ಇನ್ಮೇಲೆ ಲ್ಯಾಂಡ್​ಲೈನ್​ ನಂಬರ್​ನಲ್ಲೂ ವಾಟ್ಸ್​ಆ್ಯಪ್​ ಬಳಸಬಹುದು!

ವಾಟ್ಸ್​ಆ್ಯಪ್​ ಸಂಸ್ಥೆ ವ್ಯಾಪಾರಸ್ಥರಿಗಾಗಿ ‘ವಾಟ್ಸ್​ಆ್ಯಪ್​ ಬ್ಯುಸಿನೆಸ್​ ಆ್ಯಪ್‘​ ಅನ್ನು ಪರಿಚಯಿಸಲಾಗಿದ್ದು, ಇದೀಗ ಲ್ಯಾಂಡ್​ಲೈನ್ ಬಳಕೆಯ ವ್ಯಾಪಾರಸ್ಥರು ಕೂಡ​ ಈ ಯೋಜನೆಯನ್ನು ಬಳಸಬಹುದಾಗಿದೆ.

news18
Updated:April 6, 2019, 7:19 PM IST
ಇನ್ಮೇಲೆ ಲ್ಯಾಂಡ್​ಲೈನ್​ ನಂಬರ್​ನಲ್ಲೂ ವಾಟ್ಸ್​ಆ್ಯಪ್​ ಬಳಸಬಹುದು!
ವಾಟ್ಸ್​ಆ್ಯಪ್​
news18
Updated: April 6, 2019, 7:19 PM IST
ವಿಶ್ವದಾದ್ಯಂತ ಅನೇಕ ಜನರು ಬಳಸುತ್ತಿರುವ ವಾಟ್ಸ್​ ಆ್ಯಪ್​ ಇದೀಗ ಹೊಸ ತರಹದ ಬದಲಾವಣೆಗೆ ಮುಂದಾಗಿದೆ. ಮೊಬೈಲ್​ ನಂಬರಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವ ವಾಟ್ಸ್ಆ್ಯಪ್​ನಲ್ಲಿ ಇದೀಗ ಲ್ಯಾಂಡ್​ಲೈನ್​ ನಂಬರನ್ನು ಬಳಸಬಹುದಾಗಿದೆ.

ಬ್ಯುಸಿನೆಸ್​ಗೆ ಅನುಕೂಲವಾಗಲೆಂದು ವಾಟ್ಸ್​ಆ್ಯಪ್​ ಸಂಸ್ಥೆ ಲ್ಯಾಂಡ್​ಲೈನ್​ ನಂಬರ್​ ಬಳಸುವಂತೆ ಅನುವು ಮಾಡಿಕೊಡುತ್ತಿದೆ. ಈಗಾಗಲೇ ವಾಟ್ಸ್​ಆ್ಯಪ್​ ಸಂಸ್ಥೆ ವ್ಯಾಪಾರಸ್ಥರಿಗಾಗಿ ‘ವಾಟ್ಸ್​ಆ್ಯಪ್​ ಬ್ಯುಸಿನೆಸ್​ ಆ್ಯಪ್‘​ ಅನ್ನು ಪರಿಚಯಿಸಲಾಗಿದ್ದು, ಇದೀಗ ಲ್ಯಾಂಡ್​ಲೈನ್ ಬಳಕೆಯ ವ್ಯಾಪಾರಸ್ಥರು ಕೂಡ​ ಈ ಯೋಜನೆಯನ್ನು ಬಳಸಬಹುದಾಗಿದೆ.

ಇದನ್ನೂ ಓದಿ: ತಾಕತ್ತಿದ್ದರೆ ರಾಹುಲ್​​ ಗಾಂಧಿ ಹೆಸರು ಹೇಳಿ ಗೆದ್ದು ತೋರಿಸಲಿ; ಕುಲಕರ್ಣಿಗೆ ಜೋಶಿ ಸವಾಲ್​​​

ಬಹುತೇಕ ವ್ಯಾಪಾರಸ್ಥರು ಗ್ರಾಹಕರಿಗೆ ಲ್ಯಾಂಡ್​ಲೈನ್​ ನಂಬರನ್ನು ನೀಡಲು ಇಚ್ಚಿಸುತ್ತಾರೆ. ಹೀಗಾಗಿ ವಾಟ್ಸ್​ಆ್ಯಪ್​ ಸಂಸ್ಥೆ ‘ಲ್ಯಾಂಡ್​ ಲೈನ್​ನಿಂದ ಬುಸಿನೆಸ್​ ಆ್ಯಪ್​‘ ತೆರೆಯಲು ಅವಕಾಶ ಮಾಡಿಕೊಟ್ಟಿದೆ. ವ್ಯಾಪಾರಸ್ಥರಿಗೆ ವಾಟ್ಸ್​ ಆ್ಯಪ್​ ಮೂಲಕ ವ್ಯವಹಾರ ಮಾಡಲು ಅನುಕೂಲವಾಗಲಿದೆ. ಹಾಗಿದ್ದರೆ ಮೊಬೈಲ್​ ನಂಬರ್​ ಬಳಸದೆ ಲ್ಯಾಂಡ್​​ ಲೈನ್​ ನಂಬರ್​ ಮೂಲಕ ವಾಟ್ಸ್​ಆ್ಯಪ್​ ಖಾತೆ ತೆರೆಯುವುದು ಹೇಗೆ..? ಇಲ್ಲಿದೆ ಮಾಹಿತಿ.

  • ನಿಮ್ಮ ಮೊಬೈಲ್​ ಫೋನ್​ನಿಂದ ಪ್ಲೇಸ್ಟೋರ್​ನಲ್ಲಿರುವ ಬ್ಯುಸಿನೆಸ್​​ ಆ್ಯಪ್​ ಡೌನ್​ಲೋಡ್​ ಮಾಡಿ ಇನ್​ಸ್ಟಾಲ್​ ಮಾಡಿಕೊಳ್ಳಬೇಕು
  • ಇನ್​ಸ್ಟಾಲ್​ ನಂತರ ವಾಟ್ಸ್​ಆ್ಯಪ್​ ನಂಬರ್​ ನಮೂದಿಸುವ ಆಯ್ಕೆಯಲ್ಲಿ ನಿಮ್ಮ ಲ್ಯಾಂಡ್​ ಲೈನ್​ ನಂಬರನ್ನು ನಮೂದಿಸಿ.

  • ನೀವು ನಮೂದಿಸಿದ ಲ್ಯಾಂಡ್​ಲೈನ್​ ನಂಬರ್​ಗೆ ಧ್ವನಿ ಮುದ್ರಿತ ಕರೆ ಬರುತ್ತದೆ. ಕರೆಯಲ್ಲಿ ಆರು ಡಿಜಿಟ್​ಗಳ ಸಂಖ್ಯೆಯನ್ನು ಹೇಳಲಾಗುತ್ತದೆ. ನೀವು ಆ ಸಂಖ್ಯೆಯನ್ನು ಸರಿಯಾಗಿ ವಾಟ್ಸ್​ಆ್ಯಪ್​ನಲ್ಲಿ ನಮೂದಿಸಿ ಬಳಕೆ ಮಾಡಬಹುದಾಗಿದೆ.


First published:April 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ