ವಿವೊ ನೆಕ್ಸ್​​ ಬಿಡುಗಡೆ: ಏನಿದೆ ಲಾಂಚ್​ ಆಫರ್​?


Updated:July 19, 2018, 4:31 PM IST
ವಿವೊ ನೆಕ್ಸ್​​ ಬಿಡುಗಡೆ: ಏನಿದೆ ಲಾಂಚ್​ ಆಫರ್​?

Updated: July 19, 2018, 4:31 PM IST
ವಿವೊ ಮೊಬೈಲ್​ ಕಂಪನಿ ತನ್ನ ನೂತನ ಟ್ರೆಂಡಿ ಮೊಬೈಲ್​ ವಿವೋ ನೆಕ್ಸ್​ನ್ನು ದೆಹಲಿಯಲ್ಲಿ ಬಿಡುಗಡೆ ಗೊಳಿಸಿದೆ.

ಸ್ಮಾರ್ಟ್​​ಫೋನ್​ ಜಗತ್ತಿನಲ್ಲಿ ಹೊಸ ಆವಿಷ್ಕಾರಕ್ಕೆ ನಾಂದಿ ಹಾಕಲು ಮುಂದಾಗಿರುವ ವಿವೋ ಕೆಲ ದಿನಗಳ ಹಿಂದೆ ಡಿಸ್​ಪ್ಲೇನಲ್ಲೇ ಫಿಂಗರ್​ ಸ್ಕ್ಯಾನರ್​ ಅಳವಡಿಸಿ ಸುದ್ದಿಯಾಗಿತ್ತು. ಇದೀಗ ಸೆಲ್ಫಿ ಕ್ಯಾಮೆರಾ ಪಾಪ್​ ಅಪ್​ ಆಯ್ಕೆಯನ್ನು ನೀಡಲಾಗಿದೆ.

ಒನ್​ಪ್ಲಸ್​ 6, ಅಸೂಸ್​ ಜೆನ್​ಫೋನ್​ 5Z ಸೇರಿದಂತೆ ಈಗಾಗಲೇ ಬಳಕೆಯಾಗಿರುವ ಸ್ನಾಪ್​ಡ್ರಾಗನ್​ 845 ಪ್ರೊಸೆಸರ್​ ಇಲ್ಲೂ ಬಳಕೆ ಮಾಡಲಾಗಿದೆ. ಆ್ಯಂಡ್ರಾಯ್ಡ್​ ಓರಿಯೋ 8.1 ಆಪರೇಟಿಂಗ್​ ಸಿಸ್ಟಂನೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿರುವ ನೆಕ್ಸಾ 8GB RAM ನೊಂದಿಗೆ 128GB ಆಂತರಿಕ ಮೆಮೊರಿ ಹೊಂದಿದೆ.

ಮೊಬೈಲ್​ ವಿಶೇಷತೆಗಳು

ಡಿಸ್​ಪ್ಲೇ : 6.59 ಫುಲ್​ ಹೆಚ್​ಡಿ (2316x1080) ಅಮಲೋಡ್​
ಪ್ರೊಸೆಸರ್​: Snapdragon 845
ಮೆಮೊರಿ : 8GB RAM & 128GB ಆಂತರಿಕ ಮೆಮೊರಿ
Loading...

ಒಎಸ್​: Android 8.1 Oreo ಜತೆಗೆ FunTouch 4.0
ಅಪ್​ಡೇಟ್​: ಆ್ಯಂಡ್ರಾಯ್ಡ್​ P ಬೀಟಾ
ಕ್ಯಾಮೆರಾ: 2 MP + 5 MP ಹಾಗು 8MP ಪಾಪ್​ ಅಪ್​ ಸೆಲ್ಫಿ ಕ್ಯಾಮೆರಾ

ಬೆಲೆ: Rs 44,990

ಲಾಂಚ್​ ಆಫರ್​
ಹೆಚ್​ಡಿಎಫ್​ಸಿ ಕ್ರೆಡಿಟ್​​ ಕಾರ್ಡ್​ ಆಫರ್​ನಡಿ ಕರೀದಿ ಮಾಡಿದರೆ ರೂ.4000ದ ವರೆಗೂ ಕ್ಯಾಶ್​ಬ್ಯಾಕ್​ ಅವಕಾಶವಿದೆ.
ವಿವೋ ತನ್ನ ನೆಕ್ಸಾ ಗ್ರಾಹಕರಿಗೆ ಜು.19 ರಿಂದ ಜು.31 ಮೊಬೈಲ್​ ಕರೀದಿಸಿದರೆ ಡಿಸ್​ಪ್ಲೇ ರೀಪ್ಲೇಸ್​ಮೆಂಟ್​ ಆಫರ್​ ನೀಡಿದೆ. ಆದರೆ ಹೆಚ್ಚುವರಿಯಾಗಿ ರೂ.900ರನ್ನು ಗ್ರಾಹಕರು ನೀಡಬೇಕು. ಈ ಆಫರ್​ ಕೇವಲ ಆರು ತಿಂಗಳು ಮಾತ್ರ ಲಭ್ಯವಿರುತ್ತದೆ.

ಜಿಯೋ ವಿವೊ ಧಮಾಕ ಆಫರ್​
ಜಿಯೋ ತನ್ನ ಗ್ರಾಹಕರಿಗೆ ಕ್ಯಾಶ್​ಬ್ಯಾಕ್​, ಪಾರ್ಟ್ನರ್​ ಕೂಪನ್​, ಜಿಯೋ ಸೆಕ್ಯೂರಿಟಿ ಪ್ಲಾಟಿನಂ ಎಂಬ ಆಫರ್​ನ್ನು ನೆಕ್ಸ್​ ಗ್ರಾಹಕರಿಗೆ ನೀಡಿದೆ. ಇದರಲ್ಲಿ 1950 ರೂ ಕ್ಯಾಶ್​ಬ್ಯಾಕ್​ ಗ್ರಾಹಕರಿಗೆ ದೊರಕುತ್ತದೆ ಆದರೆ ಈ ಆಫರ್​ ಕೇಲವೇ ಗ್ರಾಹಕರಿಗೆ ನೀಡುವುದಾಗಿ ಜಿಯೋ ಹೇಳಿದೆ. ಜಿಯೋ ಸೆಕ್ಯೂರಿಟಿ ಆಫರ್​ನ್ನು ಎಲ್ಲಾ ನೆಕ್ಸ್​​ ಬಳಕೇದಾರರಿಗೆ ದೊರಕುತ್ತದೆ. 2100 ರೂ, ಮೌಲ್ಯದ ಜಿಯೋ ಕೂಪನ್​ ಕೂಡಾ ನೀಡುತ್ತದೆ.

 
First published:July 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...