಿನ ಆಮ್ಲಜನಕದ ಪ್ರಮಾಣದ ಅಳೆಯುವ ವಿಶೇಷತೆಯನ್ನು ಈ ಸ್ಮಾರ್ಟ್​ವಾಚ್​ ಹೊಂದಿದೆ.  ಸದ್ಯದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಇನ್ನು 42ಎಮ್​ಎಮ್​ ವಾಚ್​ 1.1 ಸ್ಕ್ರೀನ್​ ಮತ್ತು 46ಎಮ್​​ಎಮ್​  1.39 ಇಂಚಿನ ಅಮೋಲ್ಡ್​ ಡಿಸ್​ಪ್ಲೇ ಹೊಂದಿದೆ. ಜೊತೆಗೆ ಅಪೊಲೊ ಲೋ ಪವರ್​ ಪ್ರೊಸೆಸರ್​ ಮತ್ತು 2ಜಿಬಿ ಸ್ಟೊರೇಜ್​ ಆಯ್ಕೆಯನ್ನು ಒಳಗೊಂಡಿದೆ. ಇದು ಕ್ರೀಡೆ, ಸೈಕ್ಲಿಂಗ್​, ನಿದ್ದೆ, ಹೃದಯ ಬಡಿತವನ್ನು ಅಳಿಯುತ್ತದೆ.

ವಿವೋ ಸ್ಮಾರ್ಟ್​ವಾರ್ಚ್​ 458 ಎಮ್​ಎಎಚ್​ ಬ್ಯಾಟರಿಯನ್ನು ಅಳವಡಿಸಿಕೊಂಡಿದ್ದು, ಒಂದು ದಿನ ಚಾರ್ಜ್​ ಮಾಡಿದರೆ ಹೆಚ್ಚು ದಿನಗಳ ಕಾಲ ಬಳಸಬಹುದಾಗಿದೆ.

ಬೆಲೆ ಎಷ್ಟು ಗೊತ್ತಾ?

ಬೆಲೆ: ವಿವೋ ಸ್ಮಾರ್ಟ್​ವಾಚ್​​ ಬೆಲೆ 14,085 ರೂ ಎಂದು ಅಂದಾಜಿಸಲಾಗಿದ್ದು, ಸೆ.28ರಂದು ಲಭ್ಯವಾಗಲಿದೆ.
Published by: Harshith AS
First published: September 24, 2020, 1:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories