HOME » NEWS » Tech » VISIT THIS WEBSITE TO WATCH FREE MOVIES DURING LOCKDOWN PERIOD COVID19 LOCKDOWN EXTEND VB

ಲಾಕ್​​ಡೌನ್ ನಡುವೆ ಫ್ರೀ ಆಗಿ ಸಿನಿಮಾ ವೀಕ್ಷಿಸಲು ಈ ವೆಬ್​ಸೈಟ್​​ಗೆ ಭೇಟಿ ನೀಡಿ!

Hulu: ಇದರಲ್ಲಿ ನಿಮ್ಮ ಮೆಚ್ಚಿನ ಸಿನಿಮಾ, ಟಿವಿ ಶೋಗಳನ್ನು ಉಚಿತವಾಗಿ ನೋಡಬಹುದು. ಇದು ಜಾಹಿರಾತಿನಿಂದ ಸಪೋರ್ಟ್‌ ಪಡೆದಿದ್ದರೂ ನೆಟ್​ಫ್ಲಿಕ್ಸ್​ಗಿಂತಲೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

news18-kannada
Updated:April 11, 2020, 3:22 PM IST
ಲಾಕ್​​ಡೌನ್ ನಡುವೆ ಫ್ರೀ ಆಗಿ ಸಿನಿಮಾ ವೀಕ್ಷಿಸಲು ಈ ವೆಬ್​ಸೈಟ್​​ಗೆ ಭೇಟಿ ನೀಡಿ!
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ವೈರಸ್ ಲಾಕ್​​ಡೌನ್​ನಿಂದಾಗಿ ಹೆಚ್ಚಿನ ಜನರು ಮನೆಯಲ್ಲಿಯೇ ಸಮಯ ಕಳೆಯುವಂತಾಗಿದೆ. ಹೀಗೆ ಮನೆಯಲ್ಲಿ ಕೂತು ಕೂತು ಬೋರ್ ಆಗಿರುವವರು ಅಮೇಜಾನ್ ಪ್ರೈಮ್ ಅಥವಾ ನೆಟ್​ಫ್ಲಿಕ್ಸ್​ನಲ್ಲಿ ಸಿನಿಮಾ ನೋಡುತ್ತಾರೆ. ಆದರೆ, ಇದಕ್ಕೆ ಪಾವತಿಸಲು ಹಣ ಇಲ್ಲದವರು ಏನು ಮಾಡಬೇಕು?. ಅಂತರವರಿಗೆ ಫ್ರೀ ಆಗಿ ಹಿಟ್ ಸಿನಿಮಾ ವೀಕ್ಷಿಸಲು ಕೆಲವೊಂದು ವೆಬ್​ಸೈಟ್​ಗಳ ಮಾಹಿತಿ ಇಲ್ಲಿದೆ.

 

Crackle

ಇದರಲ್ಲಿ ಬಡೆಸ್ಟ್​ ಬ್ಲೂರೇ ಮಟ್ವದ ವೀಡಿಯೋಗಳನ್ನು ಸ್ಟ್ರೀಮ್​ ಮಾಡಬಹುದು, ಹೊಸದಾಗಿ ಯಾವುದೇ ವೀಡಿಯೋಗಳು ಅಥವಾ ಸಿನಿಮಾಗಳು ರಿಲೀಸ್​ ಆದರೆ ಅತ್ಯಂತ ಬೇಗನೇ ಈ ವೆಬ್​ಸೈಟ್​ನಲ್ಲಿ ದೊರಕುತ್ತದೆ. ಸೋನಿ ಬೆಂಬಲಿತ ವೆಬ್​ಸೈಟ್​ ಆಗಿದೆ.

Airtel: ಏರ್​​ಟೆಲ್​ ಪ್ರಿಪೇಯ್ಡ್​-ಪೋಸ್ಟ್​​ಪೇಯ್ಡ್​ ಗ್ರಾಹಕರಿಗೆ ಅಮೆಜಾನ್​ ಪ್ರೈಮ್​ ಉಚಿತ ಮೆಂಬರ್​ಶಿಪ್​!

Tubi TV

ಈ ವೆಬ್​ ಸೈಟ್​ನಲ್ಲಿ ಹೆಚ್ಚು ಜನಪ್ರಿಯ ಸಿನಿಮಾಗಳು, ಧಾರಾವಾಹಿಗಳು ಉಚಿತವಾಗಿಯೇ ದೊರಕುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಹೀರಾತುಗಳು ಸಹ ಇಲ್ಲದಿರುವುದರಿಂದ ನಿಮ್ಮ ಸಿನಿಮಾ ವೀಕ್ಷಣೆಗೆ ಯಾವುದೇ ಅಡತಡೆಗಳು ಇರುವುದಿಲ್ಲ.fmovies.pe |All Films|

ಈ ತಾಣದಲ್ಲಿ ನಿಮಗೆ ಸುಲಭವಾಗಿ ಸಿನಿಮಾಗಳನ್ನು ಪಡೆಯಬಹುದು. ಇದರ ವಿಶೇಷವೆಂದರೆ ಈ ತಾಣದಲ್ಲಿ ಸಿನಿಮಾಗಳನ್ನು ಆಯಾ ಪ್ರದೇಶಕ್ಕೆ ಅನುಸಾರವಾಗಿ ವಿಂಗಡಣೆ ಮಾಡಲಾಗಿದೆ.

Viewster

ಇದರಲ್ಲಿ ನಿಮಗೆ ಅನಿಮೇಶನ್​ಗೆ ಸಂಬಂಧಿಸಿದ ಸಿನಿಮಾ, ವಿಡಿಯೋಗಳು ಲಭ್ಯವಿರುತ್ತದೆ. ಡಾಕ್ಯುಮೆಂಟರಿಗಳು ಸೇರಿದಂತೆ ಹಲವಾರು ಉತ್ತಮ ಸಿನಿಮಾಗಳು ಇಲ್ಲಿ ಲಭ್ಯವಿದೆ.

Hulu

ಇದರಲ್ಲಿ ನಿಮ್ಮ ಮೆಚ್ಚಿನ ಸಿನಿಮಾ, ಟಿವಿ ಶೋಗಳನ್ನು ಉಚಿತವಾಗಿ ನೋಡಬಹುದು. ಇದು ಜಾಹಿರಾತಿನಿಂದ ಸಪೋರ್ಟ್‌ ಪಡೆದಿದ್ದರೂ ನೆಟ್​ಫ್ಲಿಕ್ಸ್​ಗಿಂತಲೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ನಿಮ್ಮ ಫೋನ್​ನಲ್ಲಿ ವಾಟ್ಸ್​ಆ್ಯಪ್ ಇನ್​​ಸ್ಟಾಲ್​ ಮಾಡದೇಯೂ ಬಳಸಬಹುದು; ಇಲ್ಲಿದೆ ಟ್ರಿಕ್ಸ್!

Yesmoviesc.co

ಅತ್ಯಂತ ಕಡಿಮೆ ಜಾಹೀರಾತಿನಿಂದ ಕೂಡಿರುವ ಈ ತಾಣದಲ್ಲಿ ಉತ್ತಮ ಗುಣಮಟ್ಟದ ನೂತನವಾಗಿ ಬಿಡುಗಡೆಯಾಗಿರುವ ಸಿನಿಮಾಗಳು ದೊರಕುವುದು ವಿರಳ, ಆದರೆ ಹೆಚ್ಚು ಜನಪ್ರಿಯ ಸಿನಿಮಾಗಳು ಮಾತ್ರಾ ಸಿಗುತ್ತದೆ.

Viewster

ಇದರಲ್ಲಿ ಉಚಿತ ಸಿನಿಮಾ ಮತ್ತು ಟಿವಿ ಶೋಗಳನ್ನು ಸ್ಟ್ರೀಮಿಂಗ್‌ ಮಾಡಬಹುದಾಗಿದ್ದು, ಅದ್ಭುತ ಸಿನಿಮಾ ವಿಷಯಗಳನ್ನೂ ಒಳಗೊಂಡಿದೆ.

Pluto TV

ಇದು ಬೆಸ್ಟ್​ ಟಿವಿ ಚಾನೆಲ್​ಗಳನ್ನು ಉಚಿತವಾಗಿ ನೇರ ವೀಕ್ಷಣೆಗೆ ಲಭ್ಯವಿರುತ್ತದೆ, Fox Sportsನಂತಹ ಚಾಲೆನ್​ನಿಂದ ಹಿಡಿದು ಹೆಚ್ಚಿನ ಚಾನೆಲ್​ಗಳು ಇಲ್ಲಿ ಲಭ್ಯವಿದೆ.

Classic Cinema Online

ವಿಂಟೇಜ್​ ಅಥವಾ ಹಳೆಯ ಕಾಲದ ಬ್ಲಾಕ್ ಆ್ಯಂಡ್ ವೈಟ್​ ಸಿನಿಮಾಗಳನ್ನು ವೀಕ್ಷಿಸಲು ಬಯಸುವವರಿಗೆ ಈ ತಾಣ ಉತ್ತಮ, ಎಲ್ಲಾ ವಿಂಟೇಜ್​ ಕಲೆಕ್ಷನ್​ ಸಿನಿಮಾಗಳು ಇಲ್ಲಿ ಲಭ್ಯವಿರುತ್ತದೆ.
First published: April 11, 2020, 3:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories