• Home
 • »
 • News
 • »
 • tech
 • »
 • Offline UPI Payments: ಇಂಟರ್ನೆಟ್​ ಇಲ್ಲದೇ UPI ಪೇಮೆಂಟ್​ ಮಾಡ್ಬಹುದು! ಹೇಗೆ ಅಂತೀರಾ? ಇಲ್ಲಿದೆ ನೋಡಿ

Offline UPI Payments: ಇಂಟರ್ನೆಟ್​ ಇಲ್ಲದೇ UPI ಪೇಮೆಂಟ್​ ಮಾಡ್ಬಹುದು! ಹೇಗೆ ಅಂತೀರಾ? ಇಲ್ಲಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂಟರ್ನೆಟ್‌ ಬಳಸದೇ ಈಗ ಯುಪಿಐ ಪೇಮೆಂಟ್ಸ್‌ ಮಾಡಬಹುದಾಗಿದೆ. ಇದು ಈಗಿನ ತಂತ್ರಜ್ಞಾನದ ಒಂದು ವಿಶೇಷ ಯೋಜನೆ ಆಗಿದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಇಂಟರ್ನೆಟ್‌ ಮೂಲಕ ಹಣ ಪಾವತಿ ಮಾಡಲು ಕಷ್ಟವಾಗಬಹುದು. ಈಗ ಈ ಕಷ್ಟವನ್ನು ಎದುರಿಸಲು ಇಂಟರ್ನೆಟ್‌ ಬಳಸದೆಯೇ ವಹಿವಾಟು ಮಾಡಲು ಹೊಸ ಪ್ಲಾನ್‌ ಒಂದು ಹೊರಬಂದಿದೆ. ಆದರೆ ಈ ವಹಿವಾಟು ಮಾಡಬೇಕಾದರೆ ಕೆಲವೊಂದು UPI ನ ಟಿಪ್ಸ್‌ ಮತ್ತು ಅರ್ಹತೆಗಳು ಇವೆ.

ಮುಂದೆ ಓದಿ ...
 • Share this:

  ಈಗಿನ ತಂತ್ರಜ್ಞಾನಗಳು (Technology) ಪ್ರತಿದಿನವೂ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತದೆ. ಇದರಿಂದ ಗ್ರಾಹಕರಿಗೆ (Consumer) ತುಂಬಾ ಸಹಕಾರಿಯೂ ಅಗುತ್ತದೆ. ಅದ್ದರಿಂದ ಈ ಬಾರಿ ಇಂಟರ್ನೆಟ್‌ (Internet) ಬಳಸದೆಯೇ UPI ವಹಿವಾಟು ಮಾಡುವುದನ್ನು ಕಂಡುಹಿಡಿದಿದ್ದಾರೆ. ಇಂಟರ್ನೆಟ್ ಇಲ್ಲದೆ UPI ವಹಿವಾಟು Google Pay, Phonepe ಮತ್ತು NPCI ನ BHIM ನಂತಹ ಬಳಕೆದಾರರು ತಮ್ಮ ಇಷ್ಟದಂತೆ ಪೇಮೆಂಟ್ (Payment) ಮಾಡಲು ಮತ್ತು ಸ್ವೀಕರಿಸಲು ಅವಕಾಶ ಮಾಡಿಕೊಡುತ್ತಾರೆ. ಅದೃಷ್ಟವಶಾತ್, ಇಂಟರ್ನೆಟ್ ಇಲ್ಲದೆಯೂ UPI ವಹಿವಾಟು ಮಾಡಲು ಅನುಮತಿಸುವ ಒಂದು ಟ್ರಿಕ್ ಇದೆ. ಬಳಕೆದಾರರಿಗೆ ಈ ಸೇವೆ ತುರ್ತು ಸಂದರ್ಭದಲ್ಲಿ (Emergency) ನೆರವಾಗುತ್ತದೆ.


  ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಭಾರತದಾದ್ಯಂತ ಲಕ್ಷಾಂತರ ಜನರಿಗೆ ಜೀವನವನ್ನು ಸುಲಭಗೊಳಿಸಿದೆ. ಇದು ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಒಂದು ಬ್ಯಾಂಕ್ ಅಕೌಂಟ್‌ನಿಂದ ಇನ್ನೊಂದಕ್ಕೆ ವೇಗವಾಗಿ ಹಣವನ್ನು ವರ್ಗಾಯಿಸಲು ಸಹಾಯಮಾಡುತ್ತದೆ. Google Pay, PhonePe ಮತ್ತು NPCI ನ BHIM ನಂತಹ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಮನಬಂದಂತೆ ಪಾವತಿಗಳನ್ನು ಮಾಡಲು ಮತ್ತು ಸ್ವೀಕರಿಸಲು ಅವಕಾಶ ಮಾಡಿಕೊಡುತ್ತದೆ. ಈ ಎಲ್ಲದಕ್ಕೂ ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ.


  https://kannada.news18.com/news/business/big-offer-for-diwali-here-is-the-information-about-what-is-on-offer-ach-866840.html
  ಸಾಂದರ್ಭಿಕ ಚಿತ್ರ


  ಆದರೆ ಕೆಲವೊಂದು ಸಂದರ್ಭಗಳಲ್ಲಿ ಇಂಟರ್ನೆಟ್‌ ಮೂಲಕ ಹಣ ಪಾವತಿ ಮಾಡಲು ಕಷ್ಟವಾಗಬಹುದು. ಈಗ ಈ ಕಷ್ಟವನ್ನು ಎದುರಿಸಲು ಇಂಟರ್ನೆಟ್‌ ಬಳಸದೆಯೇ ವಹಿವಾಟು ಮಾಡಲು ಹೊಸ ಪ್ಲಾನ್‌ ಒಂದು ಹೊರಬಂದಿದೆ. ಆದರೆ ಈ ವಹಿವಾಟು ಮಾಡಬೇಕಾದರೆ ಕೆಲವೊಂದು UPI ನ ಟಿಪ್ಸ್‌ ಮತ್ತು ಅರ್ಹತೆಗಳು ಇವೆ.


  ಇದನ್ನೂ ಓದಿ: ವಾಟ್ಸಪ್ ಬಳಕೆದಾರರೇ ಎಚ್ಚರ? ಮಿತಿ ತಪ್ಪಿದ್ರೆ ಬ್ಯಾನ್ ಆಗುತ್ತೆ ಅಕೌಂಟ್!


  ಆಫ್‌ಲೈನ್ UPI ಪೇಮೆಂಟ್ಸ್‌ ಅನ್ನು ಸೆಟಪ್‌ ಮಾಡಿ


  • ನಿಮ್ಮ ಬ್ಯಾಂಕ್‌ ಖಾತೆಗೆ ಲಿಂಕಟ ಆಗಿರುವ ಫೋನ್‌ ನಂಬರ್‌ನಿಂದ ನಿಮ್ಮ ಮೊಬೈಲ್‌ನಲ್ಲಿ *99# ಡಯಲ್‌ ಮಾಡಿ.

  • ಒಂದು ವೇಳೆ ಬೇರೆ ನಂಬರ್‌ನಿಂದ ಕಾಲ್‌ ಮಾಡಿದರೆ ಈ ಸೇವೆ ಕಾರ್ಯನಿರ್ವಹಿಸುವುದಿಲ್ಲ.

  • ಇದಾದ ಬಳಿಕ ನೀವು ಬಯಸಿದ ಭಾಷೆಯನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಬ್ಯಾಂಕ್‌ ಖಾತೆಯನ್ನು ನಮೂದಿಸಿ.

  • ನಂತರ ನಿಮಗೆ ಬ್ಯಾಂಕ್‌ ಖಾತೆಗಳ ಪಟ್ಟಿಯನ್ನು ತೋರಿಸಲಾಗುತ್ತದೆ. ಇಲ್ಲಿ ನಿಮ್ಮ ಆಯ್ಕೆಯನ್ನು ಮಾಡಿ ಮುಕ್ತಾಯ ದಿನಾಂಕವನ್ನು ಸೇರಿಸುವ ಜೊತೆಗೆ ಡೆಬಿಟ್‌ ಕಾರ್ಡ್‌ನ 6 ಅಂಕಿಗಳನ್ನು ನಮೂದಿಸಿ.


  ಇಷ್ಟು ಕೆಲಸಗಳನ್ನು ಮೊದಲು ಸರಿಯಾಗಿ ನಿರ್ವಹಿಸಿದರೆ ಮುಂದಿನ ಹಂತಗಳಲ್ಲಿ ನಿಮಗೆ  ಇಂಟರ್ನೆಟ್‌ ಸಂಪರ್ಕವಿಲ್ಲದೆ ಹಣ ಪಾವತಿ ಮಾಡಬಹುದು.


  https://kannada.news18.com/news/business/big-offer-for-diwali-here-is-the-information-about-what-is-on-offer-ach-866840.html
  ಸಾಂದರ್ಭಿಕ ಚಿತ್ರ


  ಇದು ಆಫ್‌ಲೈನ್‌ ಯುಪಿಐ ಪೇಮೆಂಟ್ಸ್‌ ಮಾಡುವ ರೀತಿ‌‌


  1. ಫೋನ್‌ನಲ್ಲಿ *99# ಗೆ ಕರೆಮಾಡಿ ಅಲ್ಲಿ ಹಣ ಕಳುಹಿಸಲು 1 ಅನ್ನು ನಮೂದಿಸಿ.

  2. ನಂತರ ಣಿವು ಕಳುಹಿಸಲು ಬಯಸುವ ವ್ಯಕ್ತಿಯ UPI ID/ ಫೋನ್‌ ನಂಬರ್/‌ ಬ್ಯಾಂಕ್‌ ಅಕೌಂಟ್‌ ನಂಬರ್‌ ಅನ್ನು ನಮೂದಿಸಿ.

  3. ನೀವು ಟ್ರಾನ್ಸ್ಫರ್ ಮಾಡಲು‌ ಬಯಸುವ ಹಣ ಮತ್ತು ಯುಪಿಐ ಪಿನ್‌ ಅನ್ನು ನಮೂದಿಸಿ.

  4. ಒಮ್ಮೆ ಈ ಎಲ್ಲಾ ಆಯ್ಕೆಯನ್ನು ಮಾಡಿದ ನಂತರ ನಿಮ್ಮ ಪಾವತಿ ಯಶಸ್ವಿಯಾಗುತ್ತದೆ

  5. ಇದಲ್ಲದೆ ನಿಮ್ಮ ಈ ಪ್ರತೀ ಪಾವತಿಗೆ *99# ಡಯಲ್‌ ಮಾಡುವುದರಿಂದ 0.50 ಪೈಸೆಯಷ್ಟು ನಿಮ್ಮ ಖಾತೆಯಿಂದ ಕಟ್‌ ಅಗುತ್ತದೆ.

  6. ಈ ಸೇವೆ ಮುಖಾಂತರ ಒಮ್ಮೆ ಟ್ರಾನ್ಸಾಕ್ಷನ್‌ ಮಾಡುವಾಗ 5000 ರೂಪಾಯಿಯಷ್ಟು ಪಾವತಿ ಮಾಡುವ ಅವಕಾಶವಿದೆ.


  ಇದನ್ನೂ ಓದಿ: ದೀಪಾವಳಿ ಪ್ರಯುಕ್ತ ಬಿಗ್‌ ಆಫರ್, ಮನೆಮಂದಿಗೆ ಗಿಫ್ಟ್‌ ಖರೀದಿಸೋಕೆ ಇದೆ ಚಾನ್ಸ್!


  ಇದು ನಿಮ್ಮಲ್ಲಿರುವಂತಹ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್‌ ಬಳಸದೇ ಯುಪಿಐ ಪೇಮೆಂಟ್ಸ್‌ ಮಾಡುವ ವಿಧಾನವಾಗಿದೆ. ಈ ಮೇಲಿರುವಂತಹ ಟಿಪ್ಸ್‌ ಒಮ್ಮೆ ಯಶಸ್ವಿಯಾಗಿ ಮಾಡಿದರೆ ಮತ್ತೆ ಪೇಮೆಂಟ್‌ ಮಾಡಲು ಯಾವುದೇ ರೀತಿಯ ಸಮಸ್ಯೆಗಳಾಗುವುದಿಲ್ಲ. ಅಂತರ್ಜಾಲದ ಬಳಕೆ ಹೆಚ್ಚಿರುವುದರಿಂದ ಇದರ ವೇಗವು ಈಗ ಕಡಿಮೆಯಾಗುತ್ತಾ ಬಂದಿದೆ. ಇಂತಹ ಸಂದರ್ಭದಲ್ಲಿ ಈ ಯೋಜನೆಗಳು ತುಂಬಾ ಸಹಕಾರಿಯಾಗುತ್ತದೆ.

  Published by:Harshith AS
  First published: