Iphone 11: ಬಿಡುಗಡೆಯ ತಯಾರಿಯಲ್ಲಿ ‘ಐಫೋನ್​ 11‘: ಹೇಗಿದೆ? ಏನೆಲ್ಲಾ ವಿಶೇಷತೆ?

ಐಫೋನ್​ 11 ಸ್ಮಾರ್ಟ್​ಫೋನ್​ನಲ್ಲಿ ಇನ್​​ ಡಿಸ್​ಪ್ಲೇ ಟಚ್​ ಐಡಿ, ಫುಲ್​​ ಸ್ಕ್ರೀನ್​​ ಡಿಸ್​​​ಪ್ಲೇ, 5 ಸಂಪರ್ಕ ಹೊಂದಿರುತ್ತದೆ ಎನ್ನಲಾಗಿದೆ.

news18
Updated:May 27, 2019, 3:25 PM IST
Iphone 11: ಬಿಡುಗಡೆಯ ತಯಾರಿಯಲ್ಲಿ ‘ಐಫೋನ್​ 11‘: ಹೇಗಿದೆ? ಏನೆಲ್ಲಾ ವಿಶೇಷತೆ?
ಐಫೋನ್​ 11 ಸ್ಮಾರ್ಟ್​ಫೋನ್​ನಲ್ಲಿ ಇನ್​​ ಡಿಸ್​ಪ್ಲೇ ಟಚ್​ ಐಡಿ, ಫುಲ್​​ ಸ್ಕ್ರೀನ್​​ ಡಿಸ್​​​ಪ್ಲೇ, 5 ಸಂಪರ್ಕ ಹೊಂದಿರುತ್ತದೆ ಎನ್ನಲಾಗಿದೆ.
news18
Updated: May 27, 2019, 3:25 PM IST
ಸ್ಮಾರ್ಟ್​ಫೋನ್​ ಸಂಸ್ಥೆಗಳಲ್ಲಿ ಹೆಸರುವಾಸಿಯಾದ ಆ್ಯಪಲ್​​ ಸಂಸ್ಥೆ  ಐಪೋನ್​ 11 ಸ್ಮಾರ್ಟ್​ಫೋನ್​ವೊಂದನ್ನು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.  ಗ್ರಾಹಕರಿಗಾಗಿ ಪರಿಚಯಿಸುತ್ತಿರುವ ನೂತನ ಐಫೋನ್​ 11 ಸ್ಮಾರ್ಟ್​ಫೋನ್ ವಿಶೇಷತೆ​ ಕುರಿತು ಟೆಕ್​ಲೋಕ ಕಾತರದಿಂದಿದೆ.

ಐಫೋನ್​ 11 ಸ್ಮಾರ್ಟ್​ಫೋನ್​ನಲ್ಲಿ ಇನ್​​ ಡಿಸ್​ಪ್ಲೇ ಟಚ್​ ಐಡಿ, ಫುಲ್​​ ಸ್ಕ್ರೀನ್​​ ಡಿಸ್​​​ಪ್ಲೇ, 5 ಸಂಪರ್ಕ ಹೊಂದಿರುತ್ತದೆ ಎನ್ನಲಾಗಿದೆ.

5.8 ಇಂಚಿನ ಡಿಸ್​​ಪ್ಲೇ ಹೊಂದಿದೆ.  ಸ್ಮಾರ್ಟ್​ಫೋನ್​ ಸ್ಕ್ರೀನ್​ 1125x 2436 ಫಿಕ್ಸೆಲ್​​ ನೀಡಲಾಗಿದೆ. ಕ್ವಾಡ್​ ಕೋರ್​ ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುವ ಈ ಸ್ಮಾರ್ಟ್​ಫೋನ್​​ನಲ್ಲಿ 4 GB RAM ಅಳವಡಿಸಲಾಗಿದೆ.

ಕ್ಯಾಮೆರಾ ಪ್ರೀಯರಿಗಾಗಿ ಮೂರು ಕ್ಯಾಮೆರಾವನ್ನು ಅಳವಡಿಸಿಕೊಂಡು ಸಿದ್ಧವಾಗಿದೆ. ಹಿಂಭಾಗದಲ್ಲಿ 12 + 12 + 12 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ. ದೀರ್ಘಕಾಲದ ಬಳಕೆಗಾಗಿ 4000mAh​ ಬ್ಯಾಟರಿ ಹೊಂದಿದೆ ಎನ್ನಲಾಗಿದೆ.

ನೂತನ ಸ್ಮಾರ್ಟ್​ಫೋನ್​ ಬಗ್ಗೆ ಆ್ಯಪಲ್​​ ಕಂಪೆನಿ ಡೆವಲಪರ್​​ ಕಾನ್ಫರೆನ್ಸ್​​ನಲ್ಲಿ ಮಾಹಿತಿ ನೀಡಿದ್ದು, ಮುಂಬರುವ ದಿನಗಳಲ್ಲಿ ಹೊಸ ಐಪೋನ್​ 11 ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದೆ.

ಇದನ್ನೂ ಓದಿ: http://ಬಿಜೆಪಿ ಗೆಲುವಿಗೆ ಪುಲ್ವಾಮಾದಂಥ ಘಟನೆಗಳೇ ಕಾರಣ; ಸೋಲಿಗೆ ಎಂಬಿ ಪಾಟೀಲ್ ಸಮರ್ಥನೆ

ಆ್ಯಪಲ್​​ ಎಕ್ಸ್​​ ಸ್ಮಾರ್ಟ್​ಫೋನ್​​ಗಳ​ ಸರಣಿಯಲ್ಲಿ ಟಚ್​ ಐಡಿಯನ್ನು ಬಿಡುಗಡೆ ಮಾಡಿತ್ತು. ಇದೀಗ ನೂತನ ಸ್ಮಾರ್ಟ್​ಫೋನ್​ನಲ್ಲಿ ಪೇಸ್​ ರೆಕಗ್ನಿಷನ್​ ಆಯ್ಕೆಯನ್ನು ಪರಿಚಯಿಸಿದೆ. ಅಲ್ಲದೆ, ರಿವರ್ಸ್​ ವೈರ್​ಲೆಸ್​ ಚಾರ್ಜಿಂಗ್​​ ಪರಿಚಯಿಸುವ ನಿರೀಕ್ಷೆಯಲ್ಲಿದೆ.
Loading...

'ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್ ನಲ್ಲೂ ಹಿಂಬಾಲಿಸಿ'

First published:May 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...