Valentine's day ಹತ್ರ ಬರ್ತಾ ಇದೆ.. ಸಂಗಾತಿ ಸಿಕ್ಕಿಲ್ಲ ಅಂದ್ರೆ ಈ 5 iPhone ಡೇಟಿಂಗ್​ ಆ್ಯಪ್​ನಲ್ಲಿ ಹುಡುಕಾಡಿ

Valentine's day 2022: iPhoneನಲ್ಲಿ ಪ್ರಸ್ತುತ ಹೆಚ್ಚು ಬಳಕೆಯಲ್ಲಿರುವ ಡೇಟಿಂಗ್ ಆ್ಯಪ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ. Bumble, Hinge, Zoosk ಮತ್ತು MeetMe ಯಂತಹ ಡೇಟಿಂಗ್ ಅಪ್ಲಿಕೇಶನ್‌ಗಳು ನಿಮಗೆ ಗೆಳೆಯ ಅಥವಾ ಗೆಳತಿಯನ್ನು ಭೇಟಿ ಮಾಡಿಸುವ ವೇದಿಕೆಯಾಗಿವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಪ್ರೇಮಿಗಳ ದಿನ (valentine's day) ಇನ್ನೇನು ಹತ್ರ ಬಂದು ಬಿಡ್ತು. ಆದರೆ ನೀವಿನ್ನೂ ಸಿಂಗಲ್ (Single) ಆಗಿದ್ದರೆ ಚಿಂತೆ ಬೇಡ. ಅದಕ್ಕೆ ಅಂತಾನೇ ಕೆಲವು ಡೇಟಿಂಗ್ ಆ್ಯಪ್‌ಗಳು (Dating App) ಇವೆ, ಅವು ನಿಮಗೆ ನಿಮ್ಮ ಪ್ರೀತಿ, ಪಾತ್ರರನ್ನು ಹುಡುಕಿಕೊಳ್ಳಲು ಸಹಾಯ ಮಾಡುತ್ತವೆ. ಸಹಾಯ ಮಾಡುತ್ತವೆ. iPhone ಬಳಕೆದಾರರಿಗೆ ಯಾವೆಲ್ಲಾ ಡೇಟಿಂಗ್ ಆ್ಯಪ್‌ಗಳು ಲಭ್ಯವಿದೆ ತಿಳಿದುಕೊಳ್ಳೋಣ. ಈಗೆಲ್ಲ ಪ್ರೀತಿ-ಪ್ರೇಮ (Love), ಮದುವೆ (Marrige), ಡಿವೋರ್ಸ್(Divorce) ಎಲ್ಲವೂ ಡಿಜಿಟಲ್ (Digital) ಆಗಿಬಿಟ್ಟಿದೆ. ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕಲ್ಲ. ಹೆಣ್ಣು, ಗಂಡು ನೋಡುವ ಸಂಪ್ರದಾಯಿಕ ಶಾಸ್ತ್ರವನ್ನು ಈಗೀನ ಜನರೇಶನ್ ಗಾಳಿಗೆ ತೂರಿ ಬಿಟ್ಟಿದೆ. ಈಗೇನಿದ್ರೂ ಫೋನ್‌ನಲ್ಲೇ ಎಲ್ಲ ನಡೆಸಿಬಿಡ್ತಾರೆ. ಸಂಗಾತಿಯನ್ನು ಹುಡುಕಿಕೊಳ್ಳುವ ವಿಚಾರ ಇದಕ್ಕೆ ಹೊರತಾಗಿಲ್ಲ ನೋಡಿ. ಹಾಗಾದರೆ ಈ ವ್ಯಾಲಂಟೈನ್ ಡೇ ಗೆ ನೀವು ನಿಮ್ಮ ಸಂಗಾತಿಯನ್ನು (Partner) ಆ್ಯಪ್ (App) ಮೂಲಕವೇ ಹುಡುಕಿಕೊಳ್ಳಿ.

    iPhoneನಲ್ಲಿ ಪ್ರಸ್ತುತ ಹೆಚ್ಚು ಬಳಕೆಯಲ್ಲಿರುವ ಡೇಟಿಂಗ್ ಆ್ಯಪ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.
    Bumble, Hinge, Zoosk ಮತ್ತು MeetMe ಯಂತಹ ಡೇಟಿಂಗ್ ಅಪ್ಲಿಕೇಶನ್‌ಗಳು ನಿಮಗೆ ಗೆಳೆಯ ಅಥವಾ ಗೆಳತಿಯನ್ನು ಭೇಟಿ ಮಾಡಿಸುವ ವೇದಿಕೆಯಾಗಿವೆ.

    ಐಫೋನ್‌ನಲ್ಲಿ ಈ ಎಲ್ಲಾ ಡೇಟಿಂಗ್ ಆ್ಯಪ್‌ಗಳು ನಿಮಗೆ ಸರಿ ಹೊಂದುವ ಸಂಗಾತಿಯನ್ನು ಭೇಟಿ ಮಾಡಲು ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್‌ಗಳು ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡುತ್ತದೆ. ಪ್ರೇಮಿಗಳ ದಿನ ಸಮೀಪಿಸುತ್ತಿದ್ದು, ನೀವು ಡೇಟಿಂಗ್ ಆ್ಯಪ್ ಚೆಕ್ ಮಾಡಲು ಸೂಕ್ತ ಸಮಯವಾಗಿದೆ.

    ಐಫೋನ್‌ ಬಳಕೆದಾರರಿಗಾಗಿ ಈ 5 ಡೇಟಿಂಗ್ ಅಪ್ಲಿಕೇಶನ್‌ಗಳು

    1) ಬಂಬಲ್

    ಗೆಳೆಯ ಅಥವಾ ಗೆಳತಿಯನ್ನು ಹುಡುಕಲು ನಿಮಗೆ ಅನುಮತಿಸುವ ಐಫೋನ್ ಮತ್ತು Android ನಲ್ಲಿನ ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಬಂಬಲ್ ಒಂದಾಗಿದೆ. ದಿನಾಂಕವನ್ನು ಗೊತ್ತು ಪಡಿಸಿ ನಿಮ್ಮನ್ನು ಸಂಗಾತಿ ಜೊತೆ ಭೇಟಿ ಮಾಡಿಸುತ್ತದೆ. ಈ ಅಪ್ಲಿಕೇಶನ್‌ನಲ್ಲಿ ಸ್ತ್ರೀ ಬಳಕೆದಾರರಿಗೆ ಮೊದಲ ಸಂಪರ್ಕವನ್ನು ಮಾಡಲು ಅನುಮತಿಸುತ್ತದೆ. 24 ಗಂಟೆಗಳೊಳಗೆ ಆಕೆ ಸಂದೇಶವನ್ನು ಕಳುಹಿಸದೇ ಇದ್ದರೆ ನಂತರ ಮ್ಯಾಚ್ ದೊರೆಯುವುದಿಲ್ಲ.

    ನಿಮ್ಮಿಬ್ಬರ ನಡುವಿನ ಸಂಭಾಷಣೆ, ಲೈಕ್ಸ್ ಕೇವಲ 24 ಗಂಟೆಗಳ ಕಾಲ ಮಾತ್ರ ಇರುತ್ತದೆ ಮತ್ತು ನಂತರ ಕಣ್ಮರೆಯಾಗುತ್ತದೆ. ನೀವು ಪ್ರೀಮಿಯಂ ಸೇವೆಗಳನ್ನು ಸಹ ಆಯ್ಕೆ ಮಾಡಬಹುದು. ಸೂಪರ್‌ಸ್ವೈಪ್‌ಗಳು ತಿಂಗಳಿಗೆ 450 ರೂ. ನಲ್ಲಿ ಲಭ್ಯವಿದೆ.

    2) ಜೂಸ್ಕ್

    ಇದು ಮತ್ತೊಂದು ಅತ್ಯುತ್ತಮ ಐಫೋನ್ ಡೇಟಿಂಗ್ ಅಪ್ಲಿಕೇಶನ್ ಆಗಿದ್ದು ಅದು ನೇರ ಮತ್ತು LGBTQ ಜನರನ್ನು ಸಂಪರ್ಕ ಮಾಡಲು ಅನುಮತಿಸುತ್ತದೆ. ಇದು ಫನ್, ಸುರಕ್ಷಿತ ಮತ್ತು ತಾತ್ಕಾಲಿಕ ಅಥವಾ ದೀರ್ಘಾವಧಿಯ ಪಾಲುದಾರರನ್ನು ಹುಡುಕಲು ಸಹಾಯ ಮಾಡುವ ಸುಲಭ ಆ್ಯಪ್ ಆಗಿದೆ. ಇತರರ ಫೋಟೋಗಳನ್ನು ನೋಡಿ, ವಿಂಕ್‌ಗಳು ಮತ್ತು ಎಮೋಜಿಗಳನ್ನು ಕಳುಹಿಸಿ ಹೊಸ ಜನರನ್ನು ಉಚಿತವಾಗಿ ಸಂಪರ್ಕಿಸಬಹುದು. ನಿಮ್ಮ ಕಾಂಟ್ಯಾಕ್ಟ್‌ನ ಜನರಿಗೆ ಉಡುಗೊರೆಗಳನ್ನು ಕಳುಹಿಸಲು ಚಾಟ್ ಮಾಡಲು ಮತ್ತು ಪಾವತಿಸಿದ ಸದಸ್ಯತ್ವವನ್ನು ಆಗಾಗ ಅಪ್‌ಗ್ರೇಡ್ ಮಾಡಬೇಕಾಗುತ್ತದೆ.

    3) ಮೀಟ್ ಮೀ

    ನೀವು ಫನ್‌ಗಾಗಿ, ಸ್ನೇಹಪರ ಮತ್ತು ಉಚಿತ ಡೇಟಿಂಗ್‌ ಮಾಡಲು ಹುಡುಕುತ್ತಿದ್ದರೆ MeetMe ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ನಿಮಗೆ ಮ್ಯಾಚ್ ಆಗುವ ಜನರನ್ನು ಹುಡುಕಲು ಅಪ್ಲಿಕೇಶನ್ ಸಹಾಯ ಮಾಡುತ್ತದೆ. ಇಲ್ಲಿ ನೀವು ಚಾಟ್ ಮಾಡಬಹುದು, ಸಂಪರ್ಕಗಳನ್ನು ರೂಪಿಸಬಹುದು, ಮತ್ತು ಪ್ರೀತಿಯಲ್ಲಿ ಸಹ ಬೀಳಬಹುದು.

    4) ಹಿಂಜ್

    ಹಿಂಜ್ ಯುಎಸ್, ಯುಕೆ, ಕೆನಡ್‌ನಲ್ಲಿ ವೇಗವಾಗಿ ಬೆಳೆಯುತ್ತಿರುವ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಭಾರತದಲ್ಲಿಯೂ ಲಭ್ಯವಿದ್ದು, ನಿಮ್ಮ ಇಷ್ಟದ ಸಂಗಾತಿಯನ್ನು ಕಂಡುಕೊಂಡ ನಂತರ ಅಕೌಂಟನ್ನು ಡಿಲೀಟ್ ಮಾಡಬಹುದು.

    5) OkCupid

    ಈ ಆನ್ಲೈನ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ನೀವು ಏನನ್ನು ಹುಡುಕುತ್ತಿರುವಿರಿ ಎಂಬುದನ್ನು ಹೈಲೈಟ್ ಮಾಡುವ ಪ್ರೊಫೈಲ್ ಅನ್ನು ರಚಿಸಬಹುದು ಮತ್ತು ಸರಿಯಾದ ಹೊಂದಾಣಿಕೆಯನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುತ್ತದೆ. ಇದು ಸ್ಥಳೀಯ ಡೇಟಿಂಗ್ ವೈಶಿಷ್ಟ್ಯವನ್ನು ಹೊಂದಿದ್ದು ಅದು ಹತ್ತಿರದ ಜನರನ್ನು ನೋಡಲು, ಹೊಂದಾಣಿಕೆ ಮಾಡಲು ಮತ್ತು ಅಂತಿಮವಾಗಿ ಡೇಟಿಂಗ್ ಮಾಡಲು ಅನುವು ಮಾಡಿಕೊಡುತ್ತದೆ. ಕ್ಯಾಶುಯಲ್ ಡೇಟಿಂಗ್ ಜೊತೆಗೆ ದೀರ್ಘಾವಧಿ ಡೇಟಿಂಗ್‌ಗೆ ಸಹಾಯ ಮಾಡುತ್ತದೆ.
    Published by:Harshith AS
    First published: