Pee Power: ನಿಮ್ಮ ಮೂತ್ರದಿಂದ ಮೊಬೈಲ್ ಚಾರ್ಜ್ ಮಾಡಬಹುದಂತೆ! ವಿಜ್ಞಾನಿಗಳ ಸಂಶೋಧನೆ ಯಶಸ್ವಿ..

Urine: ಮಾನವರ ಮೂತ್ರದಿಂದ ವಿದ್ಯುತ್​ ಶಕ್ತಿ  ಉತ್ಪಾದಿಸಲು ಸಂಶೋಧನೆ ನಡೆಯುತ್ತಿದ್ದು, ಮಾಹಿತಿ ಪ್ರಕಾರ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಜನರು ಸೌರಶಕ್ತಿ ಮತ್ತು ಪವನ ಶಕ್ತಿ ಮತ್ತು ವಿದ್ಯುತ್​ ಉತ್ಪಾದಿಸುವ ಆಯ್ಕೆ ಪಡೆಯಲಿದ್ದಾರೆ.

ಶೌಚಾಲಯ (ಫೋಟೋ: ಗೂಗಲ್)

ಶೌಚಾಲಯ (ಫೋಟೋ: ಗೂಗಲ್)

  • Share this:
    ಸ್ಮಾರ್ಟ್​ಫೋನ್ (Smartphone)​, ಟಿವಿ (TV), ಲ್ಯಾಪ್​ಟಾಪ್ (Laptop)​ ಚಾರ್ಜ್ ಮಾಡಲು ವಿದ್ಯುತ್​ (Power) ಅಗತ್ಯವಾಗಿ ಬೇಕು. ಒಂದಷ್ಟು ಗಂಟೆ ಚಾರ್ಜ್​ ಮಾಡಿದರೆ ಮತ್ತೆ ಬ್ಯಾಟರಿ ಸಾಮರ್ಥ್ಯದ ಇರುವವರೆಗೆ ಚಾಲ್ತಿಯಲ್ಲಿ ಇರುತ್ತದೆ. ಚಾರ್ಜ್​ ಪೂರ್ತಿ ಖಾಲಿಯಾದರೆ ಮತ್ತೆ ವಿದ್ಯುತ್​​ ಮೊರೆ ಹೋಗುತ್ತೇವೆ ಚಾರ್ಜ್​ ಇಡುತ್ತೇವೆ. ಆದರೆ ಇನ್ನು ಮುಂದೆ ವಿದ್ಯುತ್​ ಅವಶ್ಯಕತೆ ಬೀಳುವುದಿಲ್ಲ. ಏಕೆಂದರೆ ನಿಮ್ಮ ಮೂತ್ರದಿಂದಲೇ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಮೂಲಕ ಬೇಕಾದಷ್ಟು ವಿದ್ಯುತ್​ ಪಡೆಯಬಹುದಾಗಿದೆ. ಅಷ್ಟೇ ಏಕೆ ಸ್ಮಾರ್ಟ್​ಫೋನ್​ ಇನ್ನಿತರ ವಸ್ತುವನ್ನು ಚಾರ್ಜ್​ ಮಾಡಬಹುದಾಗಿದೆ!.

    ಮಾನವರ ಮೂತ್ರದಿಂದ ವಿದ್ಯುತ್​ ಶಕ್ತಿ  ಉತ್ಪಾದಿಸಲು ಸಂಶೋಧನೆ ನಡೆಯುತ್ತಿದ್ದು, ಮಾಹಿತಿ ಪ್ರಕಾರ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಜನರು ಸೌರಶಕ್ತಿ ಮತ್ತು ಪವನ ಶಕ್ತಿ ಮತ್ತು ವಿದ್ಯುತ್​ ಉತ್ಪಾದಿಸುವ ಆಯ್ಕೆ ಪಡೆಯಲಿದ್ದಾರೆ. ಮುಂಬರುವ ದಿನಗಳಲ್ಲಿ ಕರೆಂಟ್​ ಬಳಸುವ ಬದಲು ಮೂತ್ರದಿಂದಲೇ ವಿದ್ಯುತ್​ ಶಕ್ತಿ ಪಡೆಯುವ ಆಯ್ಕೆ ಅವರದ್ದಾಗಲಿದೆ.

    ಮನುಷ್ಯರ ಮೂತ್ರದ ಕುರಿತಾಗಿ ನಾನಾ ಸಂಶೋಧನೆಗಳು ನಡೆಯುತ್ತಿದೆ. ವಿಜ್ಞಾನಿಗಳು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದಾರೆ.  ಬ್ರಿಟನ್​ ಬ್ರಿಸ್ಟಲ್​ನಲ್ಲಿರುವ ಸಂಶೋಧಕ ತಂಡ ಮಾನವ ಮಲ ಮತ್ತು ಮೂತ್ರದಿಂದ ವಿದ್ಯುತ್​ ಶಕ್ತಿಯನ್ನಾಗಿ ಪರಿವರ್ತಿಸುವ ಕೋಶವನ್ನು ತಯಾರಿಸಿದ್ದಾರೆ. ಹಾಗಾಗಿ ಬೇಡವಾದ ತ್ಯಾಜ್ಯದಿಂದ ಶಕ್ತಿಯನ್ನು ಪರಿವರ್ತಿಸುವ ಮೂಲಕ ಅದರಿಂದಲೇ ಬೆಳಕು ಹರಿಸಬಹುದು ಎಂದು ಹೇಳಿದ್ದಾರೆ.

    Read Also: Smartphone Tips: ಸ್ಮಾರ್ಟ್​ಫೋನ್​ ಇಂಟರ್ನೆಟ್ ವೇಗ ಹೆಚ್ಚಿಸಲು ಹೀಗೊಂದು ಉಪಾಯ..!

    ಪೀ ಪವರ್​ ಯೋಜನೆ (Pee Power Project)

    ವಿಜ್ಞಾನಿಗಳು ಅನೇಕ ವರ್ಷದಿಂದಲೂ ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಇದಕ್ಕಾಗಿ ಪೀ ಪವರ್​ ಯೋಜನೆ ಎಂದು ಹೆಸರಿಡುವ ಮೂಲಕ ಸಂಶೋಧನೆ ಕೈಗೊಂಡರು. ಗ್ಲಾಸ್ಟನ್​ಬರಿ ಉತ್ಸವದಲ್ಲಿ ಪೀ ಪವರ್​ ಯೋಜನೆ ಬಗ್ಗೆ ಪ್ರದರ್ಶನವನ್ನು ನೀಡಲಾಗಿತ್ತು. ಕೊನೆಗೆ ಮೂತ್ರದಿಂದ ವಿದ್ಯುತ್​ ತಯಾರಿಸುವ ಸಂಶೋಧನೆ ಯಶಸ್ವಿಯಾಯಿತಲ್ಲದೆ. ಇದರ ಶಕ್ತಿಯಿಂದ ಮೊಬೈಲ್​ ಫೋನ್​, ಟಿವಿ ಎಲ್ಲವೂ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ.

    ಶೌಚಾಲಯದ ಮೂತ್ರದ ಪ್ರಮಾಣದಿಂದಾಗಿ 300 ವ್ಯಾಟ್​ನಷ್ಟು ವಿದ್ಯುತ್​ ಉತ್ಪಾದಿಸಿ ಯಶಸ್ವಿಯಾದ ಘಟನೆ ಇದಾಗಿದೆ. 5 ದಿನಗಳ ಕಾಲ ನಡೆ ಈ ಕಾರ್ಯಕ್ರಮಕ್ಕೆ ಜನರು ಬಂದಿದ್ದರು. ಒಟ್ಟಿನಲ್ಲಿ ಸಂಶೋಧನೆ ಯಶಸ್ವಿಯೊಂಡಿದೆ. ಹಾಗಾಗಿ ಮಾನವನ ಮೂತ್ರದಿಂದ ವಿದ್ಯುತ್​ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ ಎಂಬುದು ಸಾಬೀತಾಗಿದೆ. ಅಂದಹಾಗೆಯೇ 10 ವ್ಯಾಟ್​ ಸಾಮರ್ಥ್ಯದ ಬಲ್ಬ್​ ಅನ್ನು 30 ಗಂಟೆಗಳ ಕಾಲ ಉರಿಸಬಹುದಾಗಿದೆ.



    Read Also: Whatsapp Web ಪರಿಚಯಿಸಿದೆ ಫೋಟೋ ಎಡಿಟ್ ಫೀಚರ್ಸ್! ಬಳಸೋದು ಹೇಗೆ?

    ಅಚ್ಚರಿಯ ವಿವಾರವೆಂದರೆ ಕಣ್ಣಿಗೆ ಕಾಣಿಸದ ಸೂಕ್ಷ್ಮಜೀವಿಗಳನ್ನು ಈ ಸಂಶೋಧನೆಯಲ್ಲಿ ಬಳಸಲಾಗಿದೆ. ವಿಜ್ಞಾನಿಗಳು ಸೂಕ್ಷ್ಮಜೀವಿಗಳಿಂದ ಪೆಟ್ಟಿಗೆಯಂತಹ ಕೋಶವನ್ನು ತುಂಬಿದ್ದಾರೆ. ಈ ಸೂಕ್ಷ್ಮಜೀವಿಗಳು ಹುಲ್ಲು, ಮಾನವ ಮೂತ್ರ ಸೇರಿದಂತೆ ಯಾವುದೇ ಸಾವಯವ ಪದಾರ್ಥಗಳನ್ನು ತಿಂದು ಅದನ್ನು ವಿದ್ಯುತ್ ಆಗಿ ಪರಿವರ್ತಿಸುತ್ತವೆ. ವಿದ್ಯುತ್ ಉತ್ಪಾದನೆಯ ನಂತರ ಉಳಿದಿರುವ ಶೇಷವನ್ನು ಗೊಬ್ಬರವಾಗಿ ಬಳಸಬಹುದು.
    First published: