ನ. 14ರಂದು ವಿವೋ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ; ಹೇಗಿದೆ ಗೊತ್ತಾ?

ನೂತನ ಸ್ಮಾರ್ಟ್​ಫೋನ್​ 6.38 ಇಂಚಿನ ಫುಲ್​ ಹೆಚ್​ಡಿ ಅಮೋಲ್ಡ್​ ಡಿಸ್​ಪ್ಲೇ ಹೊಂದಿದ್ದು, ಮಿಡಿಯಾ ಟೆಕ್​ ಹೆಲಿಯೋ ಪ್ರೊಸೆಸರ್​ ಆಳವಡಿಸಿಕೊಂಡಿದೆ. ಎ

news18-kannada
Updated:November 1, 2019, 10:49 PM IST
ನ. 14ರಂದು ವಿವೋ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ; ಹೇಗಿದೆ ಗೊತ್ತಾ?
ಎಸ್​5
  • Share this:
ವಿವೋ ಕಂಪೆನಿ ಸಿದ್ಧಪಡಿಸಿರುವ ಎಸ್​5 ಸ್ಮಾರ್ಟ್​ಫೋನ್​ ನವೆಂಬರ್​ 14 ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಚೀನಾದಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮವೊಂದರಲ್ಲಿ ನೂತನ ಸ್ಮಾರ್ಟ್​ಫೋನ್​ ಅನ್ನು ಗ್ರಾಹಕರಿಗೆ ಪರಿಚಯಿಸಲಿದೆ.

ವಿವೋ ಎಸ್​ ಸಿರೀಸ್​ ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾ ಬಂದಿದೆ.ಇದೀಗ ಎಸ್​5 ಹೆಸರಿನ ಸ್ಮಾರ್ಟ್​ಫೋನ್ ಸಿದ್ಧಪಡಿಸಿ ಮತ್ತಷ್ಟು ಹೊಸ ಫೀಚರ್​ಗಳನ್ನು ಅಳವಡಿಸಿಕೊಂಡಿದೆ.

ನೂತನ ಸ್ಮಾರ್ಟ್​ಫೋನ್​ 6.38 ಇಂಚಿನ ಫುಲ್​ ಹೆಚ್​ಡಿ+ ಅಮೋಲ್ಡ್​ ಡಿಸ್​ಪ್ಲೇ ಹೊಂದಿದ್ದು, ಮಿಡಿಯಾ ಟೆಕ್​ ಹೆಲಿಯೋ ಪ್ರೊಸೆಸರ್​ ಆಳವಡಿಸಿಕೊಂಡಿದೆ. ಎಸ್​5 ಸ್ಮಾರ್ಟ್​ಫೋನ್​ 4GB RAM​ 128GB ಸ್ಟೊರೇಜ್​ ಒಳಗೊಂಡಿದೆ.

ಇದನ್ನೂ ಓದಿ: ‘ಕ್ಯಾರ್’ ಆಯ್ತು ಈಗ ‘ಮಹಾ’; ನವೆಂಬರ್ 6ರಿಂದ ಗುಜರಾತ್​​ನಲ್ಲಿ ಭಾರೀ ಮಳೆ

ಎಸ್​5 ಸ್ಮಾರ್ಟ್​ಫೋನ್​ನಲ್ಲಿ ತ್ರಿವಳಿ ಕ್ಯಾಮೆರಾವನ್ನು ಆಳವಡಿಸಲಾಗಿದೆ. ಅಂತೆಯೇ ಸೆಲ್ಫಿಗಾಗಿ 32 ಮೆಗಾಫಿಕ್ಸೆಲ್​ ಸೆಲ್ಫಿ ಶೂಟರ್​ ಕ್ಯಾಮೆರಾವನ್ನು ನೀಡಲಾಗಿದೆ. ಸ್ಮಾರ್ಟ್​ಫೋನ್​ ಬಳಕೆಗೆ ತಕ್ಕಂತೆ 4000mAh ಬ್ಯಾಟರಿಯನ್ನು ನೀಡಲಾಗಿದೆ. ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಈ ನೂತನ ಸ್ಮಾರ್ಟ್​ಫೋನ್​ ಬೆಲೆ 16,990 ಎಂದು ಅಂದಾಜಿಸಲಾಗಿದೆ.
First published:November 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading