ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ (Smartphone Market) ಹೊಸ ಮಾದರಿಯಲ್ಲಿ ಮೊಬೈಲ್ಗಳು ಬಿಡುಗಡೆಯಾಗುತ್ತಲೇ ಇದೆ. ಕಂಪೆನಿಗಳು ಕೂಡ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುವ ಉದ್ದೇಶದಿಂದ ಗುಣಮಟ್ಟದ ಫೀಚರ್ಸ್ ಅನ್ನು ಒಳಗೊಂಡ ಸ್ಮಾರ್ಟ್ ಫೋನ್ಗಳನ್ನು ಪರಿಚಯಿಸುತ್ತಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಕಂಪನಿಗಳಲ್ಲಿ ವಿವೋ ಕಂಪೆನಿ (Vivo Company) ಕೂಡ ಒಂದು. ಈ ಕಂಪೆನಿ ಇದೀಗ ಮಾರುಕಟ್ಟೆಗೆ ಹೊಸ ಸ್ಮಾರ್ಟ್ಫೋನ್ ಅನ್ನು ಪರಿಚಯಿಸಲು ರೆಡಿಯಾಗಿದೆ. ವಿವೋ ವೈ ಸೀರಿಸ್ನ (Vivo Y Series) ಅಡಿಯಲ್ಲಿ ಕಂಪೆನಿ ಇದೀಗ ಸ್ಮಾರ್ಟ್ಫೋನ್ ಅನ್ನು ಲಾಂಚ್ ಮಾಡಲು ಸಜ್ಜಾಗಿದ್ದು, ಬಹಳಷ್ಟು ವಿಶೇಷ ಫೀಚರ್ಸ್ಗಳನ್ನು ಹೊಂದಿರಲಿದೆ ಎಂದು ವರದಿಗಳು ಹೇಳಿವೆ.
ಸದ್ಯ ಮಾರುಕಟ್ಟೆಯಲ್ಲಿ ಭಾರೀ ಸುದ್ದಿಯಲ್ಲಿರುವ ಸ್ಮಾರ್ಟ್ಫೋನ್ ಎಂದರೆ ವಿವೋ ಕಂಪೆನಿಯ ಸ್ಮಾರ್ಟ್ಫೋನ್ಗಳು. ವಿವೋ ಕಂಪೆನಿ ವಿವೋ ವೈ100 ಎಂಬ ಸ್ಮಾರ್ಟ್ಫೋನ್ ಅನ್ನು ಲಾಂಚ್ ಮಾಡಲು ತಯಾರಾಗಿದೆ. ಇದರ ಬಿಡುಗಡೆ ದಿನಾಂಕ ಯಾವಾಗ ಎಂದು ಕಂಪೆನಿ ಇದುವರೆಗೂ ತಿಳಿಸಿಲ್ಲ. ಆದರೆ ಇದರ ಫೀಚರ್ಸ್ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಇದರ ಡೀಟೇಲ್ಸ್ ಇಲ್ಲಿದೆ.
ಟಿಪ್ಸ್ಟಾರ್ ಅವರ ವರದಿಯ ಪ್ರಕಾರ
ಟಿಪ್ಸ್ಟರ್ ಪರಾಸ್ ಗುಗ್ಲಾನಿಯವರ ವರದಿಯ ಪ್ರಕಾರ ವಿವೋ ಕಂಪೆನಿ ತನ್ನ ವೈ ಸೀರಿಸ್ನಲ್ಲಿ ವಿವೋ ವೈ100 ಎಂಬ ಸ್ಮಾರ್ಟ್ಫೋನ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಲು ತಯಾರಾಗುತ್ತಿದೆ ಹಾಗೂ ಇದರ ಪ್ರಚಾರದ ಸಿದ್ಧತೆಗಳು ಸಹ ಈಗಾಗಲೇ ಪ್ರಾರಂಭವಾಗಿದೆ ಎಂದು ವರದಿ ಮಾಡಿದ್ದಾರೆ. ಹಾಗೆಯೇ ಟಿಪ್ಸ್ಟರ್ ಹಂಚಿಕೊಂಡ ಸ್ಕ್ರೀನ್ಶಾಟ್ನ ಪ್ರಕಾರ ವಿವೋ ಕಂಪೆನಿಯು ಫೋನ್ನ ಮಾರ್ಕೆಟಿಂಗ್ ವಿಡಿಯೋವನ್ನು ಶೀಘ್ರದಲ್ಲೇ ಲಾಂಚ್ ಮಾಡುತ್ತದೆ ಎಂದು ತಿಳಿಸುತ್ತದೆ. ಅಲ್ಲದೇ ಬಹುಶಃ ಈ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಏಸರ್ ಕಂಪೆನಿಯಿಂದ ಏಕಕಾಲದಲ್ಲಿ 3 ಲ್ಯಾಪ್ಟಾಪ್ಗಳ ಅನಾವರಣ! ಬೆಲೆ ಎಷ್ಟು ಗೊತ್ತಾ?
ಪ್ರೊಸೆಸರ್ ಸಾಮರ್ಥ್ಯದ ಬಗ್ಗೆ ನಿರೀಕ್ಷೆ
ವಿವೋ ವೈ100 ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 900ಎಸ್ಓಸಿ ಪ್ರೊಸೆಸರ್ ಅನ್ನು ಒಳಗೊಂಡಿರುವುದು ಬಹುತೇಕ ಖಚಿತ ಆಗಿದೆ. ಈ ಸ್ಮಾರ್ಟ್ಫೋನ್ ಚಿಪ್ಸೆಟ್ 2.4GHz ಗರಿಷ್ಠ ವೇಗ ಹೊಂದಿರುವಮಥಹ ಸಾಧ್ಯತೆ ಇದೆ ಎನ್ನಲಾಗಿದೆ. ಇದರೊಂದಿಗೆ ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13 ಓಎಸ್ ಜೊತೆಗೆ ಫಂಕ್ಷನ್ ಓಎಸ್ 13 ಸಪೋರ್ಟ್ ಅನ್ನು ಸಹ ಪಡೆದಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಇದಕ್ಕೆ ಪೂರಕವಾಗಿ 8 ಜಿಬಿ ರ್ಯಾಮ್ ಸ್ಟೋರೇಜ್ ಆಯ್ಕೆಯಲ್ಲಿ ಬರುವ ಸಾಧ್ಯತರ ಇದೆ ಎಂದು ಹೇಳಿದ್ದಾರೆ.
ಕೆಲವು ವರದಿಗಳ ಪ್ರಕಾರ
ಕೆಲವು ಸೋರಿಕೆಯಾಗಿರುವ ಮಾಹಿತಿ ಪ್ರಕಾರ ವಿವೋ ವೈ100 ಸ್ಮಾರ್ಟ್ಫೋನ್ ಡಿಸ್ಪ್ಲೇ ವಿನ್ಯಾಸದಲ್ಲಿ 6 ಇಂಚಿನ ಪೂರ್ಣ ಹೆಚ್ಡಿ ಪ್ಲಸ್ ಡಿಸ್ಪ್ಲೇ ಅನ್ನು ಒಳಗೊಂಡಿರಲಿದೆ ಎಂದು ವರದಿಯಾಗಿದೆ. ಹಾಗೆಯೇ ಈ ಡಿಸ್ಪ್ಲೇಯ ಪ್ರತಿ ಇಂಚಿನ ಸಾಂದ್ರತೆಯು 440 ಪಿಕ್ಸೆಲ್ ಅನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಸ್ಮಾರ್ಟ್ಫೋನ್ನ ಬೆಲೆಯ ಬಗ್ಗೆ ಕಂಪೆನಿ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೂ ಕೆಲವು ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 20,000 ರೂಪಾಯಿಗಳಿಂದ 25,000 ರೂಪಾಯಿಗಳ ಮಧ್ಯದಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ.
ವಿವೋ ಕಂಪೆನಿ ಇತ್ತೀಚೆಗೆ ತನ್ನ ಬ್ರಾಂಡ್ನ ಅಡಿಯಲ್ಲಿ ವಿವೋ ವೈ53ಟಿ ಎಂಬ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿತ್ತು. ಇದು ತನ್ನ ಫೀಚರ್ಸ್ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ರೀತಿಯಲ್ಲಿ ಎಲ್ಲರ ಗಮನ ಸೆಳೆದಿತ್ತು. ವಿವೋ ಕಂಪೆನಿ ವಿಶೇಷವಾಗಿ ಜನಪ್ರಿಯತೆಯನ್ನು ಹೊಂದಿದ್ದು ಅದರ ಕ್ಯಾಮೆರಾ ಫೀಚರ್ಸ್ ಮೂಲಕ. ಅದೇ ರೀತಿ ವಿವೋ ವೈ53ಟಿ ಸ್ಮಾರ್ಟ್ಫೋನ್ನಲ್ಲಿಯೂ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಅಳವಡಿಸಲಾಗಿದೆ. ಅಲ್ಲದೇ ಇದು 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಒಳಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ