Electric Scooter ತಗೊಳೋ ಪ್ಲ್ಯಾನ್ ಮಾಡಿದ್ರೆ ಇಲ್ಲಿದೆ ಕೆಲ ಟಿಪ್ಸ್​?

ಎಲೆಕ್ಟ್ರಿಕ್​ ಸ್ಕೂಟರ್​

ಎಲೆಕ್ಟ್ರಿಕ್​ ಸ್ಕೂಟರ್​

ಇಂದಿನ ಲೇಖನದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಇನ್ನಿತರ ಸ್ಕೂಟರ್‌ಗಳಿಗಿಂತ ಉತ್ತಮವೇ? ದಿನಕ್ಕೆ 25 ಕಿಮೀನಿಂದ 40 ಕಿಮೀ ಪ್ರಯಾಣಿಸುವವರಿಗೆ ಈ ಸ್ಕೂಟರ್ ಸೂಕ್ತವೇ ಎಂಬುದನ್ನು ಹಲವಾರು ವಿಮರ್ಶೆ ಹಾಗೂ ಪರಿಣಿತರ ಅನಿಸಿಕೆಗಳ ಮೂಲಕ ತಿಳಿದುಕೊಳ್ಳೋಣ.

  • Share this:
  • published by :

ಆಧುನಿಕ ಯುಗದಲ್ಲಿ ಇಲೆಕ್ಟ್ರಿಕ್ ಸ್ಕೂಟರ್‌ಗಳು (Electric Scooter) ಪ್ರಸಿದ್ಧಿ ಪಡೆದುಕೊಳ್ಳುತ್ತಿವೆ. ಈಗ ಎಲ್ಲಿ ನೋಡಿದರೂ ಇಲೆಕ್ಟ್ರಿಕ್ ಸ್ಕೂಟರ್‌ಗಳದ್ದೇ ಕಾರುಬಾರು. ಹೆಚ್ಚಿನವರು ತಮ್ಮ ದೈನಂದಿನ ಸ್ಕೂಟರ್‌ಗಳಿಗಿಂತ ಎಲೆಕ್ಟ್ರಿಕ್ ಸ್ಕೂಟರ್‌ಗಳೇ ಬೆಸ್ಟ್ ಎಂದು ಈ ಸ್ಕೂಟರ್‌ಗಳಿಗೆ ಬದಲಾಯಿಸಿಕೊಂಡಿದ್ದಾರೆ. ಇಂದಿನ ಲೇಖನದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಇನ್ನಿತರ ಸ್ಕೂಟರ್‌ಗಳಿಗಿಂತ ಉತ್ತಮವೇ? ದಿನಕ್ಕೆ 25 ಕಿಮೀನಿಂದ 40 ಕಿಮೀ ಪ್ರಯಾಣಿಸುವವರಿಗೆ ಈ ಸ್ಕೂಟರ್ ಸೂಕ್ತವೇ ಎಂಬುದನ್ನು ಹಲವಾರು ವಿಮರ್ಶೆ (Review) ಹಾಗೂ ಪರಿಣಿತರ ಅನಿಸಿಕೆಗಳ ಮೂಲಕ ತಿಳಿದುಕೊಳ್ಳೋಣ.


ಸಣ್ಣ ಸವಾರಿಗೆ ಸೂಕ್ತ ಇಲೆಕ್ಟ್ರಿಕ್ ಸ್ಕೂಟರ್


ಸುಜುಕಿ ಆಕ್ಸೆಸ್ 125 ಸ್ಕೂಟರ್ ಸಣ್ಣ ಸವಾರಿಗಳಿಗೆ ಹೇಳಿ ಮಾಡಿಸಿದ ಇಲೆಕ್ಟ್ರಿಕ್ ಸ್ಕೂಟರ್ ಎಂದೆನಿಸಿದ್ದು ಸ್ಕೂಟರ್ ಮಾಸಿಕ ಬಳಕೆ ಗರಿಷ್ಠ 500 ಕಿ.ಮೀ ಆಗಿದ್ದು 4.ಕಿ.ಮೀನೊಳಗಿನ ಸವಾರಿಗಳಿಗೆ ಸೂಕ್ತ ಆಯ್ಕೆ ಎಂದೆನಿಸಿದೆ.


ಈ ಸ್ಕೂಟರ್ ಅನ್ನು ನಿಮ್ಮ ದೈನಂದಿನ ಕೆಲಸಗಳಾದ ಮಕ್ಕಳನ್ನು ಶಾಲೆಯಿಂದ ಕರೆತರುವುದು, ದಿನಸಿ ತರುವುದು, ಮಕ್ಕಳನ್ನು ಸಂಜೆಯ ಕ್ರೀಡಾಕೂಟಗಳಿಗೆ ಕರೆದೊಯ್ಯುವುದು ಹೀಗೆ ಸಣ್ಣ ಸಣ್ಣ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದಾಗಿದೆ. ಇಲ್ಲಿ ನಾವು ಮೊದಲೇ ಸೂಚಿಸಿರುವಂತೆ ಈ ಸ್ಕೂಟರ್ 4 ಕಿ.ಮೀ ನೊಳಗಿನ ಪ್ರಯಾಣಕ್ಕೆ ಮಾತ್ರವೇ ಸೂಕ್ತವಾಗಿದೆ.


ಇಂಧನ ದಕ್ಷತೆ ಕಡಿಮೆ ಇದೆ


ಸಣ್ಣ ಪ್ರಯಾಣಗಳಿಗೆ ಸೂಕ್ತವಾಗಿರುವ ಈ ಸ್ಕೂಟರ್ ಇಂಧನ ದಕ್ಷತೆ (32 kmpl) ಕಡಿಮೆ ಇದೆ. ದೀರ್ಘ ಪ್ರಯಾಣಕ್ಕೂ ಈ ಸ್ಕೂಟರ್ ಉತ್ತಮವಾಗಿದ್ದರೂ ಅದನ್ನು ಬಳಸುವ ಸಾಮರ್ಥ್ಯವನ್ನು ಆವಲಂಬಿಸಿದೆ.


ಇದನ್ನೂ ಓದಿ: ರೀಲ್ಸ್​ ಪ್ರಿಯರಿಗೆ ಸಂತಸದ ಸುದ್ದಿ, ಮಾಂಕ್ ಮೋಡ್​ನಿಂದ ನೀವು ಫೇಮಸ್​ ಆಗ್ಬಹುದು!


ಇದುವರೆಗಿನ ಅಂಕಿಅಂಶಗಳ ಪ್ರಕಾರ ಇದುವರೆಗೆ ಈ ಸ್ಕೂಟರ್ 45,000 ಕಿಮೀ ಸವಾರಿ ಮಾಡಿದೆ ಹಾಗೂ ಇದೇ ವರ್ಷ ಆಗಸ್ಟ್‌ನಲ್ಲಿ 14 ವರ್ಷಗಳನ್ನು ಪೂರೈಸುತ್ತದೆ ಎಂಬುದಾಗಿ ಇಲೆಕ್ಟ್ರಿಕ್ ಸ್ಕೂಟರ್ ಸವಾರರು ಅಭಿಪ್ರಾಯ ತಿಳಿಸಿದ್ದಾರೆ.


ಇಲೆಕ್ಟ್ರಿಕ್ ಸ್ಕೂಟರ್ ಆಯ್ಕೆಮಾಡುವ ಮುನ್ನ ಕೆಲವೊಂದು ಸಲಹೆ


ಇಲೆಕ್ಟ್ರಿಕ್ ಸ್ಕೂಟರ್ ಅನ್ನು ಆಯ್ಕೆಮಾಡುವ ಮುನ್ನ ನಿಮ್ಮ ಪ್ರಯಾಣದ ಅವಧಿ ಎಷ್ಟು ಹಾಗೂ ಎಷ್ಟು ಕಿಲೋಮೀಟರ್ ದಿನವೂ ಪ್ರಯಾಣಿಸುತ್ತೀರಿ ಎಂಬುದನ್ನು ಅರಿತುಕೊಳ್ಳಿ.


ಪ್ರತಿನಿತ್ಯ 25 ರಿಂದ 40 ಕಿ.ಮೀ ಪ್ರಯಾಣಿಸುತ್ತಿರುವವರು ನೀವಾಗಿದ್ದರೆ ಎಲೆಕ್ಟ್ರಿಕ್ ಸ್ಕೂಟರ್ ವ್ಯರ್ಥವಾಗುತ್ತದೆ ಎಂಬುದು ಅವರ ಸಲಹೆಯಾಗಿದೆ. ಏಕೆಂದರೆ ಇಂಧನ ದಕ್ಷತೆ ಕಡಿಮೆ ಇರುವುದರಿಂದ ನೀವು ಹೆಚ್ಚುವರಿ ಪ್ರಯಾಣ ಮಾಡಬಹುದು ಎಂಬ ಲೆಕ್ಕಾಚಾರ ಇಲ್ಲಿ ತಪ್ಪಾಗುತ್ತದೆ ಎಂಬುದು ಅವರ ಸಲಹೆಯಾಗಿದೆ.


ಬಳಕೆಯ ಮಾದರಿಗೆ ಅನ್ವಯಿಸಿಕೊಂಡು ಎಲೆಕ್ಟ್ರಿಕ್ ಸ್ಕೂಟರ್‌ಗೆ ಮಾರ್ಪಡಿಸಿಕೊಳ್ಳಿ ಎಂಬುದು ಮಾರುಕಟ್ಟೆ ಪರಿಣಿತರ ಅಭಿಪ್ರಾಯವಾಗಿದೆ. ಏಕೆಂದರೆ ಯಾವುದೇ ವಾಹನ ಖರೀದಿಸುವುದಕ್ಕಿಂತ ಮುನ್ನ ಇಂಧನ ಪ್ರಮಾಣ, ಮೈಲೇಜ್ ಹಾಗೂ ಸವಾರಿಯ ವಿವರವನ್ನು ಅರಿತುಕೊಂಡಿರಬೇಕಾಗುತ್ತದೆ.


ನಿಮ್ಮ ಅಗತ್ಯಕ್ಕೆ ತಕ್ಕಂತೆ ಇಲೆಕ್ಟ್ರಿಕ್ ಸ್ಕೂಟರ್ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಂಡು ಆಯ್ಕೆಮಾಡಿ ಎಂಬುದು ಅಭಿಪ್ರಾಯವಾಗಿದೆ.


ಸ್ಕೂಟರ್ ಖರೀದಿಸುವುದಕ್ಕಿಂತ ಮೊದಲು ಅಗ್ಗ ಹಾಗೂ ದುಬಾರಿ ಯಾವುದು ಎಂಬುದನ್ನು ಕಂಡುಕೊಳ್ಳಿ


ಹೊಸ ಸ್ಕೂಟರ್ ಆಯ್ಕೆ ನಿಮಗೆ ಬೇಕೇ ಬೇಡವೇ ಎಂಬುದನ್ನು ಸವಾರ ತೀರ್ಮಾನಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ. ನಿಮ್ಮ ಬಳಿ ಇರುವ ಸ್ಕೂಟರ್ ಉತ್ತಮ ಸ್ಥಿತಿಯಲ್ಲಿದ್ದರೆ ಸ್ವಲ್ಪ ರಿಪೇರಿ ಖರ್ಚುಗಳು ಬರುತ್ತವೆ ಅದಾಗ್ಯೂ ಹಳೆಯ ಸ್ಕೂಟರ್‌ ಆಯ್ಕೆಯನ್ನೇ ಮುಂದುವರಿಸುವುದು ಅಗ್ಗದ ಆಯ್ಕೆಯಾಗಿರುತ್ತದೆ.


ಇದನ್ನೂ ಓದಿ: ಇನ್ಮುಂದೆ ಬೆಂಕಿ ಇಲ್ಲದೇ ಅನ್ನ-ಮೊಟ್ಟೆ ಬೇಯಿಸಬಹುದು! ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಲೆಕ್ಟ್ರಿಕ್ ಕುಕ್ಕರ್


ಇಲೆಕ್ಟ್ರಿಕ್ ಸ್ಕೂಟರ್ ಪ್ರತಿ ತಿಂಗಳಿಗೆ 500 ಕಿಮೀ ಪ್ರಯಾಣಕ್ಕೆ ಮಾತ್ರ ಸೂಕ್ತವಾಗಿದೆ. ಟಿವಿಎಸ್ ಐ ಕ್ಯೂಬ್ ಸ್ಕೂಟರ್ ಎಲ್ಲಾ ಆಕ್ಟೀವಾ, ಜ್ಯುಪಿಟರ್ಸ್ ಹಾಗೂ ಆಕ್ಸೆಸ್ ಸ್ಕೂಟರ್‌ಗಳಿಗಿಂತ ಉತ್ತಮ ಆಯ್ಕೆಯಾಗಿದೆ.




ಟಿವಿಎಸ್ ಐಕ್ಯೂಬ್ ಇತರೆ ಸ್ಕೂಟರ್‌ಗಳಿಗಿಂತ ಉತ್ತಮ ವೇಗವರ್ಧನೆಯನ್ನು ಹೊಂದಿದೆ ಅಂತೆಯೇ ಅಥರ್ಸ್ ಅಥವಾ ಓಲಾಸ್‌ಗಿಂತ ಕಡಿಮೆ ಬೆಲೆಯಲ್ಲಿ ಉತ್ತಮ, ಆರಾಮದಾಯಕ ಮತ್ತು ವಿಶ್ವಾಸಾರ್ಹ ಸವಾರಿಯನ್ನು ಒದಗಿಸುತ್ತದೆ ಎಂಬುದು ಬಳಕೆದಾರರ ಸಲಹೆಯಾಗಿದೆ.

First published: