2022ರಲ್ಲಿ ದಿನಕ್ಕೊಂದರಂತೆ ಕಂಪನಿಗಳು ಸ್ಮಾರ್ಟ್ಫೋನ್ಗಳನ್ನು (Smartphones) ಬಿಡುಗಡೆ ಮಾಡಿದೆ. ಕಳೆದ ವರ್ಷದಲ್ಲಿ ಹಲವಾರು ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಇವುಗಳೆಲ್ಲವೂ ಬಹಳಷ್ಟು ಬೇಡಿಕೆಯನ್ನು ಹೊಂದಿತ್ತು. ಅದೇ ರೀತಿ ಕೆಲವು ಮೊಬೈಲ್ ಕಂಪನಿಗಳು (Mobile Company) ಈ ಹಿಂದೆ ಕೆಲವು ಮೊಬೈಲ್ಗಳು 2023ರಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಧರಿಸಿತ್ತು. ಇದೀಗ ಆ ಮಾತಿನಂತೆ 4 ಮೊಬೈಲ್ ಕಂಪನಿಗಳು ಜನವರಿಯಲ್ಲಿ ತನ್ನ ಬ್ರಾಂಡ್ನ (Brand) ಅಡಿಯಲ್ಲಿ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ರೆಡಿಯಾಗಿದೆ. ಈ ಸ್ಮಾರ್ಟ್ಫೋನ್ಗಳು ಹೊಸ ಫೀಚರ್ಸ್ಗಳನ್ನು ಹೊಂದಿಕೊಂಡು ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಹೊಸ ಸಂಚಲನವನ್ನು ಮೂಡಿಸಲಿದೆ ಎಂದು ಕೆಲ ತಂತ್ರಜ್ಞರು ಹೇಳಿದ್ದಾರೆ
ಇದೀಗ ಈ ವರ್ಷದ ಆರಂಭದ ತಿಂಗಳಲ್ಲಿ 4 ಸ್ಮಾರ್ಟ್ಫೋನ್ ಕಂಪನಿಗಳ ಮೊಬೈಲ್ಗಳು ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎಂದು ವರದಿಯಾಗಿದೆ. ಹಾಗಿದ್ರೆ ಯಾವೆಲ್ಲಾ ಆ ಕಂಪನಿಗಳು, ಹೇಗಿದೆ ಫೀಚರ್ಸ್ ಎಂಬ ಕುತೂಹಲ ಇದೆಯಾ? ಇಲ್ಲಿದೆ ಓದಿ ಕಂಪ್ಲೀಟ್ ಮಾಹಿತಿ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್04
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್04 ಭಾರತದಲ್ಲಿ ಜನವರಿ 4 ರಂದು ಬಿಡುಗಡೆಯಾಗಲಿದೆ. ಸ್ಯಾಮ್ಸಂಗ್ ಇದನ್ನು ಬಜೆಟ್ ಬೆಲೆಯಲ್ಲಿ ಭಾರೀ ಅಗ್ಗದಲ್ಲಿ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಈ ಹ್ಯಾಂಡ್ಸೆಟ್ನ ಬೆಲೆ ರೂ.8000 ಕ್ಕಿಂತ ಕಡಿಮೆ ಇರುತ್ತದೆ ಎಂದು ಟೆಕ್ ಮೂಲಗಳು ಊಹಿಸಿವೆ. ಈ ಸ್ಮಾರ್ಟ್ಫೋನ್ 8 ಜಿಬಿ ರ್ಯಾಮ್ ನೊಂದಿಗೆ ಬರಬಹುದು ಎಂದು ತಿಳಿದುಬಂದಿದೆ. 91ಮೊಬೈಲ್ಸ್ ವರದಿಯ ಪ್ರಕಾರ, ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್04 ಸ್ಮಾರ್ಟ್ಫೋನ್ ಸ್ಯಾಮ್ಸಂಗ್ ಗ್ಯಾಲಕ್ಸಿ ಎ04ಇ ನ ಮರುಬ್ರಾಂಡೆಡ್ ವರ್ಷನ್ ಆಗಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಅಪ್ಡೇಟ್ ಮಾಡುವಾಗ ಎಚ್ಚರ! ಫೋಟೋ, ವಿಡಿಯೋ ಎಲ್ಲವೂ ಡಿಲೀಟ್ ಆಗ್ಬಹುದು
ಇನ್ನು ಇದರ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು ಮೀಡಿಯಾ ಟೆಕ್ ಹೆಲಿಯೊ ಪಿ35 ಆಕ್ಟಾ ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದು 6.5 ಇಂಚಿನ ಹೆಚ್ಡಿ+ ಡಿಸ್ಪ್ಲೇ ಜೊತೆಗೆ 720 x 1600 ಪಿಕ್ಸೆಲ್ ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ರೇಟ್ ಅನ್ನು ಹೊಂದಿರುವ ಸಾಧ್ಯತೆಯಿದೆ. ಇನ್ನು ಈ ಸಾಧನವು ಆಂಡ್ರಾಯ್ಡ್ 12 ಆಧಾರಿತ ಒನ್ ಯುಐ ನಲ್ಲಿ ರನ್ ಆಗಬಹುದು.
ಒನ್ಪ್ಲಸ್ 11 5ಜಿ
ಒನ್ಪ್ಲಸ್ ಕಂಪನಿಯು ಈ ಸ್ಮಾರ್ಟ್ಫೋನ್ ಅನ್ನು ಪ್ರಮುಖವಾದ ವಿಭಾಗದಲ್ಲಿ ಬಿಡುಗಡೆ ಮಾಡಲಿದೆ. ಒನ್ಪ್ಲಸ್ 11 5ಜಿ ಸ್ಮಾರ್ಟ್ಫೋನ್ ಅನ್ನು ಚೀನಾದಲ್ಲಿ ಜನವರಿ 4 ರಂದು ಮತ್ತು ಭಾರತದಲ್ಲಿ ಫೆಬ್ರವರಿ 7 ರಂದು ಬಿಡುಗಡೆ ಮಾಡಲಾಗುತ್ತದೆ. ಜನಪ್ರಿಯ ಲೀಕರ್ ವೆಬ್ಸೈಟ್ ಆಗಿರುವ ಇವಾನ್ ಬ್ಲಾಸ್ನ ವರದಿಯ ಪ್ರಕಾರ, ಈ ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಬಿಡುಗಡೆಯಾಗಲಿದೆ.
ಇದು 50 ಮೆಗಾಪಿಕ್ಸೆಲ್ ಸೋನಿ IMX890 ಮುಖ್ಯ ಕ್ಯಾಮೆರಾವನ್ನು ಹೊಂದಿರಬಹುದು. ಒನ್ಪ್ಲಸ್ 11 5ಜಿ ಸ್ಮಾರ್ಟ್ಫೋನ್ 6.7 ಇಂಚಿನ QHD+ ಅಮೋಲ್ಡ್ ಡಿಸ್ಗೆಪ್ಲೇನೊಂದಿಗೆ 120Hz ರಿಫ್ರೆಶ್ ದರದೊಂದಿಗೆ ಬಿಡುಗಡೆಯಾಗಬಹುದು. ಇದು 100W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5000 mAh ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ. ಸೆಲ್ಫಿಗಾಗಿ ಫೋನ್ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ.
ಐಕ್ಯೂ 11 ಸೀರಿಸ್
ಐಕ್ಯೂ 11 ಸೀರಿಸ್ ಇದೀಗ ಮಾರುಕಟ್ಟೆಗೆ ಎರಡು ಪ್ರೀಮಿಯಂ ಸ್ಮಾರ್ಟ್ಫೋನ್ಗಳನ್ನು ಜನವರಿ 10 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇವುಗಳು ಈ ಸೀರಿಸ್ನಲ್ಲಿ ಐಕ್ಯೂ 11 ಮತ್ತು ಐಕ್ಯೂ 11 ಪ್ರೋ ಎಂಬ ಹೆಸರಿನಲ್ಲಿ ಬರುತ್ತವೆ. ಇನ್ನು ಈ ಎರಡೂ ಸ್ಮಾರ್ಟ್ಫೋನ್ಗಳು 6.78 angula E6 ಅಮೋಲ್ಟ್ ಡಿಸ್ಪ್ಲೇ ಜೊತೆಗೆ 144 Hz ರಿಫ್ರೆಶ್ ರೇಟ್, 2ಕೆ ರೆಸಲ್ಯೂಶನ್ ನೊಂದಿಗೆ ಬಿಡುಗಡೆಯಾಗಲಿದೆ. ಇದು ಗುಣಮಟ್ಟದ ಸ್ನಾಪ್ಡ್ರಾಗನ್ 8 Gen 2 ಪ್ರೊಸೆಸರ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ.
ರೆಡ್ಮಿ ನೋಟ್ 12 ಸೀರಿಸ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ