ಎಚ್ಚರ! ಅಮೆಜಾನ್​ ಅಲೆಕ್ಸಾ ಸ್ಪೀಕರ್​ ಬಳಕೆ ಮೊದಲು ಈ ಸ್ಟೋರಿ ಓದಿ

news18
Updated:May 27, 2018, 10:36 AM IST
ಎಚ್ಚರ! ಅಮೆಜಾನ್​ ಅಲೆಕ್ಸಾ ಸ್ಪೀಕರ್​ ಬಳಕೆ ಮೊದಲು ಈ ಸ್ಟೋರಿ ಓದಿ
news18
Updated: May 27, 2018, 10:36 AM IST
ನ್ಯೂಯಾರ್ಕ್​: ಅಮೆಜಾನ್​ನ ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಶಿಯಲ್​ ಇಂಟೆಲಿಜೆಂಟ್​ ವ್ಯವಸ್ಥೆಯ ಅಲೆಕ್ಸಾ ಸ್ಮಾರ್ಟ್​ ಸ್ಫೀಕರ್​ ಬಳಕೇದಾರರಿಗೆ ಒಂದು ಶಾಕಿಂಗ್​ ನ್ಯೂಸ್​, ಈ ಸ್ಪೀಕರ್​ ಬಳಕೆ ಮಾಡುವ ಮುನ್ನ ಈ ಸ್ಟೋರಿ ಓದಿ.

ಅಮೆರಿಕಾದ ಒರೆಗಾನ್​ನಲ್ಲಿ ಅಮೆಜಾನ್ ಇಕೋ ಸ್ಮಾರ್ಟ್‌ ಸ್ಪೀಕರ್ ಮನೆಯಲ್ಲಿ ಮಾತನಾಡುತ್ತಿದ್ದ ಎಲ್ಲಾ ಮಾತು ಕತೆಯನ್ನು ಕೇಳಿಸಿಕೊಂಡು ಬೇರೆ ವ್ಯಕ್ತಿಯೊಬ್ಬನಿಗೆ ಶೇರ್ ಮಾಡಿದೆ ಎಂದು ಸ್ಥಳೀಯ ಮಾಧ್ಯಮ ಕಿರೋ 7 ವರದಿ ಮಾಡಿದ್ದು, ಎಲ್ಲಡೆ ಅಲರ್ಟ್​ ಮಾಡಲಾಗಿದೆ.

ಡೇನಿಯೆಲ್​ ಹಾಗೂ ಅವರ ಹೆಂಡತಿ ಮನೆಯಲ್ಲಿ ಕುಳಿತು ಮಾತನಾಡುತ್ತಿದ್ದ ಎಲ್ಲಾ ಮಾಹಿತಿಯನ್ನು ಕಲೆಹಾಕಿದ ಅಲೆಕ್ಸಾ ಬಳಿಕ ಇವೆಲ್ಲವನ್ನೂ ಡೇನಿಯಲ್​ರವರ ಸಹುದ್ಯೋಗಿಗೆ ಕಳುಹಿಸಿದೆ. ಈ ವರ್ತನೆ ಪದೇಪದೇ ಮರುಕಳಿಸಿದ ಬಳಿಕ ಆ ವ್ಯಕ್ತಿ ಡೇನಿಯಲ್​ಗೆ ಮಾಹಿತಿಯನ್ನು ರವಾನಿಸಿದ್ದಾರೆ. ಅಲ್ಲದೇ ಕೂಡಲೇ ಅಲೆಕ್ಸಾ ಕನೆಕ್ಷನ್​ನನ್ನು ತೆಗೆದು ಹಾಕುವಂತೆ ಕೇಳಿಕೊಂಡಿರುವುದನ್ನು ಡೇನಿಯಲ್​ ಹೇಳಿಕೊಂಡಿದ್ದಾರೆ.

ಮೊದಲಿಗೆ ನಮಗೂ ನಂಬಲು ಅಸಾಧ್ಯವಾಗಿತ್ತು. ಆದರೆ ನಮ್ಮ ಮನೆಯಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಮಾತುಗಳನ್ನು ನಮಗೆ ಹೇಳಿದ ಬಳಿಕ ಕೂಡಲೇ ಅಮೇಜಾನ್​ಗೆ ದೂರು ದಾಖಲಿಸಿದ್ದೇವೆ ಎಂದು ಡೇನಿಯಲ್​ ಹೇಳಿದ್ದಾರೆ. ಅಲೆಕ್ಸಾ ಈ ಮಾದರಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವೇ ಇಲ್ಲ. ಬಳಕೆದಾರರು ಹೇಳಿದರೆ ಮಾತ್ರವೇ ಇದು ಕಾರ್ಯನಿರ್ವಹಿಸಲಿದೆ ಎನ್ನುವ ವಾದವನ್ನು ಅಮೆಜಾನ್​ ಮುಂದಿಟ್ಟಿದೆ. ಇದಕ್ಕೆ ಪ್ರತಿಯಾಗಿ ಸೂಕ್ತ ದಾಖಲೆಯನ್ನು ಡೇನಿಯಲ್​ ಸಲ್ಲಿಸಿದ್ದಾರೆ.

ಅಂತಿಮವಾಗಿ ಅಮೆಜಾನ್​ ತನ್ನ ಪ್ರಾಡಕ್ಟ್​ನಲ್ಲಿ ಸಮಸ್ಯೆಯಿರುವುದನ್ನು ಗುರುತಿಸಿದ್ದು ಕೂಡಲೇ ಪರಿಹಾರ ನೀಡುವುದಾಗಿ ಹೇಳಿದ್ದಾರೆ.
First published:May 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...