HOME » NEWS » Tech » VI OFFERS UNLIMITED POSTPAID DATA BUNDLE TO SELECT USERS AT RS 699 CHECK DETAILS HG

Vi offers: ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಆಯ್ಕೆಯ ಅನಿಯಮಿತ ಡೇಟಾ ಬಂಡಲ್ ಪರಿಚಯಿಸಿದ ವೊಡಾಫೊನ್ ಐಡಿಯಾ; ವಿವರ ಇಲ್ಲಿದೆ

Vodafone Idea: 100ರೂ. ಮತ್ತು 200 ರೂ ಪ್ಲಾನ್ ಮೂಲಕ 20ಜಿಬಿ ಮತ್ತು 50ಜಿಬಿ ಡೇಟಾವನ್ನು ಮಾತ್ರ ಪಡೆಯಬಹುದಾಗಿದೆ. 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

news18-kannada
Updated:June 22, 2021, 3:29 PM IST
Vi offers: ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಆಯ್ಕೆಯ ಅನಿಯಮಿತ ಡೇಟಾ ಬಂಡಲ್ ಪರಿಚಯಿಸಿದ ವೊಡಾಫೊನ್ ಐಡಿಯಾ; ವಿವರ ಇಲ್ಲಿದೆ
Vi
  • Share this:
ಟೆಲಿಕಾಂ ಕಂಪನಿಯಾದ ವೊಡಾಫೋನ್ ಐಡಿಯಾ ಅನಿಯಮಿತ ಪೋಸ್ಟ್ ಪೇಯ್ಡ್ ಡೇಟಾ ಬಂಡಲ್ ಅನ್ನು ಪರಿಚಯಿಸಿದೆ. ಗ್ರಾಹಕರ ಆಯ್ಕೆಯ ಮೇರೆಗೆ ಡೇಟಾ ಬಂಡಲ್ ಬಳಸಬಹುದಾಗಿದೆ. ಅಂದಹಾಗೆಯೇ ವಿ ಸಂಸ್ಥೆ 699 ರೂ.ವಿನ ಆಯ್ಕೆಯ ಡೇಟಾ ಬಂಡಲ್ ಅನ್ನು ಪರಿಚಯಿಸಿದೆ.

ಅಂದಹಾಗೆಯೇ ವೊಡಾಫೊನ್ ಪರಿಚಯಿಸಿರುವ ಪೋಸ್ಟ್ ಪೇಯ್ಡ್ ಪ್ಲಾನ್​ ಬಳಸಿದರೆ 6 ತಿಂಗಳ ವ್ಯಾಲಿಡಿಟಿಯ ಜತೆಗೆ ಚಂದಾದಾರರಾಗು ಆಯ್ಕೆ ನೀಡಿದೆ. ಆ್ಯಡ್-ಆನ್ ಬಂಡಲ್ ಪ್ಯಾಕ್ 399 ರೂ ಮತ್ತು 499 ರೂ.ವಿನ ವೈಯ್ಯಕ್ತಿಕ ಪೋಸ್ಟ್​ಪೇಯ್ಡ್ ಯೋಜನೆಗೆ ಅನ್ವಯಿಸುತ್ತದೆ. ಆದರೆ 699 ರೂ ಮತ್ತು 1099 ರೂ ಬೆಲೆಯ ಯೋಜನೆಯ ಮೂಲಕ ಅನಿಯಮಿತ ಡೇಟಾ ಬಳಸಬಹುದಾಗಿದೆ.

699 ರೂ.ವಿನ ಆಡ್ ಆನ್ ಬಂಡಲ್ 6 ತಿಂಗಳ ಮಾನ್ಯತೆ ಹೊಂದಿದೆ. ಅಂದರೆ ಮಾಸಿಕ ಬೆಲೆ 117 ರೂ.ಗಳಾಗಿ ಹೊರಹೊಮ್ಮಿದೆ. ಅನಿಯಮಿತ 4ಜಿ ಡೇಟಾ ಯೋಜನೆಯಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ.
Vodafone Idea ನೀಡುವ ಆಡ್ ಆನ್ ಪೋಸ್ಟ್ಪೇಯ್ಡ್ ಪ್ಲಾನ್​ಗೆ ಸಂಬಂಧಿಸಿದಂತೆ ಟೆಲ್ಕೋ 300 ರೂ.ಗೆ ಪೋಸ್ಟ್ ಪೇಯ್ಡ್ ಪ್ಲಾನ್​ಗಳನ್ನ ಆಫರ್ ಮಾಡಿದೆ. ಇದನ್ನು ಅಳವಡಿಸಿದರೆ ಯುಎಸ್ ಮತ್ತು ಕೆನಾಡಗೆ 50 ಪೈಸೆ, ಚೀನಾ ಮತ್ತು ಹಾಂಗ್ಕಾಂಗ್ಗೆ ನಿಮಿಷಕ್ಕೆ 2 ರೂ. ಬಾಂಗ್ಲದೇಶ ಮತ್ತಯ ಯುಕೆಗೆ ನಿಮಿಷಕ್ಕೆ 3 ಮತ್ತು ಆಸ್ಟ್ರೇಲಿಯಾ, ಭೂತಾನ್, ಜರ್ಮನಿ, ಕುವೈತ್, ಮಲೇಷ್ಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಸಿಂಗಾಪುರ, ಥೈಲ್ಯಾಂಡ್ಗೆ ನಿಮಿಷಕ್ಕೆ 5 ರೂ ತೆಗೆದುಕೊಳ್ಳುತ್ತದೆ.

100ರೂ. ಮತ್ತು 200 ರೂ ಪ್ಲಾನ್ ಮೂಲಕ 20ಜಿಬಿ ಮತ್ತು 50ಜಿಬಿ ಡೇಟಾವನ್ನು ಮಾತ್ರ ಪಡೆಯಬಹುದಾಗಿದೆ. 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

399 ರೂ ಪೋಸ್ಟ್​ಪೇಯ್ಡ್ ಯೋಜನೆ: ಹೊಸದಾಗಿ ಮರುಬ್ರಾಂಡ್ ಮಾಡಲಾದ ವಿ ಪೋಸ್ಟ್​ಪೇಯ್ಡ್ ಯೋಜನೆಯು ಅನಿಯಮಿತ ಎಸ್ಟಿಡಿಯೊಂದಿಗೆ 40 ಜಿಬಿ ಡೇಟಾವನ್ನು ಮತ್ತು 6 ತಿಂಗಳವರೆಗೆ 150ಜಿಬಿ ರೋಲ್ಓವರ್ ಡೇಟಾದೊಂದಿಗೆ ಸ್ಥಳೀಯ ಕರೆಗಳನ್ನು 399 ರೂಗಳಿಗೆ ನೀಡುತ್ತದೆ. ವಿ ಪೋಸ್ಟ್​​ಪೇಯ್ಡ್ ಸೇವೆಗಳಿಗೆ ಒಟಿಟಿ ಪ್ರಯೋಜನಗಳು 499ರೂ ಯೋಜನೆಯಿಂದ ಪ್ರಾರಂಭವಾಗುತ್ತವೆ.

499 ರೂ ಪೋಸ್ಟ್​ಪೇಯ್ಡ್ ಯೋಜನೆ: ಈ ಪೋಸ್ಟ್​ಪೇಯ್ಡ್ ಯೋಜನೆಯು 75ಜಿಬಿ ಡೇಟಾದ ಜತೆಗೆ 200GB ರೋಲ್ಓವರ್ ಡೇಟಾ, ಅನಿಯಮಿತ ಎಸ್​ಟಿಡಿ ಮತ್ತು ಸ್ಥಳೀಯ ಕರೆಯನ್ನು ನೀಡುತ್ತದೆ. 499 ರೂ.ಗೆ ಒಟಿಟಿ ಪ್ರಯೋಜನ ಪಡೆಯಬಹುದಾಗಿದೆ. ಅದರ ಜತೆಗೆ SMS ಸೌಲಭ್ಯ ಒದಗಿಸಿದೆ. ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್ಸ್ಟಾರ್ ಮತ್ತು ವಿ ಚಲನಚಿತ್ರಗಳು ಮತ್ತು ಟಿವಿಗೆ ವೀಕ್ಷಿಸಬಹುದಾಗಿದೆ699 ರೂ ಪೋಸ್ಟ್​ಪೇಯ್ಡ್ ಯೋಜನೆ: ಈ ಯೋಜನೆಯು ಅನಿಯಮಿತ ಡೇಟಾ ಮತ್ತು ತಿಂಗಳಿಗೆ 100 ಎಸ್ಎಂಎಸ್ ಜೊತೆಗೆ ಒಂದು ವರ್ಷದ ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್ಸ್ಟಾರ್ ಮತ್ತು ವಿ ಚಲನಚಿತ್ರಗಳು ವೀಕ್ಷಿಸುವ ಅವಕಾಶ ನೀಡಿದೆ.

1099 ರೂ ಪೋಸ್ಟ್​ಪೇಯ್ಡ್ ಯೋಜನೆ: ಅನಿಯಮಿತ ಡೇಟಾ ಮತ್ತು ತಿಂಗಳಿಗೆ 100SMS ಅನ್ನು ನೀಡುತ್ತದೆ. ಒಂದು ವರ್ಷದ ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್ಸ್ಟಾರ್ ಮತ್ತು Vi ಚಲನಚಿತ್ರಗಳು ವೀಕ್ಷಿಸಬಹುದಾಗಿದೆ. ಜತೆಗೆ ಒಂದು ವರ್ಷದ ನೆಟ್​ಫ್ಲಿಕ್ಸ್​ಗೆ ಪ್ರವೇಶವನ್ನು ನೀಡುತ್ತದೆ, ಅಮೆಜಾನ್ ಪ್ರೈಮ್​ಗೆ 1 ವರ್ಷದ ಸದಸ್ಯತ್ವ, ಮತ್ತು ಡಿಸ್ನಿ + ಹಾಟ್​ಸ್ಟಾರ್ ಮತ್ತು ವಿಐಪಿ ಪ್ರವೇಶವನ್ನು ನೀಡುತ್ತದೆ
First published: June 22, 2021, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories