ನಿಮ್ಮ ಭಾವನೆಗೆ ತಕ್ಕಂತಹ ಸಂಗಾತಿಯನ್ನು ಹುಡುಕಲು ಈ ಆ್ಯಪ್​ ಬಳಸಿ

ಭಾರತದಲ್ಲಿ ಜನಪ್ರೀಯತೆ ಹೊಂದುತ್ತಿರುವ ಟಿಂಡರ್​ ಆ್ಯಪ್​ ಪ್ಲೇ ಸ್ಟೋರ್​ನಲ್ಲಿ ಲಭ್ಯವಿದ್ದು, ಇದೊಂದು ಡೇಟಿಂಗ್​ ಆ್ಯಪ್​ ಆಗಿದೆ. ಲೊಕೆಶನ್​ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಟಿಂಡರ್​ ಆ್ಯಪ್​, ನಿಮ್ಮ  ಸುತ್ತಮುತ್ತಲಿನಲ್ಲಿರುವ ಟಿಂಡರ್​ ಆ್ಯಪ್​ ಬಳಕೆಗಾರರ  ಪ್ರೊಫೈಲ್​ಗಳನ್ನು ತೋರಿಸುತ್ತದೆ. ಬಳಕೆದಾರರು ದಿನಕ್ಕೆ ನಿಯಮಿತ ಪ್ರೊಫೈಲ್​ಗಳನ್ನು ಮಾತ್ರ ನೋಡಬಹುದಾಗಿದೆ.

news18
Updated:February 5, 2019, 1:08 PM IST
ನಿಮ್ಮ ಭಾವನೆಗೆ ತಕ್ಕಂತಹ ಸಂಗಾತಿಯನ್ನು ಹುಡುಕಲು ಈ ಆ್ಯಪ್​ ಬಳಸಿ
ಭಾರತದಲ್ಲಿ ಜನಪ್ರೀಯತೆ ಹೊಂದುತ್ತಿರುವ ಟಿಂಡರ್​ ಆ್ಯಪ್​ ಪ್ಲೇ ಸ್ಟೋರ್​ನಲ್ಲಿ ಲಭ್ಯವಿದ್ದು, ಇದೊಂದು ಡೇಟಿಂಗ್​ ಆ್ಯಪ್​ ಆಗಿದೆ. ಲೊಕೆಶನ್​ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಟಿಂಡರ್​ ಆ್ಯಪ್​, ನಿಮ್ಮ  ಸುತ್ತಮುತ್ತಲಿನಲ್ಲಿರುವ ಟಿಂಡರ್​ ಆ್ಯಪ್​ ಬಳಕೆಗಾರರ  ಪ್ರೊಫೈಲ್​ಗಳನ್ನು ತೋರಿಸುತ್ತದೆ. ಬಳಕೆದಾರರು ದಿನಕ್ಕೆ ನಿಯಮಿತ ಪ್ರೊಫೈಲ್​ಗಳನ್ನು ಮಾತ್ರ ನೋಡಬಹುದಾಗಿದೆ.
news18
Updated: February 5, 2019, 1:08 PM IST
ಪ್ರತಿಯೊಬ್ಬ ವ್ಯಕ್ತಿಯು ಆತನ ಭಾವನೆ, ಅಭಿರುಚಿಗೆ ತಕ್ಕಂತಹ ಸಂಗಾತಿಯನ್ನು ಹುಡುಕುತ್ತಿರುತ್ತಾರೆ. ತನ್ನ ಸುಖ, ದು:ಖ ಹಂಚಿಕೊಳ್ಳಲು ಒಂದೊಳ್ಳೆ ಸ್ನೇಹಿತೆಗಾಗಿ ಹಾತೊರೆಯುತ್ತಿರುತ್ತಾರೆ. ಆದರೆ ಇಂದಿನ ಗ್ಯಾಜೆಟ್​ ಲೋಕ ಆಪ್ತರನ್ನು ಹುಡುಕುವ ಕಾರ್ಯವನ್ನು ಮತ್ತಷ್ಟು ಸುಲಭಕರವಾಗಿ ಮಾಡಿದ್ದು. ಗೂಗಲ್​ ‘ಪ್ಲೇ ಸ್ಟೋರ್‘ನಲ್ಲಿ​ ನಿಮ್ಮ ಅಭಿರುಚಿಗೆ ತಕ್ಕ ಆಪ್ತರನ್ನು ಹುಡುಕಲು ಕೆಲವು ‘ಡೇಟಿಂಗ್​ ಆ್ಯಪ್‘​ಗಳನ್ನು ನೀಡಿದೆ. ನಿಮ್ಮ ಇಚ್ಚೆಗೆ ತಕ್ಕಂತೆ ಸಂಗಾತಿಯನ್ನು ಹುಡುಕಲು ಮತ್ತು ಅವರೊಂದಿಗೆ ಬೆರೆಯಲು ಡೇಟಿಂಗ್​ ಆ್ಯಪ್​ಗಳು ಸಹಾಯ ಮಾಡುತ್ತದೆ. ಹಾಗಿದ್ದರೆ, ಸಂಗಾತಿಯನ್ನು ಹುಡುಕು ಆ ಆ್ಯಪ್​ಗಳು ಯಾವುದು..? ಇಲ್ಲಿದೆ ಮಾಹಿತಿ.

ಒಕ್ಕುಪಿಡ್​

ಅಂತರಾಷ್ಟ್ರಯ ಮಟ್ಟದ ಡೇಟಿಂಗ್​ ಆ್ಯಪ್​ ಒಕ್ಕು ಪಿಡ್  ಸುಮಾರು 113 ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿದೆ. ನಿಮ್ಮ ಅನುಕೂಲತೆಗೆ ತಕ್ಕಂತೆ ಆಪ್ತರನ್ನು ಹುಡುಕಿಕೊಳ್ಳಬಹುದಾಗಿದೆ.  ಬಳಕೆದಾರ ಮೊದಲಿಗೆ ನಿಮ್ಮ ಪ್ರೊಫೈಲ್​ ಖಚಿತ ಪಡಿಸಿಕೊಳ್ಳಲು ಆ್ಯಪ್​ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬೇಕು. ನಿಮ್ಮ  ಆಯ್ಕೆಯ ಸಂಗಾತಿಯ ಪ್ರೊಫೈಲ್​ಗೆ ರಿಕ್ವೆಸ್ಟ್​ ಕಳುಹಿಸುವ ಮೂಲಕ ಸಂದೇಶವನ್ನು ಕಳುಹಿಸಬಹುದಾಗಿದೆ.

ವೂ

ನಿಮ್ಮ ಫೇಸ್​ಬುಕ್​ ಅಥವಾ ಇ-ಮೇಲ್​ ಮೂಲಕ ವ್ಯೂ ಆ್ಯಪ್​ ಲಾಗಿನ್​ ಆಗಬಹುದು. ನಿಮ್ಮ ಹೆಸರು ಮತ್ತು ನಂಬರ್​ ಮೂಲಕ ಪ್ರೊಫೈಲ್​  ಪ್ರಾರಂಭಿಸಿ ನಿಮ್ಮ ನೆಚ್ಚಿನ ಸ್ನೇಹಿತರೊಂದಿದೆ ಸಂದೇಶ ಕಳುಹಿಸಬಹುದು. ವ್ಯೂ ಆ್ಯಪ್​ನಲ್ಲಿ ನಂಬರ್​ ಮತ್ತು ಲೊಕೇಷನ್​​ ತಿಳಿಸದೆ ಧ್ವನಿಯ ಮೂಲಕ ಪರಿಚಯಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಿದೆ.

 ಹ್ಯಾಪನ್​

ಲೊಕೇಷನ್​ ಆಧಾರಿತವಾದ ಹ್ಯಾಪನ್​  ಆ್ಯಪ್​ ಅನ್ನು ಸಾಕಷ್ಟು ಜನರು ಬಳಸುತ್ತಿದ್ದು ಇದು ಕೂಡ ಡೇಟಿಂಗ್​ ಆ್ಯಪ್​ ಆಗಿದೆ. ಲೊಕೇಷನ್​ ಆಧಾರಿತವಾಗಿ ಕಾರ್ಯ ನಿರ್ವಹಿಸುವ ಹ್ಯಾಪನ್​ ಆ್ಯಪ್​ನಲ್ಲಿ ರಿಕ್ವೆಸ್ಟ್​ ಕಳುಹಿಸಿ ನಿಮ್ಮ ನೆಚ್ಚಿನ ಸ್ನೇಹಿತರೊಂದಿಗೆ ಮಾತನಾಡಬಹುದು.
Loading...

ಇದನ್ನೂ ಓದಿ: ‘ಪಬ್​ಜಿ‘ ಚಟಕ್ಕೆ ಮತ್ತೊಂದು ಬಲಿ; ಹೊಸ ಮೊಬೈಲ್​ ಕೊಡಿಸದ್ದಕ್ಕೆ ಮನನೊಂದು ಆತ್ಮಹತ್ಯೆ

ಟಿಂಡರ್

ಭಾರತದಲ್ಲಿ ಜನಪ್ರೀಯತೆ ಹೊಂದುತ್ತಿರುವ ಟಿಂಡರ್​ ಆ್ಯಪ್​ ಪ್ಲೇ ಸ್ಟೋರ್​ನಲ್ಲಿ ಲಭ್ಯವಿದ್ದು, ಇದೊಂದು ಡೇಟಿಂಗ್​ ಆ್ಯಪ್​ ಆಗಿದೆ. ಲೊಕೆಶನ್​ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಟಿಂಡರ್​ ಆ್ಯಪ್​, ನಿಮ್ಮ  ಸುತ್ತಮುತ್ತಲಿನಲ್ಲಿರುವ ಟಿಂಡರ್​ ಆ್ಯಪ್​ ಬಳಕೆಗಾರರ  ಪ್ರೊಫೈಲ್​ಗಳನ್ನು ತೋರಿಸುತ್ತದೆ. ಬಳಕೆದಾರರು ದಿನಕ್ಕೆ ನಿಯಮಿತ ಪ್ರೊಫೈಲ್​ಗಳನ್ನು ಮಾತ್ರ ನೋಡಬಹುದಾಗಿದೆ.ಹೆಚ್ಚಿನ ಪ್ರೊಫೈಲ್​​ ಇಚ್ಚಿಸುದಾದರೆ ದರ ನೀಡ ಬೇಕಾಗಿದ್ದು, ಇಷ್ಟವಾದ ಪ್ರೊಫೈಲ್​ ಬಳಕೆದಾರರೊಂದಿಗೆ ಚಾಟ್​ ಮಾಡಬಹುದಾಗಿದೆ.

ಟ್ರೂಲಿ ಮ್ಯಾಡ್ಲಿ

ಇದೊಂದು ಡೇಟಿಂಗ್​ ಆ್ಯಪ್​ ಆಗಿದ್ದು, ಸಾಕಷ್ಟು ಯುವಕರು ಟ್ರೂಲಿ ಮ್ಯಾಡ್ಲಿ ಆ್ಯಪ್​ ಅನ್ನು ಬಳಸುತ್ತಿದ್ದಾರೆ. ಬಳಕೆದಾರರು  ಈ ಡೇಟಿಂಗ್​ ಆ್ಯಪ್​ ಬಳಸುದಾದರೆ ನಿಮ್ಮ ಪ್ರೊಫೈಲ್​  ಹಾಗೂ ಗುರುತಿನ ಪುರಾವೆಯನ್ನು ಖಚಿತ ಪಡಿಸಿಬೇಕಾಗುತ್ತದೆ. ನಿಮ್ಮ ಪ್ರೊಫೈಲ್​ ಆಧಾರದ ಮೇಲೆ  ನಿಮಗೆ ಸರಿಹೊಂದುವ ಪ್ರೊಫೈಲ್​ಗಳು ದೊರೆಯುತ್ತದೆ. ನಿಮಗೆ ಇಷ್ಟವಾದ ವ್ಯಕ್ತಿಯೊಂದಿಗೆ ಪ್ರತ್ಯೇಕ ಸಂದೇಶ ರವಾನಿಸಲು ಅವಕಾಶ ಇದರಲ್ಲಿ ನೀಡಲಾಗಿದೆ.

First published:February 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...