ಚಾರ್ಜ್​ ಮಾಡುವ ಕಿರಿಕಿರಿ ಇಲ್ಲ, ಏಕೆಂದರೆ ಈ ​ಫೋನ್​ನಲ್ಲಿ ಬ್ಯಾಟರಿಯೇ ಇಲ್ಲ!

ವಿದ್ಯುತ್​​ ಶಕ್ತಿಗೆ ಬದಲಾಗಿ ರೇಡಿಯೋ ಸಿಗ್ನಲ್​, ಬೆಳಕಿಗೆ ಅಗತ್ಯವಿರುವ ಮೈಕ್ರೋವ್ಯಾಟ್​​​ಗಳನ್ನು ಬಳಸಿಕೊಂಡು ಈ ಬ್ಯಾಟರಿ ರಹಿತವಾದ ​ಫೋನ್ ಅನ್ನು​ ಕಂಡುಹಿಡಿದಿದ್ದಾರೆ.

news18
Updated:May 15, 2019, 7:52 PM IST
ಚಾರ್ಜ್​ ಮಾಡುವ ಕಿರಿಕಿರಿ ಇಲ್ಲ, ಏಕೆಂದರೆ ಈ ​ಫೋನ್​ನಲ್ಲಿ ಬ್ಯಾಟರಿಯೇ ಇಲ್ಲ!
ಬ್ಯಾಟರಿ ರಹಿತವಾದ ​ಫೋನ್
  • News18
  • Last Updated: May 15, 2019, 7:52 PM IST
  • Share this:
ಇಂದಿನ ದಿನಗಳಲ್ಲಿ ಮೊಬೈಲ್​ ಇಲ್ಲದೆ ಬದುಕುವುದು ತುಸು ಕಷ್ಟಕರವಾಗಿದೆ. ದೈನಂದಿನ ವ್ಯವಹಾರಗಳಿಂದ ಹಿಡಿದು ಬೆಳಗ್ಗೆ ಅಲರಾಂ ಬಡಿಯುವವರೆಗೆ ಮೊಬೈಲ್​ ಬಳಕೆ ಅಗತ್ಯವೆನಿಸಿದೆ. ಈ ನಿಟ್ಟಿನಲ್ಲಿ ಸ್ಮಾರ್ಟ್​ಫೋನ್​ ತಯಾರಿಕ ಸಂಸ್ಥೆಗಳು ನಾನಾ ತರಹದ ಪ್ರಯೋಗಗಳನ್ನು ನಡೆಸುತ್ತಿದೆ. ಇನ್ನೊಂದೆಡೆ ಮೊಬೈಲ್​ನಲ್ಲಿ ಚಾರ್ಜ್​ ಇಲ್ಲದೇ ಇದ್ದರೆ ಕಂಡಿತಾ ಬಳಸಲು ಸಾಧ್ಯವಿಲ್ಲ.

ನಿಮ್ಮ ಸ್ಮಾರ್ಟ್​ಫೋನ್​ ಬಾಳಿಕೆಯನ್ನು ನಿರ್ಧರಿಸುವುದು ಅದರಲ್ಲಿ ಅಳವಡಿಸಿರುವ ಬ್ಯಾಟರಿ. ಸಾಕಷ್ಟು ಜನರು ​ ಬ್ಯಾಟರಿ ಬಾಳ್ವಿಕೆಗೆ ಅನುಗುಣವಾಗಿ ಸ್ಮಾರ್ಟ್​ಫೋನ್​ ಖರೀದಿಸುತ್ತಾರೆ. ಹೆಚ್ಚಿನ ಸ್ಮಾರ್ಟ್​ಫೋನ್​ಗಳಲ್ಲಿ 3000mAh  ಅಥವಾ 4000 mAh ಬ್ಯಾಟರಿಗಳನ್ನು ಅಳವಡಿಸಲಾಗುತ್ತದೆ. ಆದರೆ, ಯುನಿವರ್ಸಿಟಿ ಆಫ್​ ವಾಷಿಂಗ್ಟನ್​​​​ ಸಂಶೋಧಕರು ನೂತನ ಪ್ರಯೋಗವನ್ನು ಮಾಡಿದ್ದು, ಬ್ಯಾಟರಿಯಿಲ್ಲದ ಮೊಬೈಲ್​ ಫೋನ್​​​​ವೊಂದನ್ನು ಕಂಡುಹಿಡಿದಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಬರ ನಿರ್ವಹಣೆ ಮಾಡುವಲ್ಲಿ ವಿಫಲರಾದರೆ ಜಿಲ್ಲಾಧಿಕಾರಿಗಳೆ ಹೊಣೆ; ಸಿಎಂ ಕುಮಾರಸ್ವಾಮಿ ಖಡಕ್​ ಎಚ್ಚರಿಕೆ

ವಿದ್ಯುತ್​​ ಶಕ್ತಿಗೆ ಬದಲಾಗಿ ರೇಡಿಯೋ ಸಿಗ್ನಲ್, ಬೆಳಕಿಗೆ ಅಗತ್ಯವಿರುವ ಮೈಕ್ರೋವ್ಯಾಟ್​​​ಗಳನ್ನು ಬಳಸಿಕೊಂಡು ಈ ಬ್ಯಾಟರಿ ರಹಿತವಾದ ​ಫೋನ್ ಅನ್ನು​ ಕಂಡುಹಿಡಿದಿದ್ದಾರೆ. ಅಂತೆಯೇ, ಸಂಶೋಧಕರು ಈ ಫೋನ್​ನಿಂದ ಸ್ಕೈಪ್​​ ಕರೆಗಳನ್ನು ಮಾಡಿ ಸಫಲರಾಗಿದ್ದಾರೆ.

ಇನ್ನು ಪ್ರಕೃತಿದತ್ತವಾದ ಶಕ್ತಿಯನ್ನು ಉಪಯೋಗಿಸಿ ಬಳಸಬಹುದಾದ ಬ್ಯಾಟರಿ ರಹಿತ ​ಫೋನಿನ ವಿನ್ಯಾಸದ ಕುರಿತು ಸಂಶೋಧನ ತಂಡ ಮಿಮರ್ಶಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಸಜ್ಜುಮಾಡುತ್ತಿದ್ದಾರೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

First published:May 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading