ನಿಮ್ಮ ಮೊಬೈಲ್ Internet Speed ಹೆಚ್ಚಾಗಲು ಈ 5 Appಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ಸಾಕು

how to check mobile internet speed: ಹೆಚ್ಚಿನ ವೇಗದ ಇಂಟರ್ನೆಟ್ ನೀಡುತ್ತೇವೆ ಎಂದು ಆಕರ್ಷಿಸುವ ಕಂಪನಿಗಳು ಅದಕ್ಕಾಗಿ ಹೆಚ್ಚಿನ ಹಣವನ್ನು ವ್ಯಹಿಸುವಂತೆ ಮಾಡುತ್ತವೆ. ವಾಸ್ತವವಾಗಿ, ಅವರು ನೀಡುವ ಜಾಹೀರಾತುಗಳಿಗೂ ಇಂಟರ್ನೆಟ್‌ಗೂ ಯಾವುದೇ ಸಂಬಂಧವಿಲ್ಲ. ಅದಕ್ಕಾಗಿಯೇ ನಿಮ್ಮ ಇಂಟರ್ನೆಟ್ ವೇಗವು ಎಷ್ಟು ವೇಗವಾಗಿದೆ ಎಂದು ನೀವು ಪರಿಶೀಲಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
how to increase mobile internet speed : ಇಂದಿನ ತಂತ್ರಜ್ಞಾನ ಯುಗದಲ್ಲಿ ಎಲ್ಲದಕ್ಕೂ ಇಂಟರ್ನೆಟ್‌ ಬೇಕು. ವಿಶೇಷವಾಗಿ ಕೊರೊನಾ-ಲಾಕ್​​ಡೌನ್​​ ನಂತರ ಇಂಟರ್ನೆಟ್ ಬಳಕೆ ಮತ್ತಷ್ಟು ಹೆಚ್ಚಾಗಿದೆ. ಮತ್ತೊಂದೆಡೆ ಆನ್‌ಲೈನ್ ತರಗತಿಗಳು, ಮನೆಯಿಂದ ಕೆಲಸ ಮಾಡುವ ಕಾರಣದಿಂದಾಗಿ ಬ್ರಾಡ್‌ಬ್ಯಾಂಡ್ ಸಂಪರ್ಕ ಅಥವಾ ಮೊಬೈಲ್ ಡೇಟಾವು ಪ್ರತಿಯೊಂದು ಮನೆಯಲ್ಲೂ ಅನಿವಾರ್ಯವಾಗಿದೆ. ಹೆಚ್ಚಿನ ವೇಗದ ಇಂಟರ್ನೆಟ್ ನೀಡುತ್ತೇವೆ ಎಂದು ಆಕರ್ಷಿಸುವ ಕಂಪನಿಗಳು ಅದಕ್ಕಾಗಿ ಹೆಚ್ಚಿನ ಹಣವನ್ನು ವ್ಯಹಿಸುವಂತೆ ಮಾಡುತ್ತವೆ. ವಾಸ್ತವವಾಗಿ, ಅವರು ನೀಡುವ ಜಾಹೀರಾತುಗಳಿಗೂ ಇಂಟರ್ನೆಟ್‌ಗೂ ಯಾವುದೇ ಸಂಬಂಧವಿಲ್ಲ. ಅದಕ್ಕಾಗಿಯೇ ನಿಮ್ಮ ಇಂಟರ್ನೆಟ್ ವೇಗವು ಎಷ್ಟು ವೇಗವಾಗಿದೆ ಎಂದು ನೀವು ಪರಿಶೀಲಿಸಬೇಕು. ಇದಕ್ಕಾಗಿ ಹಲವು ಆಪ್‌ಗಳು ಲಭ್ಯವಿದೆ. ಇವುಗಳು ನಿಮ್ಮ ಇಂಟರ್ನೆಟ್ ಸಂಪರ್ಕ ಮತ್ತು ಇಂಟರ್ನೆಟ್ ವೇಗವನ್ನು ಸುಲಭವಾಗಿ ಅಂದಾಜು ಮಾಡಬಹುದು. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ವೇಗವನ್ನು ಪರೀಕ್ಷಿಸಲು ಬಳಸಬಹುದಾದ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ನೋಡೋಣ.

1) ಒಕ್ಲಾ ಸ್ಪೀಡ್ ಟೆಸ್ಟ್ (Ookla Speed Test): ಇಂಟರ್ನೆಟ್ ವೇಗ ಪರೀಕ್ಷೆಗಾಗಿ ಹೆಚ್ಚು ಬಳಸುವ ಆ್ಯಪ್​ ಇದಾಗಿದೆ. ಆಂಡ್ರಾಯ್ಡ್ ಹಾಗೂ ಆಪಲ್ ಸ್ಟೋರ್ ನಲ್ಲಿ ಈ ಆಪ್ ಲಭ್ಯವಿದೆ. ಓಕ್ಲಾ ಸ್ಪೀಡ್ ಟೆಸ್ಟ್ ಮೂಲಕ ನೀವು ನಿಜವಾದ ಇಂಟರ್ನೆಟ್ ವೇಗವನ್ನು ಕಂಡು ಹಿಡಿಯಬಹುದು. ಆದಾಗ್ಯೂ, ಇದಕ್ಕಾಗಿ ನೀವು ನಿಮ್ಮ ಸ್ಥಳ ಮತ್ತು ಇತರ ಅನುಮತಿಗಳನ್ನು ನೀಡಬೇಕಾಗುತ್ತದೆ. ಒಕ್ಲಾವನ್ನು ಡೆಸ್ಕ್‌ಟಾಪ್ ಬ್ರೌಸರ್ ಆವೃತ್ತಿಯಲ್ಲಿಯೂ ಬಳಸಬಹುದು.

2) ಸ್ಪೀಡ್‌ಟೆಸ್ಟ್‌ಮಾಸ್ಟರ್ (SpeedTest Master ): ಇದು ಆಂಡ್ರಾಯ್ಡ್ ಫೋನ್​​ಗಳಲ್ಲಿ ನಿಮ್ಮ ಇಂಟರ್ನೆಟ್ ವೇಗವನ್ನು ಪರೀಕ್ಷಿಸಲು ಬಳಸುವ ಜನಪ್ರಿಯ ಅಪ್ಲಿಕೇಶನ್. ಡೌನ್ಲೋಡ್ ಮತ್ತು ಅಪ್ಲೋಡ್ ವೇಗದ ಆಯ್ಕೆಗಳು ಅದರ ಮುಖಪುಟ ಪ್ರದರ್ಶನದಲ್ಲಿ ಕಾಣಿಸಿಕೊಳ್ಳುತ್ತವೆ. ನಿಮ್ಮ ಇಂಟರ್ನೆಟ್ ವೇಗವನ್ನು ಸುಲಭವಾಗಿ ಪರಿಶೀಲಿಸಲು ಇವು ನಿಮಗೆ ಅವಕಾಶ ನೀಡುತ್ತವೆ. ಇದರಲ್ಲಿ 4G, 5G, DSL, ADSL ಇಂಟರ್ನೆಟ್ ವೇಗವನ್ನು ಪರೀಕ್ಷಿಸಬಹುದು. ಸ್ಪೀಡ್‌ಟೆಸ್ಟ್‌ಮಾಸ್ಟರ್ "ವೈ-ಫೈ ವಿಶ್ಲೇಷಕ" ವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 3G, 4G LTE ಅಥವಾ 5G ನೆಟ್‌ವರ್ಕ್ ಸಂಪರ್ಕದೊಂದಿಗೆ ನೀವು ಇಂಟರ್ನೆಟ್ ವೇಗವನ್ನು ಅಂದಾಜಿಸಬಹುದು.

3) Meteor app: ಇದರಲ್ಲಿ ಯಾವುದೇ ಜಾಹೀರಾತುಗಳಿಲ್ಲ. ಈ ಆಪ್ ಬಳಸಿ, ನೀವು ಇಂಟರ್ನೆಟ್ ವೇಗವನ್ನು ಮಾತ್ರವಲ್ಲದೆ ಆಪ್‌ಗಳು ಎಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಕೂಡ ಪರಿಶೀಲಿಸಬಹುದು.

ಇದನ್ನೂ ಓದಿ: Instagram ಫಾಲೋವರ್ಸ್ ಸಂಖ್ಯೆ ಹೆಚ್ಚಾಗಲು ಈ Websiteಗಳನ್ನು ಬಳಸಿ.. ಇದರಿಂದ ಲಕ್ಷಾಂತರ ರೂಪಾಯಿ ಗಳಿಸಿ

4) Internet Speed ​​Test Meter : ಇಂಟರ್ನೆಟ್ ಸ್ಪೀಡ್ ಟೆಸ್ಟ್ ಮೀಟರ್ ಆಪ್ ಮೂಲಕ ನಿಮ್ಮ ಇಂಟರ್ನೆಟ್ ವೇಗವನ್ನು ಸುಲಭವಾಗಿ ಅಂದಾಜು ಮಾಡಬಹುದು. ಈ ಅಪ್ಲಿಕೇಶನ್ ಬಣ್ಣ ಇಂಟರ್ಫೇಸ್ ಹೊಂದಿದೆ. ಈ ಆಪ್ ಮೂಲಕ ನೀವು ಡೌನ್ಲೋಡ್ ಮತ್ತು ಅಪ್ಲೋಡ್ ವೇಗವನ್ನು ಪರಿಶೀಲಿಸಬಹುದು. ಅಗತ್ಯವಿರುವಂತೆ ಡಾರ್ಕ್ ಮತ್ತು ಲೈಟ್ ಮೋಡ್‌ಗಳ ನಡುವೆ ಬದಲಿಸಿ., ಕಡಿಮೆ ಸಂಗ್ರಹಣೆ ಮತ್ತು RAM ಸಂರಚನೆಗಳನ್ನು ಹೊಂದಿರುವ ಬಳಕೆದಾರರು ಸ್ಪೀಡ್‌ಟೆಸ್ಟ್ ಮಾಸ್ಟರ್ ಲೈಟ್ ಅನ್ನು ಸಹ ಬಳಸಬಹುದು, ಇದು 3 MB ಗಿಂತ ಕಡಿಮೆ ಗಾತ್ರವನ್ನು ಹೊಂದಿದೆ.

5) Google Speed ​​Test: ಗೂಗಲ್ ಸ್ಪೀಡ್ ಟೆಸ್ಟ್ ಆಪ್ ಎರಡು ರೂಪಗಳಲ್ಲಿ ಲಭ್ಯವಿದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕ್ರೋಮ್ ಬ್ರೌಸರ್‌ನಲ್ಲಿ ಗೂಗಲ್ ಸ್ಪೀಡ್ ಟೆಸ್ಟ್ ಅನ್ನು ಹುಡುಕುವ ಮೂಲಕ ನಿಮ್ಮ ಇಂಟರ್ನೆಟ್ ವೇಗವನ್ನು ನೀವು ಪರಿಶೀಲಿಸಬಹುದು. ಇದು ಬಳಕೆದಾರರಿಗೆ ಅಪ್‌ಲೋಡ್ ಮತ್ತು ಡೌನ್‌ಲೋಡ್ ವೇಗ ಹಾಗೂ ಸಂಪರ್ಕ ಸಮಯವನ್ನು ಪರಿಶೀಲಿಸಲು ಅನುಮತಿಸುತ್ತದೆ. ಇವುಗಳಲ್ಲಿ ಯಾವುದಾದರೂ ಒಂದು ಆ್ಯಪನ್ನು ಬಳಸಿ ನೆಟ್​ ಸ್ಪೀಡನ್ನು ತಿಳಿಯಿರಿ
Published by:Kavya V
First published: