Log-in to God: ಆ್ಯಪ್​ ಬಳಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ!, ‘‘ಕ್ಲಿಕ್ ಟು ಪ್ರೇ‘‘ಮತ್ತೆ ಆರಂಭಿಸಿದ ಪೋಪ್​ ಫ್ರಾನ್ಸಿಸ್​

Click to Pray: 2016ರಲ್ಲಿ ಈ ಅಪ್ಲಿಕೇಶನ್​ ಅನ್ನು ಪ್ರಾರಂಭಿಸಲಾಯಿತು. ಸದ್ಯ 2.5 ದಶಲಕ್ಷಕ್ಕೂ ಹೆಚ್ಚು ಜನರು ಡೌನ್​ಲೋಡ್​ ಮಾಡಿ ಬಳಸುತ್ತಿದ್ದಾರೆ. ಪೋಪ್​ನಿಂದ ದೈನಂದಿನ ಪ್ರಾರ್ಥನೆ ಮತ್ತು ಸಂದೇಶವನ್ನು ಈ ಆ್ಯಪ್ ಮೂಲಕ ಕೇಳಬಹುದಾಗಿದೆ. ಮಾತ್ರವಲ್ಲದೆ, ಬಳಕೆದಾರರು ಇನ್ನಿತರರಿಗೆ ಪ್ರಾರ್ಥನೆ ಕಳುಹಿಸಲು ಆ್ಯಪ್​ ಮೂಲಕ ಅವಕಾಶ ನೀಡಿದೆ.

(Photo: Google)

(Photo: Google)

  • Share this:
    Click to Pray App: ಹಸಿವಾದಾಗ ಆನ್​ಲೈನ್​ ಮೂಲಕ ನಿಮಗೆ ಬೇಕೆನಿಸಿದ ಆಹಾರ ಆರ್ಡರ್​ ಮಾಡುತ್ತೀರಿ. ಹೊಸ ಬಟ್ಟೆ ಖರೀದಿಸಬೇಕೆನಿಸದಾಗಲೂ ಆನ್​ಲೈನ್​ ಸ್ಟೋರ್​ಗೆ ತೆರಳಿ ಒಂದೇ ಕ್ಲಿಕ್​ನಲ್ಲಿ ಖರೀದಿಸುತ್ತೀರಿ. ಅಷ್ಟೇ ಏಕೆ ಸಿನಿಮಾ ಟಿಕ್​ ಕೂಡ ಆನ್​ಲೈನ್ನಲ್ಲಿ ಖರೀದಿಸಿ ಥಿಯೇಟರ್​ಗೆ ಹೋಗಿ ಸಿನಿಮಾ ನೋಡುತ್ತೀರಿ. ಅದರಂತೆ ಇದೀಗ ಪ್ರಾರ್ಥನೆ ಸಲ್ಲಿಸಬೇಕಾದರೂ ಆ್ಯಪ್​ ಬಳಸಿ ಕ್ಲಿಕ್​ ಮಾಡುವ ಆಯ್ಕೆಯನ್ನು ಪೋಪ್​ ಫ್ರಾನ್ಸಿಸ್ (Pope Francis)​ ನೀಡಿದ್ದಾರೆ.

    ಅದಕ್ಕಾಗಿಯೇ ‘‘ಕ್ಲಿಕ್​ ಟು ಪ್ರೇ’’ ಆ್ಯಪ್ (Click to Pray)​ ಮರುಪ್ರಾರಂಭಿಸಲಾಗಿದ್ದು, ಕ್ಯಾಥೋಲಿಕ್ ನಿಷ್ಠಾವಂತರ ತಮ್ಮ ಪ್ರಾರ್ಥನೆಯನ್ನು ಪ್ರಪಂಚದೆಲ್ಲೆಡೆ  ಹಬ್ಬಿಸಲು ಈ ವಿಧಾನವನ್ನು ಅನುಸರಿಸಿದೆ ಎಂದು ವ್ಯಾಟಿಕನ್​ ಮಂಗಳವಾರದಂದು ಹೇಳಿದೆ.

    2016ರಲ್ಲಿ ಈ ಅಪ್ಲಿಕೇಶನ್​ ಅನ್ನು ಪ್ರಾರಂಭಿಸಲಾಯಿತು. ಸದ್ಯ 2.5 ದಶಲಕ್ಷಕ್ಕೂ ಹೆಚ್ಚು ಜನರು ಡೌನ್​ಲೋಡ್​ ಮಾಡಿ ಬಳಸುತ್ತಿದ್ದಾರೆ. ಪೋಪ್​ನಿಂದ ದೈನಂದಿನ ಪ್ರಾರ್ಥನೆ ಮತ್ತು ಸಂದೇಶವನ್ನು ಈ ಆ್ಯಪ್ ಮೂಲಕ ಕೇಳಬಹುದಾಗಿದೆ. ಮಾತ್ರವಲ್ಲದೆ, ಬಳಕೆದಾರರು ಇನ್ನಿತರರಿಗೆ ಪ್ರಾರ್ಥನೆ ಕಳುಹಿಸಲು ಆ್ಯಪ್​ ಮೂಲಕ ಅವಕಾಶ ನೀಡಿದೆ.

    ವ್ಯಾಟಿಕನ್​ ಅಧಿಕಾರಿಗಳು ಹೇಳಿದಂತೆ ಬೀಟಾ ಬಳಕೆದಾರರ ಪರೀಕ್ಷೆಯ ಅವದೀಯ ನಂತರ ವಿಶ್ವದಾದ್ಯಂತ ಕ್ಯಾಥೋಲಿಕ್​ ಅನುಯಾಯಿಯಿಗಳು ಆ್ಯಪ್ ಬಳಸಬಹುದಾಗಿದೆ. ನವೆಂಬರ್​ 1 ರಂದು ‘‘ಕ್ಲಿಕ್​ ಟಿ ಪ್ರೇ’’ 2.0 ಅನ್ನು ಪ್ರಾರಂಭಿಸಲಾಗುವುದು ಎಂದಿದ್ದಾರೆ.

    ಪೋಪ್​ ಫ್ರಾನ್ಸಿಸ್​


    ಇದನ್ನು ಓದಿ: Apple ಮ್ಯೂಸಿಕ್ ವಾಯ್ಸ್ ಮಾಸಿಕ ಪ್ಲಾನ್ ಕೇವಲ 49 ರೂ.ನಿಂದ ಆರಂಭ!

    ಹೊಸ ಆವೃತ್ತಿ-ಏಳು ಭಾಷೆಗಳಲ್ಲಿ ಲಭ್ಯವಿರಲಿದೆ ಜೊತೆಗೆ ಹೆಚ್ಚು ವೈಯಕ್ತೀಕರಣವನ್ನು ನೀಡುತ್ತದೆ, ಬಳಕೆದಾರರಿಗೆ ಪ್ರಾರ್ಥನೆಗಳನ್ನು ನಿಗದಿಪಡಿಸಲು ಒಂದು ಕಾರ್ಯಸೂಚಿಯನ್ನು ಹೊಂದಿಸಲು ಅನುವು ಮಾಡಿಕೊಡುತ್ತದೆ, ನಿರ್ದಿಷ್ಟ ಪ್ರಾರ್ಥನೆಗಳ ಬಗ್ಗೆ ಹೆಚ್ಚು ಆಳವಾದ ಹಿನ್ನೆಲೆಯನ್ನು ಒದಗಿಸುತ್ತದೆ.

    - Log-in to God

    ಮಂಗಳವಾರದಂದು ಅಪ್ಲಿಕೇಶನ್‌ ಪುಟದಲ್ಲಿ ಪ್ರಪಂಚದಾದ್ಯಂತದ ಹಲವಾರು ಪ್ರಾರ್ಥನೆಗಳನ್ನು ಪಟ್ಟಿ ಮಾಡಿದೆ, ಅದರಲ್ಲಿ "ದಯವಿಟ್ಟು ನನ್ನ ಮಗಳಿಗಾಗಿ ಪ್ರಾರ್ಥಿಸಿ", "ನನ್ನ ಅನಾರೋಗ್ಯದ ತಾಯಿಗೆ ಪ್ರಾರ್ಥನೆ" ಮತ್ತು "ನನ್ನ ವೃತ್ತಿಜೀವನಕ್ಕಾಗಿ" ಪ್ರಾರ್ಥನೆ ಮಾಡುವ ಆಯ್ಕೆಯನ್ನು ನೀಡಿದೆ.

    ಪ್ರೊಫೈಲ್ ಅನ್ನು ರಚಿಸಿದ ನಂತರ, ಬಳಕೆದಾರರು ಪ್ರಾರ್ಥನಾ ಕಾರ್ಯಸೂಚಿಯನ್ನು ಆಯೋಜಿಸಬಹುದು, ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ದಿನದಲ್ಲಿ ಪ್ರಾರ್ಥನೆ ಮಾಡಲು ಅಧಿಸೂಚನೆಗಳು ಮತ್ತು ಜ್ಞಾಪನೆಗಳನ್ನು ಹೊಂದಿಸಬಹುದು.

    ಇದನ್ನು ಓದಿ: Google Pixel 6 ಸರಣಿ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ; ನೂತನ ಫೋನಿನ ವಿಶೇಷತೆ ಏನು?

    ಸಾಮಾಜಿಕ ಮಾಧ್ಯಮದ ಹೊರತಾಗಿ ಮತ್ತು ಅಧಿಕೃತ ವೆಬ್‌ಸೈಟ್, ದಿನಪತ್ರಿಕೆ ಮತ್ತು ರೇಡಿಯೋ ಸೇರಿದಂತೆ ವ್ಯಾಟಿಕನ್ ಚರ್ಚ್ ಸಂದೇಶವನ್ನು ಪ್ರಪಂಚದಾದ್ಯಂತ 1.3 ಬಿಲಿಯನ್ ಕ್ಯಾಥೊಲಿಕ್‌ಗಳಿಗೆ ಹರಡಲು ಅನೇಕ ಸಾಂಪ್ರದಾಯಿಕ ಮಾಧ್ಯಮ ಸಂಪನ್ಮೂಲಗಳನ್ನು ಹೊಂದಿದೆ.

    ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಸಾಕಷ್ಟು ಆ್ಯಪ್ಗಳಿವೆ. ಇದೀಗ ಕ್ಯಾಥಫಲಿಕ್​ ಅನುಯಾಯಿಗಳಿಗಾಗಿ 84 ವರ್ಷದ ಪೋಪ್ ಫ್ರಾನ್ಸಿಸ್​ ‘‘ಕ್ಲಿಕ್ ಟು ಪ್ರೇ’’ ಆ್ಯಪ್​ ಮರು ಪ್ರಾರಂಭಿಸಿದ್ದಾರೆ. ಇದರ ಮೂಲಕ ದೈನಂದಿನ ಪ್ರಾರ್ಥನೆ, ಸಂದೇಶಗಳು ರವಾನೆಯಾಗುತ್ತದೆ.
    First published: