ಬಿಡುಗಡೆ ಸಿದ್ಧವಾದ ವಿವೋ ಐಕ್ಯೂಒಒ ಪ್ರೊ 5G ಸ್ಮಾರ್ಟ್​ಫೋನ್​

ಹೊಸ ಜನರೇಷನ್​ಗಾಗಿ ಸಿದ್ಧವಾದ ವಿವೋ ಐಕ್ಯೂಒಒ ಪ್ರೊ ಸ್ಮಾರ್ಟ್​ಫೋನ್​ ಇದೇ ತಿಂಗಳು ಗ್ರಾಹಕರ ಕೈ ಸೇರಲಿದೆ. ಭಾರತದಲ್ಲಿ ಇದರ ಬೆಲೆ 45,861 ರೂ.ವೆಂದು ಅಂದಾಜಿಸಲಾಗಿದೆ.

news18
Updated:August 9, 2019, 9:47 AM IST
ಬಿಡುಗಡೆ ಸಿದ್ಧವಾದ ವಿವೋ ಐಕ್ಯೂಒಒ ಪ್ರೊ 5G ಸ್ಮಾರ್ಟ್​ಫೋನ್​
ವಿವೋ ಐಕ್ಯೂಒಒ ಪ್ರೊ 5G ಸ್ಮಾರ್ಟ್​ಫೋನ್​
  • News18
  • Last Updated: August 9, 2019, 9:47 AM IST
  • Share this:
ಚೀನಾದ ಮೂಲದ ವಿವೋ ಸ್ಮಾರ್ಟ್​ಫೋನ್​ ಕಂಪೆನಿ ಹೊಸ ಐಕ್ಯೂಒಒ ಪ್ರೊ 5G ಸ್ಮಾರ್ಟ್​ಫೋನ್​ ತಯಾರಿಸಿದ್ದು, ಆಗಸ್ಟ್​ 22ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಮೈಕ್ರೊಬ್ಲಾಗಿಂಗ್​​ ವೆಬ್​ಸೈಟ್​ ತಿಳಿಸಿದೆ.  ನೂತನ ಸ್ಮಾರ್ಟ್​ಫೋನ್​ ಕ್ವಾಲ್​ಕ್ಯಾಂ ಸ್ನಾಪ್​​​ಡ್ರ್ಯಾಗನ್​​ 855 ಪ್ಲಸ್​ ಪ್ರೊಸೆಸರ್​ ಹೊಂದಿದ್ದು, ವಿಶೇಷ ಫೀಚರ್​ ಅನ್ನು ಅಳವಡಿಸಿಕೊಂಡಿದೆ.

ವಿವೋ ಐಕ್ಯೂಒಒ ಪ್ರೊ ಸ್ಮಾರ್ಟ್​ಪೋನ್​ ಬಿಡುಗಡೆಗೂ ಮುನ್ನ​ ಫೋಟೋಗಳು ಲೀಕ್​ ಆಗಿದೆ ಎಂದು ಮಾಹಿತಿಗಳು ಹರಿದಾಡುತ್ತಿತ್ತು. ಜೊತೆಗೆ ಈ ಸ್ಮಾರ್ಟ್​ಫೋನ್​ ತ್ರಿವಳಿ ಕ್ಯಾಮೆರಾವನ್ನು ಹೊಂದಿದ್ದು, 8GB RAM​ ಹಾಗೂ 128GB ಇಂಟರ್​ ಸ್ಟೋರೇಜ್​ಯಿದೆಯೆಂದು ಹೇಳಲಾಗಿದೆ. ಅಂತೆಯೇ, ಬಳಕೆಗಾಗಿ 4,500 mAh​ ಬ್ಯಾಟರಿಯನ್ನು ಅಳವಡಿಸಲಾಗಿದೆ ಎಂಬ ಸುದ್ದಿ ಹಬ್ಬಿತ್ತು.

ಹೊಸ ಜನರೇಷನ್​ಗಾಗಿ ಸಿದ್ಧವಾದ ವಿವೋ ಐಕ್ಯೂಒಒ ಪ್ರೊ ಸ್ಮಾರ್ಟ್​ಫೋನ್​ ಇದೇ ತಿಂಗಳು ಗ್ರಾಹಕರ ಕೈ ಸೇರಲಿದೆ. ಭಾರತದಲ್ಲಿ ಇದರ ಬೆಲೆ 45,861 ರೂ.ವೆಂದು ಅಂದಾಜಿಸಲಾಗಿದೆ.

ಇತ್ತೀಚೆಗೆ ವಿವೋ ಐಕ್ಯೂಒಒ ನಿಯೋ ಗೇಮಿಂಗ್​ ಸ್ಮಾರ್ಟ್​ಪೋನ್​ ಅನ್ನು ಚೀನಾ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್​ಪೋನ್​ ಸ್ನಾಪ್​​​ಡ್ರ್ಯಾಗನ್​ 845 ಚಿಪ್​ಸೆಟ್​​ ಜೊತೆಗೆ 8GB RAM​ ಹೊಂದಿದೆ.
First published:August 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...