ಆಧಾರ್ ಕಾರ್ಡ್ ಬಳಕೆದಾರರಿಗೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು ಸಿಹಿಸುದ್ದಿ ನೀಡಿದೆ. ಇದೀಗ ಎಂ-ಆಧಾರ್ ಆ್ಯಪ್ ಮೂಲಕ ಐದು ಬಳಕೆದಾರರ ಪ್ರೊಫೈಲ್ಗಳನ್ನು ಸೇರಿಸಬಹುದು ಎಂದು ಯುಐಡಿಎಐ ಹೇಳಿದೆ. ಪ್ರತಿ ಪ್ರೊಫೈಲ್ ರಚಿಸಲು ಆಧಾರ್ ಕಾರ್ಡುದಾರರು ತಮ್ಮ ಸಂಪೂರ್ಣ ವಿವರಗಳನ್ನು ನಮೂದಿಸಬೇಕಾಗುತ್ತದೆ. ನಂತರ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಒಟಿಪಿ ಕಳುಹಿಸಲಾಗುತ್ತದೆ.
‘ನಿಮ್ಮ #mAadhaar ಅಪ್ಲಿಕೇಶನ್ನಲ್ಲಿ ನೀವು 5 ಆಧಾರ್ ಪ್ರೊಫೈಲ್ಗಳನ್ನು ಸೇರಿಸಬಹುದು. ದೃಢೀಕರಣಕ್ಕಾಗಿ OTP ಯನ್ನು ಆಧಾರ್ ಹೊಂದಿರುವವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ’ ಎಂದು ಯುಐಡಿಎಐ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
MAadhaar ಅಪ್ಲಿಕೇಶನ್ ಅನ್ನು ಎಲ್ಲಿ ಬಳಸಬಹುದು..?
mAadhaar ಎಂದರೆ ವ್ಯಾಲೆಟ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಇರಿಸಿಕೊಂಡಂತೆ. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಎಂ-ಆಧಾರ್ ಪ್ರೊಫೈಲ್ ಅನ್ನು ಐಡಿ ಪ್ರೂಫ್ ಆಗಿ ಸ್ವೀಕರಿಸಲಾಗುತ್ತದೆ. ಗ್ರಾಹಕರ ಆಧಾರ್ ಪರಿಶೀಲನೆಯನ್ನು ಬಯಸುವ ಸೇವಾ ಪೂರೈಕೆದಾರರೊಂದಿಗೆ ಇಕೆವೈಸಿ ಅಥವಾ ಕ್ಯೂಆರ್ ಕೋಡ್ ಹಂಚಿಕೊಳ್ಳಲು ನೀವು ಈ ಅಪ್ಲಿಕೇಶನ್ ಅನ್ನು ಬಳಸಬಹುದಾಗಿದೆ.
MAadhaar ಅಪ್ಲಿಕೇಶನ್ನಲ್ಲಿ ಪ್ರೊಫೈಲ್ ಅನ್ನು ಹೇಗೆ ರಚಿಸುವುದು..?
- ಮೊದಲು ಅಧಾರ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ
- ಮುಖ್ಯ ಡ್ಯಾಶ್ಬೋರ್ಡ್ನ ಮೇಲ್ಭಾಗದಲ್ಲಿ ಕಾಣಿಸುವ ರಿಜಿಸ್ಟರ್ ಆಧಾರ್ ಟ್ಯಾಬ್ ಅನ್ನು ಒತ್ತಿರಿ- 4 ಅಂಕಿಯ ಪಿನ್/ ಪಾಸ್ವರ್ಡ್ ರಚಿಸಿರಿ
- ಸರಿಯಾದ ಆಧಾರ್ ಸಂಖ್ಯೆಯನ್ನು ಒದಗಿಸಿ ಮತ್ತು ಮಾನ್ಯವಾದ ಕ್ಯಾಪ್ಚಾವನ್ನು ನಮೂದಿಸಿರಿ
- ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ ಒಟಿಪಿ ನಮೂದಿಸಿ ಮತ್ತು ಸಲ್ಲಿಸಿ
- ಈಗ ಪ್ರೊಫೈಲ್ಗಳನ್ನು ನೋಂದಾಯಿಸಿಕೊಳ್ಳಬೇಕು
- ಹೆಸರುಗಳನ್ನು ನಮೂದಿಸುವ ಟ್ಯಾಬ್ ಈಗ ನೋಂದಾಯಿಸಿರುವ ಆಧಾರ್ ಹೆಸರನ್ನು ಪ್ರದರ್ಶಿಸುತ್ತದೆ
- ಕೆಳಗಿನ ಮೆನುವಿನಲ್ಲಿ ಮೈ ಆಧಾರ್ ಟ್ಯಾಬ್ನ ಮೇಲೆ ಒತ್ತಿರಿ
- 4 ಸಂಖ್ಯೆಯ ಪಿನ್ / ಪಾಸ್ವರ್ಡ್ ನಮೂದಿಸಿ
- ಈಗ ಮೈ ಆಧಾರ್ ಡ್ಯಾಶ್ಬೋರ್ಡ್ ಕಾಣಿಸಿಕೊಳ್ಳುತ್ತದೆ
MAadhaar ಕಾರ್ಡ್ನಲ್ಲಿ ಪ್ರೊಫೈಲ್ ವೀಕ್ಷಿಸುವುದು ಹೇಗೆ..?
ಮುಖ್ಯ ಡ್ಯಾಶ್ಬೋರ್ಡ್ನಲ್ಲಿ ಮೇಲಿನ ಪ್ರೊಫೈಲ್ ಸಾರಾಂಶವನ್ನು (ಸಯಾನ್ ಟ್ಯಾಬ್ನಲ್ಲಿರುವ ಪ್ರೊಫೈಲ್ ಚಿತ್ರ, ಹೆಸರು ಮತ್ತು ಆಧಾರ್ ಸಂಖ್ಯೆ) ಟ್ಯಾಪ್ ಮಾಡುವ ಮೂಲಕ ನಿಮ್ಮ ಪ್ರೊಫೈಲ್ ಅನ್ನು ನೀವು ವೀಕ್ಷಿಸಬಹುದು.
ಆಧಾರ್ ಪ್ರೊಫೈಲ್ಗೆ ಹೇಗೆ ಪ್ರವೇಶಿಸುವುದು..?
- ಅಪ್ಲಿಕೇಶನ್ ಅನ್ನು ಓಪನ್ ಮಾಡಿ
- ಮುಖ್ಯ ಡ್ಯಾಶ್ಬೋರ್ಡ್ನ ಕೆಳಭಾಗದಲ್ಲಿರುವ ಆಧಾರ್ ಪ್ರೊಫೈಲ್ ಟ್ಯಾಬ್ನಲ್ಲಿ ಟ್ಯಾಪ್ ಮಾಡಿ
- 4 ಅಂಕಿಯ ಪಿನ್ / ಪಾಸ್ವರ್ಡ್ ನಮೂದಿಸಿ
- ಈಗ ಆಧಾರ್ನ ಮುಂಭಾಗದ ಭಾಗ ಕಾಣಿಸಿಕೊಳ್ಳುತ್ತದೆ. ಹಿಂಭಾಗವನ್ನು ವೀಕ್ಷಿಸಲು ಎಡಕ್ಕೆ ಸ್ಲೈಡ್ ಮಾಡಿ.
- ಸೇರಿಸಿದ ಇತರ ಪ್ರೊಫೈಲ್ಗಳನ್ನು ವೀಕ್ಷಿಸಲು, ಎಡಕ್ಕೆ ಸ್ಲೈಡ್ ಮಾಡುತ್ತಿರಬೇಕು
- ಆಧಾರ್ ಪ್ರೊಫೈಲ್ ಪುಟ ಮತ್ತು ಸೇವೆಗಳನ್ನು ವೀಕ್ಷಿಸಲು ಡ್ಯಾಶ್ಬೋರ್ಡ್ ಪರದೆಯ ಕೆಳಭಾಗದಲ್ಲಿರುವ ಮೈ ಆಧಾರ್ ಟ್ಯಾಬ್ಅನ್ನು ಕ್ಲಿಕ್ ಮಾಡಬೇಕು
ಫೋನ್ನಲ್ಲಿ mAadhaar ಅಪ್ಲಿಕೇಶನ್ಅನ್ನು ಹೇಗೆ ಕಾನ್ಫಿಗರ್ ಮಾಡುವುದು..?
ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು mAadhaar ಆ್ಯಪ್ ಅನ್ನು ಬಳಸಬಹುದು. ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಲು ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ:
- ಆಂಡ್ರಾಯ್ಡ್ ಆ್ಯಪ್ ಗಾಗಿ ಗೂಗಲ್ ಪ್ಲೇ ಸ್ಟೋರ್ನಿಂದ ಮತ್ತು ಐಫೋನ್ಗಾಗಿ ಆಪ್ ಸ್ಟೋರ್ ನಲ್ಲಿ mAadhaar ಅಪ್ಲಿಕೇಶನ್ ಡೌನ್ಲೋಡ್ ಮಾಡಬಹುದು.
- ನೀವು ಸರಿಯಾದ ಅಪ್ಲಿಕೇಶನ್ ಡೌನ್ಲೋಡ್ ಮಾಡುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲು ಡೆವಲಪರ್ ಹೆಸರನ್ನು ‘ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ’ದಿಂದ ಪಟ್ಟಿ ಮಾಡಲಾಗಿದೆಯೇ ಅನ್ನೋದನ್ನು ಪರಿಶೀಲಿಸಿ.
- ಆ್ಯಪ್ ತೆರೆದ ನಂತರ ನಿಯಮ ಮತ್ತು ಷರತ್ತುಗಳು ಹಾಗೂ ಬಳಕೆಯ ಮಾರ್ಗಸೂಚಿಗಳು, ಭಾಷೆಯ ಆದ್ಯತೆಯ ಸೆಟ್ಟಿಂಗ್ಗಳಿಗೆ ನಿಮ್ಮನ್ನು ಕರೆದೊಯ್ಯುತ್ತದೆ. ಆ್ಯಪ್ ಇನ್ಸ್ಟಾಲ್ ಮಾಡುವ ಮೊದಲು ಅವುಗಳನ್ನು ಒಂದು ಸಾರಿ ಎಚ್ಚರಿಕೆಯಿಂದ ಓದಿರಿ.