Facebook ನಿಮ್ಮನ್ನ ಟ್ರ್ಯಾಕ್ ಮಾಡುತ್ತಿದೆಯಾ? ಹಾಗಿದ್ರೆ, ಡೇಟಾ ಸೋರಿಕೆ ತಡೆಯಲು ಈ ಸೆಟ್ಟಿಂಗ್ ಬದಲಿಸಿ

Facebook tracking: ಫೇಸ್​ಬುಕ್​ ಬಳಕೆದಾರರ ಸಂಭಾಷಣೆಯನ್ನು ರಹಸ್ಯವಾಗಿ ರೆಕಾರ್ಡ್ ಮಾಡುವ ಮೂಲಕ ಅಥವಾ ಆಲಿಸುವ ಮೂಲಕ ಫೇಸ್‌ಬುಕ್ ತಮ್ಮನ್ನು ಹೇಗೆ ಟ್ರ್ಯಾಕ್ ಮಾಡುತ್ತಿದೆ ಎಂದು ಬಳಕೆದಾರರು ಹಂಚಿಕೊಂಡಿರುವ ಹಲವಾರು ನಿದರ್ಶನಗಳು ವಿವಿಧ ವೆಬ್‌ಸೈಟ್‌ಗಳಲ್ಲಿ ವರದಿಯಾಗಿವೆ.

ಫೇಸ್​ಬುಕ್

ಫೇಸ್​ಬುಕ್

 • Share this:
  ಜನಪ್ರಿಯ ಫೇಸ್​ಬುಕ್ (Facebook)​ ತನ್ನ ಹೆಸರನ್ನು ಮೆಟಾ (Meta) ಎಂದು ಬದಲಾಯಿಸಿಕೊಂಡಿದೆ. ಸಾಕಷ್ಟು ಜನರು ಫೇಸ್​ಬುಕ್​ನಲ್ಲಿ ಖಾತೆ ತೆರೆದು ಹಲವು ವರ್ಷಗಳಿಂದ ಬಳಸುತ್ತಾ ಬಂದಿದ್ದಾರೆ. ದೈನಂದಿನ ದಿನಚರಿಯಲ್ಲಿ ಒಂದು ಭಾರಿಯಾದರು ಫೇಸ್​ಬುಕ್​ನಲ್ಲಿ ತೊಡಗಿಸಿಕೊಳ್ಳುತ್ತಾರೆ ಮತ್ತು ಸಮಯ ಕಳೆಯುತ್ತಾರೆ. ಹೀಗೆ ಫೇಸ್​ಬುಕ್​ನಲ್ಲಿ ಸಮಯ ಕಳೆಯುವ ಬಹುಪಾಲು ಜನರಿಗೆ ಫೇಸ್​ಬುಕ್ ಕುರಿತಾಗಿ ಅನೇಕ ಪ್ರಶ್ನೆಯೊಂದು ಹುಟ್ಟಿಕೊಂಡಿರುತ್ತದೆ. ಅದರಲ್ಲೊಂದು ಫೇಸ್​ಬುಕ್​ ನಮ್ಮನ್ನು ಟ್ರ್ಯಾಕ್ (Track)​ ಮಾಡುತ್ತಿದೆಯಾ? ಎಂಬ ಪಶ್ನೆ ಕಾಡದೆ ಇರದು. ಆದರೆ ಬಹುಪಾಲು ಜನರು ಈ ವಿಷಯದ ಕುರಿತಾಗಿ ಕೆಲವು ನಿದರ್ಶನಗಳನ್ನು ಹಂಚಿಕೊಂಡಿದ್ದು, ಫೇಸ್​ಬುಕ್​ ಬಳಕೆದಾರರಿಂದ ಏನೆಲ್ಲಾ ಮಾಹಿತಿ ತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆ ವರದಿಯಾಗಿದೆ.

  ಫೇಸ್​ಬುಕ್​ ಬಳಕೆದಾರರ ಸಂಭಾಷಣೆಯನ್ನು ರಹಸ್ಯವಾಗಿ ರೆಕಾರ್ಡ್ ಮಾಡುವ ಮೂಲಕ ಅಥವಾ ಆಲಿಸುವ ಮೂಲಕ ಫೇಸ್‌ಬುಕ್ ತಮ್ಮನ್ನು ಹೇಗೆ ಟ್ರ್ಯಾಕ್ ಮಾಡುತ್ತಿದೆ ಎಂದು ಬಳಕೆದಾರರು ಹಂಚಿಕೊಂಡಿರುವ ಹಲವಾರು ನಿದರ್ಶನಗಳು ವಿವಿಧ ವೆಬ್‌ಸೈಟ್‌ಗಳಲ್ಲಿ ವರದಿಯಾಗಿವೆ.

  ಅನೇಕ ಬಾರಿ ನೀವು ಬೆಳಗ್ಗೆ ಏನನ್ನಾದರೂ ಖರೀದಿಸಲು ಮತ್ತು ಅದರ ಬಗ್ಗೆ ಯಾರೊಂದಿಗಾದರೂ ಮಾತನಾಡಲು ಯೋಜಿಸುತ್ತೀರಿ ಮತ್ತು ಸಂಜೆಯ ವೇಳೆಗೆ Facebook ಉತ್ಪನ್ನಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ತೋರಿಸಲು ಪ್ರಾರಂಭಿಸುತ್ತದೆ.

  ಕೆಲವೊಮ್ಮೆ ಗೂಗಲ್​ನಲ್ಲಿ ಏನೇ ಹುಡುಕಾಡಿದರು. ಸ್ವಲ್ಪ ಹೊತ್ತಿನ ಬಳಿಕ ಫೇಸ್​ಬುಕ್​ನಲ್ಲಿ ಅದೇ ಜಾಹೀರಾತು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಇ-ಕಾಮರ್ಸ್​ ಮಳಿಗೆಗೆ ತೆರಳಿ ಹುಡುಕಾಡಿದರೆ ನಿಮಿಷಾರ್ಧದಲ್ಲಿ ತಾವೇನು ಹುಡುಕಾಡಿದ್ದೀರಿ ಅದು ಫೇಸ್​ಬುಕ್ ಪೇಜ್​ನಲ್ಲಿ ಗೋಚರಿಸುತ್ತದೆ.

  ಮುಂಬೈನ ಕಾನೂನು ವಿದ್ಯಾರ್ಥಿ ನವನೀತ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, "ಕೆಲವೇ ದಿನಗಳ ಹಿಂದೆ ಇದು ಸಂಭವಿಸಿದೆ. ನಾನು ಅಮೆಜಾನ್‌ನಲ್ಲಿ ನನಗಾಗಿ ಉತ್ತಮವಾದ ಗಡ್ಡ ಟ್ರಿಮ್ಮರ್ ಅನ್ನು ಹುಡುಕುತ್ತಿದ್ದೆ ಮತ್ತು ರಾತ್ರಿಯಲ್ಲಿ ನನ್ನ ಫೇಸ್‌ಬುಕ್ ಫೀಡ್‌ನಲ್ಲಿ ಸ್ಕ್ರೋಲ್ ಮಾಡುವಾಗ ಟ್ರಿಮ್ಮರ್‌ಗಳ ಜಾಹೀರಾತುಗಳು ಕಾಣಿಸಿಕೊಂಡಿತು".

  ಬಹುತೇಕರಿಗೆ ಈ ವಿಚಾರ ಗೊತ್ತಿಲ್ಲ. ಆದರೆ ಫೇಸ್‌ಬುಕ್ ಮೈಕ್ರೊಫೋನ್ ಅನ್ನು ಟ್ಯಾಪ್ ಮಾಡುವುದಿಲ್ಲ. ಆದರೆ ಸಂದೇಶ ಅಥವಾ ಗೂಗಲ್​ನಲ್ಲಿ ತಾವೇನು ಹುಡುಕಾಡಿದ್ದೀರಾ ಇವೆಲ್ಲವನ್ನು ಟ್ರಾಕ್​ ಮಾಡುತ್ತದೆ.

  ಇದನ್ನು ಓದಿ:Human Poop: ಮನುಷ್ಯರ ಮಲದಿಂದ ಕಲ್ಲಿದ್ದಲು ಉತ್ಪಾದಿಸಿದ ವಿಜ್ಞಾನಿಗಳು! ಇನ್ಮುಂದೆ ಇದಕ್ಕೂ ಬೇಡಿಕೆ ಬರುತ್ತಂತೆ!

  ಬಳಕೆದಾರ ಫೇಸ್​ಬುಕ್​ ಟ್ರ್ಯಾಕಿಂಗ್‌ನಿಂದ ತಪ್ಪಿಸಿಕೊಳ್ಳಲು, ಸ್ಮಾರ್ಟ್​ಫೋನ್​ನಲ್ಲಿ ಸರಿಯಾದ ಸೆಟ್ಟಿಂಗ್​ ಮಾಡಬೇಕಾಗಿರುವುದು ಅನಿವಾರ್ಯ, ಮತ್ತು ಲೊಕೇಶನ್​ ಮಾಹಿತಿಯನ್ನು ಹಂಚಿಕೊಳ್ಳಲು ಹೋಗದೆ ಇರುವುದು ಉತ್ತಮ.

  ಕೆಲವೊಮ್ಮೆ ತಿಳಿದು ಅಥವಾ ತಿಳಿಯದೆಯೇ ಚೆಕ್-ಇನ್ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ಇಂಟರ್ನೆಟ್ ಸಂಪರ್ಕದ ಮೂಲಕ ಫೇಸ್‌ಬುಕ್ ಲೊಕೇಶನ್ ತಿಳಿದುಕೊಳ್ಳಬಹುದು. "ನಿಮ್ಮ ಸಾಧನದ GPS ಸಿಗ್ನಲ್‌ನಂತಹ ನಿರ್ದಿಷ್ಟ ಸ್ಥಳ ಮಾಹಿತಿ ಮತ್ತು ನಿಮ್ಮ Wi-Fi ಸಂಪರ್ಕ ಅಥವಾ IP ವಿಳಾಸ (ಇಂಟರ್ನೆಟ್ ಪ್ರೋಟೋಕಾಲ್ ವಿಳಾಸ) ನಂತಹ ಸಂಪರ್ಕ ಮಾಹಿತಿಯು ನೀವು ಎಲ್ಲಿದ್ದೀರಿ ಎಂಬುದನ್ನು ತಿಳಿದುತ್ತದೆ" ಎಂದು Facebook ನ ಬ್ಲಾಗ್ ಪೋಸ್ಟ್  ಹೇಳಿಕೊಂಡಿತ್ತು.

  ಇದನ್ನು ಓದಿ: Truecaller: ಟ್ರೂಕಾಲರ್‌ನಲ್ಲಿ ವಾಯ್ಸ್ ಕಾಲ್ ರೆಕಾರ್ಡ್ ಮಾಡುವುದು ಹೇಗೆ? ಇಲ್ಲಿವೆ ಹಂತಗಳು

  Facebook ಮೂರನೇ ವ್ಯಕ್ತಿಯ ಟ್ರ್ಯಾಕಿಂಗ್ ಅನ್ನು ಬಳಸುತ್ತದೆ ಎಂದು ಬೆನೆಟ್ ಸೈಫರ್ಸ್ ಎಂಬ ವ್ಯಕ್ತಿ ಹೇಳಿದ್ದಾರೆ. ಅವರು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಲಾಭರಹಿತ ಡಿಜಿಟಲ್ ಹಕ್ಕುಗಳ ಗುಂಪಾಗಿರುವ ಎಲೆಕ್ಟ್ರಾನಿಕ್ ಫ್ರಾಂಟಿಯರ್ ಫೌಂಡೇಶನ್‌ನ ಗೌಪ್ಯತೆ ಸಂಶೋಧಕರಾಗಿದ್ದು, ಸಾಮಾಜಿಕ ಮಾಧ್ಯಮವನ್ನು ಬಳಸದಿದ್ದರೂ ಸಹ ಫೇಸ್‌ಬುಕ್ ತಮ್ಮ ಬಳಕೆಯನ್ನು ಟ್ರ್ಯಾಕ್ ಮಾಡಬಹುದು ಎಂದು ಬರೆದಿದ್ದಾರೆ.

  ಬಳಕೆದಾರರಿಗೆ ಹೆಚ್ಚು ವೈಯಕ್ತೀಕರಿಸಿದ ಅನುಭವವನ್ನು ನೀಡಲು ಫೇಸ್​ಬುಕ್​ ಸಹಾಯ ಮಾಡುತ್ತದೆ.  ಆದರೆ ವೈಯ್ಯಕ್ತಿಕ ಮಾಹಿತಿ ಲೀಕ್​ ಆಗದಂತೆ ತಡೆಯಲು ಫೇಸ್​ಬುಕ್​​ನಲ್ಲಿ ಸೆಟ್ಟಿಂಗ್‌ ಆಯ್ಕೆಯಿದೆ ಅದರ ಮೂಲಕ ಮಾಹಿತಿ ಸೋರಿಕೆಯಾಗುವುದನ್ನು ತಡೆಯಬಹುದಾಗಿದೆ.

  -ನಿಮ್ಮ Facebook ಖಾತೆಗೆ ಲಾಗ್ ಇನ್ ಮಾಡಿ ಮತ್ತು ಸೆಟ್ಟಿಂಗ್ ಮತ್ತು ಗೌಪ್ಯತೆ ಪುಟಕ್ಕೆ ಹೋಗಿ.

  -ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ.

  -ಎಡ ಕಾಲಂನಲ್ಲಿ ನಿಮ್ಮ Facebook ಮಾಹಿತಿಯನ್ನು ಕ್ಲಿಕ್ ಮಾಡಿ ಮತ್ತು ನಂತರ ಆಫ್-ಫೇಸ್‌ಬುಕ್ ಚಟುವಟಿಕೆಯನ್ನು ಕ್ಲಿಕ್ ಮಾಡಿ.

  - ನಂತರ ಭವಿಷ್ಯದ ಚಟುವಟಿಕೆಯನ್ನು (Future Activity button) ನಿರ್ವಹಿಸಿ ಆಯ್ಕೆಮಾಡಿ. ನಿಮ್ಮ ಫೇಸ್‌ಬುಕ್ ಪಾಸ್‌ವರ್ಡ್ ಅನ್ನು ಕೇಳಲಾಗುತ್ತದೆ. ಅದನ್ನು ನಮೂದಿಸಿ ಮತ್ತು ನಿಮಗೆ ಮತ್ತೆ ಪಾಪ್-ಅಪ್ ಪುಟವನ್ನು ತೋರಿಸಲಾಗುತ್ತದೆ.

  -ಭವಿಷ್ಯದ ಚಟುವಟಿಕೆಯನ್ನು ನಿರ್ವಹಿಸು ಬಟನ್ (Future Activity button) ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಫೇಸ್‌ಬುಕ್ ಚಟುವಟಿಕೆಯನ್ನು ಆಫ್ ಮಾಡಿ.
  Published by:Harshith AS
  First published: