• Home
 • »
 • News
 • »
 • tech
 • »
 • Isro Rocket Launch: ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ ದೇಶದ ಮೊದಲ ಖಾಸಗಿ ರಾಕೆಟ್ ವಿಕ್ರಮ್ ಎಸ್

Isro Rocket Launch: ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ ದೇಶದ ಮೊದಲ ಖಾಸಗಿ ರಾಕೆಟ್ ವಿಕ್ರಮ್ ಎಸ್

ಭಾರತದ ಮೊದಲ ಖಾಸಗಿ ರಾಕೆಟ್

ಭಾರತದ ಮೊದಲ ಖಾಸಗಿ ರಾಕೆಟ್

ಇದು ಇಸ್ರೋದಿಂದ  ಭಾರತದಲ್ಲಿ ಉಡಾವಣೆಯಾಗುತ್ತಿರುವ ಮೊದಲ ಖಾಸಗಿ ರಾಕೆಟ್ ಆಗಿದೆ. ಇದೀಗ ಇದು ಯಶಸ್ವಿಯಾಗಿ ಉಡಾವಣೆಯಾಗಿದೆ ಎಂದು ಹೇಳಿದ್ದಾರೆ.

 • Share this:

  ಭಾರತದ ಪ್ರಥಮ ಖಾಸಗಿ (Private) ನಿರ್ಮಾಣದ ಉಡಾವಣಾ ರಾಕೆಟ್ (Rocket) ವಿಕ್ರಮ್ ಎಸ್ (Vikram-S) ಯಶಸ್ವಿಯಾಗಿ ಉಡಾವಣೆಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಲಾಂಚ್ ಪ್ಯಾಡ್ ನಿಂದ ಇಂದು (ನವೆಂಬರ್ 18) ಬೆಳಗ್ಗೆ 11:30ಕ್ಕೆ ನಭಕ್ಕೆ ಹಾರಿದೆ. ಹೈದ್ರಾಬಾದ್‌ ಮೂಲದ ಸ್ಕೈರೂಟ್‌ ಏರೋಸ್ಪೇಸ್‌ (Skyroot Aerospace) ಸಂಸ್ಥೆ ತಯಾರಿಸಿದ ದೇಶದ ಮೊದಲ ಖಾಸಗಿ ರಾಕೆಟ್‌ ಇದಾಗಿದ್ದು, ಉಡಾವಣೆ ಯಶಸ್ವಿಯಾಗಿರುವ ಬಗ್ಗೆ INSPACe ಅಧ್ಯಕ್ಷರು ಟ್ವೀಟ್‌ ಮೂಲಕ ಖಚಿತಪಡಿಸಿದ್ದಾರೆ. ಐತಿಹಾಸಿಕ ಉಡಾವಣೆಗೆ ಸಾಕ್ಷಿಯಾಗಿ ಕೇಂದ್ರ ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ಸೇರಿ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


  ಇದು ಇಸ್ರೋದಿಂದ  ಭಾರತದಲ್ಲಿ ಉಡಾವಣೆಯಾಗುತ್ತಿರುವ ಮೊದಲ ಖಾಸಗಿ ರಾಕೆಟ್ ಆಗಿದೆ. ಇದೀಗ ಇದು ಯಶಸ್ವಿಯಾಗಿ ಉಡಾವಣೆಯಾಗಿದೆ ಎಂದು ಹೇಳಿದ್ದಾರೆ.


  ವಿಕ್ರಂ ಸಾರಾಭಾಯ್‌ ಹೆಸರು ನಾಮಕರಣ


  'ಪ್ರಾರಂಭ್' ಎಂದು ಹೆಸರಿಸಲಾದ ಈ ಮಿಷನ್ ದೇಶದಿಂದ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಮತ್ತು ನಿರ್ವಹಿಸುವ ಉಡಾವಣಾ ರಾಕೆಟ್​​ನ ಮೊದಲ ಉಡಾವಣೆಯಾಗಿದೆ. 6 ಮೀಟರ್ ಎತ್ತರದ ಉಡಾವಣಾ ವಾಹನ ವಿಕ್ರಮ್-ಎಸ್ ಗೆ ಭಾರತದ ಬಾಹ್ಯಾಕಾಶ ವಲಯದ ಪಿತಾಮಹ ಎಂಬ ಹಿರಿಮೆ ಹೊಂದಿರುವ ವಿಕ್ರಂ ಸಾರಾಭಾಯ್‌ ಅವರ ಹೆಸರನ್ನು ಇಡಲಾಗಿದೆ. ಜೂನ್ 2020ರಲ್ಲಿ ಖಾಸಗಿ ಉದ್ಯಮದ ಭಾಗವಹಿಸುವಿಕೆಗಾಗಿ ಸರ್ಕಾರವು ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸಕ್ತಿವಹಿಸಿದ ನಂತರ ಇದು ಭಾರತೀಯ ಸಂಸ್ಥೆಯ ಮೊದಲ ದೊಡ್ಡ ಮೈಲಿಗಲ್ಲಾಗಿದೆ.


  ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಸದ್ಯದ ಟ್ರೆಂಡಿಂಗ್ ಜಾಬ್, ಏಕೆ ಗೊತ್ತೇ?


  ಸ್ಪೇಸ್‌ಎಕ್ಸ್, ಒನ್‌ವೆಬ್, ಪ್ಲಾನೆಟ್ ಲ್ಯಾಬ್ಸ್ ಮತ್ತು ಸ್ಪೈರ್ ಗ್ಲೋಬಲ್‌ನಂತಹ ಬಾಹ್ಯಾಕಾಶ ಖಾಸಗಿ ವಲಯದ ತಯಾರಿಕೆಯಲ್ಲಿ ವಿಕ್ರಮ್-ಎಸ್ ಭಾರತದ ಮೊದಲ ಹೆಜ್ಜೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.


  Vikram S is the country s first private rocket that successfully launched
  ಭಾರತದ ಮೊದಲ ಖಾಸಗಿ ರಾಕೆಟ್


  ಇತ್ತೀಚಿನ ಲಭ್ಯವಿರುವ ಡೇಟಾದ ಆಧಾರದ ಮೇಲೆ, ದೇಶವು 100 ಕ್ಕೂ ಹೆಚ್ಚು ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳನ್ನು ಹೊಂದಿದ್ದು, ಅದರಲ್ಲಿ 47 ಅನ್ನು 2021ರಲ್ಲಿ, 2020 ರಲ್ಲಿ 21 ಮತ್ತು 2019 ರಲ್ಲಿ ಹನ್ನೊಂದು ಸ್ಟಾರ್ಟ್‌ಅಪ್‌ ಅನ್ನು ಸ್ಥಾಪಿಸಲಾಯಿತು.


  ವಿಕ್ರಮ್-ಎಸ್ ವಿಶೇಷತೆ


  ವಿಕ್ರಮ್ ರಾಕೆಟ್‌ಗಳು ಮೂರು ಹಂತದಲ್ಲಿ ಬರುತ್ತಿದ್ದು, ಕ್ರಮವಾಗಿ ವಿಕ್ರಮ್ 1, 2 ಹಾಗೂ 3 ಆಗಿವೆ. ಇವುಗಳನ್ನು ಕಾರ್ಬನ್ ಸಂಯುಕ್ತಗಳು ಹಾಗೂ ತ್ರೀಡಿ ಪ್ರಿಂಟೆಡ್ ಮೋಟರ್‌ಗಳನ್ನು ಬಳಸಿ ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗಿದೆ.


  ವಿಕ್ರಮ್ 1 ರಾಕೆಟ್‌ನ್ನು 290 ಕೆಜಿ ತೂಕದ ಉಪಗ್ರಹಗಳನ್ನು ಸನ್ ಸಿಂಕ್ರೊನಸ್ ಪೋಲಾರ್ ಆರ್ಬಿಟ್‌ಗೆ (ಎಸ್ಎಸ್‌ಪಿಓ) ಜೋಡಿಸಲು ಹಾಗೂ 480 ಕೆಜಿ ತೂಕವನ್ನು 500 ಕಿಲೋಮೀಟರ್ ದೂರದ ಲೋ ಅರ್ತ್ ಆರ್ಬಿಟ್ (ಎಲ್ಇಓ) ನಲ್ಲಿ 45 ಡಿಗ್ರಿ ಕೋನದಲ್ಲಿ ಜೋಡಿಸಲು ವಿನ್ಯಾಸಗೊಳಿಸಲಾಗಿದೆ.


  ಇನ್ನೂ ವಿಕ್ರಮ್ II, 595 ಕೆಜಿಯಿಂದ 500 ಕಿಮೀವರೆಗೆ ಸಾಗಿಸುವ ಸಾಮರ್ಥ್ಯ ಹೊಂದಿದ್ದರೆ, ವಿಕ್ರಮ್ III 815 ಕೆಜಿಯಿಂದ 500 ಕಿಮೀ ಸಾಗಿಸುವ ಸಾಮರ್ಥ್ಯದೊಂದಿಗೆ ಬರಲು ಗುರಿ ಹೊಂದಿದೆ.


  ಪೇಲೋಡ್


  ಉಡಾವಣೆಯಾದ ಸುಮಾರು 2.3 ನಿಮಿಷಗಳ ನಂತರ, ರಾಕೆಟ್ ಒಟ್ಟು 83 ಕೆಜಿ ತೂಕದ ಮೂರು ಪೇಲೋಡ್‌ಗಳೊಂದಿಗೆ 81.5 ಕಿಮೀ ಎತ್ತರವನ್ನು ತಲುಪುವ ನಿರೀಕ್ಷೆಯಿದೆ. ವಿಕ್ರಮ್-ಎಸ್ ರಾಕೆಟ್ ಸ್ಪೇಸ್ ಕಿಡ್ಜ್ ಇಂಡಿಯಾ, ಬಝೂಮ್ಕ್ ಅರ್ಮೇನಿಯಾ ಮತ್ತು ಎನ್-ಸ್ಪೇಸ್ ಟೆಕ್ ಇಂಡಿಯಾದಿಂದ ಮೂರು ಪೇಲೋಡ್‌ಗಳನ್ನು ಹೊತ್ತೊಯ್ಯಲಿದೆ. ವೇಗವರ್ಧನೆ, ಒತ್ತಡವನ್ನು ಅಳೆಯಲು ಅವು ಸಂವೇದಕಗಳನ್ನು ಹೊಂದಿವೆ.


  ಸ್ಕೈರೂಟ್ ಏರೋಸ್ಪೇಸ್


  ಸ್ಕೈರೂಟ್ ಏರೋಸ್ಪೇಸ್ ಒಂದು ಭಾರತೀಯ ಖಾಸಗಿ ಬಾಹ್ಯಾಕಾಶ ಉತ್ಪಾದನಾ ಸಂಸ್ಥೆಯಾಗಿದೆ. ಸ್ಕೈರೂಟ್ ತನ್ನದೇ ಆದ ಸರಣಿ ಉಡಾವಣಾ ವಾಹನಗಳನ್ನು, ಅದರಲ್ಲೂ ವಿಶೇಷವಾಗಿ ಸಣ್ಣ ಉಪಗ್ರಹ ಮಾರುಕಟ್ಟೆಗಾಗಿ ನಿರ್ಮಿಸುವ ಉದ್ದೇಶ ಹೊಂದಿದೆ.


  ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಚ್ಚು ಬಂಡವಾಳ ಹೊಂದಿರುವ ಈ ಸ್ಟಾರ್ಟ್-ಅಪ್‌ ಇದುವರೆಗೆ ಸುಮಾರು $68 ಮಿಲಿಯನ್ ಸಂಗ್ರಹಿಸಿದೆ, ಹೈದರಾಬಾದ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸ್ಕೈರೂಟ್ ಸಂಸ್ಥೆಯನ್ನು 2018ರಲ್ಲಿ ಮಾಜಿ ಇಸ್ರೋ ವಿಜ್ಞಾನಿಗಳು ಆರಂಭಿಸಿದ್ದರು.


  “ಇಸ್ರೊದ ಬಹಳಷ್ಟು ನಿವೃತ್ತ ಅಧಿಕಾರಿಗಳು ಸ್ಕೈರೂಟ್ ಅನ್ನು ಬೆಂಬಲಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ಖಾಸಗಿ ವಲಯವು ಸಾಕಷ್ಟು ಆದಾಯವನ್ನು ತರಬಹುದು ಮತ್ತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ”ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವೈಜ್ಞಾನಿಕ ಸಲಹೆಗಾರ ಮತ್ತು ಇಸ್ರೋದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ಮಾಜಿ ನಿರ್ದೇಶಕ ಎಂ ಸಿ. ದಾಥನ್ ಹೇಳಿದರು.


  ಮುಂದಿನ 10 ವರ್ಷಗಳಲ್ಲಿ 50,000ಕ್ಕೂ ಹೆಚ್ಚು ಉಪಗ್ರಹಗಳ ಉಡಾವಣೆಗೆ ಯೋಜನೆ


  Dewesoft ನ ಮಾಹಿತಿಯ ಪ್ರಕಾರ, ಭೂಮಿಯ ಕಕ್ಷೆಯಲ್ಲಿ ಸುಮಾರು 4,550 ಮಾನವ ನಿರ್ಮಿತ ಉಪಗ್ರಹಗಳಿದ್ದು, ಕೆಳ ಕಕ್ಷೆಯಲ್ಲಿ 3,790, ಮಧ್ಯಮ ಕಕ್ಷೆಯಲ್ಲಿ 139, ಹೆಚ್ಚು ದೀರ್ಘವೃತ್ತದ ಕಕ್ಷೆಯಲ್ಲಿ 56 ಮತ್ತು ಭೂಸ್ಥಿರ ಕಕ್ಷೆಯಲ್ಲಿ 565 ಉಪಗ್ರಹಳಿವೆ. ಪ್ರಸ್ತುತ ಮಾರ್ಗಸೂಚಿಯನ್ನು ಆಧರಿಸಿ, ಮುಂದಿನ 10 ವರ್ಷಗಳಲ್ಲಿ ಕನಿಷ್ಠ 50,000 ಹೆಚ್ಚಿನ ಉಪಗ್ರಹಗಳನ್ನು ಉಡಾವಣೆ ಮಾಡುವ ನಿರೀಕ್ಷೆಯಿದೆ.

  Published by:Prajwal B
  First published: