50MP​ ಕ್ಯಾಮೆರಾ, 6 ಸಾವಿರ mAh ಬ್ಯಾಟರಿ; ವಿವೋ ಪರಿಚಯಿಸಿದೆ ಬಜೆಟ್​ ಬೆಲೆಯ ಸ್ಮಾರ್ಟ್​ಫೋನ್​

Vivo Y55s 5G: Vivo Y55s 6.58-ಇಂಚಿನ ಡ್ಯೂಡ್ರಾಪ್ ನಾಚ್ ಡಿಸ್ಪ್ಲೇ ಹೊಂದಿದೆ. ಪರದೆಯು 1080 x 2408 ಪಿಕ್ಸೆಲ್​ಗಳನ್ನು ಪೂರ್ಣ HD+ ರೆಸಲ್ಯೂಶನ್ ಮತ್ತು 60 Hz ಪ್ರಮಾಣಿತ ರಿಫ್ರೆಶ್ ದರದೊಂದಿಗೆ ಬೆಂಬಲಿಸುವ LCD ಪ್ಯಾನೆಲ್ ನೀಡಲಾಗಿದೆ

Vivo Y55s

Vivo Y55s

  • Share this:
    ವಿವೋ (Vivo) ಚೀನಾದಲ್ಲಿ Vivo Y55s 5G ಅನ್ನು ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್​ಫೋನ್​ನಲ್ಲಿ  6,000mAh ಲಿಥಿಯಂ ಬ್ಯಾಟರಿ ಬ್ಯಾಟರಿ ಅಳವಡಿಸಲಾಗಿದ್ದು, ವಿವೋ ಕಂಪನಿಯ ಅಧಿಕ ಬ್ಯಾಟರಿ ಆಯ್ಕೆಯಲ್ಲಿ ಇದು ಮೊದಲ ಸ್ಮಾರ್ಟ್​ಫೋನ್ ಆಗಿದೆ. ಇದರ ಹೊರತಾಗಿ ವಿವೋ Y55s ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. 6.58 ಇಂಚಿನ ಡಿಸ್​ಪ್ಲೇ, 50MP ಕ್ಯಾಮೆರಾ ಹೊಂದಿದ್ದು, ಬೆಲೆಯೂ 20 ಸಾವಿರ ರೂಪಾಯಿಯಾಗಿದೆ

    ವಿವೋ Y55s ಸ್ಮಾರ್ಟ್​ಫೋನ್ Android 11 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಕೇವಲ 199.8 ಗ್ರಾಂ ತೂಗುತ್ತದೆ. ಇದು 3.5 ಎಂಎಂ ಆಡಿಯೊ ಜಾಕ್​ನೊಂದಿಗೆ ಪರಿಚಯಿಸಿದೆ. ವಿವೋ Y55s 5G ಅನ್ನು ನೀಲಿ, ಗುಲಾಬಿ ಅಥವಾ ಕಪ್ಪು ಬಣ್ಣದ ಆಯ್ಕೆಯಲ್ಲಿ ಪರಿಚಯಿಸಲಾಗಿದೆ ಮತ್ತು ಇದರ ಬೆಲೆ CNY 1,699 ಆಗಿದೆ.

    Vivo Y55s ಬಿಡುಗಡೆ ವಿಚಾರವಾಗಿ ಕಂಪನಿಯು ತನ್ನ ವೆಬ್ಸೈಟ್ ಹೇಳಿಕೊಂಡಿದೆ. ಆದರೆ ಚಿಲ್ಲರೆ ವ್ಯಾಪಾರಿಗಳಲ್ಲಿ ಮಾರಾಟಕ್ಕೆ ಇನ್ನೂ ಲಭ್ಯವಾಗಿಲ್ಲ. ವಿವೋ Y55s ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಇಲ್ಲ.

    Vivo Y55s ವಿಶೇಷಣಗಳು

    Vivo Y55s 6.58-ಇಂಚಿನ ಡ್ಯೂಡ್ರಾಪ್ ನಾಚ್ ಡಿಸ್ಪ್ಲೇ ಹೊಂದಿದೆ. ಪರದೆಯು 1080 x 2408 ಪಿಕ್ಸೆಲ್​ಗಳನ್ನು ಪೂರ್ಣ HD+ ರೆಸಲ್ಯೂಶನ್ ಮತ್ತು 60 Hz ಪ್ರಮಾಣಿತ ರಿಫ್ರೆಶ್ ದರದೊಂದಿಗೆ ಬೆಂಬಲಿಸುವ LCD ಪ್ಯಾನೆಲ್ ನೀಡಲಾಗಿದೆ. ಇದು 6000mAh ಬ್ಯಾಟರಿಯೊಂದಿಗೆ ಬರುತ್ತದೆ. ಸ್ಮಾರ್ಟ್​ಫೋನಿನ ಕೆಳಭಾಗದಲ್ಲಿರುವ USB-C ಪೋರ್ಟ್ಗೆ ಜೊತೆಗೆ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ವಿವೋ Y55s ಅನ್ನು MediaTek ಡೈಮೆನ್ಸಿಟಿ 700 SoC ಯಿಂದ 8GB LPDDR4x RAM ನೊಂದಿಗೆ ಜೋಡಿಸಲಾಗಿದೆ. ಇದು 128GB pf UFS 2.1 ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ.

    ಇದನ್ನು ಓದಿ: Fake Website: ಫೇಕ್ ವೆಬ್​ಸೈಟ್ ಎಂದು ತಿಳಿಯೋದು ಹೇಗೆ? ಮಾಹಿತಿ ಇಲ್ಲಿದೆ

    Vivo Y55s ಕ್ಯಾಮೆರಾ

    Vivo Y55s 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಸಂವೇದಕವನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್​ಗಳ ಏಕೈಕ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

    ಇದನ್ನು ಓದಿ: ಹುಡುಕಾಡ್ರೋ ಹುಡುಕಾಡ್ರಿ! ಈ ವರ್ಷ Googleನಲ್ಲಿ ಅತಿ ಹೆಚ್ಚು ಹುಡುಕಾಡಿದ ವಿಚಾರ ಯಾವುದು ಗೊತ್ತಾ?



    Vivo Y55s ಇತರೆ ವೈಶಿಷ್ಟ್ಯಗಳು

    Vivo Y55s ನಲ್ಲಿ ಲಭ್ಯವಿರುವ ಇತರ ವೈಶಿಷ್ಟ್ಯಗಳೆಂದರೆ ಡ್ಯುಯಲ್ ಸಿಮ್ ಬೆಂಬಲ, 5G, Wi-Fi 5, ಬ್ಲೂಟೂತ್ 5.1, GPS, ಮೈಕ್ರೊ SD ಕಾರ್ಡ್ ಸ್ಲಾಟ್ ಮತ್ತು ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಇದರಲ್ಲಿದೆ.
    Published by:Harshith AS
    First published: