• Home
  • »
  • News
  • »
  • tech
  • »
  • Vivo X90: 120W​​ ವೇಗದ ಚಾರ್ಜಿಂಗ್ ಸ್ಪೀಡ್​ ಅನ್ನು ಹೊಂದಿದ ವಿವೋ ಸ್ಮಾರ್ಟ್​ಫೋನ್​​ ಬಿಡುಗಡೆ!

Vivo X90: 120W​​ ವೇಗದ ಚಾರ್ಜಿಂಗ್ ಸ್ಪೀಡ್​ ಅನ್ನು ಹೊಂದಿದ ವಿವೋ ಸ್ಮಾರ್ಟ್​ಫೋನ್​​ ಬಿಡುಗಡೆ!

ವಿವೋ ಎಕ್ಸ್​ 90 ಮೊಬೈಲ್

ವಿವೋ ಎಕ್ಸ್​ 90 ಮೊಬೈಲ್

ವಿವೋ ಎಕ್ಸ್​​90 ಸ್ಮಾರ್ಟ್​​ಫೋನ್ ಇದೀಗ ಬಿಡುಗಡೆಯ ದಿನಾಂಕ ಹೊರಬಿದ್ದಿದ್ದು ಇದರ ಕೆಲವೊಂದು ಫೀಚರ್ಸ್​​ ಕೂಡ ಹೊರಬಿದ್ದಿದೆ. ಈ ಸ್ಮಾರ್ಟ್​​ಫೋನ್​ ಇತರ ಸ್ಮಾರ್ಟ್​​ಫೋನ್​ಗಳಿಗೆ ಹೋಲಿಸಿದರೆ ಇದರ ಫೀಚರ್ಸ್​ ಬಹಳ ಸ್ಪೆಷಲ್​ ಆಗಿದೆ.

  • Share this:

    ಸ್ಮಾರ್ಟ್​ಫೋನ್ (Smartphone)​ ಅಂದರೆ ಯಾರಿಗೆ ಬೇಡ ಹೇಳಿ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಕೈಯಲ್ಲಿ ನೋಡಿದರು ಮೊಬೈಲ್ (Mobile) ಇದ್ದೇ ಇದೆ. ಅದೇ ರೀತಿ ಈ ಸ್ಮಾರ್ಟ್​​ಫೋನ್​ ಕಂಪನಿಗಳು ಈ ಎಲ್ಲ ವಿಷಯಗಳನ್ನು ಗಮನಿಸಿಕೊಂಡು ಮಾರುಕಟ್ಟೆಗೆ ಹೊಸ ಹೊಸ ಸ್ಮಾರ್ಟ್​​ಫೋನ್​​ ಅನ್ನು ಬಿಡುಗಡೆ ಮಾಡುತ್ತಾ ಇರುತ್ತದೆ. ಇದುವರೆಗೆ ನಾವು ರೆಡ್ಮಿ, ಒಪ್ಪೊ, ರಿಯಲ್​ಮಿ, ಆ್ಯಪಲ್ ಕಂಪನಿಗಳು ವಿಶೇಷ ಸ್ಮಾರ್ಟ್​ಫೋನ್​ ಅನ್ನು ಈ ವರ್ಷ ಬಿಡುಗಡೆ ಮಾಡಿತ್ತು. ಇದೀಗ ವಿವೋ ಕಂಪನಿ (Vivo Company) ತನ್ನ ಬ್ರಾಂಡ್​ನಲ್ಲಿ ಹೊಸ ಮೊಬೈಲ್​ ಅನ್ನು ತನ್ನ ಗ್ರಾಹಕರಿಗೆ ಪರಿಚಯಿಸುತ್ತಿದೆ. ಇದು ಹಲವಾರು ಫೀಚರ್ಸ್ (Features)​​ ಅನ್ನು ಹೊಂದಿದ್ದು ಗ್ರಾಹಕರ ಬೇಡಿಕೆ ಇದಕ್ಕೆ ಹೆಚ್ಚಾಗಬಹುದು ಎಂದು ತಂತ್ರಜ್ಞರು ಹೇಳುತ್ತಾರೆ.


    ವಿವೋ ಎಕ್ಸ್​​90 ಸ್ಮಾರ್ಟ್​​ಫೋನ್ ಇದೀಗ ಬಿಡುಗಡೆಯ ದಿನಾಂಕ ಹೊರಬಿದ್ದಿದ್ದು ಇದರ ಕೆಲವೊಂದು ಫೀಚರ್ಸ್​​ ಕೂಡ ಹೊರಬಿದ್ದಿದೆ. ಈ ಸ್ಮಾರ್ಟ್​​ಫೋನ್​ ಇತರ ಸ್ಮಾರ್ಟ್​​ಫೋನ್​ಗಳಿಗೆ ಹೋಲಿಸಿದರೆ ಇದರ ಫೀಚರ್ಸ್​ ಬಹಳ ಸ್ಪೆಷಲ್​ ಆಗಿದೆ.


    ಇದರ  ಸ್ಪೆಷಲ್​ ಫೀಚರ್​ ಏನೆಂದರೆ ಇದು 120W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. Vivo ನಿಂದ ಮುಂಬರುವ ಹ್ಯಾಂಡ್‌ಸೆಟ್ BOE Q9 ಮತ್ತು Samsung E6 ಪ್ಯಾನೆಲ್ ಸೇರಿದಂತೆ ಬಳಕೆದಾರರು ಆಯ್ಕೆ ಮಾಡಬಹುದಾದ ಎರಡು ವಿಭಿನ್ನ ಕಲರ್​​​ಗಳಲ್ಲಿ ಬರಲಿದೆ.


    ಇದನ್ನೂ ಓದಿ: ಸ್ಮಾರ್ಟ್​​ಫೋನ್​ ಖರೀದಿ ಮಾಡುವ ಪ್ಲಾನ್​ನಲ್ಲಿದ್ದೀರಾ? ಇಲ್ಲಿದೆ ನೋಡಿ ಬೆಸ್ಟ್​ 5ಜಿ ಮೊಬೈಲ್​​ಗಳು.


    ಯಾವಾಗ ಬಿಡುಗಡೆ?


    ನವೆಂಬರ್ 22 ರಂದು ಚೀನಾದಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ. Vivo X90 ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು 50 ಮೆಗಾಪಿಕ್ಸೆಲ್‌ಗಳ ಮೈನ್ ಕ್ಯಾಮೆರಾ ಸೆನ್ಸಾರ್​​​ನಿಂದ ಒಳಗೊಂಡಿದೆ. ಹ್ಯಾಂಡ್‌ಸೆಟ್ ಬಿಡುಗಡೆಗೆ ಮುಂಚಿತವಾಗಿ TENAA ಡೇಟಾಬೇಸ್‌ನಲ್ಲಿ ಕಾಣಿಸಿಕೊಂಡಿದೆ. ವಿವೋ ಸ್ಮಾರ್ಟ್‌ಫೋನ್ ಡೈಮೆನ್ಸಿಟಿ 9200 SoC ನಲ್ಲಿ ಒಳಗೊಂಡಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.


    vivo-smartphone-launched-with-120w-fast-charging-speed
    ವಿವೋ ಎಕ್ಸ್​ 90 ಮೊಬೈಲ್


    ಈ ಮೊಬೈಲ್​ನ ಕ್ಯಾಮೆರಾ ಫೀಚರ್ಸ್​:


    Vivo X90 ಎರಡು 12 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಸಂವೇದಕಗಳೊಂದಿಗೆ 50 ಮೆಗಾಪಿಕ್ಸೆಲ್‌ಗಳ ಮುಖ್ಯ ಕ್ಯಾಮೆರಾ ಸಂವೇದಕದಿಂದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ . ಸೆಲ್ಫಿಗಾಗಿ ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ವನ್ನು ಹೊಂದಿರಬಹುದು.


    ವಿವೋ ಎಕ್ಸ್90 ಮೊಬೈಲ್​ನ ವಿನ್ಯಾಸ:


    ಹೆಚ್ಚುವರಿಯಾಗಿ, ಹಿಂದಿನ ವರದಿಗಳು ತಿಳಿಸಿದಂತೆ ಈ ಸ್ಮಾರ್ಟ್‌ಫೋನ್ 8.88 ಎಂಎಂ ದಪ್ಪವನ್ನು ಹೊಂದಿದೆ ಮತ್ತು ಸುಮಾರು 196 ಗ್ರಾಂ ತೂಕವಿದೆ ಎಂದು ಸೂಚಿಸಿದೆ. Vivo X90 2,345mAh ಡ್ಯುಯಲ್-ಸೆಲ್ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಎಂದು ಹೇಳಲಾಗುತ್ತದೆ, ಇದು 4,800mAh ನ ಬ್ಯಾಟರಿಯ ವಿಶೇಷ ಫೀಚರ್ಸ್​ ಅನ್ನು ಹೊಂದಿದೆ.


    ಈ ಸ್ಮಾರ್ಟ್​ಫೋನ್​​ ಹೊಂದಿರುವಂತಹ ಫೀಚರ್ಸ್​:


    Vivo X90 ಇತ್ತೀಚೆಗೆ TENAA ಡೇಟಾಬೇಸ್‌ನಲ್ಲಿ ಕಾಣಿಸಿಕೊಂಡಿದೆ. ಈ ಹ್ಯಾಂಡ್‌ಸೆಟ್ 1,260x2,800 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.78-ಇಂಚಿನ AMOLED ಅನ್ನು ಹೊಂದಿದೆ ಎಂದು ವರದಿಯಿತ್ತು. ಅಂಡರ್ ಡಿಸ್​​ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಕೂಡ ಒಳಗೊಂಡಿರಬಹುದು. ಈ ಸ್ಮಾರ್ಟ್​ಫೋನ್​ನ ಡೈಮೆನ್ಸಿಟಿ 9200 SoC ಅನ್ನು ಪಡೆಯುವ ಸಾಧ್ಯತೆಯಿದೆ. ವಿವೋ ಎಕ್ಸ್ 90 ಚೀನೀ ಕಂಪನಿಯಿಂದ ಮುಂಬರುವ ಹ್ಯಾಂಡ್‌ಸೆಟ್ ಆಗಿದ್ದು ಇದು 8GB, 12GB, ಅಥವಾ 16GB RAM ಮತ್ತು 128GB, 256GB, ಅಥವಾ 512GB ಸ್ಟೋರೇಜ್​ ಸಾಮರ್ಥ್ಯವನ್ನು ಹೊಂದಿದೆ ಕೆಲವೊಂದು ವರದಿಗಳು ತಿಳಿಸಿದೆ.


    ಇದು ವಿವೋ ಕಂಪನಿ ಬಿಡುಗಡೆ ಮಾಡುತ್ತಿರುವ ಹೊಸ ಸ್ಮಾರ್ಟ್​ಫೋನ್​ ಆಗಿದ್ದು ಇದುವರೆಗೆ ಬಿಡುಗಡೆ ಮಾಡಿದ ಮೊಬೈಲ್​ಗಳಿಗಿಂತ ಇದು ಬಹಳ ವಿಶೇಷ ಫೀಚರ್ಸ್​ ಅನ್ನು ಒಳಗೊಂಡಿದೆ. ಇದೇ ನವೆಂಬರ್​ 22ರಂದು ಚೀನಾದಲ್ಲಿ ಬಿಡುಗಡೆಗೊಳ್ಳುವ ವಿವೋ ಸ್ಮಾರ್ಟ್​​ಫೋನ್​ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.

    Published by:Prajwal B
    First published: