US ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ ಅಲ್ಜೈಮರ್ ಕಾಯಿಲೆಯನ್ನು ಪತ್ತೆ ಹಚ್ಚುವ ಆ್ಯಪ್!

Alzheimer’s Disease: ಪ್ರಪಂಚದಲ್ಲಿ ಕನಿಷ್ಠ 50 ಮಿಲಿಯನ್ ಜನರು ಬಳಲುತ್ತಿದ್ದಾರೆಂದು ಹೇಳಲಾಗುವ ಅಲ್ಜೈಮರ್ ಕಾಯಿಲೆಯ ಆರಂಭಿಕ ಹಂತವನ್ನು ಪತ್ತೆಹಚ್ಚಲು ಒಂದು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಳೆದ ಕೆಲ ವರ್ಷಗಳಲ್ಲಿ ತಂತ್ರಜ್ಞಾನ (Technology) ಎಷ್ಟು ಪ್ರಗತಿ ಸಾಧಿಸಿದೆ ಎಂದರೆ ಅದರ ಹಲವು ಪ್ರಯೋಜನಗಳು ವೈದ್ಯಕೀಯ ಕ್ಷೇತ್ರದಲ್ಲೂ (Medical field) ನೆರವಾಗುತ್ತಲಿದೆ. ಅದರಲ್ಲೂ ಆರೋಗ್ಯ ಸುರಕ್ಷತೆಗೆ (Health care) ಸಂಬಂಧಿಸಿದಂತೆ ತಂತ್ರಜ್ಞಾನದ ಸುಧಾರಿತ ಸಂಯೋಜನೆಯು ರೋಗಿಗಳ ರೋಗನಿರ್ಣಯ ಮತ್ತು ಚಿಕಿತ್ಸೆಗೆ ಕಾರಣವಾಗಿದೆ ಎಂದರೂ ತಪ್ಪಾಗಲಾರದು. ಈಗ, ಈ ನಿಟ್ಟಿನಲ್ಲಿ ಮತ್ತೊಂದು ತಂತ್ರಾಜ್ಞಾನಾಧಾರಿತ ಆ್ಯಪ್ ಈ ಕ್ಷೇತ್ರದಲ್ಲಿ ಸೇರ್ಪಡೆಯಾಗಿದೆ.

  ಹೌದು, ಈಗ ಏನಿಲ್ಲವೆಂದರೂ ಪ್ರಪಂಚದಲ್ಲಿ ಕನಿಷ್ಠ 50 ಮಿಲಿಯನ್ ಜನರು ಬಳಲುತ್ತಿದ್ದಾರೆಂದು ಹೇಳಲಾಗುವ ಅಲ್ಜೈಮರ್ ಕಾಯಿಲೆಯ ಆರಂಭಿಕ ಹಂತವನ್ನು ಪತ್ತೆಹಚ್ಚಲು ಒಂದು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

  ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದ ಸಂಶೋಧಕರು ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಪ್ರೋಟೋಟೈಪ್ ಅಪ್ಲಿಕೇಶನ್‌ನಲ್ಲಿರುವ ಸಾಫ್ಟ್‌ವೇರ್ ಆಗಿದ್ದು ವ್ಯಕ್ತಿಯ ಕಣ್ಣಿನ ಪ್ಯುಪಿಲ್ ಗಾತ್ರದಲ್ಲಿ ನಿಮಿಷಗಳಲ್ಲಾಗುವ ವ್ಯತ್ಯಾಸಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಹಾಗೂ ಇದು ಹಿಂದಿನ ಅಧ್ಯಯನಗಳ ಪ್ರಕಾರ ಪೂರ್ವ-ಕ್ಲಿನಿಕಲ್ ನರವೈಜ್ಞಾನಿಕ ಕಾಯಿಲೆಗೆ ಸಂಬಂಧಿಸಿದ್ದು ಆ ಮೂಲಕ ರೋಗ ಪತ್ತೆ ಮಾಡಲಿದೆ ಎನ್ನಲಾಗಿದೆ.

  ಮುಖದ ಗುರುತಿಸುವಿಕೆಗಾಗಿ, ಸಾಫ್ಟ್‌ವೇರ್ ಹೊಸ ಸ್ಮಾರ್ಟ್‌ಫೋನ್ ಮಾದರಿಗಳಲ್ಲಿ ಒಳಗೊಂಡಿರುವ ಸಮೀಪದ-ಇನ್‌ಫ್ರಾರೆಡ್ ಕ್ಯಾಮೆರಾವನ್ನು ಬಳಸುತ್ತದೆ, ಜೊತೆಗೆ ವ್ಯಕ್ತಿಯ ಪ್ಯುಪಿಲ್ ಗಾತ್ರದಲ್ಲಿ ಹೇಗೆ ಬದಲಾಗುತ್ತದೆ ಎಂಬುದನ್ನು ವಿಶ್ಲೇಷಿಸಲು ಪ್ರಮಾಣಿತ ಸೆಲ್ಫಿ ಕ್ಯಾಮೆರಾವನ್ನು ಬಳಸುತ್ತದೆ.

  ಏಪ್ರಿಲ್ 30 ಮತ್ತು ಮೇ 5 ರ ನಡುವೆ, ನ್ಯೂ ಓರ್ಲಿಯನ್ಸ್‌ನಲ್ಲಿನ ಎಸಿಎಂ ಕಂಪ್ಯೂಟರ್-ಹ್ಯೂಮನ್ ಇಂಟರ್‍ಯಾಕ್ಷನ್ ಕಾನ್ಫರೆನ್ಸ್ ಆನ್ ಕಂಪ್ಯೂಟಿಂಗ್ ಸಿಸ್ಟಮ್ಸ್ (CHI 2022) ನಲ್ಲಿ ಈ ತಂತ್ರಜ್ಞಾನವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ವಿಸ್ತೃತವಾದ ಪ್ರಬಂಧವನ್ನು ಮಂಡಿಸಲಾಯಿತು. ಆದರೆ ಅಧ್ಯಯನವನ್ನು ಇನ್ನೂ ಪೀರ್-ರಿವ್ಯೂ ಮತ್ತು ಜರ್ನಲ್‌ನಲ್ಲಿ ಪ್ರಕಟಿಸಬೇಕಾಗಿದೆ ಎಂದು ತಿಳಿದುಬಂದಿದೆ.

  ಇದನ್ನೂ ಓದಿ: Amazon Summer Sale 2022: ಸ್ಮಾರ್ಟ್‌ಫೋನ್‌, ಟಿವಿ, ಇಯರ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

  ಸಂಕೇತಗಳನ್ನು ಗುರುತಿಸುವುದು

  ಆಲ್ಜೈಮರ್ ಕಾಯಿಲೆಯ ಲಕ್ಷಣಗಳನ್ನು ತೋರಿಸುವ ಮೆದುಳಿನ ಮೊದಲ ಪ್ರದೇಶಗಳಲ್ಲಿ ಲೊಕಸ್ ಕೋರುಲಿಯಸ್ ಒಂದು ಎಂದು ಕಂಡುಹಿಡಿದ ಸಂಶೋಧನೆಯ ಆಧಾರದ ಮೇಲೆ ಈ ಅಪ್ಲಿಕೇಷನ್ನಿನ ಪರಿಕಲ್ಪನೆಯು ಹೊರಹೊಮ್ಮಿದೆ ಎಂದು ತಿಳಿದುಬಂದಿದೆ.

  ಮೆದುಳಿನ ಪ್ರದೇಶವು ಪ್ಯುಪಿಲ್ ಹಿಗ್ಗುವಿಕೆಯನ್ನು ನಿಯಂತ್ರಿಸಲು ಮುಖ್ಯವಾಗಿದೆ, ಮತ್ತು ಈ ನಿಟ್ಟಿನಲ್ಲಿ ಆದ ಆರಂಭಿಕ ಸಂಶೋಧನೆಯು ಅರಿವಿನ ಆರೋಗ್ಯಕರ ಸ್ಥಿತಿ ಹೊಂದಿರುವ ಜನರಿಗಿಂತ ಸೌಮ್ಯವಾದ ಅರಿವಿನ ದುರ್ಬಲತೆ ಹೊಂದಿರುವ ಜನರು ಸಾಮಾನ್ಯವಾಗಿ ಕಷ್ಟಕರವಾದ ಅರಿವಿನ ಪರೀಕ್ಷೆಯನ್ನು ತೆಗೆದುಕೊಳ್ಳುವಾಗ ಹೆಚ್ಚು ಪ್ಯುಪಿಲ್ ಹಿಗ್ಗುವಿಕೆಯನ್ನು ಅನುಭವಿಸುತ್ತಾರೆ ಎಂದು ಕಂಡುಹಿಡಿದಿದೆ.

  ವರದಿಯಂತೆ, ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಎರಿಕ್ ಗ್ರಾನ್‌ಹೋಮ್ ಅವರು ಪ್ರಸ್ತುತ ಸ್ಮಾರ್ಟ್‌ಫೋನ್ ಕ್ಯಾಮೆರಾ ತಂತ್ರಜ್ಞಾನವನ್ನು ಬಳಸಿಕೊಂಡು ವಿಶ್ವಾಸಾರ್ಹವಾಗಿ ಪ್ಯುಪಿಲ್ ಹಿಗ್ಗುವಿಕೆ ಡೇಟಾವನ್ನು ಪಡೆಯಬಹುದೇ ಎಂದು ತನಿಖೆ ಮಾಡಲು ಯುನಿವರ್ಸಿಟಿ ಕ್ಯಾಲಿಫೊರ್ನಿಯಾ ಸ್ಯಾನ್ ಡಿಯಾಗೋ ಕಂಪ್ಯೂಟರ್ ಎಂಜಿನಿಯರ್‌ಗಳ ಗುಂಪಿನೊಂದಿಗೆ ಕೆಲಸ ಮಾಡಿದರು. ಈ ಸಹಯೋಗದಿಂದ ಹೊರಹೊಮ್ಮಿದ ಫಲಿತಾಂಶವೇ ಈ ಪ್ರೋಟೋಟೈಪ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಆಗಿದ್ದು ಇದನ್ನು ಮನೆಯಲ್ಲೂ ಸಹ ಬಳಸಬಹುದಾಗಿದೆ.

  ಇದನ್ನೂ ಓದಿ: BSNL Prepaid Plans: ಬಳಕೆದಾರರ ಮನಗೆದ್ದ ಕಡಿಮೆ ಬೆಲೆಯ 5 ಪ್ರಿಪೇಯ್ಡ್​ ಪ್ಲಾನ್​ಗಳಿವು!

  ಈ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ

  ಈ ಅಪ್ಲಿಕೇಶನ್‌ನ ವಿಶೇಷಣಗಳ ವಿಷಯದಲ್ಲಿ, ಇದು ಇಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಇನ್ಫ್ರಾರೆಡ್ ಕ್ಯಾಮೆರಾಗಳನ್ನು ಬಳಸುತ್ತದೆ. ಸ್ಮಾರ್ಟ್‌ಫೋನ್‌ ಬಳಸಿ ಅದರ ಮೂಲಕ ತೆಗೆಯಲಾದ ಬಣ್ಣದ ಸೆಲ್ಫಿಯನ್ನು ಡೇಟಾದೊಂದಿಗೆ ಸಂಯೋಜಿಸಿದಾಗ ಅಪ್ಲಿಕೇಶನ್ ತನ್ನ ಕಾರ್ಯಕ್ಷಮತೆಯ ಮೂಲಕ ವ್ಯಕ್ತಿಯ ಪ್ಯುಪಿಲ್ ವ್ಯಾಸವನ್ನು ಉಪ-ಮಿಲಿಮೀಟರ್ ಗಳಷ್ಟು ನಿಖರತೆಯೊಂದಿಗೆ ಪರಿಣಾಮಕಾರಿಯಾಗಿ ಸೆರೆಹಿಡಿದಿಟ್ಟುಕೊಳ್ಳುತ್ತದೆ.

  ಅಪ್ಲಿಕೇಶನ್ ಅನ್ನು ಇನ್ನೂ ಬಳಕೆದಾರ ಸ್ನೇಹಿಯಾಗಿ ಕಾರ್ಯಸಾಧ್ಯವಾಗುವಂತೆ ಮಾಡಲು, ಅಧ್ಯಯನ ತಂಡವು ಹಿರಿಯ ಜನರ ಗುಂಪಿನೊಂದಿಗೆ ಸರಳವಾದ ಇಂಟರ್ಫೇಸ್ ಅನ್ನು ರಚಿಸಲು ಕೆಲಸ ಮಾಡಿದೆ, ಇದು ಪ್ಯುಪಿಲ್ ಪ್ರತಿಸ್ಪಂದನದ ಪರೀಕ್ಷೆಗಳನ್ನು ಮನೆಯಿಂದಲೇ ನಿಖರವಾಗಿ ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ. ಇದು ಫೋನ್‌ನಲ್ಲಿ ಹೊಂದಿಕೊಳ್ಳುವ ಕಡಿಮೆ-ವೆಚ್ಚದ ಪ್ಲಾಸ್ಟಿಕ್ ಲಗತ್ತನ್ನು ರಚಿಸುವುದನ್ನು ಒಳಗೊಂಡಿದ್ದು ಪ್ಯುಪಿಲ್ ಅನ್ನು ರೆಕಾರ್ಡ್ ಮಾಡಲು ಕ್ಯಾಮರಾಗೆ ಸರಿಯಾದ ಸ್ಥಾನದಲ್ಲಿ ತಮ್ಮ ಕಣ್ಣನ್ನು ಇರಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

  ಹಿರಿಯ ವಯಸ್ಕರೊಂದಿಗಿನ ಕೆಲಸವು ಸಿಸ್ಟಂನ ಒಟ್ಟಾರೆ ಬಳಕೆಯನ್ನು ಸುಧಾರಿಸುವ ವಿಧಾನಗಳ ಬಗ್ಗೆ ತಿಳಿಯಲು ತಂಡಕ್ಕೆ ಸಾಕಷ್ಟು ಸಹಾಯ ಮಾಡಿದೆ ಎನ್ನಲಾಗಿದೆ.

  ಆದಾಗ್ಯೂ, ಅಪ್ಲಿಕೇಶನ್ ಇನ್ನೂ ಒಂದು ಮೂಲ ಮಾದರಿಯಾಗಿದ್ದು ವಾಣಿಜ್ಯಿಕವಾಗಿ ಇದನ್ನು ಪರಿಚಯಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ. ಆದರೆ, ಸೌಮ್ಯವಾದ ಅರಿವಿನ ದುರ್ಬಲತೆ ಹೊಂದಿರುವ ರೋಗಿಗಳಲ್ಲಿ ಅಪ್ಲಿಕೇಶನ್ ಅನ್ನು ಮೌಲ್ಯೀಕರಿಸುವುದು ಮತ್ತು ಅದರ ಫಲಿತಾಂಶಗಳನ್ನು ಪೂರ್ವಭಾವಿ ಆಲಜೈಮರ್ ಕಾಯಿಲೆ ಇರುವವರನ್ನು ಗುರುತಿಸಲು ಬಳಸಲಾಗುತ್ತದೆ ಎಂದು ತಿಳಿದುಬಂದಿದೆ.
  Published by:Harshith AS
  First published: