ಮೈಕ್ರೋಸಾಫ್ಟ್ ಪಿಡಿಎಫ್ ಮ್ಯಾನೇಜರ್ ಅನ್ನು ಮೈಕ್ರೋಸಾಫ್ಟ್ ಸ್ಟೋರ್‌ನಿಂದ ಜುಲೈ 3 ರವರೆಗೆ ಬಳಕೆದಾರರು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಮೈಕ್ರೋಸಾಫ್ಟ್‌ನ ಪಿಡಿಎಫ್ ಮ್ಯಾನೇಜರ್ ಅತ್ಯಂತ ಸುಲಭ ಮತ್ತು ಪರಿಣಾಮಕಾರಿ ಆ್ಯಪ್ ಎಂದೆನಿಸಿದ್ದು ಇದರ ಮೂಲಕ ಪಿಡಿಎಫ್ ಫೈಲ್‌ಗಳನ್ನು ಮರ್ಜ್ ಹಾಗೂ ಎಡಿಟಿಂಗ್ ಮಾಡಬಹುದಾಗಿದೆ. ಹೆಚ್ಚಿನ ಡಾಕ್ಯುಮೆಂಟ್‌ಗಳನ್ನು ಕೂಡ ಈ ಆ್ಯಪ್ ಬಳಸಿ ಮರ್ಜ್, ರೆಕಾರ್ಡರ್ ಮತ್ತು ಪುಟಗಳನ್ನು ಶೇರ್ ಮಾಡಬಹುದು. ಇನ್ನು ಪುಟಗಳನ್ನು ತಿರುಗಿಸುವುದು ಅಳಿಸುವುದು, ವಿಂಗಡಿಸುವುದು ಇವೇ ಮೊದಲಾದ ಕೆಲಸಗಳನ್ನು ಆ್ಯಪ್ ಬಳಸಿ ನಿರ್ವಹಿಸಬಹುದು. ಕೆಲವೇ ಕ್ಲಿಕ್‌ಗಳ ಮೂಲಕ ನೀವು ಪಿಡಿಎಫ್‌ಗಳನ್ನು ಕಂಬೈನ್ ಕೂಡ ಮಾಡಬಹುದಾಗಿದೆ. ಮೈಕ್ರೋಸಾಫ್ಟ್‌ನ ಈ ಪಿಡಿಎಫ್ ಮ್ಯಾನೇಜರ್ ಬೆಲೆ ರೂ 2,200 ಆಗಿದ್ದು, ಜುಲೈ 3 ರವರೆಗೆ ಇದನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಮೈಕ್ರೋಸಾಫ್ಟ್ ಸ್ಟೋರ್‌ನಿಂದ ಮಾತ್ರವೇ ಪಿಡಿಎಫ್ ಮ್ಯಾನೇಜರ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಅಪ್ಲಿಕೇಶನ್ ಸ್ಟೋರ್ ಹೇಳುವಂತೆ ಬಳಕೆದಾರರಿಗೆ ಬರೇ 3 ದಿನಗಳ ಕಾಲಾವಕಾಶವಿದೆ. ಅಷ್ಟರೊಳಗೆ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪಿಡಿಎಫ್ ಮ್ಯಾನೇಜರ್ ಮೂಲಕ ನೀವು ಹಲವಾರು ಕೆಲಸಗಳನ್ನು ಚಕಚಕನೇ ಮುಗಿಸಿಕೊಳ್ಳಬಹುದಾಗಿದೆ. ಪಿಡಿಎಫ್‌ಗಳನ್ನು ಮರ್ಜ್ ಮಾಡುವುದು, ಸ್ಪಿಲ್ಟ್ ಮಾಡುವುದು, ಹೆಚ್ಚಿನ ಪಿಡಿಎಫ್ ಡಾಕ್ಯುಮೆಂಟ್‌ಗಳನ್ನು ಎಡಿಟ್ ಮಾಡುವುದು ಹಾಗೂ ಕಂಬೈನ್ ಮಾಡುವುದು ಇವೆಲ್ಲ ಕೆಲಸಗಳನ್ನು ತುಂಬಾ ಸುಲಭವಾಗಿ ಪೂರ್ಣಗೊಳಿಸಬಹುದಾಗಿದೆ. ರೆಕಾರ್ಡರ್, ಡಿಲೀಟ್, ಪಿಡಿಎಫ್ ಪುಟಗಳನ್ನು ರೊಟೇಟ್ ಮಾಡುವುದು, ಪಿಡಿಎಫ್‌ಗಳಿಂದ ಪಾಸ್‌ವರ್ಡ್‌ಗಳನ್ನು ಸೇರ್ಪಡೆ ಅಥವಾ ತೆಗೆದುಹಾಕುವಿಕೆ, ನಕಲಿ, ಹಂಚಿಕೆ, ಎಡಿಟ್ ಮಾಡಿದ ಪಿಡಿಎಫ್‌ಗಳ ಆ್ಯಡ್ ಪ್ರಿಂಟ್, ಫುಲ್-ಸ್ಕ್ರೀನ್ ಪಿಡಿಎಫ್ ರೀಡರ್ ಹೀಗೆ ಹೆಚ್ಚು ಅನುಕೂಲಕರವಾದ ಫೀಚರ್‌ಗಳನ್ನು ಪಿಡಿಎಫ್ ಮ್ಯಾನೇಜರ್ ಒಳಗೊಂಡಿದೆ. ಅಡೋಬ್ ಆಕ್ರೋಬ್ಯಾಟ್ ರೀಡರ್‌ಗೆ ಪಿಡಿಎಫ್ ಮ್ಯಾನೇಜರ್ ನೇರ ಸ್ಪರ್ಧಿ ಎಂದೇ ಹೇಳಬಹುದು.
ಮೈಕ್ರೋಸಾಫ್ಟ್ ಇತ್ತೀಚೆಗೆ ತಾನೇ ವಿಂಡೋಸ್ 11 ಆವೃತ್ತಿಯನ್ನು ಪರಿಚಯಿಸಿದೆ. ಇದು ಮರುವಿನ್ಯಾಸಗೊಳಿಸಿದ ಯುಐ ನೊಂದಿಗೆ ಬಂದಿದ್ದು ಹೊಸ ಆ್ಯಪ್ ಸ್ಟೋರ್, ಆಂಡ್ರಾಯ್ಡ್ ಆ್ಯಪ್‌ಗಳನ್ನು ಚಾಲನೆ ಮಾಡುವ ಸಾಮರ್ಥ್ಯ, ಹೊಸ ಸ್ಟಾರ್ಟ್ ಮೆನು ಮತ್ತು ಟಾಸ್ಕ್ ಬಾರ್ ಹೀಗೆ ಹೆಚ್ಚಿನ ಫೀಚರ್‌ಗಳನ್ನು ಒಳಗೊಂಡಿದೆ. ಅತ್ಯಾಧುನಿಕ ನವೀಕರಣಗಳನ್ನು ವಿಂಡೋಸ್ 11 ಪಡೆದುಕೊಂಡಿದೆ. ವಿಂಡೋಸ್ 11 ಬಳಕೆದಾರರಿಗೆ ಈ ವರ್ಷದ ನಂತರ ಲಭ್ಯವಾಗಲಿದೆ. ಮ್ಯಾಕ್ ಕಂಪ್ಯೂಟರ್‌ಗಳನ್ನೇ ಹೋಲುವ ಇಂಟರ್ಫೇಸ್ ಅನ್ನು ವಿಂಡೋಸ್ 11 ಹೊಂದಿದ್ದು, ಸುಂದರ ಶೇಡ್‌ಗಳಿವೆ.
ವಿಂಡೋಸ್ ಹಳೆಯ ಆವೃತ್ತಿಗಿಂತ ವಿಂಡೋಸ್ 11 ಹೆಚ್ಚು ಸೇಫ್ ಆಗಿದೆ. ವಿಡಿಯೋ ಗೇಮ್ ಆಡುವವರಿಗಂತೂ ಹೊಸ ರೀತಿಯ ಅನುಭವವನ್ನು ವಿಂಡೋಸ್ 11 ಒದಗಿಸಲಿದೆ ಎಂಬುದಂತೂ ಖಾತ್ರಿಯಾಗಿದೆ. ಬಿಲ್ಟ್ ಇನ್ ಆಂಡ್ರಾಯ್ಡ್ ಸಪೋರ್ಟ್‌ನಿಂದಾಗಿ ಮೊಬೈಲ್‌ನಲ್ಲಿ ಬಳಸುವ ಆ್ಯಪ್‌ಗಳನ್ನು ಇನ್ನು ವಿಂಡೋಸ್ 11 ನಲ್ಲೂ ಬಳಸಬಹುದಾಗಿದೆ.
ವಿಂಡೋಸ್ 11 ವಿಜೆಟ್‌ಗಳು ವಿಭಿನ್ನವಾಗಿದ್ದು ಇವನ್ನು ಸ್ಲೈಡ್ ಮಾಡುವ ಮೂಲಕ ಸುದ್ದಿಯ ಹವಾಮಾನ, ಕ್ಯಾಲೆಂಡರ್ ಫೋಟೋಗಳನ್ನು ನೋಡಬಹುದಾಗಿದೆ. ಫುಲ್ ಸ್ಕ್ರೀನ್ ಫೀಚರ್ ಕೂಡ ಇದ್ದು ಬೇಕಾದ ವಿಜೆಟ್‌ಗಳನ್ನು ಇರಿಸಿ ಬೇಡದೇ ಇರುವುದನ್ನು ಬಳಕೆದಾರರು ತೆಗೆದುಹಾಕಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ